-ಡಾ. ಜಿ. ಶರಶ್ಚಂದ್ರ ರಾನಡೆ ಬೆಂಗಳೂರು
ಸಣ್ಣ ಮತ್ತು ಅತೀ ಸಣ್ಣ ರೈತರ ಆದಾಯವನ್ನು ಹೆಚ್ಚಿಸಲು ಆಧಿಕ ಮೌಲ್ಯದ ಕೃಷಿಗೆ ಒತ್ತುನೀಡುವಂತೆ ರೈತರನ್ನು ಉತ್ತೇಜಿಸಲು ಕೇಂದ್ರ ಸರಕಾರ ಕೆಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಈವರೆಗೂ ಭತ್ತ, ಗೋಧಿ ಸೇರಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಇನ್ನು ಮುಂದೆ ಹೆಚ್ಚು ಆದಾಯ ತಂದು ಕೊಡುವ ಬೆಳೆಯ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾ ನೀಡಲು ಕೇಂದ್ರ ಸರಕಾರ ಮುಂದಾಗಿದೆ
ತೆಂಗು ಮತ್ತು ಶ್ರೀಗಂಧ ಬೆಳೆಗೆ ಪ್ರೋತ್ಸಾಹ
ಕೃಷಿ ಉತ್ಪನ್ನಗಳನ್ನು ವೈವಿಧ್ಯಗೊಳಿಸಿ ಉತ್ಪಾದನೆಯನ್ನು ಅಧಿಕಗೊಳಿಸಿ ರೈತರ ಆದಾಯವನ್ನು ಹೆಚ್ಚಿಸಲು ತೆಂಗು ಹಾಗೂ ಶ್ರೀಗಂಧ ಬೆಳೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಧಿಕ ಪ್ರಮಾಣದ ಮೌಲ್ಯವರ್ಧನೆಗೆ ಅವಕಾಶವಿರುವ ಬೆಳೆಗಳು ರೈತರಿಗೆ ವರದಾನವಾಗಿವೆ. ಪ್ರಾಕೃತಿಕ ವಿಪತ್ತಿನ ಮಧ್ಯೆಯೂ ಲಾಭ ತಂದು ಕೊಡುವ ಈ ಬೆಳೆಗಳು ಅನ್ನದಾತನ ಕೈಹಿಡಿಯಲಿವೆ
ಕರಾವಳಿ ರಾಜ್ಯಗಳಿಗೆ ಹೆಚ್ಚಿನ ಲಾಭ
ಕರ್ನಾಟಕ ಸೇರಿ ಕರಾವಳಿ ಪ್ರದೇಶ ಹೊಂದಿರುವ ಒಂಬತ್ತು ರಾಜ್ಯಗಳಲ್ಲಿ ವಿಶೇಷವಾಗಿ ತೆಂಗು ಬೆಳೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ದೊಡ್ಡ ಮಟ್ಟದಲ್ಲಿ ಉದ್ಯೋಗ ಅವಕಾಶವನ್ನು ಕಲ್ಪಿಸುವ ಕಲ್ಪವೃಕ್ಷದ ಕೃಷಿ ರೈತರಿಗೆ ಲಾಭದಾಯಕವಾಗಿ ಪರಿಣಮಿಸಿದೆ
ಗೋಡಂಬಿ, ಶ್ರೀಗಂಧ ಗೋಡಂಬಿಗೆ ಮಾರುಕಟ್ಟೆ ಸೌಲಭ್ಯ
ಗೋಡಂಬಿ, ಶ್ರೀಗಂಧ, ಬಾದಾಮಿಗೆ ಹೊಸ ಮಾರುಕಟ್ಟೆ ಸೃಷ್ಟಿಸಲು ವೇದಿಕೆ ಕಲ್ಪಿಸಲಾಗಿದೆ. ಹೆಚ್ಚಿನ ಮೌಲ್ಯದ ಈ ಬೆಳೆಗಳ ಕೃಷಿ ಕೈಗೊಳ್ಳುವವರಿಗೆ ನೆರವಾಗಲು ಸರಕಾರ ಪ್ರತ್ಯೇಕ ಅನುದಾನವನ್ನು ಮೀಸಲಿಡುವ ಘೋಷಣೆ ಮಾಡಿದೆ.
