spot_img
Monday, September 28, 2026
spot_imgspot_img
- Advertisement -spot_img

ಸಾವಯವ ಕೃಷಿಯಲ್ಲಿ ಸ್ವಯಂಚಾಲಿತ ವ್ಯವಸ್ಥೆ: ಪ್ರಯೋಗಗಳಿಂದಲೇ ಗೆದ್ದ ಸಾವಯವ ಕೃಷಿಕ!

ಬರಹ : ರಾಧಾಕೃಷ್ಣ ತೊಡಿಕಾನ, ಚಿತ್ರ : ರಾಮ್ ಅಜೆಕಾರ್

ಕುಪ್ಪಾರು ನರಸಿಂಹ ಅವರದು ಸಾವಯವ ಕೃಷಿ. ತೋಟದಲ್ಲಿ ಜೀವಾಮೃತ, ಗೋ ಕೃಪಾಮೃತ ಹಾಗೂ ಇತರ ಸಾವಯವ ದ್ರವ ಗೊಬ್ಬರ ಸೇರಿದಂತೆ ಗೋವಿನ ಸಗಣಿ ಆಧಾರಿತ ಕೃಷಿ. ಅವರು ಲಕ್ಷ ಲಕ್ಷ ದುಡ್ಡು ಕೊಟ್ಟು ರಾಸಾಯಿನಿಕ ಗೊಬ್ಬರ ತಂದು ತೋಟಕ್ಕೆ ಸುರಿಯುವುದಿಲ್ಲ. ಸಾವಯವ ಗೊಬ್ಬರ ತಯಾರಿಕೆ ಮತ್ತು ವಿತರಣೆಯನ್ನು ಸುಲಭಗೊಳಿಸುವ ಸ್ವಯಂಚಾಲಿತ ವ್ಯವಸ್ಥೆಯನ್ನು ಅಳವಡಿಸಿಕೊಂಡು ಯಶನ್ನು ಕಂಡಿದ್ದಾರೆ. ಸಾವಯವ ಕೃಷಿಯಲ್ಲಿ ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಸಾವಯವ ಕೃಷಿ ಪ್ರಯೋಗಗಳು ಅವರನ್ನು ಕೈಬಿಟ್ಟಿಲ್ಲ.

ಕುಂದಾಪುರ ತಾಲೂಕಿನ ಶಂಕರನಾರಾಯಣದ ಕುಪ್ಪಾರು ನರಸಿಂಹ ಅವರು ಕೃಷಿಕ ಕುಟುಂಬದವರು. ಆದರೆ ಅವರು ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿದ್ದರು. ಸಾರಿಗೆ ಉದ್ಯಮದಲ್ಲಿ ತೊಡಗಿಕೊಂಡಿದ್ದ ಅವರು ವಾಹನ ಮಾಲಿಕರಾಗಿದ್ದರು. ದುಡ್ಡು -ದುಡಿಮೆ ಎರಡೂ ಇತ್ತು. ಆದರೆ ಕೊರೊನಾ ಬಹಳಷ್ಟು ನಗರವಾಸಿಗಳನ್ನು ಹಳ್ಳಿ ಸೇರುವಂತೆ ಮಾಡಿತು. ನರಸಿಂಹ ಅವರೂ ಇದಕ್ಕೆ ಹೊರತಾಗಿರಲ್ಲಿಲ್ಲ. ವಾಹನಗಳ ಓಡಾಟ ನಿಂತವು . ಅದರೊಂದಿಗೆ ವ್ಯವಹಾರವೂ ಕೂಡಾ. ಅನಿವಾರ್ಯವಾಗಿ ಊರಿಗೆ ಬಂದವರಿಗೆ ಕೃಷಿಯೇ ಅವರ ಪ್ರಯೋಗ ಶಾಲೆಯಾಯಿತು. ಅಡಿಕೆ ತೋಟಕ್ಕೆ ರಾಸಾಯಿನಿಕ ಗೊಬ್ಬರ ಹಾಕುವುದು ಅವರಿಗೆ ಇಷ್ಟವಿರಲಿಲ್ಲ. ಸಾವಯವದಿಂದಲೇ ಏನಾದರೂ ಸಾಧನೆ ಮಾಡ ಬೇಕೆನಿಸಿತು. ಅಂದಿನಿಂದಲೇ ತಮ್ಮ ತೋಟಕ್ಕೆ ರಾಸಾಯನಿಕ ಗೊಬ್ಬರ ಹಾಕುವುದನ್ನು ಹಂತಹಂತವಾಗಿ ಕಡಿಮೆ ಮಾಡಿದರು. ಹೊಸತೋಟವನ್ನು ಪೂರ್ಣವಾಗಿ ಸಾವಯವ ಗೊಬ್ಬರವನ್ನೇ ಹಾಕಿ ಬೆಳೆಸಿದರು. ಈ ಪ್ರಯೋಗವು ಅವರಿಗೆ ಹೊಸ ಅನುಭವನ್ನು ನೀಡಿತು.

