spot_img
Monday, September 7, 2026
spot_imgspot_img

ಮೆಣಸು ಬೆಳೆಗಾರನ ಯಶಸ್ವಿ ನರ್ಸರಿ ಉದ್ಯಮ

ಬರಹ- ಗಣಪತಿ ಹಾಸ್ಪುರ

ಇವತ್ತಿನ ಸುಧಾರಣೆಯ ಕಾಲದಲ್ಲಿ ಯಾರು, ಯಾವ ಉದ್ಯೋಗವನ್ನಾದರೂ ಮಾಡಲು ವಿಫಲವಾದ ಅವಕಾಶವಿದೆ. ಇಂಥವ ವ್ಯಕ್ತಿಗೆ, ಇದೇ ಉದ್ಯೋಗ ಮಾಡಬೇಕೆಂಬ ನಿರ್ಬಂಧವೇನು ಇಲ್ಲ.ಆದ್ರೇ, ಎಲ್ಲ ವ್ಯಕ್ತಿಗಳಿಗೂ ಎಲ್ಲ ಕೆಲಸವೂ ಒಗ್ಗುವುದು ಇಲ್ಲ.ಆರಂಭಿಸಿದ ಉದ್ಯೋಗ/ ಉದ್ಯಮವನ್ನು ವಿಸ್ತರಣೆ ಮಾಡುವುದು…ಅದ್ರಲ್ಲಿಯೇ ಜೀವನಬಂಡಿ ಓಡಿಸಲು ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ. ಅದ್ರಲ್ಲಿಯೂ ಅಡಿಕೆ ತೋಟದ ವೃತ್ತಿಯಲ್ಲಿ ಇದ್ದವರಿಗೆ ಬೇರೆ ಉದ್ಯಮ/ ಉದ್ಯೋಗವನ್ನು ಮಾಡುವುದು ಇವತ್ತಿನ ದಿನದಲ್ಲಿ ಬಹಳ ಕಷ್ಟ ವೆಂದು ಹೇಳುವವರೆ ಹೆಚ್ಚು.ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ   ಮಲೆನಾಡಿನ ಹಲವಾರು ಅಡಿಕೆ ಬೇಸಾಯ ಮಾಡುವ ಕೃಷಿಕರು ನರ್ಸರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಥವರಲ್ಲಿ ಹೊಸ್ಮನೆಯ ಪ್ರಗತಿಪರ ಮೆಣಸುಬೆಳೆಗಾರ ಶ್ರೀಧರ ಭಟ್ ಸಹಾ ಒಬ್ಬರು.

ಜಿಲ್ಲೆಯ ಯಲ್ಲಾಪುರ ತಾಲೂಕಿನ  ಚವತ್ತಿ ಹೊಸ್ಮನೆಯ ನಿವಾಸಿಯಾದ ಇವರು ಈ ಭಾಗದ ಉತ್ತಮ ಕಾಳುಮೆಣಸು ಬೆಳೆಯುವ ಕೃಷಿಕರು.ಅಡಿಕೆಯೊಂದಿಗೆ ಮೆಣಸು, ಕಾಫಿಯನ್ನು ಯಥೇಚ್ಛವಾಗಿ ಬೆಳೆಯುತ್ತಿರುವ ಈ ಕೃಷಿಕರು, ತಮ್ಮ ತೋಟದಲ್ಲಿ ಹಲವಾರು ಸ್ಥಾನೀಕ ಮೆಣಸು ತಳಿಯನ್ನು ಸಂರಕ್ಷಿಸಿಕೊಂಡು ಬಂದಿರುವುದು ವಿಶೇಷ.ಅಲ್ಲದೇ, ಆಸಕ್ತ ರೈತರಿಗೆ  ತಮಗೆ ತಿಳಿದಿರುವ ಕೃಷಿಯ ಮಾಹಿತಿಯನ್ನು ಹಂಚಿಕೊಳ್ಳುವ ಈ ರೈತರು  ಏಳೆಂಟು ವರುಷದಿಂದ  ನರ್ಸರಿ ಕಾಯಕದಲ್ಲಿಯೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ

ನರ್ಸರಿಗೆ ಪಾದಾರ್ಪಣೆ

ಹೊಸ್ಮನೆಯ ಶ್ರೀಧರ ಭಟ್ರು ತಮ್ಮ ಪಾಲಿಗೆ ಇರುವಷ್ಟು ಜಾಗದಲ್ಲಿ ಅಡಿಕೆ, ಮೆಣಸು ಕೃಷಿಯ ಜೊತೆಗೆ ಜಾಯಿಕಾಯಿ, ತೆಂಗು, ವೆನಿಲ್ಲಾ,ಬಾಳೆಯ ಕೃಷಿಯೊಂದಿಗೆ ಪಶುಸಂಗೋಪನೆ ಕಾರ್ಯದಲ್ಲಿಯೂ ಅವರು ಸಕ್ರೀಯವಾಗಿ ತೊಡಗಿಕೊಂಡವರು. ಅದ್ರಲ್ಲಿಯೂ ವಿಶೇಷವಾಗಿ ಅನೇಕ ಸ್ಥಾನೀಕ ಕಾಳುಮೆಣಸಿನ ಬಳ್ಳಿಗಳನ್ನು ಉಳಿಸಿಕೊಂಡು, ಸುಧಾರಿತ  ಮೆಣಸಿನ ತಳಿಗಳಿಗೂ ಆದ್ಯತೆ ನೀಡಿದವರು.ಹಾಗೂ ಗುಣಮಟ್ಟದ ಮೆಣಸಿನ ಕಾಳು ಮಾಡುವುದ್ರಲ್ಲಿಯೂ ಇವರದ್ದು ಏತ್ತಿದ ಕೈ. ಹಾಗೇ ನೋಡಲು ಹೋದರೇ ಈ ಕೃಷಿಕರಿಗೆ ಇವಿಷ್ಟು ಬೆಳೆಗಳನ್ನು ಮಾಡಿಕೊಂಡು ನೆಮ್ಮದಿಯಿಂದ ಇರಬಹುದಾಗಿತ್ತು.ತನಗೆ ವಯಸ್ಸು ಆಯಿತೆಂದು ಶ್ರೀಧರ ಭಟ್ರು ಸ್ವಖಾಸುಮ್ಮನೆ ಕುರಲಿಲ್ಲ. ಇಪ್ಪತ್ತರ ಯುವಕರಂತೆ ಹೊಸ್ಮನೆ ಹಾಗೂ ಗಿಡಗನಮನೆ ಯಲ್ಲಿರುವ ತಮ್ಮ ಕೃಷಿಭೂಮಿಯನ್ನು ಸುತ್ತಿರುಗಿ ಬರುತ್ತಾರೆ.ಅಚ್ಚುಕಟ್ಟಾಗಿ ಕೃಷಿ ಭೂಮಿಯನ್ನು ನಿರ್ವಹಣೆ ಮಾಡುವುದ್ರರ ಜೊತೆಗೆ, ನರ್ಸರಿಯನ್ನು  ಉದ್ಯಮವಾಗಿ ಬೆಳೆಸುತ್ತಿರುವ ಅವರ ಪರಿಶ್ರಮ,ಕಾಳಜಿಯನ್ನು ಮೆಚ್ಚಲೇಬೇಕು.

