spot_img
Friday, October 11, 2024
spot_imgspot_img
spot_img
spot_img

ಬೇಸಿಗೆಯಲ್ಲಿ ಕಾಡುವ ಕಾಡು ಹಣ್ಣುಗಳು .. ಈ ಹಣ್ಣುಗಳನ್ನು ಮಿಸ್ ಮಾಡ್ಬೇಡಿ..

  – ಆಯಿಶತುಲ್ ಬುಶ್ರ
        ನಿಸರ್ಗದತ್ತವಾಗಿ ಸಿಗುವ ಹಣ್ಣುಗಳೇ ಕಾಡುಹಣ್ಣುಗಳು. ಪ್ರಕೃತಿಯೇ ಕಾಡು ಹಣ್ಣುಗಳ ನಾಡು. ಕಾಡು ಹಣ್ಣುಗಳ ರುಚಿ ತಿಂದವರೇ ಬಲ್ಲರು.ಕರಂಡೆ ಹುಳಿ, ಜಂಬೂ ನೇರಳೆ, ಬೆಟ್ಟದ ನೆಲ್ಲಿಕಾಯಿ, ದಾರೆ ಹುಳಿ, ಕುಂಟಾಲ ಹಣ್ಣು, ನೇರಳೆ,ಅಂಜೂರ , ಹೆಬ್ಬಲಸು ಇಂತಹ ಹತ್ತು ಹಲವು ಹಣ್ಣುಗಳು ಬೇಸಿಗೆಯಲ್ಲಿ ಬಿಡುವಂತದ್ದು .ಯಾವುದೇ ಆರೈಕೆಯಿಲ್ಲದೆ ನೈಸರ್ಗಿಕವಾಗಿ ದೊರೆಯುವ ಈ ಹಣ್ಣುಗಳು ಹೆಚ್ಚು ಸ್ವಾದಿಷ್ಟಕರ. ಗ್ರಾಮೀಣ ಭಾಗದಲ್ಲಿನ ಜನರಿಗೆ ಕಾಡುಹಣ್ಣುಗಳು ಚಿರಪರಿಚಿತ. ನಮ್ಮ ಶರೀರಕ್ಕೆ ಬೇಕಾದ ವಿಟಮಿನ್ ಗಳು , ಪೌಷ್ಟಿಕಾಂಶಗಳು ಈ ಹಣ್ಣುಗಳಿಂದ ನಮಗೆ ಲಭ್ಯ.
ಎಲ್ಲಾ ಹಣ್ಣುಗಳು ವಿಷಕಾರಿ ಅಲ್ಲ ..
ಆದರೆ ಇಂದಿನ ಮಕ್ಕಳಿಗೆ ಇದರ ರುಚಿಯ ಅನುಭವವಿಲ್ಲ . ಕಾಡುಹಣ್ಣುಗಳ ಬಗ್ಗೆ ಎಳ್ಳಷ್ಟೂ ಗಂಧಗಾಳಿ ಇಲ್ಲದವರು “ಅದು ವಿಷದ ಹಣ್ಣು , ಅದನ್ನು ತಿಂದರೆ ಸಾಯುತ್ತಾರೆ” ಎಂದು ಇಂದಿನ ಮಕ್ಕಳಲ್ಲಿ ಭಯವನ್ನು ಹುಟ್ಟಿಸಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಕಾಡುಹಣ್ಣುಗಳ ಬಗ್ಗೆ ಪರಿಚಯವಿಲ್ಲ. ಪಶ್ಚಿಮ ಘಟ್ಟ ಮತ್ತು ಕರಾವಳಿ ಭಾಗದಲ್ಲಿ ಕಾಡುಹಣ್ಣುಗಳನ್ನು ಯಥೇಚ್ಛವಾಗಿ ಕಾಣಬಹುದು. ಆರೋಗ್ಯಕ್ಕೆ ಪೂರಕವಾದ ನೂರು ಜಾತಿಯ ಹಣ್ಣುಗಳನ್ನು ಪ್ರಕೃತಿ ನಮಗಾಗಿ ನೀಡಿದೆ. ಅವುಗಳಲ್ಲಿರುವ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳು ನಮ್ಮ ಶರೀರದ ಆರೋಗ್ಯಕ್ಕೆ ಉತ್ತಮವಾಗಿದೆ.
ಆರೋಗ್ಯಕರ ಕಾಡುಗಣ್ಣುಗಳು..
