- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

ಮರದ ತುಂಡುಗಳಿಗೆ ಕಲಾರೂಪ, ಕೃಷಿ ಸಂಸ್ಕೃತಿಯ ನೆನಪಿನ ಬುತ್ತಿ ಕಟ್ಟಿದ ಶ್ರೀಧರ ನಾಗಪ್ಪ ಆಚಾರ್ಯ

ಬರಹ: ರಾಧಾಕೃಷ್ಣ ತೊಡಿಕಾನ  ಚಿತ್ರ : ರಾಮ್ ಅಜೆಕಾರ್

ಮರದ ಕೆತ್ತನೆಗಳು, ಮರದಿಂದ ರೂಪಿಸಬಹುದಾದ ಕಲಾಕೃತಿಗಳು ಹಲವು. ಮರವೆಂದರೆ ಮನೆ, ಗುಡಿ, ಗೋಪುರಗಳನ್ನು ನಿರ್ಮಿಸುವ ಕಟ್ಟಡ ಸಾಮಾಗ್ರಿ ಮಾತ್ರವಲ್ಲ; ಅದರಿಂದ ಮನಸೂರೆಗೊಳ್ಳುವ ಕಲಾಕೃತಿಗಳನ್ನೂ ಸೃಷ್ಟಿಸಬಹುದು. ಮರದ  ಸಣ್ಣ ಸಣ್ಣ ತುಂಡುಗಳು ಕಲಾವಿದನ ಕೈಗೆ ಸಿಕ್ಕಾಗ ಹೊಸ ರೂಪ ಪಡೆದುಕೊಳ್ಳುತ್ತವೆ. ಆ ಕಲಾಕೃತಿಗಳು ಕೇವಲ ಅಲಂಕಾರಿಕ ವಸ್ತುಗಳಾಗಿ ಉಳಿಯದೆ, ಗತಕಾಲದ ಇತಿಹಾಸವನ್ನು ನೆನಪಿಸುತ್ತವೆ. ಬದುಕಿನೊಂದಿಗೆ ಬೆಸೆದುಕೊಂಡ ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಜೀವನದ ಮೌಲ್ಯಗಳನ್ನು ಸಾರುತ್ತವೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕಡಸೂರಿನ ಶ್ರೀಧರ ನಾಗಪ್ಪ ಆಚಾರ್ಯ ಅವರ ಮರದ ಕಲಾಕೃತಿಗಳು ಪರಂಪರೆಯನ್ನು ನೆನಪಿಸುತ್ತದೆ. ಒಂದೊಮ್ಮೆ ಕೃಷಿಕರ ಬದುಕಿನ ಅವಿಭಾಜ್ಯ ಅಂಗವಾಗಿದ್ದ ನೊಗ, ನೇಗಿಲು, ಎತ್ತಿನ ಗಾಡಿಗಳಂತಹ ಪರಿಕರಗಳು ಇಂದು ಮನೆಗಳ ಅಲಂಕಾರಿಕ ವಸ್ತುಗಳಾಗಿ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ. ಹಳೆಯ ಕೃಷಿ ಬದುಕಿನ ನೆನಪುಗಳನ್ನು ಇಂದಿನ ತಲೆಮಾರಿಗೂ ಪರಿಚಯಿಸುವ ಕೆಲಸವನ್ನು ಶ್ರೀಧರ ಆಚಾರ್ಯ ತಮ್ಮ ಕಲೆಯ ಮೂಲಕ ಮಾಡುತ್ತಿದ್ದಾರೆ.

 ಕಳೆದ 4೦ ವರ್ಷಗಳಿಂದ ಮರದ ಕೆತ್ತನೆ, ಬಾಗಿಲು, ಕಿಟಕಿ ಹಾಗೂ ಮನೆ ನಿರ್ಮಾಣಕ್ಕೆ ಅಗತ್ಯವಾದ ಮರದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಧರ  ಆಚಾರ್ಯ, ಈಗ ಮರದ ಕಲಾಕೃತಿಗಳ ರಚನೆಯ ಮೂಲಕವೂ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಕೃಷಿ ಬದುಕಿನಲ್ಲಿ ಹಲವು ಬದಲಾವಣೆಗಳಾಗಿವೆ. ಎತ್ತಿನ ಗಾಡಿ, ನೊಗ, ನೇಗಿಲುಗಳ ಬಳಕೆ ಕಡಿಮೆಯಾಗಿದ್ದರೂ ಅವುಗಳ ನೆನಪುಗಳನ್ನು ಮರದ ಕಲಾಕೃತಿಗಳ ರೂಪದಲ್ಲಿ ಮನೆಗಳಲ್ಲಿ ಉಳಿಸುವ ಪ್ರಯತ್ನ ಅವರದು.