ಒಮ್ಮೆ ಇವರ ತೋಟಕ್ಕೆ ಬಂದ ಕೃಷಿ ವಿಜ್ಞಾನಿ ಡಾ. ವೇಣುಗೋಪಾಲ ಅವರು  ” ತೋಟದಲ್ಲಿ ಮೆಣಸಿನ ಕೃಷಿ ಮಾಡುವವರು….ತಮ್ಮ ತೋಟಕ್ಕೆ ಬೇಕಾಗುವಷ್ಟು ಬಳ್ಳಿಗಳನ್ನು ತಾವೇ ಸಿದ್ದಮಾಡಿಕೊಂಡರೇ ಎಲ್ಲ ದೃಷ್ಟಿಯಿಂದ ಉತ್ತಮ” ಎಂಬ ಸಲಹೆಯನ್ನು ಕೊಟ್ಟಿದ್ದರು. ಅವರು ಆಡಿದ ಉಪಯುಕ್ತ ಮಾತೇ ಶ್ರೀಧರ ಭಟ್ ರೂ  ನರ್ಸರಿ ಮಾಡಲು ಪ್ರೆರಣೆಯಾಯಿತು.  2015 ರಲ್ಲಿ ಪ್ರಪ್ರಥಮ ಭಾರಿಗೆ  ಹೊಸ್ಮನೆಯಲ್ಲಿ 80 *20 ಅಡಿ ಅಗಲ ಜಾಗದಲ್ಲಿ ಹವ್ಯಾಸ ಲೆಕ್ಕದಲ್ಲಿ, ಪಕ್ಕ ದೇಶಿಯ ಶೈಲಿಯಲ್ಲಿ ಕಾಳುಮೆಣಸಿನ ನರ್ಸರಿ ಶುರು ಮಾಡಿದರು. ಆ ವರುಷ ನಾಲ್ಕೈದು ಸಾವಿರ ಸಸಿಗಳನ್ನು ಅಷ್ಟೇ ಸಿದ್ದ ಮಾಡಿದ್ದರು.ಸಾಕಷ್ಟು ಆತಂಕ, ಸವಾಲಿನ ಮದ್ಯೆ ಶುರು ಮಾಡಿದ ನರ್ಸರಿಯ  ಈ ಆರಂಭಿಕ ಹೆಜ್ಜೆಯಲ್ಲಿ ಏಡಗಿ ಬೀಳದೆ, ಅದ್ರಲ್ಲಿ ಪೂರ್ಣ ಪ್ರಮಾಣ ತೃಪ್ತಿ ಸಿಗದೇಯಿದ್ದರೂ…ನರ್ಸರಿ ಕಾಯಕದಲ್ಲಿ ಧೈರ್ಯದಿಂದ ಮುಂದೆವರಿಯಬಹುದು ಎಂಬ ವಿಶ್ವಾಸ ಅವರಲ್ಲಿ ಜಾಗ್ರವಾಯಿತು.ಇದ್ನ ದೊಡ್ಡ ಪ್ರಮಾಣದಲ್ಲಿ ತಾನು ಮಾಡಬಹುದು ಎಂಬ ವಿಶ್ವಾಸ ಹುಟ್ಟಿತು.

2016 ರಲ್ಲಿ ಇವರು ಬೇರೊಂದು ಊರಿನಲ್ಲಿ( ಉಮ್ಮಚ್ಗಿ -ಗಿಡಗನಮನೆ) ಹೊಸದಾಗಿ ಜಮೀನು ಖರೀದಿ ಮಾಡಿದ ಸಮಯದಲ್ಲಿ  ಅಲ್ಲಿ ಆದಾಯ ಬರುವ ಬೆಳೆಯೇನು ಇರಲಿಲ್ಲ. ಆ ಜಾಗದಲ್ಲಿ ಮೊದಲ ಹಂತದಲ್ಲಿ ಮೆಣಸಿನ ಗಿಡ ಹಚ್ಚಬೇಕೆಂಬ ಪ್ಲೇನ್ ಏನೋ ಮನಸ್ಸಿನಲ್ಲಿ ರೇಡಿಯಾಗಿತ್ತು. ಆದ್ರೇ ಸಾಕಷ್ಟು ಮೆಣಸಿನ ಗಿಡ ಬೇಕಲ್ಲ!  ಬೇರೆ ಕಡೆಯಿಂದ ಗಿಡಗಳನ್ನು ತಂದು ಹಚ್ಚಲು ಇವರು ಮನಸ್ಸು ಮಾಡದೇ, ಒಂದ್ ವರುಷ ವಿಳಂಬವಾದರೂ ಪರವಾಗಿಲ್ಲ ನಾವೇ ಸಿದ್ದ ಮಾಡಿಕೊಂಡು ಹಚ್ಚಿದರೇ ಬಹಳ ಉಪಯುಕ್ತ ಎಂಬುದನ್ನು ಅರಿತುಕೊಂಡು ಆ ಕಾರ್ಯದಲ್ಲಿ ಹೆಗಲೊಡ್ಡಿದರು.ಹೀಗಾಗಿ ಹೊಸ್ಮನೆಯಲ್ಲಿ ನರ್ಸರಿ ಮಾಡುವುದಕ್ಕಿಂತ, ವಿಶಾಲವಾದ ಜಾಗವಿದ್ದ ಗಿಡಗನಮನೆಯಲ್ಲಿ ನರ್ಸರಿ ಕೆಲಸ ಮಾಡುವುದು ಎಲ್ಲ ದೃಷ್ಟಿಯಿಂದ ಉತ್ತಮ ಎಂದು ಅನಿಸಿ, ಗಿಡಗಮನೆಯಲ್ಲಿಯೇ ನರ್ಸರಿ ಕೆಲಸಕ್ಕೆ ಶುರುಮಾಡಿದರು.ಇಲ್ಲಿ ಜಮೀನನ್ನು ನೋಡಲು ಯಾರಾದರೂ ಜನರು ಬೇಕಾಗಿತ್ತು; ಅವರಿಗೆ ಪುಲ್ ಟೈಂ ಕೆಲಸವೂ ಕೊಡಬೇಕಾಗಿತ್ತು. ಹೀಗಾಗಿ ನರ್ಸರಿಯನ್ನು ಮಾಡಿಕೊಂಡರೇ  ಆ ಎಲ್ಲ ಕೆಲಸಗಳಿಗೂ ಅನುಕೂಲ ಆಗಬಹುದು ಎಂದುಕೊಂಡು ನರ್ಸರಿ ಕಾಯಕವನ್ನು ಉಮೇದಿಯಿಂದಲೇ ಪ್ರಾರಂಭ ಮಾಡಿದರು.

