spot_img
Thursday, October 29, 2026
spot_imgspot_img
- Advertisement -spot_img

ಶಿವಮೊಗ್ಗ: ಪೀಡೆನಾಶಕಗಳ ಸುರಕ್ಷಿತ ಬಳಕೆ ಕುರಿತು ರೈತರೊಂದಿಗೆ ಗುಂಪು ಚರ್ಚೆ

ಶಿವಮೊಗ್ಗ ತಾಲೂಕಿನ ರಾಮನಗರ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ರೈತರಿಗೆ ಪೀಡೆನಾಶಕಗಳ ಸುರಕ್ಷಿತ ಬಳಕೆಯ ಕುರಿತು ಗುಂಪು ಚರ್ಚೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪೀಡೆನಾಶಕಗಳನ್ನು ಬಳಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ಸೂಕ್ತ ಪೀಡೆನಾಶಕಗಳ ಆಯ್ಕೆ, ಶಿಫಾರಸು ಮಾಡಿದ ಪ್ರಮಾಣದಲ್ಲಿ ಔಷಧಿಯನ್ನು ಬಳಸುವ ವಿಧಾನ ಹಾಗೂ ಸಿಂಪಡಣೆ ಮಾಡುವಾಗ ಕೈಗವಸು, ಮುಖಗವಸು ಮತ್ತು ರಕ್ಷಣಾತ್ಮಕ ಉಡುಪುಗಳನ್ನು ಧರಿಸುವುದರ ಮಹತ್ವವನ್ನು ರೈತರಿಗೆ ವಿವರಿಸಲಾಯಿತು.

ಅಲ್ಲದೆ, ಪೀಡೆನಾಶಕಗಳನ್ನು ಬಳಸುವ ಮೊದಲು ಉತ್ಪನ್ನದ ಲೇಬಲ್‌ನಲ್ಲಿರುವ ಸೂಚನೆಗಳನ್ನು ಓದುವುದು, ಗಾಳಿ ಬೀಸುವ ದಿಕ್ಕನ್ನು ಗಮನಿಸಿ ಸಿಂಪಡಣೆ ಮಾಡುವುದು, ಔಷಧಿ ಸಿಂಪಡಿಸಿದ ನಂತರ ಕಾಯುವ ಅವಧಿಯನ್ನು ಪಾಲಿಸುವುದು ಹಾಗೂ ಖಾಲಿ ಔಷಧಿ ಡಬ್ಬಿಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಕುರಿತು ಮಾಹಿತಿ ನೀಡಲಾಯಿತು. ಪೀಡೆನಾಶಕಗಳ ಅಸಮರ್ಪಕ ಬಳಕೆಯಿಂದ ರೈತರ ಆರೋಗ್ಯ, ಪರಿಸರ, ಮಣ್ಣು ಮತ್ತು ನೀರಿನ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು.
ಈ ಗುಂಪು ಚರ್ಚೆಯ ಮೂಲಕ ರೈತರು ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡು, ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆಗೆ ಪೀಡೆನಾಶಕಗಳನ್ನು ಜವಾಬ್ದಾರಿಯುತವಾಗಿ ಹಾಗೂ ಸುರಕ್ಷಿತವಾಗಿ ಬಳಸುವ ಕುರಿತು ಅರಿವು ಪಡೆದುಕೊಂಡರು.

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group