ಸಾವಯವ ಕೃಷಿಗೆ ಪೂರಕವಾಗಿ ಸಾವಯವ ಗೊಬ್ಬರ ತಯಾರಿ ಅವುಗಳ ಬಳಕೆಗೆ ಸಮಯ ಮತ್ತು ಕಾರ್ಮಿಕರ ಅವಶ್ಯಕತೆಯಿತ್ತು. ಈ ಸಮಸ್ಯೆಯನ್ನು ನೀಗಿಸಲು ತನ್ನ ತೋಟದಲ್ಲಿ ಸ್ವಯಂ ಚಾಲಿತ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ. ಸಾವಯವ ಪೋಷಕಾಂಶಗಳ ನಿಯಮಿತ ಹಾಗೂ ಸಮರ್ಪಕ ಬಳಕೆ ಅದರಿಂದ ಸಾಧ್ಯವಾಗಿದೆ. ತೋಟಕ್ಕೆ ಹೋಗದೆ ಮನೆಯಲ್ಲಿದ್ದುಕೊಂಡೇ ಸ್ವಯಂ ಚಾಲಿತವಾಗಿ ನೀರು, ಗೊಬ್ಬರ ನಿರ್ವಹಣೆ ಸುಲಭವಾಗಿಸಿದೆ. ಜೊತೆಗೆ ಕಾರ್ಮಿಕರ ಅವಲಂಬನೆಯನ್ನು ಕಡಿಮೆ ಮಾಡಿದೆ. ಕೃಷಿ ವೆಚ್ಚವನ್ನು ಕಡಿತಗೊಳಿಸಿದೆ.

ತೋಟದಲ್ಲಿ ಜೀವಾಮೃತ, ಗೋ ಕೃಪಾಮೃತ ಹಾಗೂ ಇತರ ಸಾವಯವ ದ್ರವ ಗೊಬ್ಬರಗಳನ್ನು ಬಳಸಲಾಗುತ್ತಿದೆ. ಜೀವಾಮೃತ ತಯಾರಿಕೆಗೆ ಗೋಮಯ, ಗೋಮೂತ್ರ, ಬೆಲ್ಲ, ಕಡಲೆ ಹಿಟ್ಟು, ಫಲವತ್ತಾದ ಮಣ್ಣು ಹಾಗೂ ನೀರನ್ನು ಬಳಸಲಾಗುತ್ತದೆ. ಇದು ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳ ಚಟುವಟಿಕೆಯನ್ನು ಹೆಚ್ಚಿಸಿ, ಪೋಷಕಾಂಶಗಳ ಲಭ್ಯತೆ ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ನೆರವಾಗಿದೆ

ಗೋ ಕೃಪಾಮೃತವನ್ನು ಸಗಣಿ ಹುಳಿ ಮಜ್ಜಿಗೆ, ಬೆಲ್ಲ ಮತ್ತು ನೀರಿನ ಸಹಾಯದಿಂದ ತಯಾರಿಸಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ಸಾವಯವ ಗೊಬ್ಬರವು ಮಣ್ಣಿನ ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಸಸ್ಯಗಳ ಬೇರುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಎನ್‌ಪಿಕೆ-ಡಿಕೆಸಿ ಮೂಲಕ ಪೋಷಕಾಂಶಗಳ ಪೂರೈಕೆ

