spot_img
Wednesday, June 19, 2024
spot_imgspot_img
spot_img
spot_img

ಬಡಾ ದೋಸ್ತ ಏರಿದ ವಾನರ ದೋಸ್ತ ಹಲಸು

 -ಪ್ರಬಂಧ ಅಂಬುತೀರ್ಥ
ನೀವು ಈ ದಿನಗಳಲ್ಲಿ ಮಲೆನಾಡಿನ ಯಾವುದೇ ಊರಿಗೆ ಹೋದರು ಒಂದಿಲ್ಲೊಂದು ಕಡೆಯಲ್ಲಿ ಬಡಾದೋಸ್ತ್ , ಟಾಟಾ ಇಂಟ್ರಾ ದಂತಹ ಲಘು ಪಿಕ್ಅಪ್ ವಾಹನಗಳು ಹಲಸಿನ ಕಾಯಿ ಏರಿಸಿಕೊಂಡು ನಿಂತಿರುತ್ತವೆ.‌ ಈ ಹಲಸಿನ ಕಾಯಿಯ  ಮರದ ಓನರ್ ಗಳಿಗೆ (ಬಹುತೇಕ ಕಾಡು ಮರದ ಹಲಸಿನ ಮರಗಳೂ ಸೇರಿದಂತೆ – ಇದಕ್ಕೆ ಫಸ್ಟ್ ಓನರ್ ಗಳು ವಾನರಗಳು ) ಒಂದು ಕಾಯಿಗೆ ಕೇವಲ ಹತ್ತು ರೂಪಾಯಿಗಳನ್ನು ಖರೀದಿದಾರರು ಕೊಡುತ್ತಾರೆ.!!  ಒಂದು ಪಿಕ್ಅಪ್ ವಾಹನದಲ್ಲಿ ಕನಿಷ್ಠ 300 ಅಥವಾ ಅದಕ್ಕಿಂತ ಹೆಚ್ಚು ಹಲಸಿನ ಕಾಯಿ ತುಂಬಲಾಗುತ್ತದೆ‌ . ಈ ಪಿಕ್ ಅಪ್ ವಾಹನಗಳು ಸುಮಾರು 200ಕಿಮೀ × 200ಕಿಮೀ ದೂರ ಎಂದರೆ 400ಕಿಮೀ ಒಟ್ಟು ದೂರದ ಅಂತರ ಇದರ ಬಾಡಿಗೆ ವೆಚ್ಚ  = ಸುಮಾರು 6000ರೂಪಾಯಿ ,  ಊಟ ತಿಂಡಿ ಕೂಲಿ ಎರಡು ಜನರಿಗೆ 2000 ರೂಪಾಯಿ. ಹಲಸಿನ ಕಾಯಿಗೆ 10 ರೂಪಾಯಿ ಅಂತೆ ಮುನ್ನೂರು ಹಲಸಿನ ಕಾಯಿಗೆ ಒಟ್ಟು 3000ರೂಪಾಯಿ. ಈ ಹಲಸಿನ ಕಾಯಿಗಳು ಪಟ್ಟಣದಲ್ಲಿ ಅತ್ಯಂತ ಕಡಿಮೆ ದರ ಎಂದರೆ 150 ರೂಪಾಯಿಗೆ ವ್ಯಾಪಾರ ಆಗುತ್ತದೆ. ‌3000 + 2000+ 6000 = 9000 ಸಾವಿರ ರೂಪಾಯಿಗಳು. ಈ ಒಂಬತ್ತು ಸಾವಿರ ಬಂಡವಾಳಕ್ಕೆ ವ್ಯಾಪಾರಿಗಳಿಗೆ ಒಂದು ಹಲಸಿನ ಕಾಯಿಗೆ ಕನಿಷ್ಠ ದರ 150 ರೂಪಾಯಿಯಂತೆ 300 ಹಲಸಿನ ಕಾಯಿಗೆ ಒಟ್ಟು ಕನಿಷ್ಠ 45000 ಸಾವಿರ ರೂಪಾಯಿಗಳು . ಇದು ಕನಿಷ್ಠ ದರ. ಸಾಮಾನ್ಯವಾಗಿ ದೊಡ್ಡ ಹಲಸಿನ ಕಾಯಿಗಳನ್ನು ಇವರು ಇನ್ನೂರು ಮುನ್ನೂರು ರೂಪಾಯಿಗೂ ಮಾರಾಟ ಮಾಡಿರುತ್ತಾರೆ. ಇರಲಿ ಒಟ್ಟು ನಲವತ್ತು ಸಾವಿರಕ್ಕೆ ಮಾರಾಟ ಆಗಿದೆ ಎಂದರೂ ಕನಿಷ್ಠ ಮೂವತ್ತು ಸಾವಿರ ರೂಪಾಯಿಗಳು ಇವರಿಗೆ ಲಾಭ. ಈ ಬಯಲು ಸೀಮೆಯ ಬಡಾದೋಸ್ತು ಹೆಚ್ ಕೆ ಜಿ ಎನ್ ಗಳು ವಾರದಲ್ಲಿ ಮೂರು ಟ್ರಿಪ್ ಮಾಡುತ್ತಾರೆ. ಕೇವಲ ಮೇ ಹದಿನೈದರಿಂದ ಜೂನ್ ಹದಿನೈದರ ತನಕ ಮಲೆನಾಡಿನ ಊರೂರು ಸಂಚರಿಸಿ ನಮ್ಮ ಮಲೆನಾಡಿನ ಹಲಸಕಾಯನ್ನು ಕೊಂಡೊಯ್ತಾರೆ.The Health Granting Power Of Green Jackfruit Flourಒಂದು ದುರಂತ ಎಂದರೆ ಈ ಹಲಸು ವ್ಯಾಪಾರಿಗಳು ರಸ್ತೆ ಪಕ್ಕದ ಕಾಡಿನ ಮರದ ಹಲಸಿನ ಕಾಯಿಯನ್ನು ಕದ್ದು ಕೊಂಡೊಯ್ತಾರೆ.‌ ನಮ್ಮ ಮಲೆನಾಡಿನಲ್ಲಿ ಹಲಸನ್ನ ಯಾರೂ ಅಧಿಕೃತ ವಾಗಿ ಕೃಷಿ ಮಾಡಿಲ್ಲ. ಈ ಎಲ್ಲಾ ಹಲಸುಗಳೂ ನಿಸರ್ಗದ ಕೊಡುಗೆಗಳು. ಈ ಹಳೆಯ ಹಲಸಿನ ಮರಕ್ಕೆ ನ್ಯಾಯವಾಗಿ ಅರಣ್ಯ ಇಲಾಖೆ ಯಜಮಾನರು. ಅವರಿಗೆ ಇದು ಕಾಡು ಉತ್ಪನ್ನ , ಈ ಅಕ್ರಮ ಹಲಸಿನ ರವಾನೆಯನ್ನು ಪ್ರಶ್ನಿಸಬೇಕೆಂಬುದೇ ಅರಿವಿಲ.!! ಒಂದು ಹತ್ತು ಟ್ರಿಪ್ ಹಲಸಿನ ಕಾಯಿಯನ್ನು ಇವರು ವ್ಯಾಪಾರ ಮಾಡಿದರೆ ಇವರಿಗೆ ಮೂರು ಲಕ್ಷ ರೂಪಾಯಿ ಲಾಭ ಸಿಗುತ್ತದೆ. ಬಹಳಷ್ಟು ಮಲೆನಾಡಿಗರಿಗೆ ಹಲಸಿನ ಕಾಯಿ ಮಾರಾಟ ಮಾಡಿದರೆ ಮಂಗನ ಕಾಟ ಕಡಿಮೆಯಾಗುತ್ತದೆ ಎಂಬ ತಪ್ಪು ತಿಳಿವಳಿಕೆ. ದಯವಿಟ್ಟು ಗಮನಿಸಿ ಚಿಂತನೆ ನೆಡೆಸಿ ಬಂಧುಗಳೇ..