spot_img
Saturday, July 27, 2024
spot_imgspot_img
spot_img
spot_img

ಹೈನುಗಾರಿಕೆ ಬಗ್ಗೆ ತಿಳಿದುಕೊಂಡಿರಲೇಬೇಕಾದ ಒಂದಷ್ಟು ಸಂಗತಿಗಳು!

ಹೈನುಗಾರಿಕೆ ಬಗ್ಗೆ ತಿಳಿದುಕೊಂಡಿರಲೇಬೇಕಾದ ಒಂದಷ್ಟು ಸಂಗತಿಗಳನ್ನು ಯೋಗೀಶ ದಾಮ್ಲೆ ಅವರು ಹೇಳಿದ್ದಾರೆ. ಅವರು ಇಲ್ಲಿ ನೀಡಿರುವ ಸಂಗತಿಗಳು ಹೈನು ಕೃಷಿಕರಿಗೆ ಮಾರ್ಗಸೂಚಿಯಾದೀತು.

ತಳಿಗಳ ಆಯ್ಕೆ
ಹೈನುಗಾರಿಕೆ ಮಾಡುವ ಸ್ಥಳ ಪರಿಸರಕ್ಕೆ ಹೊಂದಿಕೊಳ್ಳುವ ತಳಿಗಳನ್ನು ಆಯ್ಕೆ ಮಾಡಬೇಕು. ಉಷ್ಣವಲಯ, ಶೀತ ವಲಯ, ಸಮಶೀತೋಷ್ಣ ವಲಯ ವಾತಾವರಣವನ್ನು ನೋಡಿಕೊಂಡು ಅದಕ್ಕೆ ಸರಿಹೊಂದುವ ತಳಿಗಳನ್ನು ಆಯ್ಕೆ ಮಾಡಬೇಕು. ತಳಿಗಳ ಆಯ್ಕೆಯಲ್ಲಿ ದೇಶೀಯ ತಳಿ, ವಿದೇಶಿ ತಳಿ, ಮಿಶ್ರ ತಳಿಗಳು

ದೇಶೀಯ ತಳಿಗಳು
ದೇಶೀಯ ತಳಿಗಳು ದೇಹದ ಆಕಾರದಲ್ಲಿ ಸಣ್ಣದಾಗಿರುತ್ತವೆ. ರೋಗನಿರೋಧಕ ಶಕ್ತಿಯು ಹೆಚ್ಚು. ದೇಶಿಯ ತಳಿಗಳಲ್ಲಿ ಹಾಲು ಉತ್ಪಾದನೆ ಸಾಮರ್ಥ್ಯ ವಿದೇಶಿ ತಳಿಗಳಿಗಿಂತ ಕಡಿಮೆ. ದೇಶಿಯ ತಳಿಗಳಲ್ಲಿ ಬೆದೆಗೆ ಬರುವ ಸಾಮರ್ಥ್ಯ ಸುಮಾರು ಮೂರು ವರ್ಷಗಳಿಂದ ಮೂರುವರೆ ವರ್ಷಗಳ ತನಕ. ಕರಾವಿನ ಹಂತವು ಕಡಿಮೆ ಇರುತ್ತದೆ. ದೇಶೀಯ ತಳಿಗಳಲ್ಲಿ ಕುತ್ತಿಗೆಯ ಅಡಿಭಾಗದಲ್ಲಿ ಸಡಿಲವಾದ ಚರ್ಮವನ್ನು ಇರುತ್ತದೆ. ಭುಜವನ್ನು ಹೊಂದಿರುತ್ತದೆ. ದೇಶೀಯ ತಳಿಗಳ ಹಸುಗಳು ಹಾಲು ಹಿಂಡುವ ಸಮಯದಲ್ಲಿ ಹಾಲನ್ನು ಕರುವಿಗಾಗಿ ಹಿಡಿದು ಇಟ್ಟುಕೊಳ್ಳುತ್ತವೆ. ಕೆಲವೊಮ್ಮೆ ಕಾಲಿನಿಂದ ಒದೆಯುವುದು ಕೂಡ ಇದೆ