ತೋಟದಲ್ಲಿ ಎನ್‌ಪಿಕೆ-ಡಿಕೆಸಿ ದ್ರಾವಣವನ್ನೂ ತಯಾರಿಸಿ ಬಳಸಲಾಗುತ್ತಿದೆ. ಮದರ್ ಕಲ್ಚರ್, ಡಿಕಂಪೋಷರ್, ಬೆಲ್ಲ ಹಾಗೂ ಕ್ಲೋರಿನ್ ರಹಿತ ನೀರನ್ನು ಬಳಸಿ ಈ ದ್ರಾವಣವನ್ನು ತಯಾರಿಸಲಾಗುತ್ತದೆ. . ಐದು ದಿನಗಳ ಕಾಲ ಬೆಳಗ್ಗೆ ಮತ್ತು ಸಂಜೆ ಕಲಸಿದ ನಂತರ ಸಿದ್ಧವಾಗುವ ದ್ರಾವಣವನ್ನು ಹನಿ ನೀರಾವರಿ ವ್ಯವಸ್ಥೆಯ ಮೂಲಕ ಅಥವಾ ನೀರಾವರಿ ನೀರಿನೊಂದಿಗೆ ಬೆರೆಸಿ ಬಳಸಬಹುದಾಗಿದೆ.

ಸಿದ್ಧವಾದ ದ್ರಾವಣದ ಒಂದು ಭಾಗವನ್ನು ಬಳಸಿಕೊಂಡು ಹೊಸ ನೀರು ಮತ್ತು ಬೆಲ್ಲ ಸೇರಿಸಿ ಮತ್ತೆ ಐದು ದಿನಗಳ ಕಾಲ ವೃದ್ಧಿಪಡಿಸುವ ಮೂಲಕ ಮರು ಉತ್ಪಾದನೆಯನ್ನೂ ಮಾಡಬಹುದಾಗಿದೆ.

ಸಾವಯವ ಕೃಷಿಯೆಂದರೆ ಹೆಚ್ಚು ಕಾರ್ಮಿಕರ ಅವಶ್ಯಕತೆ ಎನ್ನುವುದು ತಪ್ಪು ಕಲ್ಪನೆ. ಸರಿಯಾದ ಯೋಜನೆ ಮತ್ತು ಸರಳ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಅದನ್ನು ಹೆಚ್ಚು ಪರಿಣಾಮಕಾರಿ ಹಾಗೂ ಸುಸ್ಥಿರವಾಗಿಸಬಹುದು ಎಂಬುದು ನರಸಿಂಹ ಅವರ ನಂಬಿಕೆ ಮತ್ತು ಅದನ್ನು ಸಾಧಿಸಿ ತೋರಿಸಿದ್ದಾರೆ ಕೂಡಾ

