- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

ಚಿಪ್ಪು ಅಣಬೆ ಕೃಷಿಯಲ್ಲಿ ಯಶಸ್ಸು,ಅಣಬೆಯ ಉತ್ಪನ್ನಗಳಿಂದಲೇ ಬದುಕು ಕಟ್ಟಿಕೊಂಡ ದಂಪತಿ

-ರಾಧಾಕೃಷ್ಣ ತೊಡಿಕಾನ, ಪ್ರಸಾದ್ ಶೆಣೈ ಕಾರ್ಕಳ

ಅಣಬೆ ರುಚಿಕರವಾದ ಆಹಾರ. ಪೌಷ್ಟಿಕಾಂಶಗಳಿಂದಲೂ ಸಮೃದ್ಧವಾಗಿರುವ ಉತ್ಪನ್ನ. ಇತ್ತೀಚಿನ ದಿನಗಳಲ್ಲಿ ಅಣಬೆ ಕೃಷಿಯು ಜನಪ್ರಿಯವಾಗುತ್ತಿದ್ದು, ಮನೆಮನೆಗಳ ಆಹಾರ ಪದಾರ್ಥಗಳಲ್ಲಿಯೂ ಅಣಬೆಗೆ ವಿಶೇಷ ಸ್ಥಾನ ದೊರೆಯುತ್ತಿದೆ. ಹಿಂದೆ ತೋಟದ ಬದಿಯಲ್ಲಿ, ಕಾಡು ಮತ್ತು ಗುಡ್ಡಗಳಲ್ಲಿ ಸ್ವಾಭಾವಿಕವಾಗಿ ಅಣಬೆ ಮೂಡುವುದನ್ನು ಕಾಯಬೇಕಾಗಿತ್ತು. ಹುಡುಕಿ ಅಲೆದಾಡಬೇಕಾಗಿತ್ತು. ಆದರೆ ಈಗ ಹಾಗಿಲ್ಲ. ವೈಜ್ಞಾನಿಕ ವಿಧಾನದಲ್ಲಿ ಅಣಬೆ ಕೃಷಿ ಮಾಡುವುದರಿಂದ ವರ್ಷವಿಡೀ ಮಾರುಕಟ್ಟೆಯಲ್ಲಿ ತಾಜಾ ಅಣಬೆಯಿದೆ.

ಅಣಬೆ ಕೃಷಿಯಲ್ಲಿ ತೊಡಗಿಸಿಕೊಂಡವರಲ್ಲಿ ಕೆಲವರು ಮಾರುಕಟ್ಟೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದ್ದರೆ, ಇನ್ನು ಕೆಲವರು ಅದನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರದ ಅಗ್ರಹಾರದ ಪ್ರದೀಪ್ ಶೆಟ್ಟಿ ಮತ್ತು ರಕ್ಷಾ ಪ್ರದೀಪ್ ಶೆಟ್ಟಿ ದಂಪತಿ ಅಣಬೆ ಕೃಷಿಯಿಂದಲೇ ಈ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ.

ವಿದೇಶಿ ಉದ್ಯೋಗದಿಂದ ಕೃಷಿಯತ್ತ

ಪ್ರದೀಪ್ ಶೆಟ್ಟಿ ಅವರು ಕೆಲ ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಊರಿಗೆ ಮರಳಿದ ಬಳಿಕ ವಿದೇಶದ ಉದ್ಯೋಗಕ್ಕೆ ಮತ್ತೆ ಹೋಗುವ ಬದಲು, ತಮ್ಮ ಊರಿನಲ್ಲಿಯೇ ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮವನ್ನು ಕೈಗೊಳ್ಳುವ ನಿರ್ಧಾರ ಮಾಡಿದರು. ಇವರಿಗೆ ಕೃಷಿ ಜಮೀನಿದ್ದು, ಅಡಿಕೆ, ತೆಂಗು ಹಾಗೂ ಅರಸಿನ ಮೊದಲಾದ ಬೆಳೆಗಳನ್ನು ಬೆಳೆಯಿದೆ. ಆದರೆ ಸಾಂಪ್ರದಾಯಿಕ ಕೃಷಿಗೆ ಮಾತ್ರ ಸೀಮಿತವಾಗದೆ, ತಮ್ಮ ಪರಿಸರದಲ್ಲಿ ಹೊಸದಾದ ಕೃಷಿ ಸಂಬಂಧಿತ ಕಿರು ಉದ್ಯಮವೊಂದನ್ನು ಆರಂಭಿಸಬೇಕೆಂಬ ಆಲೋಚನೆ ಅವರಲ್ಲಿತ್ತು.

