spot_img
Wednesday, June 19, 2024
spot_imgspot_img
spot_img
spot_img

ಸ್ವ ಉದ್ಯಮದಲ್ಲಿ ಯಶಸ್ಸು ಕಂಡ ಪದವೀಧರೆ:ಉತ್ತರ ಕನ್ನಡದ ಯುವತಿಯ ಸ್ಪೂರ್ತಿಗಾಥೆ!

-ಗಣಪತಿ ಹಾಸ್ಪುರ ಚವತ್ತಿ ಯಲ್ಲಾಪುರ

ಹೈನುಗಾರಿಕೆ ಇದ್ದವರೇ ದಡ್ಡಿ ಗೊಬ್ಬರವನ್ನು ತಮ್ಮ ಕೃಷಿ ಭೂಮಿಗೆ ಬೇಕಾಗುವಷ್ಟು ಸಿದ್ಧಪಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಈ ಕಾಲಘಟ್ಟದಲ್ಲಿ ಯಾವುದೋ ಕಚೇರಿಯಲ್ಲಿ ಕುಳಿತು ಕೆಲಸ ಮಾಡಬೇಕಾದ ಪದವೀಧರೆಯೋರ್ವರು ಸಾವಯುವ ಗೊಬ್ಬರ ಯಾರಿಕೆಯಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ಅಪರೂಪ. ಹೌದು! ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಗುಂಡಬಾಳ ಸಮೀಪದ ನೇವಳಸೆಯ ಸುಷ್ಮಭಟ್ಅಂತಹ ಸಾಹಸ ಕೆಲಸ ಮಾಡುತ್ತಿರುವ ಪದವೀಧರೆ. ಸಾಮಾನ್ಯವಾಗಿ ಇಂದು ಕೃಷಿ ಕುಟುಂಬದ ಮಕ್ಕಳು ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದನ್ನೇ ಜೀವನದ ಆ ಸರೆಯಾಗಿಸಿಕೊಳ್ಳುವವರು ಕಡಿಮೆ ಆಗುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪದವಿ ಪಡೆದುಕೊಂಡ ತರುಣಿಯೊಬ್ಬಳು ಸಾವಯುವ ಗೊಬ್ಬರ ಸಿದ್ಧಪಡಿಸುತ್ತಾ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದಾರೆ.

ಆರಂಭವಾಗಿದ್ದು ಹೇಗೆ:

ನೇವಳಸೆಯ ಸುಷ್ಮಾಳಿಗೆ ಬಾಲ್ಯದಿಂದಲೂ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಅಭಿಲಾಷೆ ಇತ್ತು. ಸಾವಯವ ಕೃಷಿಯನ್ನು ಅತಿಯಾಗಿ ಮೆಚ್ಚಿಕೊಂಡಿದ್ದ ಆಕೆಗೆ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡುವುದರಿಂದ ಆಗುವ ದುಷ್ಪರಿಣಾಮದ ಬಗ್ಗೆಯೂ ಅರಿವಿತ್ತು. ಹಾಗೆಯೇ ಪದವಿ ಶಿಕ್ಷಣ ಪೂರೈಸಿದ ಮೇಲೆ ಉದ್ಯೋಗಕ್ಕಾಗಿ ಅಲೆಯದೆ ತಮ್ಮ ಮನೆಯಲ್ಲಿಯೇ ಗೊಬ್ಬರ ತಯಾರಿಸುವ ಘಟಕವನ್ನು ಆರಂಭಿಸಿ ಸ್ವ-ಉದ್ಯಮವನ್ನು ಮಾಡಿ ನಾಲ್ಕಾರು ಜನರಿಗೆ ಕೆಲಸವನ್ನು ಕೊಡಬೇಕೆಂಬ ಉದ್ದೇಶದಿಂದ ಆ ಘನ ಕಾರ್ಯದಲ್ಲಿ ತೊಡಗಿಸಿಕೊಂಡವರು.

