- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

ಹಸಿರಾಗಿ ಅರಳಿತು ಸಮಾಜ ಸೇವೆ: ಹಸಿರನ್ನೇ ಉಸಿರಾಗಿಸಿಕೊಂಡ ಪರಿಸರ ಪ್ರೇಮಿ!

-ಲೇಖನ:ಡಾ. ಜಯವೀರ ಎ. ಕೆ.

ಒಂದು ಸಸಿ ನೆಟ್ಟರೆ ಅದು ಕೇವಲ ಮಣ್ಣಿನಲ್ಲಿ ಬೇರೂರುವ ಗಿಡವಲ್ಲ; ಅದು ಭವಿಷ್ಯದ ಬದುಕಿಗೆ ಭರವಸೆಯ ಬೀಜ. ಒಂದು ಸಸಿಯನ್ನು ಬೆಳೆಸಿದರೆ ಒಂದು ಮಗುವನ್ನು ಬೆಳೆಸಿದಂತೆ ಎಂಬ ಉದಾತ್ತ ಚಿಂತನೆಯೊಂದಿಗೆ ಕಳೆದ ಸುಮಾರು ಹದಿನೈದು ವರ್ಷಗಳಿಂದ ಪರಿಸರ ಸಂರಕ್ಷಣೆ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಪರೂಪದ ಯುವಕ ಸಿದಗೌಡ ಬಾಳಗೌಡ ಪಾಟೀಲ. ಕೃಷಿಯನ್ನೇ ಬದುಕಿನ ಆಧಾರವಾಗಿಸಿಕೊಂಡು, ಹಸಿರನ್ನೇ ಉಸಿರಾಗಿಸಿಕೊಂಡು, ಸಮಾಜದ ಒಳಿತನ್ನೇ ತಮ್ಮ ಬದುಕಿನ ಆಶಯವಾಗಿಸಿಕೊಂಡಿರುವ ಇವರು ರಾಯಬಾಗ ತಾಲೂಕಿನ ಸಿದ್ದಾಪುರ ಗ್ರಾಮದ ಓರ್ವ ಉತ್ಸಾಹಿ ಕ್ರಿಯಾಶೀಲ ಪರಿಸರ ಪ್ರೇಮಿ.

ಕುಗ್ರಾಮವನ್ನು ಸುಗ್ರಾಮವನ್ನಾಗಿ ರೂಪಿಸಬೇಕೆಂಬ ಕನಸು, ಗ್ರಾಮದ ಕಟ್ಟಕಡೆಯ ನಾಗರಿಕನಿಗೂ ಮೂಲಭೂತ ಸೌಲಭ್ಯಗಳು ದೊರೆಯಬೇಕೆಂಬ ಕಾಳಜಿ, ಪಕ್ಷಾತೀತ ಹಾಗೂ ಜಾತ್ಯತೀತ ನೆಲೆಯಲ್ಲಿ ಗ್ರಾಮಾಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸಬೇಕೆಂಬ ಸಂಕಲ್ಪ ಇವರ ವ್ಯಕ್ತಿತ್ವದ ವಿಶೇಷತೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜದ ಹಿತಕ್ಕಾಗಿ ದುಡಿಯುವ ಇವರ ಸೇವಾ ಮನೋಭಾವವೇ ಬದುಕಿನ ನಿಜವಾದ ಸಾರ್ಥಕತೆಯ ಸಂಕೇತ.

    ಬಾಲ್ಯದ ಒಲವು… ಹಸಿರಿನೊಂದಿಗಿನ ಒಡನಾಟ!