ಅದರ ಫಲವಾಗಿ ಅವರು ಆಯ್ಕೆ ಮಾಡಿಕೊಂಡದ್ದು ಅಣಬೆ ಕೃಷಿ. ಗ್ರಾಮೀಣ ಪರಿಸರದಲ್ಲಿ ಅಣಬೆ ಕೃಷಿಗೆ ಅಗತ್ಯವಾದ ಕೆಲವು ಕಚ್ಚಾವಸ್ತುಗಳು ಸುಲಭವಾಗಿ ದೊರೆಯುವ ಅನುಕೂಲವಿದ್ದರೂ, ಉತ್ಪನ್ನಕ್ಕೆ ಸೂಕ್ತ ಮಾರುಕಟ್ಟೆ ರೂಪಿಸುವುದು ಸವಾಲಾಗಿತ್ತು. ಈ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳಲು ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ತರಬೇತಿ ಪಡೆದರು. ನಂತರ ಸಣ್ಣ ಪ್ರಮಾಣದಲ್ಲಿ ಅಣಬೆ ಕೃಷಿಯನ್ನು ಆರಂಭಿಸಿದರು. ಕಳೆದ ಒಂದೂವರೆ ವರ್ಷದ ಹಿಂದೆ ‘ಅಥರ್ವ ನ್ಯಾಚುರಲ್ ಫಾರ್ಮ್’ ಮೂಲಕ ಅಣಬೆ ಕೃಷಿಗೆ ಹೆಜ್ಜೆಯಿಟ್ಟರು.

ಚಿಪ್ಪು ಅಣಬೆ ಕೃಷಿ

ಅಣಬೆಯಲ್ಲಿ ಹಲವು ತಳಿಗಳಿವೆ. ಪ್ರದೀಪ್ ಶೆಟ್ಟಿ ಅವರು ಚಿಪ್ಪು ಅಣಬೆಯನ್ನು ಆಯ್ಕೆ ಮಾಡಿಕೊಂಡರು. ಆಯಿಸ್ಟರ್ ಮಶ್ರೂಮ್ ಎಂದು ಕರೆಯಲಾಗುವ ಈ ತಳಿಯು ಕಡಿಮೆ ಅವಧಿಯಲ್ಲಿ ಬೆಳೆಯುವ ಗುಣ ಹೊಂದಿದೆ. ನಿರ್ವಹಣೆಯಲ್ಲಿಯೂ ಕೆಲವು ಅನುಕೂಲಗಳಿದ್ದವು ಆರಂಭದಲ್ಲಿ ಸುತ್ತಮುತ್ತಲಿನ ಪ್ರದೇಶದ ಜನರೇ ಇವರ ಪ್ರಮುಖ ಗ್ರಾಹಕರಾಗಿದ್ದರು. ಅಣಬೆಯ ರುಚಿ ಮತ್ತು ಅದರ ಬಳಕೆಯ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾದಂತೆ ಬೇಡಿಕೆಯೂ ಹೆಚ್ಚಾಯಿತು. ಇದರಿಂದ ಕೃಷಿಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ರೂಪಿಸಿಕೊಂಡರು.