ವಿದೇಶಿ ತಳಿಯ ದನಗಳು
ವಿದೇಶಿ ತಳಿಯ ದನಗಳು ಸಾಧು ಸ್ವಭಾವದವಾಗಿರುತ್ತವೆ. ಹೆಚ್ಚು ಹಾಲನ್ನು ಕೊಡುವ ಸಾಮರ್ಥ್ಯ ಹೊಂದಿವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅಸೌಖ್ಯಗಳು ಆಗಾಗ ಕಂಡುಬರುತ್ತದೆ. ತುಂಬಾ ಸೂಕ್ಷ್ಮಮತಿಯ ತಳಿಯಾಗಿರುವುದರಿಂದ ವಿದೇಶೀ ಹಸುಗಳನ್ನು ತುಂಬಾ ಜಾಗರೂಕತೆಯಿಂದ ಗಮನಿಸಿಕೊಂಡು ಸಾಕಬೇಕು
ಮಿಶ್ರ ತಳಿಯ ದನಗಳು
ದೇಶಿಯ ತಳಿಗಳಿಗೆ ವಿದೇಶಿ ತಳಿಗಳ ಕೃತಕ ಗರ್ಭಧಾರಣೆಯನ್ನು ಮಾಡಿಸಿದಾಗ ಮಿಶ್ರತಳಿಯ ಕರುಗಳು ಹುಟ್ಟುತ್ತವೆ. ರಾಸುಗಳು ಹೆಚ್ಚು ಹಾಲನ್ನು ನೀಡುವ ಸಾಮರ್ಥ್ಯ ಹೊಂದಿರುತ್ತವೆ. ದೇಶಿಯ ತಳಿಗಳ ಅಷ್ಟೇ ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ ಮತ್ತು ತಳಿಗಳು ವಿದೇಶಿ ಅನುವಂಶೀಯ ಗುಣವನ್ನು ಹೊಂದಿರುತ್ತವೆ


ಹಸುಗಳ ಆಯ್ಕೆ
* ತಮ್ಮ ತಮ್ಮ ಊರಿಗೆ ಹೊಂದಿಕೊಳ್ಳುವ ಮಿಶ್ರತಳಿಗಳನ್ನು ಆಯ್ಕೆ ಮಾಡುವುದು ಯೋಗ್ಯವಾಗಿರುತ್ತದೆ
* ಒಂದನೆಯ ಕರುವಿನಿಂದ ಮೂರನೇ ಕರುವಿನ ಹಸುಗಳನ್ನು ಖರೀದಿಸಬೇಕು
* 15 ತಿಂಗಳ ನಂತರ ಬೆದೆ ಬಂದ ಕರುಗಳನ್ನು ಖರೀದಿಸಬಹುದು
* 2ರಿಂದ 5 ವರ್ಷ ಪ್ರಾಯದ ಹಸುಗಳು ಹೆಚ್ಚು ಹಾಲು ಕೊಡುವ ಸಮಯ.ಈ ಸಮಯದಲ್ಲಿ ಖರೀದಿ ಯೋಗ್ಯವಾಗಿರುತ್ತದೆ.
* ಹಸುವಿನ ಖರೀದಿ ಬೆಲೆಯು ಅದರ ತಳಿ, ವಯಸ್ಸು, ಕರಾವಿನ ಹಂತ, ಹಾಲಿನ ಇಳುವರಿ ಮತ್ತು ಹಾಲಿನ ಗುಣಮಟ್ಟದ ಆಧಾರದಲ್ಲಿ ನಿರ್ಧರಿಸಬಹುದು
* ಉದ್ದವಾದ ಬಾಲ (ಬಾಲ ಕೂದಲನ್ನು ಕತ್ತರಿಸಬಾರದು) ನಯವಾದ ಚರ್ಮ, ಹೊಳಪಿನ ಕಣ್ಣುಗಳು, ತೇವಾಂಶ ಇರುವ ಮೂಗು, ಬಾಲ ಕಿವಿಗಳನ್ನು ಆಗಾಗ ಅಲ್ಲಾಡಿಸುವ ಆರೋಗ್ಯವಂತ ದನವನ್ನು ಖರೀದಿಸಬೇಕು.
* ಕೆಚ್ಚಲಿನಲ್ಲಿರುವ ಮೊಲೆಗಳು ಸಮಾನಾಂತರವಾಗಿ ಉದ್ದವಾಗಿರಬೇಕು. ಕೆಚ್ಚಲು ಮೃದುವಾಗಿರಬೇಕು. ಸಗಣಿಯ ಗಟ್ಟಿಯಾಗಿ ಪದರಪದರವಾಗಿ ಇರಬೇಕು ಮೂತ್ರವು ನಸುಹಳದಿ ಬಣ್ಣದಾಗಿರಬೇಕು
* ಚರ್ಮವು ಸುಕ್ಕು ಕಟ್ಟಿರುವುದು ಮೈಮೇಲೆ ಅಲ್ಲಲ್ಲಿ ವೃಣಗಳು ಅಲ್ಲದೆ ಕಜ್ಜಿಯ ಕಲೆಗಳು ಇಲ್ಲದಿರುವುದರ ಬಗ್ಗೆ ಖಾತರಿ ಮಾಡಿ ಖರೀದಿಗೆ ಮುಂದಾಗಬೇಕು
* ಕಿವಿ ಕಣ್ಣುಗಳಿಂದ ಕೀವು ಬರಬಾರದು. ಕೆಚ್ಚಲಿನಲ್ಲಿ ಸಣ್ಣಸಣ್ಣ ಕಜ್ಜಿಯ ತರಹದ ಬೊಕ್ಕೆಗಳಿರುತ್ತವೆ. ಅವುಗಳನ್ನು ಗಮನಿಸಬೇಕು. ಕೆಚ್ಚಲಿಗೆ ಕೈಯಾಡಿಸಿ ಒದೆಯುವುದಿಲ್ಲವೆಂದು ಖಾತರಿ ಮಾಡಿಕೊಳ್ಳಬೇಕು. ಹಾಯುವುದು ಒದೆಯುವುದರ ಬಗೆಗೆ ಎಚ್ಚರ ಅತೀ ಅಗತ್ಯ
* ಒಂದು ವರ್ಷದ ಒಳಗಿನ ಮಿಶ್ರತಳಿಯ ಹೆಣ್ಣು ಕರುಗಳನ್ನು ಖರೀದಿಸಿ ಅವುಗಳನ್ನು ಮುದ್ದಿನಿಂದ ಸಾಕಬೇಕು. ದಿನ ಎರಡು-ಮೂರು ಬಾರಿ ಅದರ ಬೆನ್ನನ್ನು ಸವರಿ ಅದರ ಜೊತೆಗೆ ಒಡನಾಟ ಬೆಳೆಸಿದರೆ ಕರು ಹಾಕಿದ ನಂತರ ಹಾಲು ಹಿಂಡುವ ಸಮಯದಲ್ಲಿ ಅವುಗಳು ನಮ್ಮೊಂದಿಗೆ ಸ್ಪಂದಿಸುತ್ತವೆ