ಪಾಲಿಹೌಸ್ ನಲ್ಲಿ ನರ್ಸರಿ

ಪ್ರಗತಿಪರ ಕೃಷಿಕರಾದ ಶ್ರೀಧರ ಭಟ್ರು ಹೊಸ್ಮನೆಯಲ್ಲಿ ಮೊದಲು ನರ್ಸರಿ ಮಾಡಿದಾಗ ಪಕ್ಕ ದೇಶಿ ಶೈಲಿಯಲ್ಲಿ ಚಪ್ಪರ ಅಳವಡಿಸಿಕೊಂಡಿದ್ದರು. ಅದ್ರೊಳಗೆ ಮೆಣಸಿನ  ಸಸಿ ಚನ್ನಾಗಿ ಕುಡಿ ಬರಲಿ ಎಂಬ ಕಾರಣಕ್ಕೆ ಪ್ರತಿಯೊಂದು ಬೇಡ್ ಗೂ ಪ್ಲಾಸ್ಟಿಕ್ ನ್ನು ಅರ್ಧ ಚಂದ್ರಾಕೃತಿಯಲ್ಲಿ ಹಾಕಿದ್ದರು.ಆ ಪದ್ದತಿಯಲ್ಲಿ ಮಾಡಿದಾಗ ಗಿಡಗಳು ಚನ್ನಾಗಿಯೇ ಸಿದ್ದವಾಗಿದ್ದವು. ಆದ್ರೇ, ಗಿಡಗನಮನೆಯಲ್ಲಿ ನರ್ಸರಿ ಆರಂಭಿಸುವಾಗ ಸುಧಾರಿತ ಪದ್ದತಿಯನ್ನೇ ಅಳವಡಿಕೊಂಡರು. 90 ಅಡಿ ಉದ್ದ ಹಾಗೂ  30 ಅಡಿ ಅಗಲದ ಪಾಲಿಹೌಸ್ ನ್ನು ಸ್ವ ಖರ್ಚಿನಿಂದಲೇ  ( ಅಂದಾಜು  3  ಲಕ್ಷ)ನಿರ್ಮಿಸಿಕೊಂಡರು.ಇದರ ಒಳಗೆ ಮೆಣಸಿನ ನರ್ಸರಿ ಆರಂಭ ಮಾಡಿದರು.

ತಮ್ಮ ತೋಟದಲ್ಲಿ ಸಾಕಷ್ಟು ಕಟಿಂಗ್ ಗಳು ಲಭಿಸಿದೇ ಇರುವ ಕಾರಣ ಸರ್ಪೆಂಟ್ ಸಿಸ್ಟಮ್  ( ತಾಯಿ ಬಳ್ಳಿಯಿಂದ ಸಾಕಷ್ಟು ಕುಡಿ ಸಿದ್ದ ಮಾಡುವ ಪದ್ದತಿ) ನಲ್ಲಿ ಕುಡಿಗಳನ್ನು ವೃದ್ದಿಸಿಕೊಂಡರು.ಆರಂಭದಲ್ಲಿ ಪಣಿಯೂರ ತಳಿಗಳನ್ನು  ಅಷ್ಟೇ ಮಾಡಿದರು. ತೇವಂ ತಳಿಯನ್ನು ಇವರು ಹಾಸನದ ಬಾಳೂರುಪೇಟೆ ಸಮೀಪ ಇರುವ ಟಾಟಾ ಕಂಪನಿಯ ಏಸ್ಟೇಟ್ ನಿಂದ  ಬರೇ ಹತ್ತು ಗಿಡವನ್ನು ಒಡನಾಟದ ಸ್ನೇಹದ ಮೇಲೆ ತಂದು ಅದನ್ನು ತಮ್ಮ ನರ್ಸರಿಯಲ್ಲಿ ಮಗುವಿನಂತೆ ಬೆಳೆಸಿದರು.