ಸಿದ್ದಾಪುರ ಗ್ರಾಮದ ಅವಿಭಕ್ತ ಕುಟುಂಬದ ಕೃಷಿ ಹಿನ್ನೆಲೆಯಿಂದ ಬಂದಿರುವ ಸಿದಗೌಡರು ಬಿಕಾಂ ಪದವೀಧರರು. ಒಕ್ಕಲುತನ ಇವರ ವೃತ್ತಿಯಾದರೆ, ಸಮಾಜಸೇವೆ ಹಾಗೂ ಪರಿಸರ ಸಂರಕ್ಷಣೆ ಇವರ ಪ್ರವೃತ್ತಿಯಷ್ಟೇ ಅಲ್ಲ, ಬದುಕಿನ ಅವಿಭಾಜ್ಯ ಅಂಗ. ಬಾಲ್ಯದಿಂದಲೂ ನಿಸರ್ಗದ ಮೇಲೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದ ಇವರು, ತಿಪ್ಪೆಗುಂಡಿಯಲ್ಲಿ ಮೊಳಕೆಯೊಡೆದ ಮಾವಿನ ಸಸಿಗಳನ್ನು ಕಿತ್ತು ಗದ್ದೆಯಲ್ಲಿ ನಾಟಿ ಮಾಡುವ ಹವ್ಯಾಸ ಹೊಂದಿದ್ದರು. ಅಂದು ಬಾಲಮನದಲ್ಲಿ ಮೊಳಕೆಯೊಡೆದ ಹಸಿರಿನ ಪ್ರೀತಿ ಇಂದು ಸಾವಿರಾರು ಸಸಿಗಳ ಮೂಲಕ ವಿಶಾಲವಾಗಿ ಬೆಳೆದು ನಿಂತಿದೆ.

ಶಾಲೆಯಲ್ಲಿ ಗುರುಗಳು ಪರಿಸರದ ಕುರಿತು ಬೋಧಿಸಿದ ಪಾಠಗಳು ಇವರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿದವು. ಪರಿಸರ ಸಂರಕ್ಷಣೆಯ ಕುರಿತು ಚಿಂತನೆ ಗಾಢವಾಗುತ್ತಿದ್ದಂತೆ ಅದನ್ನು ಕೇವಲ ಆಲೋಚನೆಗೆ ಸೀಮಿತಗೊಳಿಸದೆ ಕಾರ್ಯರೂಪಕ್ಕೆ ತರಬೇಕೆಂಬ ಹಂಬಲವೂ ಹೆಚ್ಚಾಯಿತು. ಹೀಗೆ ಬಾಲ್ಯದ ಹಸಿರು ಪ್ರೀತಿ ಸಮಾಜಮುಖಿ ಸಂಕಲ್ಪವಾಗಿ ರೂಪುಗೊಂಡಿತು.

ನಿರಾಸೆಯನ್ನೇ ಪ್ರೇರಣೆಯಾಗಿಸಿಕೊಂಡ ಸಸಿಗಳ ಸಂಕಲ್ಪ!

2010ರಲ್ಲಿ ತಮ್ಮ ಗ್ರಾಮದಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ರಂಗೋಲಿ, ಆಶುಭಾಷಣ ಹಾಗೂ ಅಂತ್ಯಾಕ್ಷರಿ ಸ್ಪರ್ಧೆಗಳನ್ನು ಆಯೋಜಿಸಿದರು. ಆದರೆ ಆರಂಭದಲ್ಲಿ ವಿದ್ಯಾರ್ಥಿಗಳಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯಲಿಲ್ಲ. ಸ್ಪರ್ಧೆಗಳಿಗೆ ಮಕ್ಕಳು ಆಸಕ್ತಿ ತೋರಿಸದಿದ್ದಾಗ ಸಹಜವಾಗಿಯೇ ನಿರಾಸೆಯಾಯಿತು.