ಈಶಾನ್ಯ ರಾಜ್ಯಗಳಲ್ಲಿ ಅಗರ್-ಮರ ಬೆಳೆಯಲು ಪ್ರೋತ್ಸಾಹ
ಈಶಾನ್ಯ ರಾಜ್ಯಗಳಲ್ಲಿ ಅಗರ್ ಮರಗಳು ಹಾಗೂ ಗಿರಿ ಪ್ರದೇಶಗಳಲ್ಲಿ ಬಾದಾಮಿ, ವಾಲ್ನೆಟ್ ಮತ್ತು ಫೈನ್ ಬೀಜಗಳನ್ನು ಬೆಂಬಲಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಕೃಷಿಕರಿಗೆ ಉತ್ತೇಜನ ನೀಡುವ ಸಂಕಲ್ಪವನ್ನು ಕೈಗೊಳ್ಳಲಾಗಿದೆ
ತೆಂಗು ಉತ್ತೇಜನ ಯೋಜನೆ
ಭಾರತವು ವಿಶ್ವದ ಅತಿ ದೊಡ್ಡ ತೆಂಗು ಉತ್ಪಾದನಾ ಉತ್ಪಾದಕ ರಾಷ್ಟ್ರವಾಗಿದೆ. 1೦ ದಶಲಕ್ಷ ರೈತರು ಸೇರಿ ಅಂದಾಜು 3೦ಲಕ್ಷ ಜನರು ತಮ್ಮ ಜೀವನಕ್ಕಾಗಿ ತೆಂಗು ಬೆಳೆಯನ್ನು ಅವಲಂಬಿಸಿದ್ದಾರೆ. ತೆಂಗು ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಲು ತೆಂಗು ಉತ್ತೇಜನ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಹಳೆಯ ಮತ್ತು ಉತ್ಪಾದಕವಲ್ಲದ ಮರಗಳನ್ನು ಪ್ರಮುಖವಾಗಿ ತೆಂಗು ಬೆಳೆಯುವ ರಾಜ್ಯಗಳಲ್ಲಿ ಹೊಸ ಸಸಿ ಪ್ರಭಾವ ಪ್ರಭೇದಗಳೊಂದಿಗೆ ಬದಲಾಯಿಸುವುದು ಸೇರಿ ರೈತರ ಸಶಕ್ತಿಕರಣ ಗೊಳಿಸುವ ಗುರಿಯನ್ನು ಹೊಂದಲಾಗಿದೆ
ಕೋಕೊ ಮತ್ತು ಗೋಡಂಬಿ ಜಾಗತಿಕ ಬ್ರಾö್ಯಂಡ್‌ಗಳಾಗಿ ಪರಿವರ್ತಿಸುವ ಕಾರ್ಯಕ್ರಮ
2020 ರ ವೇಳೆಗೆ ಕಚ್ಚಾ ಗೋಡಂಬಿ ಮತ್ತು ಕೋಕೋ ಉತ್ಪಾದನೆ ಹಾಗೂ ಸಂಸ್ಕರಣೆ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಭಾರತೀಯ ಗೋಡಂಬಿ, ಕೋಕೊವನ್ನು ಪ್ರೀಮಿಯಂ ಜಾಗತಿಕ ಬ್ರಾಂಡ್ ಗಳಾಗಿ ಪರಿವರ್ತಿಸಲು ಕಾರ್ಯಕ್ರಮ ರೂಪಿಸುವ ಆಶಯವನ್ನು ಹೊಂದಲಾಗಿದೆ
ಶ್ರೀಗಂಧ ಬೆಳೆಯಲ್ಲಿ ರಾಜ್ಯ ಸರಕಾರದೊಂದಿಗೆ ಪಾಲುದಾರಿಕೆ