ಇನ್ನು ನರ್ಸರಿ ಕವರಿನಲ್ಲಿ ಕೇವಲ ಒಂದೇ ಕುಡಿಯಿದ್ದರೇ ರೈತರು ಖರೀದಿಸಲು ಹಿಂದೇಟು ಹಾಕಿದಾಗ, ಅದ್ರ ಸೂಕ್ಷ್ಮತೆಯನ್ನೇ ಅರಿತ ಶ್ರೀಧರ ಭಟ್ರು ಒಂದು ಕವರಿನಲ್ಲಿ   2-3 ಕಟಿಂಗ್ ಹಾಕಿ ಬೆಳೆಸಿದರು.ಬೆಳವಣಿಗೆ ದೃಷ್ಟಿಯಿಂದ ಇದು ಉತ್ತಮವೂ ಹೌದು.ಹೀಗೆ ನರ್ಸರಿ ಗಿಡಗಳನ್ನು ಬೆಳೆಸುವುದರ ಬಗ್ಗೆ,ಜನರ ಅಪೇಕ್ಷೆ,ಆಯ್ಕೆ ಮಾಡಿಕೊಳ್ಳುವ ತಳಿ…ಹೀಗೆ ಎಲ್ಲವನ್ನು ಅರಿತು ಗುಣಮಟ್ಟದ ತಳಿ ಸಿದ್ದ ಮಾಡುವುದ್ರ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದರು. ತಮ್ಮ ಸಾಮರ್ಥ್ಯ, ಛಲದಿಂದ ನರ್ಸರಿ ಗಿಡಗಳನ್ನು  ಸಿದ್ದ ಮಾಡಿದ ಇವರಿಗೆ ಹೊರಗಡೆಯಿಂದಲೇ ಹೆಚ್ಚೆಚ್ಚು ಆರ್ಡರ್ ಬರತೊಡಗಿತು. ನರ್ಸರಿ ಕೆಲಸದಲ್ಲಿ ಉತ್ತಮ ಹಿಡಿತವೂ ಸಿಕ್ಕಿತು,ಹಾಗೂ ಮಾರುಕಟ್ಟೆಯ ಭಯವೂ ಇಲ್ವೆಂದು ಅನಿಸಿದಾಗ ಇರುವಷ್ಟೆ ಸಂಪನ್ಮೂಲವನ್ನು ಬಳಸಿಕೊಂಡು ಸಾಕಷ್ಡು ಜಾಗವೂ ಅನುಕೂಲವೂ ಇರುವುದರಿಂದ (  70* 30 ಅಡಿಯ) ಮೆಣಸಿನ ನರ್ಸರಿಗಾಗಿಯೇ ಇನ್ನೊಂದು ಪಾಲಿಹೌಸ್ ನ್ನು   ನಿರ್ಮಾಣ ಮಾಡಿಕೊಂಡರು.

ಹೊಸ್ಮನೆಯ ಶ್ರೀಧರ ಭಟ್ರು ಕಳೆದ ಸೀಜನ್ನಿನಲ್ಲಿ ಕೇವಲ  40 ಸಾವಿರದಷ್ಟು ಮೆಣಸಿನ ಗಿಡ ಸಿದ್ದಮಾಡಿದ್ದರು. ಈ ಸೀಜನ್ನಿನಲ್ಲಿ ಸುಮಾರು 55 ಸಾವಿರ ಕಾಳುಮೆಣಸಿನ ಗಿಡಗಳನ್ನು ಬೆಳೆಸಿದ್ದಾರೆ. ಅದ್ರಲ್ಲಿ ಪಣಿಯೂರು -5, ಕರಿಮುಂಡ,ಸ್ಥಾನೀಯ ತಳಿಯಾದ  ಶಾಲ್ಮಲೆ, ಸೂರ್ಯ…ತಳಿಗಳನ್ನು ಬೆಳೆಸಿದ್ದಾರೆ.ಈ ರೈತರು ಕೇವಲ ಮೆಣಸಿನ ಗಿಡಗಳನ್ನು ಮಾತ್ರ  ಮಾಡದೇ ತಮ್ಮ ನರ್ಸರಿಯಲ್ಲಿ  ಕಾಫಿ ಗಿಡಗಳನ್ನು ಸಹಾ ದೊಡ್ಡ ಪ್ರಮಾಣದಲ್ಲಿ ಬೆಳೆಸಿದರು..

ಹೊರಗಡೆಗೆ ಮಾರಾಟ:

ಅಡಿಕೆ ಕೃಷಿಯೊಂದಿಗೆ ಬದುಕನ್ನು ಕಟ್ಟಿಕೊಂಡಿರುವ ಶ್ರೀಧರ ಭಟ್ರು ಮನೆ ಬಳಕೆಗಾಗಿ ಮೆಣಸಿನ ನರ್ಸರಿ ಆರಂಭ ಮಾಡಿದವರು. ನರ್ಸರಿಯ ಬಗ್ಗೆ ಅಷ್ಟೇನು ಗೊತ್ತಿಲ್ಲದೇ ಇರುವ ಸಮಯದಲ್ಲಿ ಹವ್ಯಾಸವಾಗಿ ನರ್ಸರಿ ಕಾರ್ಯಕ್ಕೆ ಧುಮುಕಿದರು. ನರ್ಸರಿ ಕೆಲಸದಲ್ಲಿ ಹಲವಾರು ಸಮಸ್ಯೆ, ಸವಾಲು ಗಳು ಸಾಕಷ್ಟು ಇದ್ದರೂ ಅವೆಲ್ಲವನ್ನು ಅನುಭವದ  ಮೂಲಕ ಬಗೆಹರಿಸಿಕೊಂಡು…ಈಗ ಆ ಕಾಯಕದಲ್ಲಿ ಉತ್ತಮ ಹಿಡಿತ ಸಿದ್ದಿಸಿಕೊಂಡು  ತಮ್ಮ ನರ್ಸರಿ ಕಾಯಕವನ್ನು ಉದ್ಯಮವಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ.