ಈ ನಡುವೆ ಪ್ರದೀಪ್ ಶೆಟ್ಟಿ ಅವರ ಪತ್ನಿ ರಕ್ಷಾ ಅವರು ಅಣಬೆ ಕೃಷಿ ಹಾಗೂ ಮೌಲ್ಯವರ್ಧನೆಯ ಕುರಿತು ತರಬೇತಿ ಪಡೆದುಕೊಂಡರು. ಇದರಿಂದ ಉತ್ಪಾದನೆಯ ಜೊತೆಗೆ ಅಣಬೆಯಿಂದ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸುವತ್ತಲೂ ದಂಪತಿ ಗಮನಹರಿಸಿದರು. ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು ಕಷ್ಟ. ಅಣಬೆ ಕೃಷಿಯಲ್ಲೂ ಇಂತಹ ಸಮಸ್ಯೆಗಳಿವೆ. ಸ್ಥಳೀಯ ಮಾರುಕಟ್ಟೆಯಲ್ಲದೆ ಇತರ ಕಡೆಯ ಮಾರುಕಟ್ಟೆಯನ್ನು ಅವಲಂಭಿಸಬೇಕಾಗುತ್ತದೆ. ಅಣಬೆಯನ್ನು ತಾಜಾ, ಒಣ, ಪುಡಿ ಸೇರಿದಂತೆ ಹಲವು ರೂಪದಲ್ಲಿ ಮಾರಾಟ ಮಾಡಬಹುದು. ಬೇಡಿಕೆಯನ್ನಾಧರಿಸಿ ಅಣಬೆ ಉತ್ಪನ್ನ ತಯಾರಿಸಬೇಕಾಗಿದೆ. ಪ್ರಸ್ತುತ ಸುಮಾರು 1500 ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ ಅಣಬೆ ಕೃಷಿ ಮಾಡುತ್ತಿದ್ದಾರೆ. ಅಣಬೆಯನ್ನು ಹಂತ ಹಂತವಾಗಿ ಬೆಳೆಸಿ, ಸುಮಾರು 12 ರಿಂದ 15 ದಿನಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಕಟಾವು ಮಾಡುತ್ತಾರೆ. ಇದರಿಂದ ನಿರಂತರ ಉತ್ಪಾದನೆಯಲ್ಲದೆ ದಿನದಿನವೂ ಆದಾಯ ಪಡೆಯಲು ಸಾಧ್ಯವಾಗುತ್ತಿದೆ. ದಿನವೊಂದಕ್ಕೆ ಸುಮಾರು 10 ಕೆ.ಜಿ. ಅಣಬೆ ಉತ್ಪಾದಿಸುತ್ತಿದ್ದು, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರ ಜೊತೆಗೆ ಅಂಗಡಿಗಳ ಮೂಲಕವೂ ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ. ಉತ್ಪನ್ನಕ್ಕೆ ಸ್ಥಳೀಯವಾಗಿ ಬೇಡಿಕೆ ಇರುವುದರಿಂದ ಅನುಕೂಲವಾಗಿದೆ.

ಅಣಬೆ ಕೃಷಿಯಲ್ಲಿ ಉತ್ಪಾದನೆ ಮಾತ್ರವಲ್ಲದೆ, ಗುಣಮಟ್ಟದ ನಿರ್ವಹಣೆ, ಸರಿಯಾದ ಸಮಯದಲ್ಲಿ ಕಟಾವು ಮತ್ತು ತಾಜಾ ಉತ್ಪನ್ನವನ್ನು ಗ್ರಾಹಕರಿಗೆ ತಲುಪಿಸುವುದೂ ಮುಖ್ಯವಾಗಿದೆ ಎಂಬುದು ಪ್ರದೀಪ್ ಶೆಟ್ಟಿ ಅವರ ಅಭಿಪ್ರಾಯವಾಗಿದೆ

