spot_img
Saturday, September 26, 2026
spot_imgspot_img
- Advertisement -spot_img

ಕಿರು ಉದ್ಯಮ ಆರಂಭಿಸಿ, ಗ್ರಾಮೀಣ ಆರ್ಥಿಕತೆಗೆ ಸ್ಪೂರ್ತಿಯಾದರು: ಸ್ವಾವಲಂಬನೆಯ ಹಾದಿ ಹಿಡಿದ ಯುವಕನ ಸ್ಪೂರ್ತಿಕತೆ!

ಬರಹ : ರಾಧಾಕೃಷ್ಣ ತೊಡಿಕಾನ, ಚಿತ್ರ : ರಾಮ್ ಅಜೆಕಾರ್

ಉನ್ನತ ಶಿಕ್ಷಣ ಪಡೆದ ನಂತರ ಯುವ ಜನರು ಹೆಚ್ಚಾಗಿ ನಗರಗಳತ್ತ ಮುಖ ಮಾಡುವುದು ಇಂದಿನ ಪರಿಪಾಠ. ನಗರ ಪ್ರದೇಶಗಳಲ್ಲಿನ ಮುಲಭೂತ ಸೌಲಭ್ಯ, ಸುಲಭವಾದ ಮಾರುಕಟ್ಟೆ, ಸಂಪರ್ಕ ವ್ಯವಸ್ಥೆ ಸಾರಿಗೆ ಸೌಲಭ್ಯ ಉದ್ಯಮ ಆರಂಭಿಸಲು ಅಥವಾ ಉದ್ಯೋಗ ಮಾಡಲು ಸೂಕ್ತ ಎಂಬ ಭಾವನೆ ಬಹುತೇಕರಲ್ಲಿದೆ.  ಆದರೆ, ಈ ವ್ಯಾಮೋಹವನ್ನು ಬದಿಗೊತ್ತಿ, ತನ್ನ ಊರಿನಲ್ಲಿಯೇ  ಉದ್ಯಮದ ಬೀಜ ಬಿತ್ತಿ, ಗ್ರಾಮೀಣ ಆರ್ಥಿಕತೆಗೆ ಜೀವ ತುಂಬಲು ಪ್ರಯತ್ನಿಸುತ್ತಿರುವ ಯುವ ಉದ್ಯಮಿ ಕುಂದಾಪುರ ತಾಲೂಕಿನ ಸಿದ್ಧಾಪುರ ಗ್ರಾಮದ ಬಾಳೆಬೇರಿನ ಸಾಗರ ಶೆಟ್ಟಿ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ್ದ ಸಾಗರ್ ಶೆಟ್ಟಿ ಅವರಿಗೆ ನಗರದ ಬೃಹತ್ ಕಂಪನಿಯಲ್ಲಿ ಕೈತುಂಬಾ ಸಂಬಳ ತರುವ ಉದ್ಯೋಗವನ್ನು ಪಡೆಯುವುದು ಕಷ್ಟದ ಕೆಲಸವೇನಾಗಿರಲಿಲ್ಲ. ಅಥವಾ ತಮ್ಮ ಶಿಕ್ಷಣಕ್ಕೆ ಪೂರಕವಾಗಿ ಯಂತ್ರೋಪಕರಣಗಳಿಗೆ ಸಂಬಂಧಿಸಿದ ವ್ಯವಹಾರವನ್ನೇ  ಆರಂಭಿಸುವ ಅವಕಾಶವೂ ಇತ್ತು. ಆದರೆ ಅವರ ಚಿಂತನೆ ಭಿನ್ನವಾಗಿತ್ತು. ತಮ್ಮ ಊರಿನ ಸಮಾಜಕ್ಕೆ,  ಪರಿಸರಕ್ಕೆ ನೇರವಾಗಿ ನೆರವಾಗುವ ಕಿರು ಉದ್ಯಮ ಆರಂಭಿಸಬೇಕೆಂಬುದು ಅವರ ಕನಸಾಗಿತ್ತು.

ಕುಂದಾಪುರ ತಾಲೂಕಿನಲ್ಲಿ ಹೈನುಗಾರಿಕೆಯಿರುವುದು, ಮತ್ತು ರೈತರಿಗೆ ಪಶು ಆಹಾರದ ಅವಶ್ಯಕತೆಯಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಸಾಗರ್, ಪಶು ಆಹಾರ ತಯಾರಿಕೆಯನ್ನೇ ತಮ್ಮ ಉದ್ಯಮವಾಗಿ ಆಯ್ಕೆ ಮಾಡಿಕೊಂಡರು. ಹೀಗೆ ಉದ್ಯಮ ರೂಪವಾಗಿ ಆರಂಭವಾದುದು.  ‘ಬ್ರಾಹ್ಮಿ ಕ್ಯಾಟಲ್ ಫೀಡ್ಸ್’