ಶ್ರೀಗಂಧವು ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ದೇಶದ ಶ್ರೀಗಂಧದ ಪರಿಸರ ವ್ಯವಸ್ಥೆಯನ್ನು ವೈಭವದೊಂದಿಗೆ ಪುನರ್ ಸ್ಥಾಪಿಸಲು ಕೇಂದ್ರೀಕೃತ ಕೃಷಿ ಹಾಗೂ ಕೊಯ್ಲು ನಂತರದ ಸಂಸ್ಕರಣೆಯನ್ನು ಪ್ರೋತ್ಸಾಹಿಸಲು ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ಪಾಲುದಾರಿಕೆ ಹೊಂದುವ ಆಶಯವನ್ನು ವ್ಯಕ್ತಪಡಿಸಿದೆ. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇಕಡ 9೦ರಷ್ಟು ಪಾಲು ಹೊಂದಿರುವ ಕರ್ನಾಟಕ ಮತ್ತು ತಮಿಳುನಾಡು ಭಾಗದ ಶ್ರೀಗಂಧ ಬೆಳೆಯುವ ರೈತರಿಗೆ ಇದರಿಂದ ವರದಾನವಾಗುವ ನಿರೀಕ್ಷೆ ಇದೆ.
ಭಾರತ್ ವಿಸ್ತಾರ್ ಕಾರ್ಯಕ್ರಮ ಆರಂಭ
ಅಗ್ರಿ ಸ್ಟಾಕ್ ಪೋರ್ಟೆಲ್ಗಳ ಮತ್ತು ಪದ್ಧತಿಗಳ ಕುರಿತಾದ ಭಾರತೀಯ ಕೃಷಿ ಸಂಶೋಧನಾ ಕೇಂದ್ರದ (ಐಸಿಎಆರ್) ಪ್ಯಾಕೇಜ್ ಅನ್ನು ಎಐ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಬಹುಭಾಷಾ ಎಐ ಸಾಧನ “ಭಾರತ್ ವಿಸ್ತಾರ್” ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಇದು ಇಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವುದಲ್ಲದೆ ರೈತರಿಗೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ವೇದಿಕೆಯನ್ನು ಕಲ್ಪಿಸಲಾಗಿದೆ. ಹಳೆಯ ಕಡಿಮೆ ಇಳುವರಿ ನೀಡುವ ತೋಟಗಳನ್ನು ಪುನರ್ಜೀವನಗೊಳಿಸಲು ಮತ್ತು ವಾಲ್ನಟ್, ಬಾದಾಮಿ ಮತ್ತು ಫೈನ್ ಬೀಜಗಳ ಹೆಚ್ಚಿನ ಸಾಂದ್ರತೆ ಕೃಷಿಯನ್ನು ವಿಸ್ತರಿಸಲು ರೈತರ ಆದಾಯವನ್ನು ಹೆಚ್ಚಿಸಲು