- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

ರಾಮನಗರದಲ್ಲಿ ಕೃಷಿ ಮಾಹಿತಿ ಕೇಂದ್ರ, ಬೆಳೆ ಸಂಗ್ರಹಾಲಯ ಹಾಗೂ ಕೈತೋಟ ಉದ್ಘಾಟನೆ

ರಾಮನಗರ: ರೈತರಿಗೆ ಕೃಷಿ ಸಂಬಂಧಿತ ಮಾಹಿತಿ, ವೈಜ್ಞಾನಿಕ ಬೆಳೆ ನಿರ್ವಹಣೆ ಹಾಗೂ ಸಾವಯವ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಅಂತಿಮ ವರ್ಷದ ಬಿ.ಎಸ್ಸಿ. (ಕೃಷಿ) ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಶಿವಮೊಗ್ಗ ತಾಲೂಕಿನ ಹಾರ್ನಳ್ಳಿ ಹೋಬಳಿಯ ರಾಮನಗರ ಗ್ರಾಮದಲ್ಲಿ ಕೃಷಿ ಮಾಹಿತಿ ಕೇಂದ್ರ, ಬೆಳೆ ಸಂಗ್ರಹಾಲಯ ಹಾಗೂ ಕೈತೋಟದ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿದರು.

ಕಾರ್ಯಕ್ರಮದ ಅಂಗವಾಗಿ ಕೃಷಿ ಮಾಹಿತಿ ಕೇಂದ್ರದಲ್ಲಿ ವಿವಿಧ ಕೃಷಿ ತಂತ್ರಜ್ಞಾನಗಳು, ಸುಧಾರಿತ ಕೃಷಿ ಪದ್ಧತಿಗಳು, ಪ್ರಮುಖ ಬೆಳೆಗಳ ನಿರ್ವಹಣೆ, ಕೀಟ ಮತ್ತು ರೋಗಗಳ ನಿಯಂತ್ರಣ ಹಾಗೂ ಸಾವಯವ ಕೃಷಿ ಪದ್ಧತಿಗಳಿಗೆ ಸಂಬಂಧಿಸಿದ ವಿವಿಧ ಚಾರ್ಟ್‌ಗಳು ಮತ್ತು ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಲಾಯಿತು. ಇವುಗಳ ಮೂಲಕ ರೈತರಿಗೆ ಸರಳವಾಗಿ ಹಾಗೂ ಪ್ರಾಯೋಗಿಕವಾಗಿ ಕೃಷಿ ಮಾಹಿತಿಯನ್ನು ಪರಿಚಯಿಸಲಾಯಿತು.

ಇದಲ್ಲದೆ, ಸಸ್ಯ ಆರೋಗ್ಯ ಕೇಂದ್ರದಲ್ಲಿ ವಿವಿಧ ಬಗೆಯ ಶಿಲೀಂಧ್ರನಾಶಕಗಳು, ಕೀಟನಾಶಕಗಳು, ಸಾವಯವ ಗೊಬ್ಬರಗಳು ಹಾಗೂ ಪ್ರಮುಖ ಬೆಳೆಗಳ ರೋಗಗಳ ಮಾದರಿಗಳನ್ನು ಪ್ರದರ್ಶಿಸಿ, ಅವುಗಳ ಬಳಕೆ, ಮಹತ್ವ ಮತ್ತು ಬೆಳೆಗಳಲ್ಲಿ ರೋಗ ಹಾಗೂ ಕೀಟಗಳ ನಿರ್ವಹಣೆಯ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ಬೆಳೆ ಸಂಗ್ರಹಾಲಯದಲ್ಲಿ ವಿವಿಧ ಬೆಳೆಗಳ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ಬೆಳೆಗಳ ವೈವಿಧ್ಯತೆ ಮತ್ತು ಅವುಗಳ ಕೃಷಿ ಮಹತ್ವವನ್ನು ತಿಳಿಸಲಾಯಿತು. ಕೈತೋಟದ ಮೂಲಕ ಮನೆಯ ಸುತ್ತಮುತ್ತ ಲಭ್ಯವಿರುವ ಜಾಗದಲ್ಲಿ ತರಕಾರಿ ಹಾಗೂ ಸೊಪ್ಪಿನ ಬೆಳೆಗಳನ್ನು ಬೆಳೆಸುವ ವಿಧಾನ, ಪೌಷ್ಟಿಕ ಆಹಾರದ ಮಹತ್ವ ಮತ್ತು ಮನೆಯಲ್ಲಿಯೇ ಸಾವಯವ ತರಕಾರಿ ಉತ್ಪಾದನೆಯ ಕುರಿತು ಅರಿವು ಮೂಡಿಸಲಾಯಿತು.

ಈ ಕಾರ್ಯಕ್ರಮವು ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಪರಿಚಯಿಸುವುದರ ಜೊತೆಗೆ, ಕಡಿಮೆ ವೆಚ್ಚದಲ್ಲಿ ಸುಸ್ಥಿರ ಹಾಗೂ ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಯಿತು. ಗ್ರಾಮಸ್ಥರು ಹಾಗೂ ರೈತರು ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಿ ಕೃಷಿ ಮಾಹಿತಿಯನ್ನು ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಡಾ.ಸಹನಾ ಸಂಯೋಜಕರು ಕೃಷಿ ವಿಸ್ತರಣಾ ವಿಭಾಗ, ಡಾಕಿರಣ್ ಕುಮಾರ ಪಾಟೀಲ್ ಸಹಾಯಕ ಪ್ರಾಧ್ಯಾಪಕರು ಅರ್ಥಶಾಸ್ತ್ರ ವಿಭಾಗ, ಡಾ. ಪ್ರದೀಪ್ ಸಹಾಯಕ ಪ್ರಾಧ್ಯಾಪಕರು ಕೃಷಿ ವಿಸ್ತರಣಾ ವಿಭಾಗ, ಡಾ ಪ್ರಶಾಂತ್ ಸಹಾಯಕ ಪ್ರಾಧ್ಯಾಪಕರು ಕೃಷಿ ವಿಸ್ತರಣಾ ವಿಭಾಗ, ಲೋಕೇಶಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಿ ಕೆ ರವಿಕುಮಾರ್, ಕೆಂಚಪ್ಪ ಹಾಗೂ ಮಹಿಳೆಯರು,ರೈತರು, ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

spot_img