ಇವರು ಸ್ಥಳೀಯ ಮಾರುಕಟ್ಟೆ ಯನ್ನು  ನಂಬಿಕೊಂಡು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಿಡ ಸಿದ್ದ ಮಾಡಿದವರಲ್ಲ. ಶ್ರೀಧರ ಭಟ್ ಅವರಿಗೆ ಜಿಲ್ಲೆಯ ಹೊರಗೆ ಅಪಾರವಾದ  ರೈತ ಸಮೂಹದ ಸಂಪರ್ಕವಿದೆ. ಬೃಹತ್ ಪ್ರಮಾಣದಲ್ಲಿ ಕಾಫಿ – ಕಾಳುಮೆಣಸು ಬೆಳೆಯುವ ದೊಡ್ಡ ಬೆಳೆಗಾರರ ಒಡನಾಟವಿದೆ. ಅವರ ಪ್ರೀತಿ, ವಿಶ್ವಾಸವನ್ನು ಗೌರವಪೂರ್ವವಾಗಿ ಸ್ವೀಕರಿಸಿದ ಇವರು ಅವರ ಅಪೇಕ್ಷೆಯಂತೆ ಗಿಡ ಸಿದ್ದ ಮಾಡಿಕೊಡುತ್ತಿದ್ದಾರೆ. ಇವರಲ್ಲಿ ಸಿದ್ದವಾಗುವ ಶೇಕಡಾ 80 ರಷ್ಟು ಪಾಲು ಹೊಂದಿರುವನರ್ಸರಿ ಗಿಡಗಳು ಹಾಸನ, ಚಿಕ್ಕಮಗಳೂರು, ಕೊಡಗು, ಮೂಡಬಿದರೆ

ಹೀಗೆ ಜಿಲ್ಲೆಯ ಹೊರಗಡೆ ಇರುವ ರೈತರು ಒಯ್ಯುವವರೆ ಹೆಚ್ಚು.ನಮ್ಮ ಭಾಗದಲ್ಲಿ ಚಿಕ್ಕ ಹಿಂಡುವಳಿದಾರರೆ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಇಲ್ಲಿನ ರೈತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳು ಬೇಕಾಗಿರುವುದಿಲ್ಲ. ಹೀಗಾಗಿ ನಮ್ಮ ಭಾಗದವರು ಕಾಫಿಯಾಗಲಿ, ಮೆಣಸಿನ ಗಿಡವಾಗಲಿ ಒಯ್ಯವುದು ತೀರಾ ಕಡಿಮೆ. ಹಾಗಂತ ಒಯ್ಯೂವುದೇ ಇಲ್ಲ ಅಂತಲ್ಲ. ನೂರಿನ್ನೂರು ಗಿಡ ಒಯ್ಯುವ ರೈತರೇ ಹೆಚ್ಚು ಇದ್ದಾರೆ ಎನ್ನುತ್ತಾರೆ  ಶ್ರೀಧರ ಭಟ್.

ಒಟ್ರಾಶಿ ಗಿಡ ಕೊಡುವುದಿಲ್ಲ: ಹೊಸ್ಮನೆಯ ಭಟ್ರ ನರ್ಸರಿಗೆ ಗಿಡ ಒಯ್ಯಲು ಯಾರೇ ಬರಲಿ….ಯಾವ ರೈತರೇ ಸಂಚಾರಿ ಮೂಲಕ ಸಂಪರ್ಕ ಮಾಡಲಿ ಅವರಿಗೆ ಯಾವ ತಳಿಯ ಗಿಡ ಏಷ್ಟು ಬೇಕು…ಯಾವ ಸಮಯದಲ್ಲಿ ಬೇಕು…ಎಂಬುದನ್ನು ಮೊದಲು ತಿಳಿದುಕೊಳ್ಳುತ್ತಾರೆ. ಆ ಸಮಯಕ್ಕೆ ಗಿಡ ಸಿದ್ದ ಮಾಡಿಕೊಡುವ  ಜವಾಬ್ದಾರಿಯನ್ನು ಹೊತ್ತಿಕೊಳ್ಳುತ್ತಾರೆ.ಒಂದು ದೃಷ್ಟಿಯಲ್ಲಿ ಇದು ರಿಸ್ಕ್ ನ ಕೆಲಸವೂ ಹೌದು. ಸಾಕಷ್ಟು ಕುಡಿಗಳು ಇವರಲ್ಲಿ ಲಭ್ಯವಿರಬೇಕು; ಕೃಷಿ ಒತ್ತಡ ದ ಕೆಲಸಗಳ ನಡುವೆ ಈ ನರ್ಸರಿ ಗಿಡ ಬೆಳೆಸಬೇಕು,ಅದರದ್ದೇ ಆದ ನಿಯಮವನ್ನು ಪಾಲಿಸಿಕೊಂಡು ಗಿಡ ಬೆಳೆಸುವುದು ಲಟಿಕೆ ಹೊಡೆದ ಷ್ಟು ಸುಲಭವೇನು ಅಲ್ಲ. ಇವರು ಒಟ್ರಾಶಿಯಿಂದ  ಕಾಟಾಚಾರಕ್ಕೆ ಈ ನರ್ಸರಿ ಗಿಡಗಳನ್ನು ಬೆಳೆಸುತ್ತಿಲ್ಲ. ಉತ್ತಮವಾದ ನರ್ಸರಿ ಗಿಡಗಳನ್ನು  ಸಿದ್ದ ಮಾಡಲು ಅತೀವ ಪರಿಶ್ರಮನು ಪಡುತ್ತಾರೆ;ಸಮಯವೂ ಬೇಕು..ಅವನ್ನು ಕಾಳಜಿಯಿಂದ ನಿರ್ವಹಣೆಯನ್ನು ಮಾಡುತ್ತಾರೆ.ರೋಗ ರಹಿತವಾಗಿ ಗಿಡ ಬೆಳೆಯುವಲ್ಲಿ ಇವರು ಬಹಳ ಕಾಳಜಿ ,ಏಚ್ಚರಿಕೆ ವಹಿಸುತ್ತಾರೆ.

ಗಿಡ ಒಯ್ಯುವವರು ನಿರ್ದಿಷ್ಟ ಸಮಯದಲ್ಲಿ ಒಯ್ದರೇ ನರ್ಸರಿ ಮಾಡುವವರಿಗೆ ಅನುಕೂಲ,ಪುನಃ ಆ ಜಾಗದಲ್ಲಿ ಮುಂದಿನ ಕೆಲಸ ಮಾಡಲು ಸಹಕಾರಿ ಆಗುತ್ತದೆ.ಅತೀಯಾದ ಬೆಳವಣಿಗೆ ಆದರೇ ಪರಸ್ಥಳಕ್ಕೆ ಒಯ್ಯುವುದು ಕಷ್ಟ; ಗಿಡಗಳ ಬೆಳವಣಿಗೆಯಲ್ಲಿ ವ್ಯತ್ಯಾಸವೂ ಆಗಬಹುದು ಎಂದು ಶ್ರೀಧರ ಭಟ್ ಹೇಳುತ್ತಾರೆ.