ಹೆಣ್ಣು ಕರು ದನವಾಗುವ ಹಂತ: ಬೆದೆ ಲಕ್ಷಣಗಳು
ಕರುಗಳು ಹುಟ್ಟಿ 9 ತಿಂಗಳ ಪ್ರಾಯದಿಂದ ಪ್ರತಿ ೨೧ ದಿನಕ್ಕೊಮ್ಮೆ ಬೆದೆಗೆ ಬರಲು ಪ್ರಾರಂಭಿಸುತ್ತವೆ. ಹಸು/ಕರು ಒಂದೇ ಸಮನೆ ಕೂಗಲು ಪ್ರಾರಂಭಿಸುತ್ತವೆ ಒಮ್ಮೊಮ್ಮೆ ಉದ್ರೇಕಗೊಂಡು ಕೂಗುತ್ತವೆ. ಹಿಂಡಿನಲ್ಲಿರುವ ದನಗಳನ್ನು ತನ್ನ ಮೇಲೆ ಹತ್ತಲು ಬಿಡುವುದು.

ಹಿಂಡಿನಲ್ಲಿರುವ ಇತರ ದಿನಗಳ ಮೇಲೆ ತಾನೇ ಹತ್ತುವುದು, ಜನನೇಂದ್ರಿಯದಿAದ ನೀರಿನಂತೆ ಇರುವ ಬಿಳಿ ಲೋಳೆ ಸುರಿಸುತ್ತಿರುವುದು, ಮೂತ್ರ ದ್ವಾರ ಸ್ವಲ್ಪ ಊದಿಕೊಂಡು, ಒಳಚರ್ಮ ನಸುಗೆಂಪು ಬಣ್ಣದಲ್ಲಿರುತ್ತದೆ.ಚಡಪಡಿಕೆಯಿಂದ ಆಗಾಗ ಹಿಂಬದಿಯನ್ನು ಬಗ್ಗಿಸಿ ಪದೇಪದೆ ಗೋಮೂತ್ರ ವಿಸರ್ಜಿಸುವುದು, ತನ್ನದೇ ಆದ ರೀತಿಯಲ್ಲಿ ಸೊಂಟವನ್ನು ಕುಣಿಸುತ್ತಿರುತ್ತದೆ. ಬಾಲವನ್ನು ಎತ್ತಿ ಬದಿಗೆ ಸರಿಸಿ ಬಿಡುವುದು, ಆಹಾರದಲ್ಲಿ ನಿರಾಸಕ್ತಿ ತೋರುವುದು, ಸ್ವಲ್ಪ ಮೈ ಬಿಸಿಯಾಗಿರುತ್ತದೆ.

