spot_img
Monday, May 20, 2024
spot_imgspot_img
spot_img
spot_img

 ಪುಷ್ಪದಲ್ಲಿಯೂ ಇದೆ ಔಷಧಿಯ ಗುಣ.!!! 

-ಪ್ರತೀಕ್ಷಾ ರಾವ್ ಶಿರ್ಲಾಲ್.ಪತ್ರಿಕೋದ್ಯಮ ವಿಭಾಗ, ಎಂಪಿಎಂ ಕಾಲೇಜು ಕಾರ್ಕಳ.

         ಹೂವುಗಳು ಹಲವಾರು ರೀತಿಯ ಔಷಧೀಯ ಗುಣವನ್ನು ಹೊಂದಿದ್ದರು ಯಾರಿಗೂ ತಿಳಿಯದೆ ಹೋಗಿದೆ. ನಮ್ಮ ಮನೆಯ ಸುತ್ತಮುತ್ತವೇ ಆರೋಗ್ಯಕ್ಕೆ ಸಹಕಾರಿಯಾಗಿರುವ ಮನೆ ಮದ್ದು ಇದ್ದರೂ ನಾವು ಅದರ ಬಗೆಗೆ ತಿಳಿಯದೆ ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಔಷಧಿಗೆ ಮಾರಿ ಹೋಗಿದ್ದೇವೆ. ಅದರಂತೆ ನಾನು ಇಂದು ದಾಸವಾಳ, ಗುಲಾಬಿ, ಪಾರಿಜಾತ,ನೀಲಿ ಶಂಕಪುಷ್ಪ, ಬಿಳಿ ಎಕ್ಕಮಾಲೆ ಇದರ ಬಗೆಗಿನ ಔಷಧಿ ಗುಣಗಳು.
1.ದಾಸವಾಳ:
                     
        ವಿಶ್ವದಲ್ಲಿ ಅತಿ ಸುಲಭವಾಗಿ ಸಿಗುವ ಹೂಗಳಲ್ಲಿ ಈ ದಾಸವಾಳವು ಒಂದು. ಈ ಹೂವು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಕಾಣಸಿಗುತ್ತದೆ. ಆದರೆ ಇದರಲ್ಲಿ ಯಾವ ರೀತಿಯ ಔಷಧೀಯ ಗುಣವಿದೆ ಎಂದು ಕೆಲವರಿಗೆ ತಿಳಿಯದೆ ಹೋಗಿದೆ. ಈ ಹೂವು ಕೇವಲ ದೇವರ ಪೂಜೆಗೆ ಮಾತ್ರ ಸೀಮಿತವಲ್ಲದೆ ಮಾನವರ ಆರೋಗ್ಯಕ್ಕೂ ಬಹಳ ರೀತಿಯಿಂದ ಉಪಯೋಗವಾಗಿದೆ. ಆಯುರ್ವೇದದಲ್ಲಿ ಈ ದಾಸವಾಳವು ತನ್ನದೇ ಆದ ಮಹತ್ವವನ್ನು ಹೊಂದಿದ್ದು ಇದರಿಂದ ಆರೋಗ್ಯವು ವೃದ್ಧಿಯಾಗುತ್ತದೆ.ಈ ದಾಸವಾಳ ಹೂವಿನಿಂದ ಜ್ಯೂಸ್, ಜಾಮೂನು, ಟೀ, ಸಲಾಡ್ ಈ ರೀತಿಯಾಗಿ ಬಳಸಿಕೊಳ್ಳಬಹುದು.
         ಇದು ನಮ್ಮ ದೇಹದ ಅಧಿಕ ರಕ್ತದೊತ್ತಡ, ದೇಹದ ಕೊಲೆಸ್ಟ್ರಾಲ್ , ಲಿವರ್ನ ಸಮಸ್ಯೆ, ದೇಹದ ಕೊಬ್ಬಿನ ಕಂಟ್ರೋಲ್, ತಲೆ ಕೂದಲು ಉದುರುವಿಕೆ ತಡೆಗಟ್ಟುವಲ್ಲಿ, ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಈ ಹೂವು ಪಾತ್ರವಯಿಸುತ್ತದೆ.