ಹಲಸಿನ ಕಾಯಿ ಕೇವಲ ಮಂಗನಿಗೆ ಮಾತ್ರ ಆಹಾರವಲ್ಲ.! ಹಲಸಿನ ಹಣ್ಣು ಮಂಗ,ಅಳಿಲು, ಕೆಂಜಳಿಲು, ಜಾನುವಾರು, ಹಂದಿ, ಕಾಡು ಕೋಣ, ನರಿ ಸೇರಿದಂತೆ ಅಸಂಖ್ಯಾತ ನಿಸರ್ಗ ಜೀವಿಗಳ ಆಹಾರ. ಈ ಬಾರಿ ಮಲೆನಾಡಿನಲ್ಲಿ ಅತ್ಯಧಿಕವಾಗಿ ಹಲಸು ಫಸಲು ಬಂದಿದೆ.Jackfruitಹೌದು ಸ್ವಾಮಿ, ಮನೆಯ ಸಮೀಪದಲ್ಲಿ ತೋಟದ ತಲೆಯಲ್ಲಿ ಹಲಸಿನ ಮರ ಇದ್ದರೆ ಅದಕ್ಕೆ ಮಂಗ ಬರುತ್ತದೆ.‌… ಅಂತ ಶತಾಯಗತಾಯ ಹಲಸಿನ ಕಾಯಿ ಉದುರಿಸಿ ಹೀಗಿನ ಬಡಾ ದೋಸ್ತರಿಗೆ ಮಾರುತ್ತಾರೆ. ಹಲಸಿನ ಕಾಯಿ ಸುಮಾರು ಜೂನ್ ತಿಂಗಳ ಕೊನೆಯ ತನಕವೂ ಮಂಗನಿಗೆ ಆಹಾರ ನೀಡುತ್ತದೆ. ‌ಹಲಸಿನ ಹಣ್ಣು ಇದ್ದರೂ ಮಂಗ ಸ್ವಲ್ಪ ಮಟ್ಟಿಗೆ ಅಡಿಕೆ ರಸ ತುಂಬುವ ಸಂಧರ್ಭದಲ್ಲಿ ಲೂಟಿ ಮಾಡುತ್ತದೆ. ಆದರೆ ಹೀಗೆ ಲೂಟಿ ಮಾಡುವ ಪ್ರಮಾಣ ಕಡಿಮೆ. ಒಂದು ವೇಳೆ ಪೂರ್ಣ ಹಲಸಿನ ಕಾಯಿ ಕಿತ್ತು ಮಾರಿದರೆ ಮಂಗ ಅಡಿಕೆ ತೋಟದಲ್ಲೇ ಲಂಗರು ಹೂಡುತ್ತವೆ.ತ್ವಾಟದಲ್ಲಿ ಒಂದು ಅಡಿಕೆನೂ ಉಳಿಸದೇ ತರಿದು ಹಾಕುತ್ತವೆ. ಮಂಗ ತುಡುಗು ಜಾತಿಯವು.
ಜಗತ್ತಿನಲ್ಲಿ ಮಂಗ ಮತ್ತು ಮನುಷ್ಯ ಹೊಟ್ಟೆ ತುಂಬಿದ ಮೇಲೂ ಕೀಟಲೆ ಮಾಡುವ ನಿಸರ್ಗ ಸಹಜತೆಯನ್ನು ಹಾಳು ಮಾಡುವ ಜೀವಿಗಳು. ಆನೆ ಕಾಡು ಕೋಣಗಳೂ ತಮಗೆ ಬೇಕಾದ ಆಹಾರ ಹುಡುಕಿಕೊಂಡು ಹೋಗುವಾಗ ಕೃಷಿ ಜಮೀನು ಹಾಳು ಮಾಡುತ್ತವೆ. ಆದರೆ ಮಂಗ ಮತ್ತು ಮನುಷ್ಯ ಈ ಪ್ರಾಣಿಗಳಂತಲ್ಲ!! ಅತ್ಯಂತ ದುಷ್ಟ ಜೀವಿಗಳು. ಆಹಾರದಾಚೆ ಯೋಚನೆ ಮಾಡುವಂತವುಗಳು.