ಹಾಗೂ ಯುವಕರನ್ನು ತೊಡಗಿಸಿಕೊಳ್ಳುವ ಮೂಲಕ ಈ ಮೌಲ್ಯವರ್ಧನೆಗಾಗಿ ಕೃಷಿ ಸಂಪನ್ಮೂಲ ಮತ್ತು ಸಂಯೋಜಿತ ವ್ಯವಸ್ಥೆಯನ್ನು ಒಳಗೊಂಡ ಭಾರತ್ ವಿಸ್ತಾರ್ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತದೆ
ಚಹಾ ತೋಟಗಳ ಕಾರ್ಮಿಕರಿಗೆ ನೆರವು
ಚಹಾ ತೋಟಗಳ ಕಾರ್ಮಿಕರಿಗಾಗಿ ರೂಪಿಸಲಾಗಿದ್ದ “ಪ್ರಧಾನ ಮಂತ್ರಿ ಪ್ರೋತ್ಸಾಹನ್ ಪ್ರೋತ್ಸಾಹನ್” ಯೋಜನೆಯನ್ನು ಮತ್ತೊಂದು ವರ್ಷ ವಿಸ್ತರಿಸಲಾಗಿದೆ. ಚಹಾ ತೋಟಗಳ ಕಾರ್ಮಿಕರ ಅಗತ್ಯತೆಗಳನ್ನು ಆಧರಿಸಿ ಯೋಜನೆಯ ಫಲಾನುಭಗಳನ್ನು ಆಯ್ಕೆ ಮಾಡಲಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸಲಾಗಿಸುತ್ತಿದ್ದು ಯೋಜನೆಯ ಭಾಗವಾಗಿ ಕಾರ್ಮಿಕರಿಗೆ ಪಿಂಚಣಿ ಮತ್ತು ವಿಮಾ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ
ಕೃಷಿ ಸಹಕಾರಿ ಸಂಘಗಳಿಗೆ ತೆರಿಗೆ ವಿನಾಯಿತಿ ವಿಸ್ತರಣೆ
ಹಾಲು, ಎಣ್ಣೆ ಬೀಜ, ಹಣ್ಣು ಅಥವಾ ತರಕಾರಿ ಸಂಗ್ರಹಿಸುವ ಅಥವಾ ಬೆಳೆಯುವ ಸದಸ್ಯರನ್ನು ಹೊಂದಿರುವ ಪ್ರಾಥಮಿಕ ಸಹಕಾರಿ ಸಂಘಗಳಿಗೆ ತೆರಿಗೆ ಕಡಿತ ಸೌಲಭ್ಯವನ್ನು ಈಗಾಗಲೇ ಒದಗಿಸಲಾಗಿದೆ. ಅದನ್ನು ಪಶು ಆಹಾರ ಸರಬರಾಜುದಾರರು ಮತ್ತು ಹತ್ತಿ ಬೀಜ ಉತ್ಪಾದಕರಿಗೆ ವಿಸ್ತರಿಸಲು ಯೋಜಿಸಲಾಗಿದೆ. ಅಂತರ್ ಸಹಕಾರಿ ಸಂಘಗಳ ಲಾಭಾಂಶದಿಂದ ಬರುವ ಆದಾಯವನ್ನು ಹೊಸ ತೆರಿಗೆ ವ್ಯವಸ್ಥೆ ಅಡಿ “ಡಿಡಕ್ಷನ್”ಎಂದು ಪರಿಗಣಿಸಲಾಗುತ್ತದೆ. 2026 ರ ಜನವರಿ 31 ರವರೆಗೆ ಮಾಡಿದ ಹೂಡಿಕೆಗಳ ಮೇಲೆ ಪಡೆದ ಡಿವಿಡೆಂಡ್ ಆದಾಯಕ್ಕೆ ವಿನಾಯಿತಿಯನ್ನು ಮಾಡಲಾಗುತ್ತದೆ.
