‘ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ’ ಎಂಬ ಘೋಷವಾಕ್ಯದೊಂದಿಗೆ ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ಶಿವಮೊಗ್ಗದ ನವಿಲೆಯಲ್ಲಿರುವ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಮೇಳ ನಡೆಯಲಿದೆ.
ಮೇಳದಲ್ಲಿ ರೈತರಿಗೆ ಅನುಕೂಲವಾಗುವಂತೆ ವಿವಿಧ ಕೃಷಿ ತಂತ್ರಜ್ಞಾನಗಳು, ಆಧುನಿಕ ಕೃಷಿ ಪದ್ಧತಿಗಳು ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.
ಮೇಳದ ಪ್ರಮುಖ ಆಕರ್ಷಣೆಗಳು:
- ತಂತ್ರಜ್ಞಾನ ಉದ್ಯಾನವನ
- ಹವಾಮಾನ ಆಧಾರಿತ ಕೃಷಿ
- ಸಮಗ್ರ ಕೃಷಿ ಪದ್ಧತಿ
- ಸಾವಯವ ಮತ್ತು ನೈಸರ್ಗಿಕ ಕೃಷಿ
- ಕೀಟ ಪ್ರಪಂಚ ಮತ್ತು ಜೇನು ವನ
- ಅಣಬೆ ಬೇಸಾಯ ಮತ್ತು ಜೈವಿಕ ಗೊಬ್ಬರಗಳು
- ಹೈಟೆಕ್ ತೋಟಗಾರಿಕೆ, ಪುಷ್ಪ ಕೃಷಿ, ತಾರಸಿ ಮತ್ತು ಲಂಬ ತೋಟಗಾರಿಕೆ
- ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ
- ಸಿರಿಧಾನ್ಯಗಳ ಮೌಲ್ಯವರ್ಧನೆ ಹಾಗೂ ತಾಂತ್ರಿಕತೆಗಳು
- ಕೊಯ್ಲೋತ್ತರ ತಂತ್ರಜ್ಞಾನ ಮತ್ತು ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು
- ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು
- ಆಧುನಿಕ ಕೃಷಿಯಲ್ಲಿ ರೋಬೋಟಿಕ್ ಮತ್ತು ಸ್ವಯಂಚಾಲಿತ ತಂತ್ರಜ್ಞಾನ
- ಸಮಗ್ರ ಜಲಾನಯನ ಅಭಿವೃದ್ಧಿ
- ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ
- ಪರಿಸರ ಕೃಷಿ ಪ್ರವಾಸೋದ್ಯಮ
ಇದರೊಂದಿಗೆ ಪ್ರಗತಿಪರ ರೈತರು ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಹಾಗೂ ರೈತ-ವಿಜ್ಞಾನಿ ಸಂವಾದ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಕೃಷಿಯಲ್ಲಿನ ನೂತನ ಆವಿಷ್ಕಾರಗಳು, ಬರ ನಿರ್ವಹಣಾ ವಿಧಾನಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆಯಲು ಈ ಮೇಳ ರೈತರಿಗೆ ಉತ್ತಮ ವೇದಿಕೆಯಾಗಲಿದೆ.