.ಮೊದಲು ಜೈವಿಕ ಇಂಧನ ಆನಂತರ ಗೊಬ್ಬರ

ಸಾವಯವ ಕೃಷಿ ಗೋ ಆಧಾರಿತವಾದುದು. ಸಾವಯವ ಕೃಷಿಗೆ ಸೆಗಣಿ ಗಂಜಲ ಮುಖ್ಯ ಕಚ್ಛಾವಸ್ತು. ಹಾಲಿನ ಉತ್ಪಾದನೆಯನ್ನು ಗುರಿಯಾಗಿರಿಸದೆ ಪರಿಸರಕ್ಕೆ ಹೊಂದಿಕೊಳ್ಳುವ ಮಲೆನಾಡ ಗಿಡ್ಡ ತಳಿಯನ್ನೇ ಅವರು ಸಾಕಿದ್ದಾರೆ. ಸಗಣಿಯನ್ನು ಪ್ಲಾಸ್ಟಿಕ್ ಡ್ರಮ್ಮಿಗೆ ಸುರಿಯಲಾಗುತ್ತದೆ. ಅಲ್ಲಿಂದ ಗೋಬರ್ ಗ್ಯಾಸ್ ಘಟಕಕ್ಕೆ ಹೋಗುತ್ತದೆ. ಗೋಮಯ, ಅಡುಗೆಮನೆಯ ತ್ಯಾಜ್ಯ, ತ್ಯಾಜ್ಯಗಳಿಂದ ಜೈವಿಕ ಅನಿಲ ಉತ್ಪಾದಿಸಲಾಗುತ್ತದೆ. ಅಡುಗೆ ಇಂಧನ, ನೀರು ಬಿಸಿಮಾಡುವುದು, ವಿದ್ಯುತ್ ಉತ್ಪಾದನೆ ಹಾಗೂ ಬೆಳಕಿನ ವ್ಯವಸ್ಥೆಗೆ ಇದನ್ನು ಬಳಸಬಹುದಾಗಿದೆ. ಅಲ್ಲಿಂದ ತ್ಯಾಜ್ಯ ನೀರು ಸ್ಲರಿ ಮತ್ತೊಂದು ಟಾಂಕಿಯನ್ನು ಸೇರುತ್ತದೆ. ಆನಂತರ ನೀರಾವರಿ ಬಾವಿಯ ಸಮೀಪ ಮತ್ತೆ ಮೂರು ಟ್ಯಾಂಕಿಗಳನ್ನು ನಿರ್ಮಿಸಿದ್ದಾರೆ. ಮೊದಲ ಹಂತದಲ್ಲಿ ಸಂಸ್ಕರಿತ ನೀರು ಗೊಬ್ಬರ ಬಾವಿ ಬಳಿಯ ಮೊದಲ ಟ್ಯಾಂಕಿಗೆ ಬರುತ್ತದೆ. ಅಲ್ಲಿರುವ ಎರಡನೆಯ ಟ್ಯಾಂಕಿಗೆ ಬೋಲ್ಡçಸ್ ಕಲ್ಲುಗಳನ್ನು ಹಾಕಿ ಸಾವಯವ ಸಾರವನ್ನು ಮತ್ತಷ್ಟು ಶುದ್ಧೀಕರಿಸಿ ಇನ್ನೊಂದು ಟ್ಯಾಂಕಿಗೆ ಬಿಡಲಾಗುತ್ತದೆ. ಎಲ್ಲವೂ ಗುರುತ್ವಾಕರ್ಷಣೆಯ ಮೂಲಕ ನಡೆಯುತ್ತದೆ. ಗೊಬ್ಬರದ ಶುದ್ಧ ದ್ರವ ಸಾರ ಸಿದ್ಧವಾದ ಬಳಿಕ ವೆಂಚುರಿ ವ್ಯವಸ್ಥೆಯ ಮೂಲಕ ಅದನ್ನು ನೀರಾವರಿ ವ್ಯವಸ್ಥೆಗೆ ಸೇರಿಸಿ ತೋಟಕ್ಕೆ ವಿತರಿಸಲಾಗುತ್ತದೆ.

ಜೀವಾಮೃತ ಮತ್ತು ಇತರ ದ್ರವ ಗೊಬ್ಬರಗಳನ್ನು ನಿಯಮಿತವಾಗಿ ಕಲಸಲು ಟೈಮರ್ ಸ್ವಿಚ್ ಮತ್ತು ಏರ್ ಪಂಪ್ ಬಳಸಲಾಗಿದೆ. ಈ ವ್ಯವಸ್ಥೆಯು ದಿನಕ್ಕೆ ಮೂರು ಬಾರಿ ಸ್ವಯಂಚಾಲಿತವಾಗಿ ಗೊಬ್ಬರವನ್ನು ಕಲಸುವುದರ ಜೊತೆಗೆ ಗಾಳಿಯನ್ನೂ ಪೂರೈಸುತ್ತದೆ. ಇದರಿಂದ ಕಾರ್ಮಿಕ ವೆಚ್ಚ ಕಡಿಮೆಯಾಗುವುದರೊಂದಿಗೆ ಸೂಕ್ಷ್ಮಜೀವಿಗಳ ಚಟುವಟಿಕೆ ಉತ್ತಮವಾಗಲು ನೆರವಾಗುತ್ತದೆ.

ಜೈವಿಕ ಅನಿಲ ಘಟಕದಿಂದ ಹೊರಬರುವ ಸ್ಲರಿಯನ್ನೂ ಸಾವಯವ ಗೊಬ್ಬರವಾಗಿ ಬಳಸಲಾಗುತ್ತದೆ. ಪೋಷಕಾಂಶಗಳು ಮತ್ತು ಉಪಯುಕ್ತ ಸೂಕ್ಷ್ಮಜೀವಿಗಳಿಂದ ಸಮೃದ್ಧವಾಗಿರುವ ಈ ಉಪ ಉತ್ಪನ್ನವೂ ಕೃಷಿಗೆ ಉಪಯುಕ್ತವಾಗುತ್ತದೆ.

ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಬದಲಾವಣೆಯಾಗುವುದು ಅಂದರೆ ಗೊಬ್ಬರ ಬದಲಾವಣೆಯಲ್ಲ; ಕೃಷಿ ಪದ್ಧತಿಯಲ್ಲೂ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು. ತಂತ್ರಜ್ಞಾನದ ಬಳಕೆ ಅಗತ್ಯ. ಕಚ್ಚಾ ವಸ್ತುಗಳ ಸಂಗ್ರಹಣೆ, ಗೊಬ್ಬರ ತಯಾರಿಕೆ, ಕಲಸುವಿಕೆ ಮತ್ತು ವಿತರಣೆ ಮುಂತಾದ ಹಂತಗಳನ್ನು ಸ್ವಯಂಚಾಲಿತಗೊಳಿಸುವ ಮೂಲಕ ಕಾರ್ಮಿಕ ಅವಲಂಬನೆಯನ್ನು ಕಡಿಮೆ ಮಾಡಬಹುದು. ಜೀವಾಮೃತ, ಗೋ ಕೃಪಾಮೃತ, ಗೋ ನಂದಜಲ ಹಾಗೂ ಗೋಬರ್ ಗ್ಯಾಸ್ ಸ್ಲರಿಯಂತಹ ಸಾವಯವ ಗೊಬ್ಬರಗಳನ್ನು ಸರಳ ಸ್ವಯಂಚಾಲಿತ ವ್ಯವಸ್ಥೆಯೊಂದಿಗೆ ಸಂಯೋಜಿಸುವುದರಿಂದ ಕೃಷಿಯನ್ನು ಹೆಚ್ಚು ಉತ್ಪಾದಕ, ಆರ್ಥಿಕ ಮತ್ತು ಪರಿಸರ ಸ್ನೇಹಿಯಾಗಿಸುವ ಪ್ರಯತ್ನ ಇದಾಗಿದೆ. ಎಂಬುದು ನರಸಿಂಹ ಅವರು ಪ್ರಾಯೋಗಿಕವಾಗಿ ಕಂಡುಕೊಂಡ ಅನುಭವವಾಗಿದೆ.

ಆರಂಭದಲ್ಲಿ ಸ್ಲರಿ ಗೊಬ್ಬರವನ್ನು ನೇರವಾಗಿ ಅಡಿಕೆ ಗಿಡಗಳಿಗೆ ಬಿಡುತ್ತಿದ್ದುದರಿಂದ. ಸುಳಿಕೊಳೆಯುಂಟಾಗಿ ಹೊಸ ಅಡಿಕೆ ಗಿಡಗಳನ್ನು ಕಳೆದುಕೊಳ್ಳಬೇಕಾಯಿತು. ಈಗ ಆ ಸಮಸ್ಯೆಯಿಲ್ಲ. ಅವರಿಗೆ ಅಡಿಕೆ ತೋಟವಲ್ಲದೆ ತೆಂಗು, ಬಾಳೆ ಹಾಗೂ ತಾಳೆ ಕೃಷಿಯಿದೆ. ಹಣ್ಣಿನ ಗಿಡಗಳಿವೆ. ಸ್ಲರಿಯನ್ನು ಬಳಸಿ ತರಕಾರಿಯನ್ನು ಬೆಳೆಯುತ್ತಾರೆ.