ಪಶು ವೈದ್ಯಕೀಯ ವೃತ್ತಿಪರರ ಸಂಖ್ಯೆ ಹೆಚ್ಚಳಕ್ಕೆ ಕ್ರಮ
ಹೈನುಗಾರಿಕೆ, ಮೀನುಗಾರಿಕೆ, ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಒಳಗೊಂಡ ಗರಿಷ್ಠ ಮೌಲ್ಯದ ಕೃಷಿ ವಲಯಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಲಾಗಿದೆ. ಪಶುವೈದ್ಯಕೀಯ ವೃತ್ತಿಪರರು ಆಸ್ಪತ್ರೆಗಳ ಲಭ್ಯತೆಯನ್ನು ಹೆಚ್ಚಿಸಲು ವಿಶೇಷ ಯೋಜನೆಯನ್ನು ರೂಪಿಸಲಾಗಿದೆ. ಕೃಷಿ ಆದಾಯದಲ್ಲಿ ಪಶುಸಂಗೋಪನಾ ವಲಯದಿಂದ ಶೇಕಡ 16 ರಷ್ಟು ದೊರೆಯುತ್ತದೆ. ಹಾಗಾಗಿ ಈ ವಲಯಕ್ಕೆ ನಿಟ್ಟಿನಲ್ಲಿ 2೦,೦೦೦ಕ್ಕೂ ಹೆಚ್ಚು ಪಶು ವೈದ್ಯಕೀಯ ವೃತ್ತಿಪರರು ಲಭ್ಯವಾಗುವಂತ ಯೋಜನೆಯನ್ನು ರೂಪಿಸಲಾಗಿದೆ ಈ ಯೋಜನೆ ಅಡಿ ಪಶುವೈದ್ಯಕೀಯ ಮತ್ತು ಪ್ಯಾರಾ ಪಶು ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಸ್ಥಾಪಿಸಲಾಗುತ್ತದೆ
ನೀಲಿ ಕ್ರಾಂತಿಗಾಗಿ ಸುಂಕಮುಕ್ತದ ಕೊಡುಗೆ
ಮೀನುಗಾರಿಕೆ ರಫ್ತು ಮತ್ತು ದೇಶೀಯ ಸಂಸ್ಕರಣೆ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು 1962 ರಲ್ಲಿ ತಂದಿದ್ದ ಕಸ್ಟಮ್ಸ್ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ವಿಶೇಷ ಆರ್ಥಿಕ ವಲಯ ಮತ್ತು ಎತ್ತರ ಸಮುದ್ರ ಸೇರಿದಂತೆ ಪ್ರಾದೇಶಿಕ ನೀರಿನ ಆಚೆಗೆ ಭಾರತೀಯ ಹಡಗುಗಳು ಹಿಡಿದ ಮೀನಿಗೆ ಸುಂಕವನ್ನು ಮುಕ್ತಗೊಳಿಸಿ ಆಮದಿಗೆ ಅನುಮತಿಸಲಾಗಿದೆ. ವಿದೇಶಿ ಬಂದರುಗಳಲ್ಲಿ ಇಳಿಸುವ ಮೀನುಗಳನ್ನು ರಫ್ತು ಎಂದು ಪರಿಗಣಿಸಲಾಗುತ್ತದೆ. ಇದು ಭಾರತೀಯ ಮೀನುಗಾರರಿಗೆ ಕರಾವಳಿ ಪ್ರದೇಶದ ಆಚೆಗೆ ಸಮುದ್ರ ಸಂಪನ್ಮೂಲಗಳನ್ನು ಬಳಸಿಕೊಂಡು ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದೆ ವೇಳೆ ಮೀನು ಹಿಡಿಯುವಿಕೆ ಸಾಗಾಣೆ ಮತ್ತು ಸಾಗಾಟದ ದುರುಪಯೋಗ ತಡೆದುಕೊಳ್ಳಲು ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳಲಾಗಿದೆ
ಮೀನು ಕೃಷಿಕರಿಗೆ ಅನುಕೂಲ