2. ಗುಲಾಬಿ:
         ಗುಲಾಬಿ ಹೂವು ಎಂಬುದು ಕೇವಲ ಪ್ರೀತಿಯ ಸ್ವರೂಪವಾಗಿರದೆ ಹೆಣ್ಣು ಮಕ್ಕಳ ಜಡೆಯ ಸೌಂದರ್ಯಕ್ಕೆ ಮಾತ್ರವಲ್ಲದೆ . ಆರೋಗ್ಯಕ್ಕೂ ಹೆಚ್ಚಿನ ಲಾಭವಿದೆ. ಅದಲ್ಲದೆ ಈ ಗುಲಾಬಿ ಹೂವು ಸೌಂದರ್ಯವನ್ನು ಹೆಚ್ಚಿಸುತ್ತದೆ.ಈ ಹೂವು ತಿನ್ನಬಹುದು ಮತ್ತು ಹಣ್ಣು ತರಕಾರಿಗಳ ಜೊತೆ ಸೇರಿಸಿ ಸೇವಿಸಿದರೆ ಇದು ನಾಲಿಗೆಗೆ ಅದ್ಭುತವಾದ ರುಚಿಯನ್ನು ನೀಡುತ್ತದೆ. ಈ ಹೂವನ್ನು ಔಷಧೀಯ ಗುಣವನ್ನಾಗಿ ಉಪಯೋಗಿಸಬಹುದು.
            ಗುಲಾಬಿ ಹೂವು ಹಲವಾರು ರೀತಿಯ ಔಷಧಿ ಗುಣವನ್ನು ಹೊಂದಿದ್ದು ನಮಗೆ ಇರುವ ಆತಂಕವನ್ನು ಕಡಿಮೆ ಮಾಡಿ ವಿಶ್ರಾಂತಿಯನ್ನು ನೀಡುವಲ್ಲಿ ಈ ಹೂವಿನ ಪರಿಮಳ ಸಹಕರಿಸುತ್ತದೆ
   3. ಪಾರಿಜಾತ:
        ಈ ಹೂವನ್ನು “ರಾತ್ ಕೀ ರಾಣಿ” ಎಂದು ಕರೆಯಲ್ಪಡುತ್ತದೆ.ಇದು ಮನೆಯಲ್ಲಿ ಮತ್ತು ಸುತ್ತಮುತ್ತ ಇರುವ ನಕಾರಾತ್ಮಕ ಭಾವನೆಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಅದಲ್ಲದೆ ಈ ಹೂವು ಹಲವಾರು ರೀತಿಯ ಔಷಧಿ ಗುಣವನ್ನು ಹೊಂದಿದೆ. ಈ ಹೂವು ಸಾಮಾನ್ಯವಾಗಿ ಸಂಜೆ ವೇಳೆ ಇಲ್ಲದಿದ್ದರೆ ರಾತ್ರಿ ವೇಳೆಯಲ್ಲಿ ಅರಳುತ್ತದೆ. ಪಾರಿಜಾತ ಹೂವು ಸಪ್ಟೆಂಬರ್ ಅಂತ್ಯದಿಂದ ಡಿಸೆಂಬರ್ ಅಂತ್ಯದವರೆಗೆ ಅರಳುತ್ತದೆ. ಈ ಹೂವಿನ ಸುವಾಸನೆಯೂ ಸಿಹಿ ಭರಿತ ವಾಗಿರುತ್ತದೆ.
         ಈ ಪಾರಿಜಾತವು ಔಷಧೀಯ ಗುಣವನ್ನು ಹೊಂದಿದ್ದು ಕೆಲವು ಕಾಯಿಲೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಮೈ ಕೈ ನೋವು, ಜ್ವರ ನಿವಾರಿಸುವಲ್ಲಿ ಸಹಕರಿಸುತ್ತದೆ. ಅಜೀರ್ಣ, ಮಧುಮೇಹ, ಒಣ ಕೆಮ್ಮು ನಿವಾರಣೆ, ಹೊಟ್ಟೆ ನೋವಿನ ನಿವಾರಣೆ, ಉಸಿರಾಟದ ತೊಂದರೆ, ಗ್ಯಾಸ್ಟಿಕ್ ಸಮಸ್ಯೆ ಮುಂತಾದ ಕಾಯಿಲೆಗಳ ವಿರುದ್ಧ ಈ ಹೂವು ರಾಮಬಾಣವಾಗಿದೆ.