ಗೊಬ್ಬರ ತಯಾರಿಕಾ ಘಟಕವನ್ನು ಶುರು ಮಾಡುವ ಮೊದಲು ಹಲವಾರು ಬಗೆಯಲ್ಲಿ ವಿಚಾರಿಸಿ ಅದರ ಸಾಧಕ ಬಾದಕದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದರು. ಪ್ರಾರಂಭದಲ್ಲಿ ದೊಡ್ಡ ಪ್ರಮಾಣ ಗೊಬ್ಬರ ತಯಾರಿಸಲು ಮುಂದಾಗಲಿಲ್ಲ. ಸುಮಾರು 5 ಸಾವಿರ ರೂಪಾಯಿಯ 5 ತೊಟ್ಟಿಗಳನ್ನು ಖರೀದಿಸಿ ಅದನ್ನು ತಾತ್ಕಾಲಿಕ ಮೇಲ್ಚಾವಣಿಯ ಅಡಿಗೆ ಇಟ್ಟು ಸೆಗಣಿ-ತರಗೆಲೆ (ತೊಟ್ಟೆ ನೀಡಿದ ಸಂಸ್ಥೆಯ ಮಾರ್ಗದರ್ಶನದಂತೆ) ಇತ್ಯಾದಿ ತ್ಯಾಜ್ಯಗಳನ್ನು ತೊಟ್ಟಿಯಲ್ಲಿ ತುಂಬಿ ಎರೆಹುಳುಗಳನ್ನು ಬಿಟ್ಟರು. ಕೇವಲ ಐದಾರು ತಿಂಗಳಿನಲ್ಲಿಯೇ ಉತ್ತಮವಾದ ಎರೆ ಗೊಬ್ಬರ ತಯಾರಾದಾಗ ಸಹಜವಾಗಿಯೇ ಸಂತಸವಾಗಿತ್ತು. ” ಶ್ರದ್ದೆಯಿಂದ ಮಾಡಿದ ಕಾರ್ಯದಲ್ಲಿ ಫಲವಿದೆ” ಎನ್ನುವುದು ಅರ್ಥವಾಗಿತ್ತು. ಈ ಗೊಬ್ಬರ ತಯಾರಿಸುವ ಮೊದಲು ತೊಟ್ಟಿ ಖರೀದಿ ಮಾಡಲೆಂದು ತಂದೆಯಿಂದ ಪಡೆದು ಪಡೆದುಕೊಂಡ 25,೦೦೦ ರೂಗಳನ್ನು ಗೊಬ್ಬರ ಮಾರಾಟ ಮಾಡಿ ಬಂದ ಹಣದಿಂದ ತೀರಿಸಿದ ಸುಷ್ಮಾ ಭಟ್ ಈ ಗೊಬ್ಬರ ಘಟಕವನ್ನು ಸುಧಾರಿತ ಪದ್ಧತಿಯಲ್ಲಿ ಮಾಡಲು ಕಾರ್ಯಪ್ರವೃತ್ತರಾದರು. ಸುಮಾರು ಒಂದು ವರ್ಷಗಳ ವರೆಗೆ ಅದೇ ತೊಟ್ಟಿಯಲ್ಲಿ ಎರಗೊಬ್ಬರವನ್ನು ಸಿದ್ಧಪಡಿಸಿದ ಅರು ಸುಮಾರು 16ಅಡಿ ಉದ್ದ 4 ಅಡಿ ಅಗಲದಲ್ಲಿ ವ್ಯವಸ್ಥಿತವಾಗಿ ಕಡಪಾ ಕಲ್ಲುಗಳನ್ನು ಜೋಡಿಸಿಕೊಂಡು ಸುಭದ್ರವಾದ ತೊಟ್ಟಿಯನ್ನು ಕಟ್ಟಿಕೊಂಡರು.