11099 ಕಿ ಮೀ ವಿಸ್ತಾರವಾದ ಕರಾವಳಿ ಮತ್ತು 24 ಲಕ್ಷ ಚದರ ಕಿ.ಮೀ ವಿಸ್ತೀರ್ಣದ ವಿಶೇಷ ಆರ್ಥಿಕ ವಲಯದಲ್ಲಿ ಭಾರತವು 13 ಕಡಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೀನುಗಾರಿಕಾ ಸಮದಾಯದ 5೦ಲಕ್ಷಕ್ಕೂ ಹೆಚ್ಚು ಸದಸ್ಯರಿಗೆ ಜೀವನೋಪಾಯವನ್ನು ಒದಗಿಸುತ್ತದೆ
ಆಹಾರ ಸಂಸ್ಕರಣೆ ಸಂಸ್ಕರಣೆಗೆ ಪ್ರೋತ್ಸಾಹ
ಆಹಾರ ಸಂಸ್ಕರಣೆಗೆ 4064.16 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚುವರಿ ಅನುದಾನವನ್ನು ಒದಗಿಸಲಾಗಿದೆ
10000 ಹೊಸ ಡೈರಿ ಸ್ಥಾಪನೆ
ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಕ್ಕೆ (ಎನ್‌ಪಿಡಿಡಿ) ಒಂದು ಸಾವಿರ ಕೋಟಿ ರೂ ಅನುದಾನವನ್ನು ನಿಗದಿಪಡಿಸಲಾಗಿದೆ. ಪರಿಷ್ಕೃತ (ಎನ್ ಪಿಡಿಡಿ) ಯೋಜನೆಯಲ್ಲಿ ಹಾಲು ಸಂಗ್ರಹ ಸಂಸ್ಕರಣಾ ಸಾಮರ್ಥ್ಯ ಗುಣಮಟ್ಟ ನಿಯಂತ್ರಣ ಡೈರಿ ಮೂಲ ಸೌಕರ್ಯ ಅಭಿವೃದ್ಧಿ, ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ ಸಹಭಾಗಿತ್ವದಲ್ಲಿ ಸಹಕಾರ ಸಂಸ್ಥೆ ಮತ್ತು ೧೦೦೦೦ ಹೊಸ ಡೈರಿ ತೆರೆಯುವ ಗುರಿಯನ್ನು ಹೊಂದಲಾಗಿದೆ
ಜವಳಿ ಕ್ಷೇತ್ರಕ್ಕೆ ಆಧುನೀಕರಣದ ಸ್ಪರ್ಶ
ಭಾರತದ ಸಾಂಪ್ರದಾಯಿಕ ಜವಳಿ ಉದ್ಯಮ ಮತ್ತು ಉದಯೋನ್ಮುಖ ಎಲೆಕ್ಟ್ರಾನಿಕ್ಸ್, ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೇಂದ್ರ ಸರಕಾರವು ಅನೇಕ ಮಹತ್ವದ ಯೋಜನೆಗಳಲ್ಲಿ ಘೋಷಣೆ ಮಾಡಿದೆ. ಈ ಎರಡೂ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ರಫ್ತು ಹೆಚ್ಚಳ ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜವಳಿ ವಲಯವು ದೇಶದ ಅತಿ ದೊಡ್ಡ ಉದ್ಯೋಗದಾತ ಕ್ಷೇತ್ರಗಳಲ್ಲಿ ಒಂದಾಗಿದ್ದು ಈ ಬಾರಿ ಸಮಗ್ರ ಕಾರ್ಯಕ್ರಮದಡಿ ಐದು ಪ್ರಮುಖ ಉಪ ವಿಭಾಗವನ್ನು ಘೋಷಣೆ ಮಾಡಲಾಗಿದೆ. ಅವುಗಳೆಂದರೆ ನವೀನ ಫೈಬರ್ ವಿಷನ್ ಮತ್ತು ಸೆಣಬಿನಂತಹ ನೈಸರ್ಗಿಕ ನಾರುಗಳಲ್ಲಿ ಸ್ವಾವಲಂಬನೆ ಸಾಧಿಸಲು ರಾಷ್ಟ್ರೀಯ ನಾರು ಕಾರ್ಯಕ್ರಮವನ್ನು ಘೋಷಿಸಲಾಗಿದೆ ಸಾಂಪ್ರದಾಯಿಕ ಜವಳಿ ಪ್ರದೇಶದಲ್ಲಿ ಆಧುನೀಕರಿಸಲು ಮತ್ತು ಯಂತ್ರೋಪಕರಣಗಳಿಗೆ ಬೆಂಬಲ ನೀಡಲು ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ ಜಾರಿಗೆ ತರಲಾಗಿದೆ