Jackfruit 101: What you want to know about this versatile fruit

ಇರಲಿ.ಮಲೆನಾಡಿನ ಅಡಿಕೆ ಬೆಳೆಗಾರ‌ ಬಂಧುಗಳೇ ಜೂನ್ ಜುಲೈ ಆಗಷ್ಟ್ ತಿಂಗಳು ಅಡಿಕೆ ಬೆಳೆಗೆ ಅತ್ಯಂತ ಸವಾಲಿನ ದಿನಗಳು. ಎಲೆಚುಕ್ಕಿ ಅಡಿಕೆ ಕೊಳೆಯ ಜೊತೆಯಲ್ಲಿ ಮಲೆನಾಡಿನ ಅಡಿಕೆ ರಸ ತುಂಬುವ “ರಸಘಳಿಗೆ”  ಮಂಗಗಳು ಈ ಅಮಲುಕಾರಿ ಅಡಿಕೆ ರಸಕ್ಕೆ ಎಳೆ ಅಡಿಕೆ ಕೊನೆಯ ಮೇಲೆ ದಾಳಿ ಮಾಡುತ್ತವೆ‌ . ಈ ಸಂಧರ್ಭದಲ್ಲಿ ಮಾತ್ರ ಅಡಿಕೆ ಬೆಳೆಗೆ ಮಂಗಗಳು ದಾಳಿ ಮಾಡುತ್ತವೆ. ಇದೊಂದು ಸಂಧರ್ಭದಲ್ಲಿ ಮಂಗಗಳ ಉಪಟಳ ಕಡಿಮೆ ಯಾಗಲು ನಿಸರ್ಗದಲ್ಲಿ ಹಲಸಿನ ಹಣ್ಣು ಇದ್ದರೆ ಖಂಡಿತವಾಗಿಯೂ ಮಂಗ ಅಡಿಕೆ ಮೇಲಿನ ದಾಳಿ ಮಾಡಿ ಹಾಳುಗೆಡವುದನ್ನ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ಆದ್ದರಿಂದ ದಯವಿಟ್ಟು ನಿಮ್ಮ ಮನೆ ತೋಟದ ಸುತ್ತಲಿನ ಜಾಗದಲ್ಲಿ ಇರುವ ಹಲಸಿನ ಕಾಯಿಯನ್ನು ಕೀಳಬೇಡಿ.  ಈ ಹಲಸಿನ ಕಾಯಿ ಹಣ್ಣಾಗಿ ಕೊಳೆಯಬಹುದು , ನುಸಿ ಬರಬಹುದು, ಇದರಿಂದ ಅಪಾಯವೇನಿಲ್ಲ.

ನಾವು ಮನುಷ್ಯರು ನಮ್ಮ ಚಿಕ್ಕ ಹೊಟ್ಟೆ ಪಾಡಿಗೆ ಎಕರೆಗಟ್ಟಲೇ ಕೃಷಿ ಮಾಡುತ್ತೇವೆ.ನಿಸರ್ಗದ ಮೇಲೆ ಹಕ್ಕು ಸಾಧಿಸುತ್ತೇವೆ.. ಮಂಗ ಸೇರಿದಂತೆ ಇತರೆ ಕಾಡು ಜೀವಿಗಳಿ ಗೂ ಈ ನಿಸರ್ಗದ ಮೇಲೆ ನಮ್ಮಷ್ಟೇ ಹಕ್ಕು ಇದೆ. ಆದ್ದರಿಂದ ಬಂಧುಗಳೇ ದಯವಿಟ್ಟು ಕರುಣಾಳುಗಳಾಗಿ. ಹಲಸಿನ ಕಾಯಿ ಮಾರಾಟ ಮಾಡದಿರಿ. ಈ ಹಲಸಿನ ಕಾಯಿಯಿಂದ ದೇವ್ರಾಣೆ ನಿಮಗೆ ಯಾವುದೇ ತೊಂದರೆ ಇಲ್ಲ.
ಈ ನಿಸರ್ಗದ ಜೊತೆಯಲ್ಲಿ ಸಹಬಾಳ್ವೆ ಮಾಡೋಣ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group