        ನೆಲ್ಲಿ, ನೇರಳೆ ಮಧುಮೇಹಕ್ಕೆ. ,ಜಂಬೂ ನೇರಳೆ ಅತಿಯಾದ ರಕ್ತದೊತ್ತಡಕ್ಕೆ , ಅಂಜೂರ ಮೂಳೆಗಳ ಆರೋಗ್ಯಕ್ಕೆ, ಜೀರ್ಣಾಂಗ ವ್ಯವಸ್ಥೆಗೆ , ಕರಂಡೆ ಕಾಯಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ,ದಾರೆ ಹುಳಿಯಲ್ಲಿ ಕ್ಯಾಲ್ಸಿಯಂ , ಕಬ್ಬಿಣಾಂಶ ಹೆಚ್ಚಿದೆ . ಕೊಟ್ಟೆಮುಳ್ಳು ಹಣ್ಣು ಬಾಯಿ ಹುಣ್ಣಿಗೆ … ಇಂತಹ ಕಾಡುಹಣ್ಣುಗಳು ನಮ್ಮ ಆರೋಗ್ಯಕ್ಕೆ ಉಪಯುಕ್ತವಾಗಿದೆ .ಇಷ್ಟೆಲ್ಲಾ ಪೋಷಕಾಂಶಗಳಿರುವ ಕಾಡುಹಣ್ಣುಗಳ ಜೀವ ಉಳಿಸುವ ಹೊಣೆ ನಮ್ಮ ಅಗತ್ಯವಾಗಿದೆ.
         ಮಾನವ ಮಾತ್ರ ಅಲ್ಲ ಅಪಾರ ಜೀವರಾಶಿಗಳು ಕಾಡುಹಣ್ಣಿನ ಮೇಲೆ ಅವಲಂಬಿತವಾಗಿದೆ.ಮಂಗಗಳಿಗೆ
ಸಂಪೆ, ಅತ್ತಿಹಣ್ಣು , ಸಿಂಗಳೀಕಗಳಿಗೆ ಹಲಸು , ಹೆಬ್ಬಲಸು, ನರಿ, ಕರಡಿಗೆ ಹಲಸು , ಬಿಲ್ವ . ಬಾವಲಿಗೆ ಜಂಬೂ ನೇರಳೆ, ಸಂಪೆ, ಕುಂಟಾಲ ಹಣ್ಣುಗಳು ಬಿಟ್ಟಾಗ ಹಕ್ಕುಗಳ ಕಲರವ ಮರದ ತುಂಬಾ ..
ರುಚಿಕರ ಹಣ್ಣುಗಳು..
ಕಾಡುಹಣ್ಣುಗಳಲ್ಲಿ ಕೆಲವು ಹಣ್ಣುಗಳನ್ನು ಆಹಾರವಾಗಿ ಬಳಸುತ್ತಾರೆ. ಶರಬತ್ತು ,ಉಪ್ಪಿನಕಾಯಿಯಾಗಿ, ಜ್ಯಾಮ್ , ಸಾಂಬಾರ್ ಮತ್ತು ಚಟ್ನಿ ಮುಂತಾದ ಆಹಾರ ಪದಾರ್ಥಗಳಾಗಿ ಬಳಸುತ್ತಾರೆ.ವಿದೇಶಿ ಅಡುಗೆಗಳಲ್ಲಿಯೂ ಕೆಲವು ಕಾಡುಹಣ್ಣುಗಳನ್ನು ಬಳಸುತ್ತಾರೆ.
ವಿನಾಶದ ಅಂಚಿನಲ್ಲಿ ಕಾಡುಹಣ್ಣು..
   ಆದರೆ ಇಂದು ತಿಳಿದೋ ತಿಳಿಯದೆಯೋ ಕಾಡುಹಣ್ಣುಗಳು ನಮ್ಮಿಂದ ದೂರ ಸರಿಯುತ್ತಿದೆ.ಕಾಡುಹಣ್ಣುಗಳ ಸಂತತಿ ವಿನಾಶದ ಅಂಚಿನಲ್ಲಿದೆ. ಅರಣ್ಯನಾಶ , ಆಧುನೀಕರಣದತ್ತ ಒಲವು ಇದಕ್ಕೆ ಮುಖ್ಯ ಕಾರಣವಾಗಿದೆ. ವಿನಾಶದ ಅಂಚಿನಲ್ಲಿರುವ ಕಾಡುಹಾಣ್ಣುಗಳ ತಳಿ ಉಳಿಸಿ ಬೆಳೆಸಬೇಕು. ಆಧುನಿಕತೆಯ ಭರಾಟೆಯಲ್ಲಿ ಆರೋಗ್ಯಕ್ಕೆ ಪೂರಕವಾದ ಕಾಡುಹಣ್ಣುಗಳ ಪರಿಚಯ ಯುವ ಪೀಳಿಗೆಗಿಲ್ಲ. ಹಣ್ಣುಗಳನ್ನು ಕೇವಲ ಚಿತ್ರದಲ್ಲಿ ನೋಡುವಂತಾಗಿದೆ.ಆದುದರಿಂದ ಹಣ್ಣುಗಳ ಸಂತತಿಯ ರಕ್ಷಣೆ ಅವಶ್ಯಕವಾಗಿ ಆಗಬೇಕಿದೆ.
             
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group