ನರ್ಸರಿಯಲ್ಲಿ ಸಿದ್ದಾವಾದ ಮೆಣಸಿನ  ಗಿಡದ ಬೇರು ಸರಿಯಾದ  ಬೆಳವಣಿಗೆ ಆದ ಗಿಡಗಳನ್ನು  ಹಾಗೂ ನಿರ್ದಿಷ್ಟ ಏಲೆ ಇರುವುದನ್ನು  ಮಾತ್ರವೇ ಇವರು ಸೇಲ್ ಮಾಡುತ್ತಾರೆ. ಇನ್ನು ಆ ಗಿಡದ ಕಾಂಡ ಭಾಗವೂ ಡಾರ್ಕ್ ಗ್ರೀನ್ ಆದ ಗಿಡ ಮಾತ್ರವೇ ನೀಡುತ್ತಾರೆ. ಇನ್ನು ಒಯ್ಯುವ ವಾಹನದಲ್ಲಿ ಬೇಕಾಬಿಟ್ಟಿ ಗಿಡಗಳನ್ನು ಒಯ್ಯುವವರಿಗೂ ಇವರು  ಸರಿಯಾದ ಪಾಠಮಾಡಿಯೇ  ಗಿಡ ತುಂಬಿಸುತ್ತಾರೆ. ಏಕೆಂದರೇ ಒಟ್ರಾಶಿಯಲ್ಲಿ  ಯಾವುದೇ ವಾಹನದಲ್ಲಿ ನರ್ಸರಿ ಗಿಡಗಳನ್ನು ತುಂಬಿ ಬೇರೆ ಊರಿಗೆ ಒಯ್ಯುವಾಗ ಗಿಡಗಳು ಡೈಮೇಜ್ ಆಗುವುದೇ ಹೆಚ್ಚು.ಆಮೇಲೆ ಅದು ಬೇರೆ ರೀತಿಯಲ್ಲಿ ನಮ್ಮ  ನರ್ಸರಿಯ ಮೇಲೆ ಪರಿಣಾಮ ಆಗುವುದನ್ನು ತಪ್ಪಿಸಲು ಈ ಉಪಾಯ ಎಂದು ಶ್ರೀಧರ ಭಟ್ರು ಕಿವಿಮಾತು ಹೇಳುತ್ತಾರೆ.

ನರ್ಸರಿ ಕಾಯಕ ನಷ್ಟವಲ್ಲ: ನರ್ಸರಿ ಗಿಡ ಸಿದ್ದ ಮಾಡುವುದು; ಬೆಳೆಸುವುದು ಅದ್ನ ನೋಡಿದಷ್ಟು ಇಜಿಯಲ್ಲ.ಗಿಡ ಸಿದ್ದ ಮಾಡುವಾಗ ಹಲವಾರು ಬಗೆಯ ಎಚ್ಚರಿಕೆಯನ್ನು ಪಾಲಿಸಬೇಕು. ನಾಲ್ಕಾರು ವರುಷಗಳವರೆಗೆ  ಅದ್ರ ಹಿಡಿತ ಸಿಗಲು ಸಮಯವು ಬೇಕು. ಒಮ್ಮೆ ಗ್ರೀಫ್ ಸಿಕ್ಕಿದರೇ  ಬಹಳ ಸುಲಭವಾಗಿ ಗಿಡ ಬೆಳೆಸಬಹುದು,ಸಿದ್ದವಾದ ಸಸಿಗಳನ್ನು ಚನ್ನಾಗಿ ನಿರ್ವಹಣೆಯನ್ನು ಮಾಡಬಹುದು. ಅಲ್ಲದೇ, ಜನರ ಒಡನಾಟದಿಂದ ಮಾರುಕಟ್ಟೆಯನ್ನು ಕಂಡುಕೊಳ್ಳಬಹುದು.ವ್ಯವಸ್ಥಿತವಾಗಿ ನಿರ್ವಹಣೆ,ಪೋಷಣೆ ಮಾಡಿದರೇ ನರ್ಸರಿ ಕಾಯಕ ನಷ್ಟವಲ್ಲ ಎನ್ನುತ್ತಾರೆ ಶ್ರೀಧರ ಭಟ್.

ಮೆಣಸಿಗೆ ಜವಾಬ್ದಾರಿ ಹೆಚ್ಚು:

ಹೊಸ್ಮನೆಯ ನರ್ಸರಿ ಉದ್ಯಮಿ ಶ್ರೀಧರ ಭಟ್ರು ಕಂಡಕಂಡವರ ಮನೆಯಿಂದ ಮೆಣಸಿನ ಕುಡಿಗಳನ್ನು ತರುವವರಲ್ಲ.ತಾವು  ಸ್ವತಃ ಓಡಾಡಿದ  ತೋಟ…ಅತೀ ಸಲುಗೆ ಇರುವ ರೈತರ ತೋಟದಿಂದ ರೋಗ ರಹಿತವಾದ ಮೆಣಸಿನ ಕುಡಿಗಳನ್ನು ಸೂಕ್ಷ್ಮವಾಗಿ ಕಟಿಂಗ್ ಮಾಡಿಕೊಂಡು ಬರುತ್ತಾರೆ.ಇದು ಕಾಫಿಯಂತೆ ಸುಲಭವಾಗಿ ಬೆಳೆಯುವ ಸಸಿಯಲ್ಲ. ಈ ಮೆಣಸಿನ ಕುಡಿಗೆ ಹೆಚ್ಚು ಜವಾಬ್ದಾರಿ ನೀಡಿ ಬೆಳೆಸಬೇಕು.ಅಂದರೇ, ಒಂದು ಸಾವಿರ ಕವರಿನಲ್ಲಿ ಮೆಣಸಿನ ಕುಡಿ ಬೆಳೆಸಿದರೇ ಕೇವಲ ಏಂಟನೂರಷ್ಟು ಗಿಡವನ್ನು ಮಾತ್ರವೇ ಸೇಲ್ ಮಾಡಬಹುದು. ಉಳಿದಿದ್ದು ಬೇರೆ ಬೇರೆ ಕಾರಣಕ್ಕೆ ರಿಜೇಕ್ಟ್ ಆಗುತ್ತದೆ. ಅದೇಲ್ಲವನ್ನು ಸಹಿಸಿಕೊಂಡು ತಾಳ್ಮೆಯಿಂದ ನರ್ಸರಿ ಕೆಲಸವನ್ನು ನಿರ್ವಹಿಸಬೇಕು. ಧೈರ್ಯದಿಂದ ಆ ಉದ್ಯಮವನ್ನು ನಡೆಸಿದಾಗ ಮಾತ್ರ ನರ್ಸರಿಯ ಕಾಯಕವನ್ನು  ಮುನ್ನೇಡೆಸಬಹುದು.