ರಾಷ್ಟ್ರೀಯ ಕೈಮಗ್ಗ ಮತ್ತು ಕರಕುಶಲ ಕಾರ್ಯಕ್ರಮದ ಮೂಲಕ ಅನೇಕ ಕುಶಲಕರ್ಮಿಗಳಿಗೆ ಬೆಂಬಲವನ್ನು ನೀಡಿ ಆದಾಯವನ್ನು ಹೆಚ್ಚಿಸುವುದು ಭಾರತದ ಸಮೃದ್ಧ ಜವಳಿ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಸಾಂಪ್ರದಾಯಿಕ ಕೈಗಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಲಾಗಿದೆ
ಟೆಕ್ಸ್ ಈಕೋ ಇನಿಷಿಯೇಟಿವ್ ಕಾರ್ಯಕ್ರಮದ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಮತ್ತು ಸುಸ್ಥಿರ ಜವಳಿ ಮತ್ತು ಉಡುಪುಗಳ ಉತ್ಪಾದನೆ ಉತ್ತೇಜಿಸುವ ಗುರಿಯನ್ನು ಹೊಂದಲಾಗಿದೆ. ಜವಳಿ ಕ್ಷೇತ್ರದಲ್ಲಿ ಕೌಶಲ ಹೆಚ್ಚಿಸಲು ಸಮರ್ಥ 2.0 ಯೋಜನೆಯನ್ನು ಉದ್ಯಮಗಳ ಸಹಯೋಗದಿಂದ ಆರಂಭಿಸಲಾಗಿದೆ
ಖಾದಿ ಕೈಮಗ್ಗಕ್ಕೆ ಪ್ರೋತ್ಸಾಹ
ಜವಳಿ ಗಾರ್ಮೆಂಟ್ಸ್ ರಫ್ತುದಾರರಿಗೆ ಉತ್ಪನ್ನವನ್ನು ರಫ್ತು ಮಾಡಲು ನೀಡಲಾಗಿದ್ದ ಕಾಲಾವಧಿಯನ್ನು ಆರು ತಿಂಗಳಿAದ ಒಂದು ವರ್ಷಕ್ಕೆ ಹೆಚ್ಚಿಸಲಾಗಿದೆ. ಸ್ಪರ್ಧಾತ್ಮಕ ಮಾದರಿಯಲ್ಲಿ ದೇಶಾದ್ಯಂತ ಬೃಹತ್ ಜವಳಿ ಪಾರ್ಕ್ಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಖಾದಿ ಕೈಮಗ್ಗ ಮತ್ತು ಕರಕುಶಲತೆಗಳನ್ನು ಬಲಪಡಿಸಲು ‘ಮಹಾತ್ಮ ಗಾಂಧಿ ಗ್ರಾಮ್ ಸ್ವರಾಜ್’ ಉಪಕ್ರವನ್ನು ಪ್ರಾರಂಭಿಸಲಾಗುತ್ತದೆ. ಈ ಯೋಜನೆಯ ಮೂಲಕ ಸಾಂಪ್ರದಾಯಿಕ ಖಾದಿ ಕೈಮಗ್ಗ ಮತ್ತು ಕುಶಲಕಲ ಕ್ಷೇತ್ರಗಳನ್ನು ಬಲಪಡಿಸಿ ಅವುಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡಲು ಸಹಾಯ ಮಾಡುವುದು ಬ್ಯಾಂಡ್ ಮಾಡೋದು, ಕೆಲಸಗಾರರಿಗೆ ತರಬೇತಿ ನೀಡುವುದು, ಮತ್ತು ಗುಣಮಟ್ಟವನ್ನು ಹೆಚ್ಚಿಸುವುದು ಮುಖ್ಯ ಗುರಿಯಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಮತ್ತು ಆದಾಯ ಹೆಚ್ಚಾಗುತ್ತದೆ