       4. ನೀಲಿ ಶಂಕಪುಷ್ಪ :
            ನೀಲಿ ಶಂಕ ಪುಷ್ಪ ಹೂವು ಎನ್ನುವುದು ಶಿವನಿಗೆ ಅತ್ಯಂತ ಪ್ರಿಯವಾದದ್ದು. ಈ ಹೂವನ್ನು ಸಂಸ್ಕೃತದಲ್ಲಿ “ಗಿರಿಕಾರಣಿಕ” ಎಂದು ಕರೆಯಲ್ಪಡುತ್ತದೆ. ಈ ಹೂವು ಹೆಚ್ಚಾಗಿ ಪೂರ್ವ ಭಾರತದಲ್ಲಿ ಕಾಣ ಸಿಗುತ್ತದೆ ಮತ್ತು ಎಲ್ಲರ ಕಣ್ ಸೆಳೆಯುವ ಹೂವು ಇದಾಗಿದೆ.ಮಳೆಗಾಲದ ಆರಂಭದಲ್ಲಿ ಈ ನೀಲಿ ಶಂಕ ಪುಷ್ಪ ಹೂವು ಅರಳುತ್ತದೆ. ಅದಲ್ಲದೇ ಆರೋಗ್ಯಕ್ಕೂ ಬಹಳ ರೀತಿಯಿಂದ ಉಪಯೋಗವನ್ನು ಹೊಂದಿದೆ.
            ಏಕಾಗ್ರತೆ, ಮಾನಸಿಕ ಆರೋಗ್ಯ ಕಾಪಾಡುವಲ್ಲಿ, ನಕಾರಾತ್ಮಕ ಭಾವನೆಗಳನ್ನು ದೂರಗೊಳಿಸುವಲ್ಲಿ, ದೇಹದ ಕೊಬ್ಬಿನಾಂಶ ಕಡಿಮೆ ಮಾಡುವಲ್ಲಿ, ಹೃದಯಘಾತ,ರಕ್ತ ಹೆಪ್ಪುಗಟ್ಟುವಿಕೆ ಮುಂತಾದ ಅಪಾಯವನ್ನು ನಿವಾರಿಸುತ್ತದೆ.
   5.ಬಿಳಿ ಎಕ್ಕಮಾಲೆ :
           ಈ ಹೂವು ಬಿಳಿ ಬಣ್ಣವನ್ನು ಹೊಂದಿದ್ದು. ಪ್ರತಿಯೊಂದು ಹೂವು ಮನಚ್ಚಾದ ದಳವನ್ನು ಹೊಂದಿರುತ್ತದೆ. ಈ ಹೂವಿನ ಮಧ್ಯ ದಿಂದ ಸಣ್ಣ ಕಿರೀಟವನ್ನು ಹೊಂದಿದ್ದು ಹೂವನ್ನು ಕಿರೀಟಗಳೇ ಶೃಂಗಾರಸಿದಂತಿರುತ್ತದೆ. ಈ ಹೂವು ಎಂದರೆ ಇವನಿಗೆ ಬಹಳ ಅಚ್ಚುಮೆಚ್ಚು. ಆದರೆ ಈ ಹೂವು ಯಾವುದೇ ರೀತಿಯ ಪರಿಮಳವನ್ನು ಹೊಂದಿರುವುದಿಲ್ಲ.
           ಜ್ವರ, ಆನೆಕಾಲು, ವಾಂತಿ, ಜೀರ್ಣಕ್ರಿಯೆ, ಉಸಿರಾಟದ ತೊಂದರೆ, ರಕ್ತ ಪರಿಚಲನಾ, ಚರ್ಮದ ಸಮಸ್ಯೆ ಮುಂತಾದ ರೋಗಗಳ ಔಷಧೀಯ ಗುಣವನ್ನು ಹೊಂದಿದ್ದು ಮಾನವನ ಆರೋಗ್ಯಕ್ಕೆ ಸಹಕಾರಿಯಾಗಿದೆ.
            :> ಪ್ರತಿಯೊಂದು ಹೂವು ಅದರದೇ ಆದ ಮಹತ್ವವನ್ನು ಹೊಂದಿದ್ದು ಮಾನವನ ಜೀವನದಲ್ಲಿ ಆರೋಗ್ಯ ಎಂಬುದು ಎಷ್ಟು ಮುಖ್ಯವಾಗಿದೆ ಅದರಂತೆ ಈ ಹೂವುಗಳನ್ನು ತನ್ನ ಆರೋಗ್ಯದಲ್ಲಿ ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group