ಅಣಬೆ ಮೌಲ್ಯವರ್ಧನೆ

ಅಣಬೆಯಿಂದ ಸೂಪ್, ಕರಿ, ಬಿರಿಯಾನಿ, ಕಟ್ಲೆಟ್, ಪಕೋಡ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಸಸ್ಯಾಹಾರದಲ್ಲಿ ಮಾತ್ರವಲ್ಲದೆ, ವಿವಿಧ ಆಹಾರ ಪದಾರ್ಥಗಳಲ್ಲಿಯೂ ಅಣಬೆಯ ಬಳಕೆ ಹೆಚ್ಚುತ್ತಿದೆ. ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿಯೂ ಅಣಬೆ ಬಳಕೆಯಾಗುತ್ತಿದೆ.

ಆದರೆ ಹಣ್ಣು ಮತ್ತು ತರಕಾರಿಗಳಂತೆ ತಾಜಾ ಅಣಬೆಯನ್ನು ಹೆಚ್ಚು ದಿನ ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ಕಟಾವು ಮಾಡಿದ ನಂತರ ಸಂಸ್ಕರಿಸಿ ಪ್ಯಾಕಿಂಗ್ ಮಾಡಿದ ಅಣಬೆಯನ್ನು ಶೀಘ್ರವಾಗಿ ಬಳಸಬೇಕಾಗುತ್ತದೆ. ಹೀಗಾಗಿ ಮಾರಾಟವಾಗದೆ ಉಳಿಯುವ ಉತ್ಪನ್ನವನ್ನು ವ್ಯರ್ಥವಾಗದಂತೆ ಬಳಸಲು ಮೌಲ್ಯವರ್ಧನೆ ಅತ್ಯುಪಯುಕ್ತವಾದುದು. ಈ ನಿಟ್ಟಿನಲ್ಲಿ ಪ್ರದೀಪ್ ಮತ್ತು ರಕ್ಷಾ ಶೆಟ್ಟಿ ದಂಪತಿ ಅಣಬೆಯಿಂದ ಉಪ್ಪಿನಕಾಯಿ ಹಾಗೂ ಕುಕ್ಕೀಸ್ ತಯಾರಿಸುತ್ತಿದ್ದಾರೆ. ತಾಜಾ ಅಣಬೆಯನ್ನು ಸ್ವಚ್ಛಗೊಳಿಸಿ ಪ್ಯಾಕಿಂಗ್ ಮಾಡಿದ ಬಳಿಕ ಮೂರು ದಿನಗಳೊಳಗೆ ಬಳಸುವುದು ಸೂಕ್ತವಾದರೆ, ಅಣಬೆ ಉಪ್ಪಿನಕಾಯಿಯನ್ನು ಎಂಟರಿಂದ ಒಂಬತ್ತು ತಿಂಗಳವರೆಗೆ ಸಂಗ್ರಹಿಸಿಡಬಹುದು. ಅಣಬೆ ಕುಕ್ಕೀಸ್‌ಗಳನ್ನು ಎರಡು ಮೂರು ತಿಂಗಳವರೆಗೆ ಬಳಸಬಹುದು ಎಂದು ಪ್ರದೀಪ್ ಶೆಟ್ಟಿ ಹೇಳುತ್ತಾರೆ. ಉತ್ಪನ್ನಗಳ ಸಂಗ್ರಹಾವಧಿಯು ತಯಾರಿಕಾ ವಿಧಾನ ಮತ್ತು ಪ್ಯಾಕಿಂಗ್‌ನ ಗುಣಮಟ್ಟವನ್ನು ಅವಲಂಬಿಸಿದೆ.