ಈ ಎರೆಹುಳ ಗೊಬ್ಬರ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳಾದ ಸಗಣಿ ತರಗೆಲೆ ಹಸಿ ಸೊಪ್ಪು ,ಕೃಷಿ ತ್ಯಾಜ್ಯಗಳನ್ನು ಮಾತ್ರ ಬಳಸಿದರೂ ಸಹ ಉತ್ತಮವಾದ ಎರೆಹುಳ ಗೊಬ್ಬರ ಆಗದೆ ಬಹುಪಾಲು ಕಾಂಪೋಸ್ಟ್ ಗೊಬ್ಬರ ಆಗುತ್ತಿತ್ತು. ಅದರಿಂದಾಗಿ ಉತ್ತಮ-ಉತ್ಕೃಷ್ಟವಾದ ಎರೆ ಗೊಬ್ಬರವನ್ನೇ ತಯಾರಿಸಬೇಕೆಂಬ ಮೂಲ ಆಶಯದಿಂದ 3-4 ತಿಂಗಳಿನ ಹಳೆ ಸಗಣಿ ಹಾಕಿ ಜೀವಾಮೃತವನ್ನು ಸಿದ್ಧಪಡಿಸಿಕೊಂಡು ಎರೆಗೊಬ್ಬರವನ್ನು ತಯಾರಿಸಿಯೇ ಮಾರುಕಟ್ಟೆ ಮಾಡುತ್ತಾ ಬಂದಿದ್ದೇವೆ ಎಂದು ಸುಷ್ಮಾ ಭಟ್ ತಮ್ಮ ಗೊಬ್ಬರ ತಯಾರಿಕೆಯ ವಿಧಿವಿಧಾನಗಳ ಬಗ್ಗೆ ಹಂತಹAತವಾಗಿ ಬದಲಾಯಿಸಿಕೊಂಡು ಬಂದಿರುವ ಕ್ರಮಗಳ ಬಗ್ಗೆ ಮುಕ್ತವಾಗಿ ತೆರೆದಿಡುತ್ತಾರೆ.

ಧೈರ್ಯ ಮತ್ತು ಹಾಗೂ ಛಲದಿಂದ ಎರೆ ಗೊಬ್ಬರವನ್ನು ಸಿದ್ಧಪಡಿಸಲು ಶುರು ಮಾಡಿದಾಗ ಮುಂದೆ ಹೇಗೆ ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂಬ ಗೊತ್ತು ಗುರಿ ಇರಲಿಲ್ಲ. ಆದರೆ ಗೊಬ್ಬರ ತಯಾರಿಸಿ ಮಾರಾಟ ಮಾಡಬೇಕೆಂಬ ಹಠವಿತ್ತು. ಈ ಗೊಬ್ಬರ ತಯಾರಿಸುವ ವಿಧಾನಗಳನ್ನು ಹಂತ ಹಂತವಾಗಿ ತಮ್ಮ ನೆಲದಲ್ಲಿಯೇ ಪ್ರಯೋಗಗಳನ್ನು ಮಾಡಿದರು. ವಿಜ್ಞಾನಿಗಳ, ಅನುಭವಿ ಕೃಷಿಕರಿಂದ ಮಾರ್ಗದರ್ಶನ ಪಡೆದುಕೊಂಡರು. ಅವೆಲ್ಲದರ ಅನುಭವ ಆಧಾರದ ಮೇಲೆಯೇ ಸುಷ್ಮಾ ಭಟ್ ಈಗ ಎರಡು ಬಗೆಯ ಗೊಬ್ಬರ ತಯಾರಿಸುತ್ತಾ ಇದ್ದಾರೆ. ರೈತನ ಮಿತ್ರ ಎರೆಹುಳು. ಅಂತಹ ಆಪ್ತಮಿತ್ರ ಎರೆಹುಳುವಿನಿಂದ ತಯಾರಿಸಿದ ಗೊಬ್ಬರವು ಸಸ್ಯಗಳಿಗೆ ಉತ್ಕೃಷ್ಟ ಗೊಬ್ಬರವಾಗಿ ಬಳಕೆ ಆಗುತ್ತಿದೆ. ಹೀಗಾಗಿ ಆ ಗೊಬ್ಬರಕ್ಕೆ “ಸಸ್ಯ ಮಿತ್ರ” ಎರೆ ಗೊಬ್ಬರವೆಂದು ನಾಮಕರಣ ಮಾಡಿದರೆ ಸಾವಯುವ ಗೊಬ್ಬರಗಳ ಮಿಶ್ರಣಕ್ಕೆ ಸಸ್ಯಾಮೃತ ಅಂತ ಹೆಸರಿಟ್ಟಿದ್ದೇನೆ ಎನ್ನುತ್ತಾರೆ ಸುಷ್ಮಾ ಭಟ್.