ಆದರೆ ಆ ನಿರಾಸೆಗೆ ಶರಣಾಗದೆ ಹೊಸ ಆಲೋಚನೆಯೊಂದಿಗೆ ಶಾಲೆಗೆ ತೆರಳಿದರು. ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಸಸಿ ನೀಡುವುದಾಗಿ ಘೋಷಿಸಿದರು. ಅಷ್ಟೇ! ಒಂದೇ ಶಾಲೆಯಿಂದ ಬರೋಬ್ಬರಿ 50 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಈ ಘಟನೆ ಅವರ ಸಮಾಜಸೇವೆಯ ಪಯಣಕ್ಕೆ ಹೊಸ ತಿರುವು ನೀಡಿತು. ಮಕ್ಕಳನ್ನು ಪರಿಸರದತ್ತ ಆಕರ್ಷಿಸುವುದರ ಜೊತೆಗೆ ಅವರಲ್ಲಿ ಹಸಿರಿನ ಪ್ರೀತಿಯನ್ನು ಬೆಳೆಸಬಹುದು ಎಂಬ ಅರಿವು ಮೂಡಿತು. ಅಂದಿನಿಂದ ಸಸಿಗಳ ವಿತರಣೆಯ ಕಾರ್ಯಕ್ಕೆ ಮತ್ತಷ್ಟು ವೇಗ ದೊರೆಯಿತು. 2010ರಲ್ಲಿ ಖೇಮಲಾಪುರ ಕ್ಲಸ್ಟರ್ ವ್ಯಾಪ್ತಿಯ ಎಂಟು ಶಾಲೆಗಳಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಜಾಗೃತಿಯ ಅಭಿಯಾನಕ್ಕೆ ಭದ್ರ ಬುನಾದಿ ಹಾಕಿದರು.

ಈ ಕಾರ್ಯಕ್ಕೆ ಬಾಲ್ಯದ ಗೆಳೆಯ ಶಿವಾನಂದ ಬುಲಬುಲೆ ಅವರು ಬೆಳಗಾವಿಯಿಂದ ವಿವಿಧ ಜಾತಿಯ ಸಸಿಗಳನ್ನು ತಂದುಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ತಮ್ಮ ಹಸಿರು ಸಂಕಲ್ಪಕ್ಕೆ ಬೆಂಬಲವಾಗಿ ನಿಂತ ಗೆಳೆಯನನ್ನು ಸಿದಗೌಡರು ಇಂದಿಗೂ ಅಭಿಮಾನದಿಂದ ಸ್ಮರಿಸುತ್ತಾರೆ.

ಹುಟ್ಟುಹಬ್ಬದ ಸಂಭ್ರಮಕ್ಕೆ ಹಸಿರಿನ ಸ್ಪರ್ಶ!

ವೈಯಕ್ತಿಕ ಸಂಭ್ರಮವನ್ನು ಸಮಾಜದ ಸಂತೋಷವನ್ನಾಗಿ ಪರಿವರ್ತಿಸಿಕೊಳ್ಳುವುದು ಇವರ ವಿಶಿಷ್ಟ ಗುಣ. ತಮ್ಮ ಹುಟ್ಟುಹಬ್ಬ ಹಾಗೂ ಕುಟುಂಬದ ಸದಸ್ಯರ ವಿಶೇಷ ದಿನಗಳನ್ನು ಸಸಿಗಳ ವಿತರಣೆಯ ಮೂಲಕ ಆಚರಿಸುವುದು ಇವರ ಸಾರ್ಥಕ ಸಂಪ್ರದಾಯ. ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ನೀಡುವಾಗ ದೊರೆಯುವ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ ಎನ್ನುತ್ತಾರೆ.