ಭರವಸೆ ಮೂಡಿಸಿದ ತಾಳೆ ಕೃಷಿ

ನರಸಿಂಹ ಅವರು ಅಡಿಕೆ ಕೃಷಿಯನ್ನಷ್ಟೇ ನೆಚ್ಚಿಕೊಂಡಿಲ್ಲ. ಅಡಿಕೆಗೆ ಕಾಡುತ್ತಿರುವ ರೋಗ, ಬೆಲೆಯಲ್ಲಿನ ವ್ಯತ್ಯಯ, ಮೊದಲಾದುವುಗಳನ್ನು ಗಮನಿಸಿದರೆ ತಾಳೆ ಕೃಷಿ ಹೊಸ ಭರವಸೆಯನ್ನು ಮೂಡಿಸಿದೆ. ಸುಮಾರು ನಾಲ್ಕು ಎಕರೆಯಲ್ಲಿ ತಾಳೆ ಕೃಷಿ ಮಾಡಿದ್ದಾರೆ. ೨೭*೨೭ ಅಡಿ ಅಂತರದಲ್ಲಿ ನೆಟ್ಟಿದ್ದು ಮೂರನೆಯ ವರ್ಷದಲ್ಲಿ ಫಸಲು ಕಟಾವಿಗೆ ಬಂದಿದೆ. ಮಾರುಕಟ್ಟೆ ಸಮಸ್ಯೆಯಿಲ್ಲ. ಸಾವಯವದಲ್ಲೂ ಬೆಳೆಯಬಹುದು. ಕಾರ್ಮಿಕರು ಹೆಚ್ಚು ಬೇಕೆಂದೇನೂ ಇಲ್ಲ. ತಾಳೆ ಎಣ್ಣೆ ಆಹಾರ ಬಳಕೆಯಲ್ಲದೆ ಇಂಧನವಾಗಿಯೂ ಬಳಸಿಕೊಳ್ಳುವ ಅವಕಾಶಗಳಿವೆ. ಅಡಿಕೆಯಷ್ಟು ಅನಿಶ್ಚಿತೆ, ಮಾರುಕಟ್ಟೆ ಅಪಾಯಗಳಿಲ್ಲ. ಎನ್ನುತಾರೆ ನರಸಿಂಹ. ಪತ್ನಿ ಲತಾ ನೀಡುತ್ತಿರುವ ಬೆಂಬಲ, ಸಹಕಾರ ಮತ್ತು ತಾಯಿ ಸುನಂದಾ ಅವರ ಪ್ರೋತ್ಸಾಹವನ್ನು ಅವರು ನೆನೆಯುತ್ತಾರೆ.

ಇವರ ಸಾಧನೆಯನ್ನು ಗುರುತಿಸಿ ಕೃಷಿ ಇಲಾಖೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿದೆ. ಜೇಸಿ ಹಾಗೂ ಇತರ ಸಂಘಸಂಸ್ಥೆಗಳು ಸನ್ಮಾನಿಸಿವೆ. ಆತ್ಮ ಯೋಜನೆಯ ಸದಸ್ಯರು. ಭಾರತೀಯ ಕಿಸಾನ್ ಸಂಘದ ಸದಸ್ಯರಾಗಿದ್ದಾರೆ.. ಇವರ ಸ್ವಯಂ ಚಾಲಿತ ವ್ಯವಸ್ಥೆಯನ್ನು ನೋಡಲು ಇವರ ಕೃಷಿಕ್ಷೇತ್ರಕ್ಕೆ ಹಲವಾರು ಕೃಷಿಕರು ಭೇಟಿ ನೀಡುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಯಾಂತ್ರೀಕರಣ : ಕೃಷಿಯಲ್ಲಿನ ಕಾರ್ಮಿಕರ ಕೊರತೆಯನ್ನು ನೀಗಿಸಿಕೊಳ್ಳಲು ಯಾಂತ್ರೀಕರಣದ ಮೊರೆ ಹೋಗಿದ್ದಾರೆ. ಟ್ರಾö್ಯಕ್ಟರ್ , ಕಳೆಕೊಚ್ಚುವ ಯಂತ್ರ, ಚಾಪ್ಕಟ್ಟರ್, ತೆಂಗಿನ ನಾರು ಪುಡಿ ಮಾಡುವ ಯಂತ್ರ ಸೇರಿದಂತೆ ಕೆಲಸ ಕಡಿಮೆ ಮಾಡುವ ಹಲವು ಉಪಕರಣಗಳನ್ನು ಬಳಸಿಕೊಳ್ಳುತ್ತಾರೆ. ರಾಸಾಯನಿಕ ಗೊಬ್ಬರ ಬಳಕೆಯಿಂದಾಗುತ್ತಿದ್ದ ಆರ್ಥಿಕ ಹೊರೆ ಕಡಿಮೆಯಾಗಿದೆ. ಸಾವಯವ ಕೃಷಿಯಿಂದ ಫಸಲೇನೂ ಕಡಿಮೆಯಾಗಿಲ್ಲ.

ಮಾಹಿತಿಗೆ:9481472577

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group