ಮೌಲ್ಯವರ್ಧನೆಯಿಂದ ಅಣಬೆಗೆ ಹೊಸ ರೂಪ ನೀಡುವುದರ ಜೊತೆಗೆ, ಉತ್ಪನ್ನದ ಬಳಕೆಯ ಅವಧಿಯನ್ನು ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ವಿಭಿನ್ನ ಉತ್ಪನ್ನಗಳನ್ನು ಪರಿಚಯಿಸಲು ಸಾಧ್ಯವಾಗುತ್ತದೆ. ಈ ಮೂಲಕ ತಾಜಾ ಅಣಬೆಯ ಮಾರಾಟಕ್ಕೆ ಮಾತ್ರ ಸೀಮಿತವಾಗದೆ, ಗ್ರಾಹಕರಿಗೆ ಹಲವು ಆಯ್ಕೆಗಳನ್ನು ಒದಗಿಸುತ್ತಿದ್ದಾರೆ. ಅಣಬೆ ಪೌಷ್ಟಿಕ ಆಹಾರವಾಗಿದ್ದು, ಇದರಲ್ಲಿ ಪ್ರೋಟೀನ್, ನಾರಿನಾಂಶ, ವಿವಿಧ ಖನಿಜಾಂಶಗಳು ಡಿ ಮತ್ತು ಬಿ ಗುಂಪಿನ ಜೀವಸತ್ವಗಳಿವೆ. ಆರೋಗ್ಯ ವರ್ಧಕ ಗುಣ ಹಾಗೂ ರೋಗನಿರೋಧಕ ಶಕ್ತಿ ಅಣಬೆಯಲ್ಲಿದೆ. ಕಡಿಮೆ ಸಮಯದಲ್ಲಿ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಆಹಾರದಲ್ಲಿ ವೈವಿಧ್ಯತೆಯನ್ನು ರೂಪಿಸಿಕೊಳ್ಳಬಹುದು.

ಸ್ವ ಉದ್ಯೋಗಕ್ಕೆ ಅವಕಾಶ

ಗ್ರಾಮೀಣ ಪ್ರದೇಶದಲ್ಲಿ ಅಣಬೆ ಕೃಷಿ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವುದರಿಂದ ಕೆಲವು ನಿರ್ವಹಣಾ ವೆಚ್ಚಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳ ಬಳಕೆ, ಉತ್ಪಾದನಾ ವೆಚ್ಚದ ನಿರ್ವಹಣೆ ಹಾಗೂ ನೇರ ಮಾರಾಟದ ಮೂಲಕ ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಉತ್ಪನ್ನಗಳನ್ನು ತಲುಪಿಸಬಹುದು.

ಅಣಬೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲಿಯೂ ಬೇಡಿಕೆ ಇರುವುದರಿಂದ, ಗುಣಮಟ್ಟದ ಉತ್ಪಾದನೆ ಮತ್ತು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹೊಂದಿರುವವರಿಗೆ ಉತ್ತಮ ಅವಕಾಶಗಳಿವೆ. ಅಣಬೆ ಕೃಷಿಯ ಜೊತೆಗೆ ಉಪ್ಪಿನಕಾಯಿ, ಕುಕ್ಕೀಸ್ ಮೊದಲಾದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದರೆ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಅಣಬೆ ಕೃಷಿ ಆರಂಭಿಸುವ ಮೊದಲು ಸೂಕ್ತ ತರಬೇತಿ, ಕೃಷಿಗೆ ಬೇಕಾದ ಪರಿಸರ, ಉತ್ಪಾದನಾ ವೆಚ್ಚ ಹಾಗೂ ಮಾರುಕಟ್ಟೆಯ ಬೇಡಿಕೆಯನ್ನು ಅರಿಯುವುದು ಅಗತ್ಯ. ಸಾಂಪ್ರದಾಯಿಕ ಕೃಷಿಯೊಂದಿಗೆ ಹೊಸ ಕೃಷಿ ಉದ್ಯಮವನ್ನು ಆರಂಭಿಸಿರುವ ಪ್ರದೀಪ್ ಶೆಟ್ಟಿ ಅವರ ಪ್ರಯತ್ನವು ಗ್ರಾಮೀಣ ಯುವಜನರಿಗೆ ಪ್ರೇರಣೆಯಾಗಿದೆ. ಮಾಹಿತಿಗಾಗಿ : 9845470416

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

spot_img