ಮನೆಯ ಸದಸ್ಯರಿಂದ ದೊರೆಯುವ ಸಂಪೂರ್ಣ ಸಹಕಾರವೇ ತಮ್ಮ ಸಮಾಜಸೇವೆಯ ಹಿಂದಿನ ದೊಡ್ಡ ಶಕ್ತಿ ಎಂಬುದು ಇವರ ವಿನಯಪೂರ್ಣ ಅಭಿಪ್ರಾಯ. ಕುಟುಂಬದ ಎಲ್ಲ ಸದಸ್ಯರು ಈ ಕಾರ್ಯವನ್ನು ಮೆಚ್ಚಿ, ಪ್ರೀತಿಯಿಂದ ಪ್ರೋತ್ಸಾಹಿಸುತ್ತಾರೆ. “ಇದೊಂದು ಒಳ್ಳೆಯ ಕಾರ್ಯ. ಇದನ್ನು ಮುಂದುವರಿಸಿಕೊಂಡು ಹೋಗಿ” ಎಂಬ ಕುಟುಂಬದ ಪ್ರೀತಿಯ ಮಾತುಗಳು ಇವರ ಸೇವಾ ಸಂಕಲ್ಪಕ್ಕೆ ಮತ್ತಷ್ಟು ಬಲ ತುಂಬುತ್ತವೆ.

ಇಪ್ಪತ್ತು ಸಾವಿರಕ್ಕೂ ಅಧಿಕ ಸಸಿಗಳು… ಹಸಿರಿನ ಹೆಜ್ಜೆ ಗುರುತು!

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಶಾಲೆಗಳಿಗೆ ಸಸಿಗಳನ್ನು ವಿತರಿಸುತ್ತಾ ಈವರೆಗೆ 20 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡುವ ಹಾಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ ಸಾಧನೆ.

ಪ್ರತಿ ವರ್ಷ ಜೂನ್ ತಿಂಗಳಲ್ಲಿ ಸುಮಾರು 2,000 ಸಸಿಗಳನ್ನು ಸಂಗ್ರಹಿಸಿ ಕೃಷ್ಣಾ ನದಿಯ ತೀರದಲ್ಲಿ ನೆಡುವುದು ಇವರ ಪ್ರಮುಖ ಕಾರ್ಯಗಳಲ್ಲಿ ಒಂದು. ಆದರೆ ಪರಿಸರ ಸೇವೆಯ ಈ ಹಾದಿಯಲ್ಲಿ ಸವಾಲುಗಳೂ ಕಡಿಮೆಯಿಲ್ಲ. ಸಸಿಗಳನ್ನು ಸಂಗ್ರಹಿಸಲು ಅಗತ್ಯವಾದ ಪ್ಲಾಸ್ಟಿಕ್ ಚೀಲಗಳ ಕೊರತೆ, ಕೃಷ್ಣಾ ನದಿಯ ಪ್ರವಾಹದಿಂದ ಸಸಿಗಳು ನಾಶವಾಗುವುದು ಇವರನ್ನು ಕಾಡುವ ಸಮಸ್ಯೆಗಳು.

2019ರಲ್ಲಿ ಸುಮಾರು 800 ಸಸಿಗಳು ಕೃಷ್ಣಾ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋದ ಘಟನೆ ಇವರಿಗೆ ಅಪಾರ ನೋವುಂಟುಮಾಡಿತು. ಆದರೂ ಆ ನಷ್ಟವನ್ನು ತಮ್ಮ ಸೇವಾ ಪಯಣದ ಅಂತ್ಯವೆಂದು ಭಾವಿಸದೆ ಮತ್ತಷ್ಟು ಉತ್ಸಾಹದಿಂದ ಕಾರ್ಯ ಮುಂದುವರಿಸಿದರು. ಏಕೆಂದರೆ ಇವರಿಗೆ ಸಸಿಗಳನ್ನು ನೆಡುವುದು ಕೇವಲ ಒಂದು ದಿನದ ಕೆಲಸವಲ್ಲ; ಅದು ನಿರಂತರ ಜವಾಬ್ದಾರಿ.

ಸಸಿ ಬೆಳೆದು ಮರವಾದಾಗ… ಸಿಗುವ ಆತ್ಮತೃಪ್ತಿಗೆ ಬೆಲೆ ಕಟ್ಟಲಾಗದು!