ಇನ್ನು ತಮ್ಮದೇ ತೋಟದಲ್ಲಿ ಸಾಕಷ್ಟು ಮೆಣಸಿನ ಕುಡಿಗಳು ಇದ್ದರೂ ಅವನ್ನು ಮಳೆಗಾಲದ ಸಮಯದಲ್ಲಿ ಅದ್ನ ಸಂರಕ್ಷಿಸಿಕೊಳ್ಳುವುದೇ ದೊಡ್ಡ ಕೆಲಸ! ಹಾಗೇ ಇಟ್ಟು ಕೊಳ್ಳಲು ಸಹಾ ಸಾವಿರಾರು ರೂಪಾಯಿಗಳನ್ನು ವ್ಯಯ ಮಾಡಲೇಬೇಕು. ಕುಡಿಗಳನ್ನು ನೆಲದಿಂದ ಎತ್ತಿ ಕಟ್ಟಲು.,ರೋಗ ಬರದಂತೆ ತಡೆಯಲು ಔಷಧಿ….ಹೀಗೆ ಆ ಕುಡಿಗಳನ್ನು  ಸುವ್ಯವಸ್ಥಿತವಾಗಿ ಇಟ್ಟುಕೊಳ್ಳಲು ಅತೀ ಕಾಳಜಿಯನ್ನು ವಹಿಸಬೇಕು.ಹೀಗೆ ಅದ್ನ ಕಾಪಾಡಿಕೊಂಡರೇ ಮಾತ್ರ ನರ್ಸರಿ ಕೆಲಸಕ್ಕೆ ಯೋಗ್ಯವಾದ ಕುಡಿ ಲಭಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ  ಶ್ರೀಧರ ಭಟ್.
ಸಮತೋಲನ ಮುಖ್ಯ!

ಮಲೆನಾಡಿನ ಅಡಿಕೆ ಬೆಳೆಗಾರರು ನರ್ಸರಿ ಕೆಲಸವನ್ನು ಆರಂಭಿಸುವ ಮೊದಲು ಸರಿಯಾದ ಪ್ಲೇನ್ ಇಟ್ಟುಕೊಂಡೇ ಈ ಕೆಲಸಕ್ಕೆ ಕೈ ಹಾಕಬೇಕು. ತೋಟದ ಕೃಷಿಯ ಕೆಲಸದ ಸಮಯದಲ್ಲಿ ನರ್ಸರಿ ಕೆಲಸ ಮಾಡಿಸುವುದಲ್ಲ. ಹೀಗೆ ಮಾಡಿಕೊಂಡರೇ ಮೂಲ ಕಸುಬಿನ ಇಳುವರಿಯ ಮೇಲೆ ಪರಿಣಾಮ ಆಗಬಹುದು ಎಂಬ ಎಚ್ಚರಿಕೆಯ ಪಾಠವನ್ನು ಹೊಸ್ಮನೆಯ ನರ್ಸರಿ ಉದ್ಯಮಿ ಹೇಳುತ್ತಾರೆ. 

ನಾವು ತೋಟದ ಕೆಲಸಕ್ಕೆ ಒಂದ್ ಐದು ಜನರಿಗೆ ಕೆಲಸ ಕೊಡುವ  ಸಾಮರ್ಥ್ಯ ತಮ್ಮಲ್ಲಿ ಇದ್ದರೇ..ಆಗಾಗ ಅವರನ್ನು ಕೆಲಸವಿಲ್ಲ ಎಂದು ವಾಪಾಸ್ ಕಳಿಸಿದರೇ ಅತ್ತ ನರ್ಸರಿಯಲ್ಲ, ಇತ್ತ ತೋಟದ ಕೆಲಸಕ್ಕು ಸಮಸ್ಯೆ ಆಗಬಹುದು.ಹೀಗೆ ಮಾಡುವುದರಿಂದ ಕೆಲಸದವರಿಗೂ ಬಹಳ ಕಿರಿಕಿರಿ ಆಗುತ್ತದೆ.ಅವರಿಗೆ ವರುಷವಿಡಿ ಕೆಲಸ ಕೊಡುತ್ತೇನೆ ಹೇಳಿ…ತೋಟದ ಕೆಲಸವನ್ನು ಒಂದು ಹಂತದಲ್ಲಿ ಮುಗಿಸಿಕೊಂಡು,ನರ್ಸರಿ ಕೆಲಸಗಳಿಗೆ ಅವರನ್ನು ತೊಡಗಿಸಿಕೊಳ್ಳಬಹುದು. ಯಾವ ಯಾವ ಕೆಲಸ ಯಾವ ಯಾವ ಸಮಯದಲ್ಲಿ ಆಗಬೇಕೆಂಬ ಪಟ್ಟಿ ಮಾಡಿಕೊಂಡರೇ., ಎರಡು ಕೆಲಸಗಳಿಗೂ ಸಮತೋಲನ ಮಾಡಿ ಕೆಲಸಗಳನ್ನು ನಿರ್ವಹಿಸಿದರೇ ಅಡಿಕೆ ಬೆಳೆಗಾರ ಸುಲಭವಾಗಿ ನರ್ಸರಿ ಕಾಯಕವನ್ನು ನಡೆಸಬಹುದು. ವ್ಯವಸ್ಥಿತವಾದ ಪ್ಲೇನ ಹಾಗೂ ಕೆಲಸದ ಸಮತೊಲನ ಇಲ್ಲದೇ ಹೋದರೇ ಈ ನರ್ಸರಿ ಕಾಯಕದಲ್ಲಿ ಯಶಸ್ಸು ಸಿಗುವುದು ಕಷ್ಟವಾಗಬಹುದು ಎಂದು ಶ್ರೀಧರ ಭಟ್  ಏಚ್ಚರಿಕೆಯ ಮಾತನ್ನು  ಹೇಳುತ್ತಾರೆ.  ನರ್ಸರಿ ಕಾರ್ಯಕ್ಕೆ ಇಳಿದಾಗ ಸಹಜವಾಗಿ ಬೇರೆ ಬೇರೆ ಗಿಡಗಳನ್ನು ಬೆಳೆಸುವ ಉಮೇದಿಯೇನು ಬರುತ್ತದೆ. ಬೇರೆ ಗಿಡವನ್ನು ಬೆಳೆಸುವ ವಿಧಾನವನ್ನು ಕಲಿಯಬೇಕೆಂಬ ಹುಮ್ಮಸ್ಸು ಇದ್ದರೇ ಮಾತ್ರ ವಿಭಿನ್ನ ಗಿಡಗಳನ್ನು ನರ್ಸರಿಯಲ್ಲಿ ಬೆಳೆಸಲು ಸಾಧ್ಯವಿದೆ.