ಹತ್ತಿರದ ಹಸು-ಕರುಗಳನ್ನು ನೆಕ್ಕುತ್ತದೆ. ಕಣ್ಣುಗಳು ಹೊಳಪಾಗಿ ಕಿವಿಯು ನೆಟ್ಟಗೆ ನಿಮಿರುವುದು ಬೆನ್ನಿನ ಮೇಲೆ ಕೈ ಇಟ್ಟಾಗ ಬೆನ್ನು ಜಗ್ಗಿಸಿ ಬಾಲ ಎತ್ತಿಕೊಂಡು ಹಾಯಾಗಿರುವುದು. ಹಟ್ಟಿಯಿಂದ ಹೊರಗಡೆ ಬಿಟ್ಟಾಗ ಇತರ ದನಗಳ ಹಿಂಡುಗಳ ಹಿಂದೆ ಸುಮ್ಮನೆ ಓಡುವುದು. ಇತರ ಪ್ರಾಣಿಗಳನ್ನು ಮೂಸಿ ಮೂಸಿ ಓಡಿಸುವುದು. ಹಟ್ಟಿಗೆ ಹೋದಾಗ ನಮ್ಮ ಮೇಲೆಯೇ ಹತ್ತುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಮೇಲಿನ ಎಲ್ಲ ಲಕ್ಷಣಗಳು ಬೆದೆಗೆ ಬಂದ ಎಲ್ಲಾ ದನಗಳಲ್ಲಿ ಇರಬೇಕೆಂದೇನು ಇಲ್ಲ. ಕೆಲವೊಂದು ಲಕ್ಷಣಗಳು ಇರದೆಯೂ ಇರಬಹುದು. ಕೆಲವೊಂದು ದನಗಳಲ್ಲಿ ಮೂಕಬೆದೆ ಇರುವುದು ಕಂಡುಬರುತ್ತದೆ.
ಕರು ಹುಟ್ಟಿದ 15 ತಿಂಗಳ ನಂತರ ಬೆದೆಗೆ ಹೋರಿಯನ್ನು ಬಿಡಬಹುದು ಅಥವಾ ಕೃತಕ ಗರ್ಭಧಾರಣೆಯನ್ನು ಮಾಡಿಸಬಹುದು ಗರ್ಭಧರಿಸಿದ ಕರು/ಹಸುಗಳಿಗೆ ಸಮತೋಲನದ ಪಶು ಆಹಾರವನ್ನು 5-6  ಕೆಜಿಯಷ್ಟು ಬೆಳಿಗ್ಗೆ ಮತ್ತು ಸಂಜೆ ಸಮಭಾಗವಾಗಿ ನೀಡಬೇಕು. (ಬೆಳಿಗ್ಗೆ ಎರಡುವರೆ ಕೆಜಿ ಸಂಜೆ ಎರಡುವರೆ ಕೆಜಿ) ಸಮತೋಲನ ಆಹಾರ ನೀಡಬೇಕು. 30-35  ಕೆಜಿ ಹಸಿರು ಹುಲ್ಲು ನೀಡಬೇಕು. ಖನಿಜ ಲವಣ ಮಿಶ್ರಣವನ್ನು 50-80 ಗ್ರಾಂ ದಿನದಲ್ಲಿ ಒಂದು ಸಾರಿ ನೀಡಬೇಕು ಒಣಹುಲ್ಲು, ಸಾಕಷ್ಟು ಶುದ್ಧನೀರು (ಸುಮಾರು 50-55 ಲೀಟರ್) ಒದಗಿಸಬೇಕು.

