spot_img
Friday, September 18, 2026
spot_imgspot_img

ಜಾನುವಾರುಗಳನ್ನು ಕಾಡುವ ಕಂದು ರೋಗದ ತಡೆಗೆ ಲಸಿಕೆ ಹಾಕಿಸಿ! ರಾಜ್ಯದ ಪಶುಸಂಗೋಪನಾ ಇಲಾಖೆಯಿಂದ ಸಾಮೂಹಿಕ ಲಸಿಕಾ ಕಾರ್ಯಕ್ರಮ

​ರಾಜ್ಯ ಸರಕಾರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ಕಂದುರೋಗದ ಲಸಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ರಾಜ್ಯವನ್ನು ಸಂಪೂರ್ಣ ಕಂದು ರೋಗ ಮುಕ್ತ ಮಾಡುವ ಪ್ರಯತ್ನಕ್ಕೆ ಇಲಾಖೆ ಮುಂದಾಗಿದೆ

​ಕಂದು ರೋಗಕ್ಕೆ (ಬ್ರೂಸೆಲ್ಲೋಸಿಸ್)
​ತುತ್ತಾಗುವ ಪ್ರಾಣಿಗಳು: ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಒಂಟೆ ಮತ್ತು ಕುದುರೆಗಳು.
​ರೋಗ ಲಕ್ಷಣಗಳು: ಗರ್ಭಪಾತದ ಮೊದಲು ಜನನೇಂದ್ರಿಯದಿಂದ ಬಿಳಿ ಸ್ರಾವ.​ಗರ್ಭ ಧರಿಸಿದ ಹಸು, ಎಮ್ಮೆಗಳಲ್ಲಿ ಕೊನೆಯ ತ್ರೈಮಾಸಿಕದಲ್ಲಿ ಗರ್ಭಪಾತ,​ಮಾಸು / ಸತ್ತೆ ಹೊರಬಿಳದೆ ಗರ್ಭದಲ್ಲೇ ಉಳಿದು ಗರ್ಭಾಶಯವನ್ನು ಹಾಳುಗೆಡವುತ್ತದೆ, ​ಕೀಲುಗಳಲ್ಲಿ ನೀರು ತುಂಬಿಕೊಂಡು ಊತ ಮೊದಲಾದ ರೋಗ ಲಕ್ಷಣಗಳು ಕಂಡುಬರುತ್ತವೆ

ಕಂದು ರೋಗದಿಂದ ಹರಡುವ ರೀತಿ:
​ಕಲುಷಿತಗೊಂಡ ಆಹಾರ ಮತ್ತು ನೀರು ಸೇವಿಸುವುದರಿಂದ ಹಾಗೂ ಕಣ್ಣು ಮತ್ತು ಚರ್ಮದ ಮುಖಾಂತರ, ಕೃತಕ ಗರ್ಭಧಾರಣೆಯಲ್ಲಿ ಸೋಂಕಿತ ವೀರ್ಯಗಳ ಉಪಯೋಗದಿಂದ, ರೋಗಗ್ರಸ್ತ ಹೋರಿಗಳಿಂದ ತಳಿ ಸಂವರ್ಧನೆ ಮಾಡುವುದರಿಂದ ಈ ರೋಗವು ಜಾನುವಾರುಗಳಲ್ಲಿ ಹರಡುತ್ತದೆ, ​ರೋಗಗ್ರಸ್ಥ ಜಾನುವಾರುಗಳ ಗರ್ಭಸ್ರಾವ ಹಾಗೂ ಮಾಸುಗಳಲ್ಲಿ ರೋಗಾಣುಗಳು ಕಂಡುಬರುತ್ತದೆ. ಅಂತಹ ರಾಸುಗಳ ಚಿಕಿತ್ಸೆಯಲ್ಲಿ ನಿರತರಾದವರು, ಹೈನುಗಾರರು ಈ ಖಾಯಿಲೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು.

​ಜಾನುವಾರುಗಳಲ್ಲಿ ಈ ರೋಗದ ನಿಯಂತ್ರಣ:
​ವರ್ಷಕ್ಕೊಮ್ಮೆ ಆರೋಗ್ಯವಂತ ರಾಸುಗಳಲ್ಲಿ ರೋಗದ ಪರೀಕ್ಷೆ ಮಾಡಿಸುವುದು. ರೋಗಗ್ರಸ್ತ ಹೋರಿಗಳಿಂದ ರೋಗ ಪ್ರಸಾರವಾಗುವುದನ್ನು ತಡೆಗಟ್ಟಲು ಆಕಳು ಮತ್ತು ಎಮ್ಮೆಗಳಲ್ಲಿ ಸೋಂಕುರಹಿತ ವೀರ್ಯಗಳನ್ನು ಬಳಸಿ ಕೃತಕ ಗರ್ಭಧಾರಣೆಗೆ ಪ್ರೋತ್ಸಾಹ ನೀಡಬೇಕು.