ಆರಂಭದಲ್ಲಿ ಶ್ರೀಧರ ಆಚಾರ್ಯ ಕಲಿತದ್ದು ಕಬ್ಬಿಣದ ಕೆಲಸ. ಆದರೆ ಮರದ ಕೆಲಸದಲ್ಲಿ ಹೆಚ್ಚಿನ ಅವಕಾಶಗಳಿರುವುದನ್ನು ಗಮನಿಸಿದ ಅವರು, ಆ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡರು. ಮನೆಗಳಿಗೆ ಬೇಕಾದ ಬಾಗಿಲು, ಕಿಟಕಿಗಳ ತಯಾರಿಕೆ ಹಾಗೂ ಮನೆಗಳ ಮಾಡು ನಿರ್ಮಾಣದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಹೇಮಂತ್ ಎಂಬ ಅಧಿಕಾರಿಯೊಬ್ಬರು ಮರದ ಕಲಾಕೃತಿಗಳನ್ನು ತಯಾರಿಸುವಂತೆ ಸಲಹೆ ನೀಡಿದರು. ಅದಕ್ಕೆ ಪೂರಕವಾದ ಮಾಹಿತಿ ಹಾಗೂ ಮಾರ್ಗದರ್ಶನವನ್ನೂ ಒದಗಿಸಿದರು. ಈ ಸಲಹೆ ಅವರ ಬದುಕಿನಲ್ಲಿ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟಿತು.

 ಆದರೆ ಕಲಾಕೃತಿಗಳ ತಯಾರಿಕೆಗೆ ಸೂಕ್ತವಾದ ಮರಮಟ್ಟುಗಳು ಮತ್ತು ಆರಂಭಿಕ ಬಂಡವಾಳದ ಅಗತ್ಯವಿತ್ತು. ಈ ಸಂದರ್ಭದಲ್ಲಿ ಅವರ ಪತ್ನಿ ನೇತ್ರಾವತಿ ಸ್ವಸಹಾಯ ಸಂಘದ ಸದಸ್ಯರಾಗಿದ್ದರಿಂದ ಸಂಘದ ಮೂಲಕ ನೆರವು ದೊರೆಯಿತು. ಕೆತ್ತನೆ ಕೆಲಸಕ್ಕೆ ಬೇಕಾದ ಮರಗಳನ್ನು ಖರೀದಿಸಲು ಇದರಿಂದ ಅನುಕೂಲವಾಯಿತು. ಮೊದಲು  ಗೋಡೆಗಳ ಅಲಂಕಾರಿಕ ಕಲಾಕೃತಿಗಳನ್ನು ತಯಾರಿಸಲು ಶುರುಮಾಡಿದರು. ನಂತರ ವಿಭಿನ್ನವಾದ ಕಲಾಕೃತಿಗಳನ್ನು ರೂಪಿಸಬೇಕೆಂಬ ಆಲೋಚನೆ ಮೂಡಿತು.

ಕೃಷಿಕರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದ ಎತ್ತಿನ ಗಾಡಿ ಇಂದು ಬಳಕೆಯಿಂದ ಮರೆಯಾಗಿರಬಹುದು. ಆದರೆ ಅದರ ಸುಂದರ ಮಾದರಿಯನ್ನು ಮನೆಯ ಅಲಂಕಾರಿಕ ವಸ್ತುವಾಗಿ ಉಳಿಸಬಹುದು ಎಂಬ ಯೋಚನೆಯಿಂದ ಎತ್ತಿನ ಗಾಡಿಯ ಕಲಾಕೃತಿಯನ್ನು ರೂಪಿಸಿದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ಬಳಿಕ ಕೃಷಿಗೆ ಪೂರಕವಾಗಿದ್ದ ನೊಗ, ನೇಗಿಲುಗಳ ಮಾದರಿಗಳನ್ನೂ ತಯಾರಿಸಿದರು.  ಕೃಷಿ ಸಂಸ್ಕೃತಿಯ ಹಲವು ನೆನಪುಗಳು ಮರದಲ್ಲಿ ಜೀವತಳೆಯತೊಡಗಿದವು.