ಕೃತಕ ಗರ್ಭಧಾರಣೆಯಾದ ದಿನದಿಂದ 60-100  ದಿನಗಳ ಒಳಗಡೆ ಪುನಃ ಬೆದೆ ಬಾರದಿದ್ದರೆ ಗರ್ಭಧರಿಸಿದ ಬಗ್ಗೆ ಖಾತರಿ ಮಾಡಿಸಿಕೊಳ್ಳಬೇಕು ಗರ್ಭಧರಿಸಿದ ಹಸುಗಳಿಗೆ ಸಾಂಕ್ರಮಿಕ ರೋಗದ ವಿರುದ್ಧದ ಲಸಿಕೆ ನೀಡಬೇಕು. ೬ ತಿಂಗಳಿಗೊಮ್ಮೆ ಜಂತುಹುಳದ ವಿರುದ್ಧದ ಮಾತ್ರೆ ನೀಡಬೇಕು. ಒಮ್ಮೆ ಜಂತುಹುಳದ ಮಾತ್ರೆ ನೀಡಿದ ಬಳಿಕ ಪುನಃ 21 ನೇ ದಿನಕ್ಕೆ ಪುನ: ಒಂದು ಮಾತ್ರೆ ನೀಡಬೇಕು.

ದನಗಳನ್ನು ಬೆಳಗಿನ ಅಥವಾ ಸಂಜೆಯ ಬಿಸಿಲಿನಲ್ಲಿ ಕಡಿಮೆ ಪಕ್ಷ 23 ಗಂಟೆಯಾದರೂ ಅಡ್ಡಾಡಲು ಬಿಡಬೇಕು. ಕೆಚ್ಚಲನ್ನು ದಿನಾಲು ಸ್ವಚ್ಛ ನೀರಿನಿಂದ ತೊಳೆಯಬೇಕು. ಮೃದು ಆಗಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಕೆಚ್ಚಲಿನಲ್ಲಿ ಗಂಟು ಅಥವಾ ಗಟ್ಟಿಯಾದುದು ಕಂಡುಬAದರೆ ಕೂಡಲೇ ವೈದ್ಯರ ಸಲಹೆ ಪಡೆಯಬೇಕು. ಹುರುಳಿ/ಅಲಸಂಡೆ (ಅರ್ಧಕೆಜಿ) ನೆನೆಸಿ ರುಬ್ಬಿ ಹಸಿಯಾಗಿಯೇ ನೀಡಬೇಕು.

ಗರ್ಭಧರಿಸಿದ 5 ತಿಂಗಳಿನಿAದ 1 ಕೆಜಿ ಪಶು ಆಹಾರ, ೫ಕೆಜಿ ಹಸಿರು ಹುಲ್ಲು ಹೆಚ್ಚಿಗೆ ನೀಡಬೇಕು ಗರ್ಭಧರಿಸಿದ ಹಸು/ಕರು ಪ್ರತ್ಯೇಕವಾಗಿ ಕಟ್ಟಬೇಕು. ಹಿಂಬದಿಯ ಭಾಗವನ್ನು ಸ್ವಲ್ಪ ಎತ್ತರದಲ್ಲಿರುವಂತೆ ಮಾಡಿದರೆ ಉತ್ತಮ. ಒಂಬತ್ತನೇ ತಿಂಗಳು ತುಂಬಿದಾಗ ಮಲಗುವ ಜಾಗದಲ್ಲಿ ಮೆತ್ತನೆಯ ಹಾಸನ್ನು ಹಾಸಬೇಕು. ಭತ್ತದ ಹುಲ್ಲು ಕರಡದ ಹುಲ್ಲು ಅಡಿಕೆ ಸಿಪ್ಪೆ ತರಗೆಲೆ ಇತ್ಯಾದಿಗಳಿಂದ ಹಾಸನ್ನು ತಯಾರಿ ಮಾಡಬಹುದು. ಉಣ್ಣೆಯಾಗಿದ್ದರೆ ವೈದ್ಯರ ಸಲಹೆಯಂತೆ ಔಷಧಿ ಹಚ್ಚಬೇಕು. ಒಂಬತ್ತು ತಿಂಗಳು ತುಂಬಿದಾಗ ಅಥವಾ ಕರುಹಾಕುವ ಎರಡು-ಮೂರು ದಿನಗಳ ಮೊದಲಿನಿಂದ ದನಕ್ಕೆ ಮೆದು ಆಹಾರವನ್ನು ನೀಡಬೇಕು

-ಯೋಗೀಶ ದಾಮ್ಲೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group