ತಾವು ವಿತರಿಸಿದ ಸಸಿಗಳು ಬೆಳೆದು ದೊಡ್ಡ ಮರಗಳಾದಾಗ, ಅವುಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ಪ್ರೀತಿಯಿಂದ ತಮ್ಮ ತೋಟಗಳಿಗೆ ಆಹ್ವಾನಿಸಿ, “ನೀವು ಕೊಟ್ಟ ಸಸಿ ಈಗ ದೊಡ್ಡ ಮರವಾಗಿದೆ. ಬಂದು ನೋಡಬೇಕು” ಎಂದು ಹೇಳುವ ಕ್ಷಣಗಳು ಸಿದಗೌಡರ ಬದುಕಿನ ಅತ್ಯಂತ ಅಮೂಲ್ಯ ಅನುಭವಗಳು.

ಒಂದು ಸಸಿ ಕೇವಲ ನೆರಳನ್ನು ನೀಡುವುದಲ್ಲ; ಅದು ಹಣ್ಣು-ಹಂಪಲುಗಳನ್ನು ಒದಗಿಸುತ್ತದೆ. ಪರಿಸರವನ್ನು ಶುದ್ಧೀಕರಿಸಿ ಜೀವಿಗಳಿಗೆ ಪರಿಶುದ್ಧ ಆಮ್ಲಜನಕವನ್ನು ನೀಡುತ್ತದೆ. ಅನೇಕ ಜೀವಿಗಳಿಗೆ ಆಶ್ರಯವಾಗುತ್ತದೆ. ಇಂತಹ ಸಸಿಗಳು ಮರವಾಗಿ ಬೆಳೆಯುವುದನ್ನು ಕಂಡಾಗ ತಮ್ಮ ಸೇವೆ ಸಾರ್ಥಕವಾಯಿತು ಎಂಬ ಭಾವ ಮೂಡುತ್ತದೆ. “ನಾನು ಮಾಡುತ್ತಿರುವುದು ಕೇವಲ ಒಂದು ಅಳಿಲು ಸೇವೆ. ಪರಿಸರಕ್ಕೆ ನಮ್ಮ ಕೊಡುಗೆ ಅತ್ಯಲ್ಪವಾದರೂ ಅದರ ಮಹತ್ವ ಅಪಾರ” ಎಂಬ ಅವರ ವಿನಯಪೂರ್ಣ ಮಾತುಗಳು ಅವರ ವ್ಯಕ್ತಿತ್ವದ ಎತ್ತರವನ್ನು ಸಾರುತ್ತವೆ.

ಒಂದು ಭೇಟಿಯಿಂದ ಅರಳಿದ ‘ಕರ್ನಾಟಕ ವೈಭವ ರತ್ನ’ ಗೌರವ!

ಸಿದಗೌಡರ ಸಮಾಜಮುಖಿ ಕಾರ್ಯಗಳಿಗೆ ಮತ್ತೊಂದು ಪ್ರೇರಣಾದಾಯಕ ತಿರುವು ನೀಡಿದ್ದು ಮಂಗಳೂರಿನಿಂದ ತಮ್ಮ ಊರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕೃಷ್ಣ ಮಾಳೆ ಎಂಬ ವ್ಯಕ್ತಿಯೊಂದಿಗಿನ ಆಕಸ್ಮಿಕ ಭೇಟಿ. ಪ್ರಯಾಣದ ವೇಳೆ ಸಮಾಜಸೇವೆಯ ಕುರಿತು ಇಬ್ಬರ ನಡುವೆ ನಡೆದ ಸಂವಾದದಲ್ಲಿ ಸಿದಗೌಡರು ತಮ್ಮ ಪರಿಸರ ಕಾರ್ಯಗಳ ವಿವರ ಹಂಚಿಕೊಂಡರು. ಅವರ ಸೇವೆಯನ್ನು ಮೆಚ್ಚಿದ ಕೃಷ್ಣ ಮಾಳೆ ಸಂಪರ್ಕ ಸಂಖ್ಯೆ ವಿನಿಮಯ ಮಾಡಿಕೊಂಡರು.