  • ಅಂದರೆ ‘ಸಸ್ಯಾಮಿತ್ರ’ ಎನ್ನುವ ಹೆಸರಿನಲ್ಲಿರುವ ಗೊಬ್ಬರವು ಶುದ್ದ ಸಾವಯುವ ಗೊಬ್ಬರವಾಗಿದ್ದು ಇದರಲ್ಲಿ ಹಳೆ ಸಗಣಿ ಮತ್ತು ಜೀವಾಮೃತಗಳನ್ನು ಬಳಸಿ ಎರೆಹುಳುಗಳನ್ನು ಬಿಟ್ಟು ತಯಾರಿಸಿದ ಗೊಬ್ಬರವಾಗಿದೆ. ಈ ಗೊಬ್ಬರವು ಸಿದ್ಧವಾಗಲು ಮೂರು ತಿಂಗಳ ಸಮಯ ಬೇಕಾಗುತ್ತದೆ. ಈ “ಸಸ್ಯಾ ಮೃತ” ಎನ್ನುವ ಬ್ರಾಂಡ್‌ನಲ್ಲಿ ಮಾರಾಟ ಮಾಡುವ ಗೊಬ್ಬರವು 4೦ಕೆಜಿ ಬ್ಯಾಗಿನಲ್ಲಿ ಇರುತ್ತದೆ. ಇನ್ನು ಸಸ್ಯಾಮೃತ ಎನ್ನುವ ಹೆಸರಿನಲ್ಲಿ ಇನ್ನೊಂದು ಬ್ರ‍್ಯಾಂಡಿನಲ್ಲಿ ಸಿದ್ದ ಮಾಡುವ ಗೊಬ್ಬರವು ಸಾವಯುವ ಗೊಬ್ಬರಗಳ ಮಿಶ್ರಣವಾಗಿದೆ. ಇದರಲ್ಲಿ ಎರೆಹುಳು ಗೊಬ್ಬರ ಕುರಿ ಗೊಬ್ಬರ ಕೋಳಿಗೊಬ್ಬರ, ಕೋಕೋ ಪೀಟ್, ಸುಡಧೂಳು (ಅಕ್ಕಿ ಮಿಲ್ಲಿನ ಬೂದಿ ಅಂದರೆ ಸಾವಯುವ ಪೊಟಾಶ್) ಸೂಕ್ಷ್ಮಾಣು ಜೀವಿಗಳು ಮತ್ತು ಜೀವಾಮೃತ ಹೀಗೆ ಎಲ್ಲವನ್ನೂ ಒಂದು ಪ್ರಮಾಣದಲ್ಲಿ ಸಿದ್ದಪಡಿಸಲಾಗುತ್ತದೆ. ಈ ಗೊಬ್ಬರ ಸಿದ್ಧವಾಗಲು ಸುಮಾರು ಎರಡು ವಾರಗಳು ಅವಧಿ ಬೇಕಾಗುತ್ತದೆ. ಎಂಬುದು ಸುಷ್ಮಾ ಭಟ್ಟರ ಅಭಿಪ್ರಾಯ. ನಮ್ಮಲ್ಲಿ ತಯಾರು ಮಾಡುವ ಗೊಬ್ಬರಕ್ಕೆ ಸಕ್ಕರೆ ಕಾರ್ಖಾನೆಯ ತ್ಯಾಜ್ಯ ಬಳಸದೆ ಇರುವುದರಿಂದ ರೈತರು ಆಸಕ್ತಿಯಿಂದ ಖರೀದಿ ಮಾಡ್ತಾ ಇರುವುದು, ನಾನು ಈ ಗೊಬ್ಬರ ತಯಾರಿಸುವ ಕೆಲಸದಲ್ಲಿ ಇನ್ನಷ್ಟು ಉತ್ಸವದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ. ಎಂದು ಸುಷ್ಮಾ ಭಟ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಸಸ್ಯಾಮೃತ ಸಾವಯುವ ಗೊಬ್ಬರಗಳ ಮಿಶ್ರಣವನ್ನು ಸುಮಾರು ಆರು ತಿಂಗಳುಗಳ ಕಾಲ ಇಟ್ಟರೂ ಗುಣಮಟ್ಟದಲ್ಲಿ ಯಾವ ವ್ಯತ್ಯಾಸ ಆಗಲಾರದು. ಇದರಲ್ಲಿ ಎರೆಹುಳು ಗೊಬ್ಬರವು ಇರುವುದರಿಂದ ಮತ್ತು ಸೂಕ್ಷ್ಮಾಣು ಜೀವಿಗಳನ್ನು ಸೇರಿಸಿರುವುದರಿಂದ ಕಾಂಪೋಸ್ಟ್ ರೀತಿಯ ಪೌಡರ್ ಆಗಬಹುದೇ ವಿನಹ ಹಾಳಾಗುವುದಿಲ್ಲ. ಎನ್ನುತ್ತಾರೆ ಅವರು.

