spot_img
Sunday, September 20, 2026
spot_imgspot_img

ಕಾರ್ಕಳ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸ್ವಾವಲಂಬಿ ಜೀವನ ನಡೆಸಿದವರಿಗೆ ಸನ್ಮಾನ

ಕಾರ್ಕಳ: ತಾಲೂಕಿನ ಕೆರ್ವಾಶೆ ಗ್ರಾಮ ಪಂಚಾಯಿತಿಯಲ್ಲಿ ಸೆ. 17 ರಂದು ನಡೆದ  ಸಾಮಾಜಿಕ ಪರಿಶೋಧನಾ ಸಭೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ/ ವಿಕಸಿತ ಭಾರತ್‌ ಗ್ಯಾರಂಟಿ ಫಾರ್‌ ರೋಜ್ಗಾರ್‌ ಅಂಡ್‌ ಅಜೀವಿಕ ಮಿಷನ್‌ಯಡಿ ವೈಯಕ್ತಿಕ ಕಾಮಗಾರಿಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡೆದುಕೊಂಡ  ಫಲಾನುಭವಿಗಳಿಗೆ ಸನ್ಮಾನಿಸಲಾಯಿತು.

ಕೆರ್ವಾಶೆ ಗ್ರಾಮದ ಮಯ್ಯದಿ ಬಿನ್‌ ಹಸನಬ್ಬ ಇವರು ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ  ದನದ ಹಟ್ಟಿ, ಗೊಬ್ಬರ ಗುಂಡಿ, ಮೇಕೆ/ಶೆಡ್‌, ಎರೆಹುಳು ತೊಟ್ಟಿ, ಬಚ್ಚಲು ಗುಂಡಿ, ಅಡಿಕೆ ತೋಟ, ಕೋಳಿ ಶೆಡ್‌ ಕಾಮಗಾರಿಗಳನ್ನು ಕೈಗೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಕೆರ್ವಾಶೆ ಗ್ರಾಮದ ಸುಮತಿ ಕೋಂ ಶಂಕರ ಪೂಜಾರಿ ಇವರು  ನರೇಗಾ ಯೋಜನೆಯಡಿ 99 ಮಾನವ ದಿನ ಪೂರೈಸಿ, ಯೋಜನೆಯನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡೆದುಕೊಂಡಿರುತ್ತಾರೆ.

ಸಭೆಯಲ್ಲಿ ಬಿ.ಸಿ.ಎಂ. ಇಲಾಖೆಯ ವಿಸ್ತರಣಾಧಿಕಾರಿ ಗಂಗಾರಾವ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯವರಾದ ಸುಮಾ ಬಿ.ಎ., ಸಾಮಾಜಿಕ ಪರಿಶೋಧನೆಯ  ಸಂಪನ್ಮೂಲ ವ್ಯಕ್ತಿಯಾದ ಪ್ರವೀಣ್‌ ಆಚಾರ್ಯ, ಕಾರ್ಯದರ್ಶಿ ಸುಬ್ಬಯ್ಯ,  ಮಾಜಿ ಉಪಾಧ್ಯಕ್ಷರು, ಸದಸ್ಯರು, ಫಲಾನುಭವಿಗಳು ಹಾಗೂ ಪಂಚಾಯತ್‌ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ಧರು.

ಈ ಲೇಖನಗಳನ್ನೂ ಓದಿ

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group