spot_img
Saturday, July 27, 2024
spot_imgspot_img
spot_img
spot_img

ಕಸ್ತೂರಿ ರಂಗನ್ ವರದಿಯ ಯಥಾವತ್ ಜಾರಿಗೆ ಭಾ.ಕಿ.ಸಂ. ಆಕ್ಷೇಪ

ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ಮಾಸಿಕ ಸಭೆಯು ಆ.8 ರಂದು ಸಂಘದ ಅಧ್ಯಕ್ಷರಾದ ಗೋವಿಂದರಾಜ್ ಭಟ್ ಕಡ್ತಲ ಇವರ ಅದ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಗೋವಿಂದರಾಜ್ ಭಟ್ ಕಡ್ತಲ, ಕಸ್ತೂರಿ ರಂಗನ್ ವರದಿಯ ಯಥಾವತ್ ಜಾರಿಯಿಂದ ರೈತರಿಗೆ ವಿವಿಧ ರೀತಿಯ ತೊಂದರೆಗಳಾತ್ತವೆ. ಈ ವಿಚಾರವಾಗಿ ಭಾರತೀಯ ಕಿಸಾನ್ ಸಂಘವು ವರದಿಯ ಅಧ್ಯಯನ ನಡೆಸಿ ಈಗಾಗಲೇ ಹಲವು ಬಾರಿ ರೈತರೊಂದಿಗೆ ಚರ್ಚೆನಡೆಸಿರುತ್ತದೆ. ಅಲ್ಲದೆ ಅದರಲ್ಲಿ ಕೈಬಿಡಬೇಕಾದ ಮತ್ತು ಬದಲಾವಣೆ ಮಾಡಬೇಕಾದ ಅಂಶಗಳ ಬಗ್ಗೆ ವಿಸ್ತೃತವಾಗಿ ರೈತರೊಂದಿಗೆ ಚರ್ಚೆ ನಡೆಸಿದೆ. ಅಲ್ಲದೆ ಪರಿಸರ ಸೂಕ್ಷ್ಮ ಪ್ರದೇಶಗಳ ಜನರೊಂದಿಗೆ ಮತ್ತು ರೈತರೊಂದಿಗೆ ಸಭೆ ನಡೆಸಿ ಈಗಾಗಲೇ ಹಲವಾರು ಬಾರಿ ಸರಕಾರಕ್ಕೆ ಮನವಿಯನ್ನು ಸಲ್ಲಿಸುತ್ತಾ ಬಂದಿದೆ. ಹಾಗಾಗಿಯೂ ಈ ಬಗ್ಗೆ ವರದಿಯಲ್ಲಿ ತಿಳಿಸಿರುವಂತೆ ಸಮರ್ಪಕವಾಗಿ ಎಲ್ಲಿಯೂ ಕೂಡಾ ವರದಿಯನ್ನು ಅನುಷ್ಟಾನ ಮಾಡಬೇಕಾದ ವ್ಯಕ್ತಿಗಳು ಸಮಲೋಚನಾ ಸಭೆಯನ್ನು ನಡೆಸಿರುವುದಿಲ್ಲ. ಗ್ರಾಮಸ್ಥರ ಅಭಿಪ್ರಾಯಗಳನ್ನು ಕೂಡಾ ಸಂಗ್ರಹಿಸಿರುವುದಿಲ್ಲ ಈ ಹಿಂದೆ ಸುಮಾರು ೧೦ ವರ್ಷಗಳಿಂದ ಹಲವು ಬಾರಿ ಭಾರತೀಯ ಕಿಸಾನ್ ಸಂಘವು ಜಿಲ್ಲೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆಗಳನ್ನು ನಡೆಸಿದ್ದು, ವರದಿಯ ಅನುಷ್ಟಾನದಲ್ಲಿ ಮಾಡಬೇಕಾದ ಬದಲಾವಣೆಗಳ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಈಗ ಸರಕಾರವು ವರದಿ ಅನುಷ್ಟಾನಕ್ಕೆ ಮುಂದಾಗಿರುವುದು ರೈತರಲ್ಲಿ ಮತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ವರದಿಯ ಯಥಾವತ್ ಜಾರಿಗೆ ಭಾರತೀಯ ಕಿಸಾನ್ ಸಂಘದ ಆಕ್ಷೇಪವಿದೆ ಎಂದು ಹೇಳಿದರು.

ಈಗಿನ ಪರಿಸ್ಥಿತಿಯಲ್ಲಿ ಹಾಲಿನ ಉತ್ಪಾದನಾ ವೆಚ್ಚವು ಪಶು ಆಹಾರ, ಮೇವಿನ ದರ, ಕೆಲಸಗಾರರ ವೇತನದಲ್ಲಿ ಹೆಚ್ಚಳವಾದ ಕಾರಣದಿಂದಾಗಿ ಹೆಚ್ಚಾಗಿರುತ್ತದೆ. ಈಗಾಗಲೇ ಭಾರತೀಯ ಕಿಸಾನ್ ಸಂಘವು ಹಾಲಿನ ಖರೀದಿ ದರ ಹೆಚ್ಚಳಕ್ಕಾಗಿ ಮನವಿಯನ್ನು ಸಲ್ಲಿಸಿತ್ತು. ಈ ಬಗ್ಗೆ ಸಂಬಂಧಪಟ್ಟವರಿಗೆ ಖರೀದಿ ದರವನ್ನು ಕನಿಷ್ಟ ಲೀಟರಿಗೆ ೫೦ ರೂಪಾಯಿಗೆ ಹೆಚ್ಚಿಸುವಂತೆ ಮನವಿ ಮಾಡಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಜಿಲ್ಲಾ ಅಭ್ಯಾಸವರ್ಗವು ಕಾರ್ಕಳ ತಾಲೂಕಿನಲ್ಲಿ ನಡೆಯಲಿದ್ದು ಹೆಚ್ಚಿನ ಸದಸ್ಯರು ಅಭ್ಯಾಸವರ್ಗದಲ್ಲಿ ಪಾಲ್ಗೊಳ್ಳುವಂತೆ ಸಭೆಗೆ ತಿಳಿಸಲಾಯಿತು.
ಇಂದಿನ ಕಾರ್ಯಕ್ರಮದಲ್ಲಿ ಶೇಖರ್ ಶೆಟಿ ನೀರೆ, ಕೆ.ಪಿ.ಭಂಡಾರಿ ಕೆದಿಂಜೆ, ಗ್ರಾಮ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರ್ವಹಿಸಿದರು.

(ನಿಮ್ಮೂರಿನ ಕೃಷಿ ಸುದ್ದಿ, ಕೃಷಿ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ವರದಿ ಮತ್ತು ಫೊಟೋಗಳನ್ನು ನಮಗೆ ಕಳುಹಿಸಿ. ನಾವದ್ದನ್ನು ಜಗತ್ತಿಗೇ ಕೃಷಿಬಿಂಬ ಜಾಲತಾಣದ ಮೂಲಕ ತಲುಪಿಸುತ್ತೇವೆ)

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group