ಎಲ್ಲೆಲ್ಲಿ ಮಾರುಕಟ್ಟೆ:

ಸಾಮಾನ್ಯವಾಗಿ ಯಾವುದೇ ಸ್ವ ಉದ್ಯಮವನ್ನು ಆರಂಭ ಮಾಡಿದವರಿಗೆ ತಮ್ಮಿಷ್ಟದ ವಸ್ತುಗಳನ್ನು ಸಿದ್ಧ ಮಾಡಿದ ಮೇಲೆ ಸಹಜವಾಗಿ ಆತಂಕ ಆಗದಿರದು. ಇಷ್ಟೆಲ್ಲ ಬಂಡವಾಳಗಳನ್ನು ಹಾಕಿ ಸಿದ್ಧಮಾಡಿದ್ದನ್ನು ಹೊರಗಡೆ ಮಾರಾಟ ಮಾಡುವುದೇ ದೊಡ್ಡ ಸಮಸ್ಯೆ. ಅದೊಂದು ಸವಾಲಿನ ವಿಷಯವೂ ಹೌದು. ಹೊಸದಾಗಿ ಸಿದ್ಧವಾದ ಯಾವುದೇ ವಸ್ತುವಾಗಿರಲಿ ಜನ ನೋಡುವ ಯಾವ ದೃಷ್ಟಿಕೋನವೇ ಬೇರೆ. ಅದು ಚೆನ್ನಾಗಿ ಇದೆಯೋ ಇಲ್ವೋ, ಏನೆಲ್ಲಾ ಹಾಕಿ ಸಿದ್ಧ ಮಾಡುತ್ತಾರೋ ಏನೋ, ಹೀಗೆ ನಾನಾ ರೀತಿಯ ಮಾತುಗಳನ್ನು ಟೀಕೆಗಳನ್ನು ಎದುರಿಸುವುದು ಅನಿವಾರ್ಯ. ಗ್ರಾಹಕರ ಆ ಪರೀಕ್ಷೆಯಲ್ಲಿ ತೇರ್ಗಡೆ ಆಗುವುದು ಲಟಿಕೆ ಹೊಡೆದಷ್ಟು ಸುಲಭವೇನು ಅಲ್ಲ. ಸಮಾಜದ ವಾಸ್ತವಿಕ ಸನ್ನಿವೇಶ ಹೇಗಿದ್ದರೂ ಸುಷ್ಮಾ ಭಟ್ ಅವರು ಸ್ವ-ಪರಿಶ್ರಮ ಸ್ವಕಲ್ಪನೆಯಿಂದ ಸಿದ್ಧಗೊಂಡ ಗೊಬ್ಬರಕ್ಕೆ ಈಗ ಉತ್ತಮವಾದ ಬೇಡಿಕೆ ಇದೆ. ನಮ್ಮ ಈ ಸಾವಯುವ ಗೊಬ್ಬರಕ್ಕೆ ಯಾವುದೇ ರೀತಿಯ ಪ್ರಚಾರಕ್ಕೆ ಆದ್ಯತೆಯನ್ನು ಕೊಡದೆ ಅದಕ್ಕಾಗಿಯೇ ಒಂದಿಷ್ಟು ಹಣವನ್ನು ವ್ಯರ್ಥ ಮಾಡಲಿಲ್ಲ. ಬಳಕೆ ಮಾಡುವ ರೈತರೇ ಒಬ್ಬರಿಗೊಬ್ಬರು ನಮ್ಮ ಗೊಬ್ಬರದ ಬಗ್ಗೆ ಮಾಹಿತಿ ಹಂಚಿಕೊAಡಿದ್ದರಿAದ ಅದು ವ್ಯಾಪಕವಾಗಿ ಪ್ರಸರಿಸಿದ್ದರಿಂದ ಈಗ ಗೊಬ್ಬರ ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಕೆಲವೊಮ್ಮೆ ಬೇಡಿಕೆಗೆ ತಕ್ಕ ಪೂರೈಕೆ ಮಾಡಲು ಆಗದೆ ಇರುವ ಸಂದರ್ಭವು ಇದೆ. ಎನ್ನುತ್ತಾರೆ ಗೊಬ್ಬರ ಘಟಕದ ಮುಖ್ಯಸ್ಥೆ ಸುಷ್ಮಾ.