ನಂತರ ಸಿದಗೌಡರು ಕೈಗೊಂಡ ಸಮಾಜಮುಖಿ ಕಾರ್ಯಗಳ ಚಿತ್ರಗಳು ಹಾಗೂ ಮಾಹಿತಿಯನ್ನು ಗಮನಿಸಿದ ಕೃಷ್ಣ ಮಾಳೆ ಅವರು, ಸಂಬಂಧಪಟ್ಟ ಸಂಸ್ಥೆಗೆ ಈ ಸಾಧನೆಗಳ ವಿವರಗಳನ್ನು ಕಳುಹಿಸಿರುವುದಾಗಿ ತಿಳಿಸಿದರು. ಬಳಿಕ ಸಂಸ್ಥೆಯಿಂದ ಕರೆ ಬಂದಾಗ ದೊರೆತ ಪ್ರತಿಕ್ರಿಯೆಯ ಫಲವಾಗಿ, ಇವರಿಗೆ ಬೆಂಗಳೂರಿನ ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ.) ಸಂಸ್ಥೆಯು 2026ನೇ ಸಾಲಿನಲ್ಲಿ ‘ಕರ್ನಾಟಕ ವೈಭವ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. ತಮ್ಮ ನಿಸ್ವಾರ್ಥ ಸೇವೆಯನ್ನು ಗುರುತಿಸಿ ದೊರೆತ ಈ ಗೌರವ ಅವರಿಗೆ ಅಪಾರ ಸಂತೋಷ ಹಾಗೂ ಆತ್ಮತೃಪ್ತಿ ತಂದಿದೆ. ಪ್ರಶಸ್ತಿ ಎಂಬುದು ಕೇವಲ ಸನ್ಮಾನವಲ್ಲ; ಅದು ಸಮಾಜಕ್ಕಾಗಿ ಇನ್ನಷ್ಟು ಕೆಲಸ ಮಾಡಬೇಕೆಂಬ ಹೊಣೆಗಾರಿಕೆಯನ್ನು ಹೆಚ್ಚಿಸುವ ಪ್ರೇರಣೆ ಎಂಬ ಭಾವ ಅವರದು.

ಪ್ರತಿದಿನವೂ ಪರಿಸರ ದಿನವಾಗಲಿ!

ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆ. ಪರಿಸರದ ಕುರಿತು ಜಾಗೃತಿ ಮೂಡಿಸುವ ನಾಣ್ಣುಡಿಗಳು, ಘೋಷಣೆಗಳು ಹಾಗೂ ಸಂದೇಶಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ ನಿತ್ಯ ಜೀವನದಲ್ಲಿ ಅನುಷ್ಠಾನಗೊಳ್ಳಬೇಕು ಎಂಬುದು ಸಿದಗೌಡರ ಆಶಯ.

ಜೂನ್ 5ರ ವಿಶ್ವ ಪರಿಸರ ದಿನಾಚರಣೆಗೆ ಮಾತ್ರ ಪರಿಸರ ಪ್ರೀತಿ ಸೀಮಿತವಾಗಬಾರದು. ವರ್ಷದ ಪ್ರತಿಯೊಂದು ದಿನವೂ ಪರಿಸರ ದಿನವಾಗಬೇಕು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಿಷ್ಠ ಒಂದಾದರೂ ಸಸಿಯನ್ನು ನೆಟ್ಟು, ಅದನ್ನು ಮರವಾಗುವವರೆಗೆ ಆರೈಕೆ ಮಾಡುವ ಸಂಕಲ್ಪ ಕೈಗೊಳ್ಳಬೇಕು ಎಂಬ ಸಂದೇಶ ನೀಡುತ್ತಾರೆ. ಮುಂದಿನ ದಿನಗಳಲ್ಲಿ ರಾಯಬಾಗ ತಾಲೂಕಿನ ಎಲ್ಲ ಶಾಲೆಗಳಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸುವ ಮಹತ್ವದ ಗುರಿಯನ್ನು ಹೊಂದಿದ್ದಾರೆ. ಯುವಜನರು ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ತಮ್ಮ ಹುಟ್ಟುಹಬ್ಬ ಹಾಗೂ ಇತರ ವಿಶೇಷ ದಿನಗಳನ್ನು ಸಮಾಜಮುಖಿ ಕಾರ್ಯಗಳಿಗೆ ಮೀಸಲಿಡಬೇಕು ಎಂಬುದು ಅವರ ಕಳಕಳಿಯ ಕರೆ.

