ಆಹಾರ ನಮ್ಮ ಬದುಕಿಗೆ ಆಧಾರ. ಆಹಾರವಿಲ್ಲದೆ ಜೀವನವಿಲ್ಲ. ಸಂತುಷ್ಟ ಜೀವನಕ್ಕೆ ಆಹಾರದ ಭದ್ರತೆ ಮುಖ್ಯವಾದದು. ಹಸಿದ ಹೊಟ್ಟೆಗೆ ಆಹಾರ ನೀಡಬೇಕಾದರೆ ಸಾಕಷ್ಟು ಆಹಾರ ಉತ್ಪಾದನೆಯಾಗಬೇಕು. ಆರೋಗ್ಯಕರ ಜೀವನಕ್ಕೆ ಪೌಷ್ಟಿಕಾಂಶವು ಬೇಕು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕ ಅಭಿಯಾನವು ರೂಪುಗೊಂಡಿದೆ.
ಆಹಾರ ಭದ್ರತೆ ಇಲ್ಲದಿದ್ದರೆ ಬದುಕು ಅಭದ್ರವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸುವುದು ರಾಷ್ಟ್ರೀಯ ಆಹಾರ ಭದ್ರತೆಯ ಮುಖ್ಯ ಉದ್ದೇಶ.
ಭತ್ತ ಮತ್ತು ದ್ವಿದಳ ಧಾನ್ಯಗಳು ಸೇರಿದಂತೆ ಆಹಾರದ ಬೆಳೆಗಳ ಉತ್ಪಾದನೆ ಹೆಚ್ಚಿಸುವುದು, ಬೆಳೆಗಳ ವಿಸ್ತೀರ್ಣ ಹೆಚ್ಚಳ ಅಥವಾ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಫಸಲು ಹೆಚ್ಚಿಸುವುದು, ಮಣ್ಣಿನ ಫಲವತ್ತತೆಯನ್ನು ಅಭಿವೃದ್ಧಿಗೊಳಿಸುವುದು, ಕೃಷಿಕರ ಆರ್ಥಿಕ ಮಟ್ಟ ಸುಧಾರಣೆ ಈ ಅಭಿಯಾನದ ಆಶಯವಾಗಿದೆರಾಷ್ಟ್ರೀಯ
ಆಹಾರ ಭದ್ರತೆ ಯೋಜನೆಯಡಿ ಹಲವು ಸವಲತ್ತುಗಳನ್ನು ಕೃಷಿಕ ವರ್ಗಕ್ಕೆ ನೀಡಲಾಗುತ್ತದೆ. ಭತ್ತದಲ್ಲಿ ಯಾಂತ್ರಿಕ ನಾಟಿ, ಬೆಳೆ ಪದ್ಧತಿ ಆಧಾರಿತ ತಾಂತ್ರಿಕತೆ ಅಳವಡಿಕೆ ಪ್ರಾತ್ಯಕ್ಷಿಕೆಯಲ್ಲಿ ಆಯ್ಕೆ ಮಾಡಿದ ರೈತರಿಗೆ ಉಚಿತವಾಗಿ ಕೃಷಿ ಪರಿಕರ ವಿತರಣೆ, ದ್ವಿದಳ ಧಾನ್ಯ ಬೆಳೆಯಲ್ಲಿ ಬೆಳೆ ಆಧಾರಿತ ತಾಂತ್ರಿಕತೆ ಅಳವಡಿಕೆಯ ಪ್ರಾತ್ಯಕ್ಷಿಕೆಗೆ ಸಹಾಯಧನದಲ್ಲಿ ಕೃಷಿ ಪರಿಕರಗಳ ಪೂರೈಕೆ ಮತ್ತು ಪ್ರೋತ್ಸಾಹಧನ ದೊರೆಯಲಿದೆ
ಬಿತ್ತನೆ ಬೀಜ ವಿತರಣೆಗೆ ಸಹಾಯಧನ, ಮಣ್ಣು ಸುಧಾರಕಗಳಾದ ಕೃಷಿ ಸುಣ್ಣ, ಲಘು ಪೋಷಕಾಂಶ, ಜಿಪ್ಸಂ, ಸಲ್ಪರ್ ಆಧಾರಿತ ಹಾಗೂ ಜೈವಿಕ ಗೊಬ್ಬರ,ಸಸ್ಯ ಸಂರಕ್ಷಣಾ ಔಷಧಿಗಳಿಗೆ ಶೇಕಡ 50ರ ಸಹಾಯಧನವಿದೆ.
ಬೆಳೆ ಪದ್ಧತಿಗಳ ಆಧಾರಿತ ತರಬೇತಿಗಳನ್ನು ಈ ಯೋಜನೆ ಅಡಿ ಆಯೋಜನೆ ಮಾಡಲಾಗುವುದು