 

ಅಂಕೋಲದ ಪುಟ್ಟಹಳ್ಳಿ ನೇವಳಿಸೆಯಲ್ಲಿ ಸಿದ್ದವಾಗುವ ಈ ಸಾವಯುವ ಎರೆಹುಳು ಗೊಬ್ಬರವು ಕೇವಲ ಉತ್ತರ ಕನ್ನಡ ಜಿಲ್ಲೆಯೊಂದೇ ಅಲ್ಲದೆ ಉಡುಪಿ, ದಕ್ಷಿಣ ಕನ್ನಡ ಕೃಷಿಕರು ಬಳಕೆ ಮಾಡುತ್ತಿದ್ದಾರೆ ಗೊಬ್ಬರದ ಗುಣಮಟ್ಟದದಲ್ಲಿ ಯಾವುದೇ ಚೌಕಾಸಿ ಇಲ್ಲದೆ ಇರುವುದರಿಂದ ಸ್ಪರ್ಧಾತ್ಮಕ ದರದಲ್ಲಿ ಗೊಬ್ಬರವನ್ನು ನೀಡುತ್ತಿದ್ದೇವೆ. ಸ್ಥಳೀಯ ಸಹಕಾರಿ ಸಂಘಗಳಲ್ಲಿ ಕೃಷಿ ಉತ್ಪನ್ನ ಮಾರಾಟ ಮಳಿಗೆಗ¼ಲ್ಲಿÀ ನಮ್ಮ ಗೊಬ್ಬರವನ್ನು ಮಾರಾಟ ಮಾಡುತ್ತಿರುವುದರಿಂದರಿಂದ ಅವಶ್ಯಕತೆ ಉಳ್ಳವರಿಗೆ ಒಯ್ಯಲು ಸಹಕಾರಿ ಆಗಿದೆ.

2019 ರಿಂದ ಸಂಜೀವಿನಿ ಬಯೋ ಆರ್ಗಾನಿಕ್ಸ್ ಮತ್ತು ನರ್ಸರಿಯನ್ನು ಸ್ಥಾಪಿಸಿ ಅದಕ್ಕೊಂದು ವ್ಯವಸ್ಥಿತವಾದ ರೂಪಕೊಟ್ಟು ಬ್ರಾಂಡ್ ಮಾಡಿ ಮಾರುಕಟ್ಟೆ ಮಾಡಲು ಆರಂಭಸಿದ ಸುಷ್ಮಾ ಭಟ್ಟರ ಸಾಹಸಯಾತ್ರೆ ಇಂದು ಹೆಮ್ಮೆರವಾಗಿ ಬೆಳೆಯಲು ಆರಂಭಿಸಿದೆ. ಈಗೀಗ ವರ್ಷದಿಂದ ವರ್ಷಕ್ಕೆ ಗೊಬ್ಬರ ತಯಾರಿಕಾ ಪ್ರಮಾಣವನ್ನು ಹೆಚ್ಚಿಸ್ತಾ ಇದ್ದಾರೆ. ಉತ್ತಮವಾದ ಬೇಡಿಕೆಯೂ ನಮ್ಮ ಗೊಬ್ಬರಕ್ಕೆ ಇದೆ. ವರ್ಷಕ್ಕೆ ಸುಮಾರು ಎಂಟು-ಹತ್ತು ಸಾವಿರ ಬ್ಯಾಗ್ ಸಸ್ಯಾಮೃತ ಸಾವಯುವ ಗೊಬ್ಬರ ಮಾರಾಟ ಆಗುತ್ತಿದೆ. ಎಂದು ಸುಷ್ಮಾ ಹೇಳುತ್ತಾರೆ

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group