​ಪ್ರತಿಬಂಧಕೋಪಾಯವಾಗಿ 4 ರಿಂದ 8 ತಿಂಗಳು ಪ್ರಾಯದ ಹಸು ಮತ್ತು ಎಮ್ಮೆಗಳ ಹೆಣ್ಣು ಕರುಗಳಿಗೆ ತಪ್ಪದೇ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರವೇ ಲಸಿಕೆ ಹಾಕಿಸಬೇಕು. ​ಗರ್ಭಪಾತವಾದ ಭ್ರೂಣ, ಮಾಸು, ಸ್ರಾವ ಇತ್ಯಾದಿಗಳನ್ನು ದೂರ ಕೊಂಡೊಯ್ದು ಆಳವಾಗಿ ಹೂಳಬೇಕು ಅಥವಾ ಸುಡಬೇಕು. ಸತ್ತ ರಾಸುಗಳನ್ನು ಆಳವಾಗಿ ಹೂಳಬೇಕು. ಕೊಟ್ಟಿಗೆ ಹಾಗೂ ಗರ್ಭಪಾತವಾದ ಸ್ಥಳವನ್ನು ಸೋಂಕುನಾಶಕ ದ್ರಾವಣದಿಂದ ಶುಚಿಗೊಳಿಸಬೇಕು. ರೋಗಮುಕ್ತವಾಗಿರುವ ಹಿಂಡಿನಿಂದಲೇ ಹಸುಗಳನ್ನು ಖರೀದಿಸಬೇಕು.
​ಹೊಸದಾಗಿ ಖರೀದಿಸಿದ ರಾಸುಗಳನ್ನು ಕನಿಷ್ಠ 30 ದಿನಗಳವರೆಗೆ ಉಳಿದ ರಾಸುಗಳಿಂದ ದೂರವಿರಿಸಬೇಕು. (ನಿಗಾ ಘಟಕದಲ್ಲಿರಿಸಬೇಕು). ಬ್ರೂಸೆಲ್ಲೋಸಿಸ್ ಇರಬಹುದೆಂದು ಸಂಶಯಿಸಿದ ಸಂದರ್ಭದಲ್ಲಿ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಿ ರೋಗದ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಅಥವಾ ರೋಗ ಪತ್ತೆಗೆ ಕಾಲಕಾಲಕ್ಕೆ ಹಾಲಿನ ಪರೀಕ್ಷೆ ಮಾಡಿಸಬೇಕು. (ವರ್ಷಕ್ಕೆ ಕನಿಷ್ಠ 2 ಬಾರಿ).

​ಲಸಿಕೆಯಿಂದ ಆಗುವ ಅನುಕೂಲಗಳು:
​ಜಾನುವಾರುಗಳಲ್ಲಿ ಗರ್ಭಪಾತವಾಗುವುದನ್ನು ತಡೆಗಟ್ಟಬಹುದು. ಒಮ್ಮೆ ಲಸಿಕೆ ಹಾಕಿದರೆ ರಾಸಿನ ಜೀವಿತಾವಧಿಯವರೆಗೆ ಕಂದುರೋಗದಿಂದ ರಕ್ಷಣೆ. ಜಾನುವಾರುಗಳ ಹಿಂಡಿನಲ್ಲಿ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ.

​ಪಶುಸಂಗೋಪನಾ ಇಲಾಖೆಯ ವತಿಯಿಂದ ಸಾಮೂಹಿಕ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ರಾಜ್ಯಾದ್ಯಂತ 4 ರಿಂದ 8 ತಿಂಗಳ ಪ್ರಾಯದ ಹೆಣ್ಣು ಎಮ್ಮೆ ಮತ್ತು ಹಸು ಕರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ.

-ಮಾಹಿತಿ : ಸಹಾಯಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ ಕಾರ್ಕಳ ತಾಲೂಕು

ಈ ಲೇಖನಗಳನ್ನೂ ಓದಿ

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group