ಕಳೆದ ಐದು ವರ್ಷಗಳ ಹಿಂದೆ ಅರಂಭವಾದ ಉದ್ಯಮ ಯಶಸ್ಸಿನ ಪಥದಲ್ಲಿ ಮುನ್ನಡೆದಿದೆ.  ಸಾಗರ್ ಅವರು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಜೋಳ, ರಾಗಿ ಸೇರಿದಂತೆ ಸುಮಾರು 13 ಬಗೆಯ ಪೌಷ್ಟಿಕ ಧಾನ್ಯಗಳನ್ನು ವೈಜ್ಞಾನಿಕವಾಗಿ ಮಿಶ್ರಣ ಮಾಡಿ, ಜಾನುವಾರುಗಳ ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಉತ್ಪಾದಿಸುತ್ತಿದ್ದಾರೆ. ಅಲ್ಲದೆ ತಮ್ಮಲ್ಲಿರುವ ದನಗಳಿಗೆ ಇದೇ ಆಹಾರವನ್ನು ನೀಡಿ ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ. ಯಂತ್ರೋಪಕರಣಗಳು ಹಾಗೂ ಆಧುನಿಕ ತಂತ್ರಜ್ಞಾನಕ್ಕಾಗಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಿದ್ದು, ಪ್ರಸ್ತುತ ಸುತ್ತಮುತ್ತಲ ನೂರಾರು ಹೈನುಗಾರರ ನೆಚ್ಚಿನ ಬ್ರ‍್ಯಾಂಡ್ ಆಗಿ ಬ್ರಾಹ್ಮಿ ಕ್ಯಾಟಲ್ ಫೀಡ್ಸ್ ಹೊರಹೊಮ್ಮಿದೆ.

ಗ್ರಾಮೀಣ ಆರ್ಥಿಕತೆಗೆ ಆಸರೆ

ಸಾಗರ್ ಶೆಟ್ಟಿ ಅವರ  ಶ್ರಮ ಕೇವಲ ಒಬ್ಬ ವ್ಯಕ್ತಿಯ ಉದ್ಯಮಕ್ಕೆ ಸೀಮಿತವಾಗಿ ಉಳಿದಿಲ್ಲ, ಬದಲಿಗೆ ಅದೊಂದು ಗ್ರಾಮೀಣ ಪರಿಸರದ ಹೈನುಗಾರರ ಅವಶ್ಯಕತೆಯಾಗಿದೆ. ಹಳ್ಳಿಯ ಯುವಕರು ಕೆಲಸ ಹುಡುಕಿಕೊಂಡು ನಗರಗಳಿಗೆ ಹೋಗುವುದನ್ನು ತಪ್ಪಿಸಿ, ಕೆಲಮಂದಿಗೆ ತಮ್ಮೂರಿನಲ್ಲೇ ಉದ್ಯೋಗ ನೀಡಿದ್ದಾರೆ. ಇದರಿಂದ ಹಳ್ಳಿಯ ಹಣ ಮತ್ತು ಸಂಪನ್ಮೂಲ ಹಳ್ಳಿಯಲ್ಲೇ ಚಲಾವಣೆಯಾಗುವಂತೆ  ಮಾಡಿ ಸ್ಥಳೀಯ ಆರ್ಥಿಕತೆಗೆ ಒತ್ತು ನೀಡಿದ್ದಾರೆ.

ಆರಂಭದಲ್ಲಿ ಈ ಉದ್ಯಮದಲ್ಲಿ ಹಲವು ಸವಾಲುಗಳಿದ್ದವು. ಉತ್ಪನ್ನದ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿದ್ದರು. ಆದರೆ ಈ ಪಶು ಆಹಾರವನ್ನು ಉಪಯೋಗಿಸಿದ ಹೈನುಗಾರರು ಭರವಸೆಯ ದಿಕ್ಕು ತೋರಿಸಿದರು. ಉತ್ತಮ ದರ್ಜೆಯ ಪಶು ಆಹಾರವನ್ನು ಸ್ಥಳೀಯವಾಗಿಯೇ ಪೂರೈಸುವ ಮೂಲಕ ಹೈನುಗಾರರ ವೆಚ್ಚ ಸ್ವಲ್ಪ ಮಟ್ಟಿಗೆ ತಗ್ಗಿತು.  ಹಾಲಿನ ಉತ್ಪಾದನೆ ಸಕಾರಾತ್ಮಕವಾಗಿತ್ತು. ಉದ್ಯಮವೆಂದರೆ ಕೇವಲ ಕಾಂಕ್ರೀಟ್ ಕಾಡುಗಳ ನಡುವೆ ಕಟ್ಟುವ ವ್ಯವಹಾರವಲ್ಲ. ಗ್ರಾಮೀಣ ಪರಿಸರಕ್ಕೆ ಹೊಂದಿಕೊಳ್ಳುವ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಆರಂಭಿಸಿದರೂ ಯಶಸ್ಸು ಗಳಿಸಬಹುದು ಎಂಬುದಕ್ಕೆ ಸಾಗರ್ ಶೆಟ್ಟಿ ಅವರ ಶ್ರಮವೇ ಸಾಕ್ಷಿ. ಇಂದಿನ ಯುವ ಪೀಳಿಗೆಗೆ ಇವರ ಈ ಸ್ವಾವಲಂಬನೆಯ ಹಾದಿ ಖಂಡಿತವಾಗಿಯೂ ಹೊಸ ಭರವಸೆ ಮತ್ತು ಪ್ರೇರಣೆಯನ್ನು ನೀಡುತ್ತದೆ. ಪಶು ಆಹಾರವನ್ನು  ಸ್ಥಳೀಯರಿಗೆ ಅಲ್ಲದೆ ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಮಾರಾಟದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಾಹಿತಿಗೆ -963241981

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group