ಅಂತೆಯೇ ಈ ರೈತ ಉದ್ಯಮಿಗಳು ಆರು ವರುಷದ ಹಿಂದೆ ತಮ್ಮ ಅಡಿಕೆ ತೋಟಕ್ಕೆ ನೆಡಲು  ಚಂದ್ರಗಿರಿ ಎನ್ನುವ ತಳಿಯ ಕಾಫಿ ಸಸಿಯನ್ನು  ತಮ್ಮ ನರ್ಸರಿಯಲ್ಲಿಯೇ ಸಿದ್ದಮಾಡಲು ಬಯಸಿದರು. ಆ ಸಮಯದಲ್ಲಿ ಒಳ್ಳೆಯ ಕಾಫಿ ಬೀಜ ಏಲ್ಲಿ ಸಿಗುತ್ತದೆ ಅಂತ ಕಾಫಿ ನಾಡಿನ ದೊಡ್ಡ ಬೆಳೆಗಾರ ಮಹೇಶ ಕುಮಾರ್ ಅವರ ಬಳಿ ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಅವರ ನಿರ್ದೇಶನ,ಸಲಹೆ ಮೇರೆಗೆ ಸೋಮವಾರಪೇಟೆಯಿಂದ ಕೇವಲ ಒಂದು ಕೆ.ಜಿ ಬೀಜ ತರಿಸಿ ಅವರು ಹೇಳಿದಂತೆ ಮಡಿ ಮಾಡಿ ಬೀಜ ಹಾಕಿದ್ದರು.ಬೀಜ ನೀಡಿದವರ ಪ್ರಕಾರ ಒಂದು ಕೆ.ಜಿ.ಯಲ್ಲಿ ಸುಮಾರು ಹದಿನೈದು ಸಾವಿರ ಗಿಡ ಹಚ್ಚಲು ಸಿದ್ದವಾಗಬೇಕು ಅಂತ ಹೇಳಿದ್ದರು. ಆದ್ರೆ ನಮ್ಮ ನರ್ಸರಿಯಲ್ಲಿ ಇಪ್ಪತ್ತೈದು ಸಾವಿರ ಗಿಡ  ಸಿದ್ದವಾಗಿತ್ತು! ಶ್ರೀಧರ ಭಟ್ರು ಕಳೆದ ವರುಷ ಕೇವಲ ಹತ್ತು ಸಾವಿರ ಕಾಫಿ ಸಸಿ ಸಿದ್ದ ಮಾಡಿದ್ದರು. ಜನರ ಆಸಕ್ತಿ ಈಗ ಕಾಫಿ ಗಿಡದ ಮೇಲೆ ಬಂದಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಇವರು ಈ ಸೀಜನ್ನಿನಲ್ಲಿ ಇಪ್ಪತ್ತೈದು ಸಾವಿರ ಕಾಫಿ ಗಿಡಗಳನ್ನೇ ಸಿದ್ದಮಾಡಿದ್ದಾರೆ.

ಮಲೆನಾಡಿನ ತೋಟಪಟ್ಟಿ ಹೊಂದಿದ ಬೆಳೆಗಾರರಿಗೆ ತೋಟದ ಕೆಲಸವನ್ನೇ ಮಾಡಿ ಮುಗಿಸುವುದೇ ಕಷ್ಟ ಎಂದು ಹೇಳುವವರೆ ಹೆಚ್ಚು. ಆದ್ರೆ, ಹೊಸ್ಮನೆಯ ಶ್ರೀಧರ ಭಟ್ರು ಎರಡು ಊರಿನಲ್ಲಿರುವ ಅಡಿಕೆ – ಮೆಣಸಿನ ತೋಟವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಕೊಂಡು, ಕಳೆದ ಒಂಬತ್ತು ವರುಷದಿಂದ ಕಾಳೆಮೆಣಸಿನ  ನರ್ಸರಿಯನ್ನು ಸಹಾ ದೊಡ್ಡ ಪ್ರಮಾಣದಲ್ಲಿ ಮುನ್ನೇಡೆಸ್ತಾ ಇರುವುದು ಶ್ಲಾಘನೀಯ ಕಾರ್ಯವಾಗಿದೆ.ಅವರ ಈ ಘನ ಕಾರ್ಯ ಇನ್ನುಳಿದ ರೈತರಿಗೆ ಮಾದರಿಯಾಗಿದೆ ಎಂದರೂ ಅತೀಶಯೊಕ್ತಿ ಆಗಲಾರದು.

ಈ ಲೇಖನಗಳನ್ನೂ ಓದಿ

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group