 ಕರ್ನಾಟಕದ ಲಾಂಛನವಾದ ಗಂಡಭೇರುಂಡ, ಅಶೋಕ ಚಕ್ರಗಳೂ ಅವರ ಕೈಚಳಕದಲ್ಲಿ ಮರದಲ್ಲಿ ರೂಪುಗೊಂಡಿವೆ. ಬೆಡ್‌ಲ್ಯಾಂಪ್, ತೂಗು ದೀಪಗಳಂತಹ ಕಲಾಕೃತಿಗಳ ಒಳಗಿನಿಂದ ಬೆಳಕು ಹೊರಹೊಮ್ಮಿದರೆ, ಮರದ ಕಲಾಕೃತಿಗಳೊಳಗೆ ಅಳವಡಿಸಿದ ಗಡಿಯಾರಗಳು ಟಿಕ್ ಟಿಕ್ ಸದ್ದು ಮಾಡುತ್ತವೆ. ಆಕರ್ಷಕ ನೀರಿನ ಬಾಟಲಿಗಳು ಸೇರಿದಂತೆ ಹಲವು ಬಗೆಯ ಉಪಯುಕ್ತ ಹಾಗೂ ಅಲಂಕಾರಿಕ ವಸ್ತುಗಳನ್ನು ಅವರು ತಯಾರಿಸುತ್ತಿದ್ದಾರೆ. ಅವರ ಕಲ್ಪನೆ ಮತ್ತು ಕೈಚಳಕಕ್ಕೆ ತಕ್ಕಂತೆ ಮರದ ತುಂಡುಗಳು ಒಂದಕ್ಕಿಂತ ಒಂದು ವಿಭಿನ್ನವಾದ ರೂಪ ಪಡೆದುಕೊಳ್ಳುತ್ತವೆ.

ಕಲಾಕೃತಿಗಳ ತಯಾರಿಕೆಗೆ ಸಾಗುವಾನಿ ಮರವನ್ನು ಬಳಸುತ್ತಾರೆ. ಅವರಲ್ಲಿ ಸುಮಾರು ಹತ್ತು ಹದಿನೈದು ವಿಧದ ಕಲಾಕೃತಿಗಳ ಮಾದರಿಗಳಿವೆ. ಮುಂಬೈ, ಬೆಂಗಳೂರು, ಕಲಬುರಗಿ, ರಾಯಚೂರು ಸೇರಿದಂತೆ ವಿವಿಧೆಡೆ ನಡೆದ ಸರಸ್ ಮೇಳಗಳಲ್ಲಿ ಭಾಗವಹಿಸಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲಿ ಹಲವು ಕಲಾಕೃತಿಗಳು ಮಾರಾಟವಾಗಿವೆ. ಸಿದ್ಧ ಮಾದರಿಗಳ ಜತೆಗೆ ಗ್ರಾಹಕರ ಬೇಡಿಕೆ ಹಾಗೂ ಅನುಕೂಲಕ್ಕೆ ತಕ್ಕಂತೆ ಹೊಸ ವಿನ್ಯಾಸಗಳನ್ನೂ ರೂಪಿಸಿಕೊಡುತ್ತಾರೆ. ಕಲಾಕೃತಿಗಳ ಗಾತ್ರ, ವಿನ್ಯಾಸ ಮತ್ತು ಕೆಲಸದ ಆಧಾರದ ಮೇಲೆ ಅದರ ಬೆಲೆ ನಿಗದಿಪಡಿಸುತ್ತಾರೆ.

 ಶ್ರೀಧರ್  ಆಚಾರ್ಯ ಅವರ ಈ ಸ್ವಾವಲಂಬಿ ಉದ್ಯೋಗಕ್ಕೆ ಹಲವು ಸಂಸ್ಥೆಗಳು ಬೆಂಬಲವಾಗಿ ನಿಂತಿವೆ. ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸೊರಬ, ಯಶಸ್ವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ, ಗ್ರಾಮ ಪಂಚಾಯತ್ ಮುಟಗುಪ್ಪೆ ಸೇರಿದಂತೆ ವಿವಿಧ ಸಂಸ್ಥೆಗಳ ಸಹಕಾರ ಅವರಿಗೆ ದೊರೆತಿದೆ. ಅವರ ಕಲಾಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿರುವ ಸೊರಬದ ವಿಶ್ವಕರ್ಮ ಸಂಘವು ಅವರನ್ನು ಸನ್ಮಾನಿಸಿ ಗೌರವಿಸಿದೆ.

ಹಿಂದೆ ಬಳಸುತ್ತಿದ್ದ  ಕೃಷಿ ಪರಿಕರಗಳನ್ನು ಇಂದಿನ ಮನೆಗಳ ಅಲಂಕಾರಿಕ ವಸ್ತುಗಳನ್ನಾಗಿ ರೂಪಿಸುವ ಮೂಲಕ ಸ್ವಉದ್ಯೋಗವನ್ನಷ್ಟೇ ಅವರು ಕಂಡುಕೊಂಡಿರುವುದಲ್ಲ. ಕೃಷಿ ಸಂಸ್ಕೃತಿಯ ನೆನಪುಗಳನ್ನೂ ಮುಂದಿನ ತಲೆಮಾರಿಗೆ ಪರಿಚಯಿಸುತ್ತಿದ್ದಾರೆ. ಮರದ ಕಲಾಕೃತಿಗಳ ಮೂಲಕ ಪರಂಪರೆಯನ್ನು ಉಳಿಸಿ, ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ  ಮಾಹಿತಿಗಾಗಿ: 8861727797

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

spot_img