ಹಸಿರು ಹಾದಿಯಲ್ಲಿ ಸಾಗುವ ಸಾರ್ಥಕ ಬದುಕು!

ಕೃಷಿಕನಾಗಿ ಭೂಮಿಯೊಂದಿಗೆ ನಂಟು ಬೆಸೆದುಕೊಂಡು, ಸಮಾಜಸೇವಕನಾಗಿ ಜನರೊಂದಿಗೆ ಬಾಂಧವ್ಯ ಬೆಳೆಸಿಕೊಂಡು, ಪರಿಸರ ಪ್ರೇಮಿಯಾಗಿ ಹಸಿರಿನೊಂದಿಗೆ ಬದುಕು ಕಟ್ಟಿಕೊಂಡಿರುವ ಸಿದಗೌಡ ಬಾಳಗೌಡ ಪಾಟೀಲ ಅವರ ಪಯಣ ನಿಜಕ್ಕೂ ಅನುಕರಣೀಯ. ಪ್ರಚಾರದ ಹಂಬಲವಿಲ್ಲದೆ, ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆ, ಫಲಾಪೇಕ್ಷೆಯನ್ನು ಬದಿಗಿಟ್ಟು ಸಮಾಜದ ಒಳಿತಿಗಾಗಿ ದುಡಿಯುವ ಇಂತಹ ಯುವ ಮನಸ್ಸುಗಳು ಗ್ರಾಮೀಣ ಭಾರತದ ನಿಜವಾದ ಶಕ್ತಿ. ಇವರ ಬದುಕಿನ ಸಂದೇಶ ಸರಳವಾದರೂ ಅತ್ಯಂತ ಅರ್ಥಪೂರ್ಣ: “ಸಸಿ ನೆಡುವುದು ಒಂದು ಕಾರ್ಯವಾದರೆ, ಅದನ್ನು ಬೆಳೆಸುವುದು ಒಂದು ಕರ್ತವ್ಯ. ಪರಿಸರ ಉಳಿಸುವುದು ನಮ್ಮೆಲ್ಲರ ಹೊಣೆ; ಹಸಿರು ಬೆಳೆಸುವುದು ಭವಿಷ್ಯದ ಪೀಳಿಗೆಗೆ ನಾವು ನೀಡುವ ಅಮೂಲ್ಯ ಕೊಡುಗೆ.” ಸಿದಗೌಡರ ಈ ಹಸಿರು ಪಯಣ ಹೀಗೆ ನಿರಂತರವಾಗಿ ಸಾಗಲಿ. ಅವರ ಕೈಗಳಿಂದ ನೆಲದಲ್ಲಿ ಬೇರೂರುವ ಪ್ರತಿಯೊಂದು ಸಸಿಯೂ ನಾಳಿನ ಸಮಾಜಕ್ಕೆ ನೆರಳಾಗಿ, ನೆಮ್ಮದಿಯಾಗಿ, ಜೀವಸೆಲೆಯಾಗಿ ಬೆಳೆಯಲಿ ಎಂಬ ಹಾರೈಕೆ.

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

spot_img