spot_img
Saturday, July 27, 2024
spot_imgspot_img
spot_img
spot_img

ಗೆಡ್ಡೆ ಗೆಣಸು ಪರಂಪರೆಯ ಆಹಾರ: ಸ್ವಲ್ಪ ತಿಳಿಯೋಣ ಅದ್ರ ವಿಚಾರ

ಬರಹ: ಎಂ.ಟಿ ಶಾಂತಿ ಮೂಲೆ

ಆಧುನಿಕತೆಯ ಭರಾಟೆ ನಮ್ಮ ಜೀವನ ವಿಧಾನವನ್ನೇ ತಿರುಚಿದೆ. ಹಳೆಯದನ್ನೆಲ್ಲ ಹೊಳೆ ಪಾಲು ಮಾಡಿ ಎಲೆಕೋಸು, ಹೂಕೋಸು, ಟೊಮೆಟೋಗಳಂತಹ ರಾಸಾಯನಿಕಯುಕ್ತ ಕೀಟನಾಶಕಗಳಲ್ಲಿ ಮಿಂದೆದ್ದ ತರಕಾರಿಗಳಿಗೇ ಮುಗಿಬಿದ್ದು ಅದನ್ನೇ ನಿರಂತರ ಸೇವಿಸಿ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ತಮ್ಮ ಜೊತೆಗೇ ತಮ್ಮವರನ್ನೂ, ಪೀಳಿಗೆಯನ್ನೂ ಬಲಿ ತೆಗೆದುಕೊಳ್ಳುತ್ತಾರೆ ಎನ್ನುವ ಪರಿಜ್ಞಾನ ನಮಗಿಲ್ಲ.

ಇಪ್ಪನೇ ಶತಮಾನದ ತನಕ ಜೀವಂತವಾಗಿದ್ದ ಕೆಸು, ಮುಂಡಿ, ಸುವರ್ಣಗಡ್ಡೆ, ತುಪ್ಪದಗೆಣಸು, ಮುಂಡಿ, ಆರೋಗ್ಯಕರ ಆಹಾರ ವಸ್ತುಗಳನ್ನು ಮೂಲೆಗುಂಪು ಮಾಡಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಈ ತರಕಾರಿ ವಸ್ತುಗಳನ್ನು ಸಂರಕ್ಷಿಸುವ ಕಾರ್ಯ ತುರ್ತಾಗಿ ಕೈಗೊಳ್ಳಬೇಕಿದೆ. ಚೇತನ ಶೈಲಿಗೆ ಬದಲಾವಣೆ ತರಬೇಕಿದೆ.

ಮಣ್ಣಿನ ಫಲವತ್ತತೆಗೆ ಗಡ್ಡೆ ಸರಕಾರಿಗಳು ಅಮೂಲ್ಯ ಕೊಡುಗೆ ನೀಡುತ್ತವೆ. ಇವುಗಳ ತ್ಯಾಜ್ಯಗಳು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ ಎರೆಹುಳ, ಶತಪದಿಗಳಿಗೆ ಆಹಾರವಾಗಿ ಮಣ್ಣು ಏಕೆ ಮಣ್ಣಾಗಿ ಬದಲಾಗುತ್ತದೆ. ಈ ಮಣ್ಣಿನಲ್ಲಿ ಯಾವುದೇ ಇತರ ಬೆಳೆ ಗೊಬ್ಬರವಿಲ್ಲದೆ ಬೆಳೆಯುತ್ತವೆ. ನಾನು ಕಳೆದ 5೦ ವರ್ಷಗಳಿಂದ ಇದನ್ನು ರಕ್ಷಿಸಿಕೊಂಡು ಬಂದಿದ್ದೇನೆ. ಅನೇಕ ಮಂದಿ ಸಾವಯವ ಕೃಷಿಕರಿಗೆ ಗಿಡಗಳನ್ನು ಪೂರೈಸಿದ ತೃಪ್ತಿ ಇದೆ.

 ಮೇಲ್ನೋಟಕ್ಕೆ ಒಂದೇ ತೆರನಾಗಿ ಕಾಣಿಸುವ ಗಡ್ಡೆ ಗೆಣಸಿನ ಗಿಡಗಳಿವೆ. ಕಾಡು ಮುಂಡಿ, ತುರಿಕೆ ಮುಂಡಿ ಕೆಸು, ಕಾಡು ಕೇಸುಗಳು ನಿರುಪಯುಕ್ತವೆಂದು ಅನ್ನಿಸಬಹುದು. ಇವು ಮಣ್ಣಿನ ಜೀವಿಗಳ ಆಹಾರವಾಗಿ ಮಣ್ಣಿನ ಉಪಕಾರಿಗಳು. ನಾವು ಬೆಳೆಯುವ ಹಾಲು ಮುಂಡಿ, ಕೇನೆ (ಸುವರ್ಣ ಗಡ್ಡೆ), ಮುಂಡಿ, ತೂಣಗೆಣಸು, ತುರಿಕೆಯೇ ಇಲ್ಲದ ಸಲಾಡಿಗೆ ಉಪಯೋಗಿಸುವ ಕೆಸುಗಳು ಉತ್ತಮ ಆರೋಗ್ಯದಾಯಕ ಆಹಾರ ವಸ್ತುಗಳು. ಹೊಟ್ಟೆಯಳಗಿನ ಹುಣ್ಣು (ಅಲ್ಸರ್) ನಿವಾರಕ ಮೂಲವ್ಯಾಧಿ ನಿವಾರಕ ಗಡ್ಡೆ ತರಕಾರಿಗಳು.

ಸುವರ್ಣಗಡ್ಡೆ ಮೂಲವ್ಯಾಧಿಗೆ ಔಷಧವಾಗಿದ್ದು ಮನೆಯಲ್ಲೇ ತಯಾರಿಸಿ ಸೇವಿಸಿದರೆ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಗುಣಪಡಿಸುವ ಔಷಧ. ಸುವರ್ಣಗಡ್ಡೆಯನ್ನು ಖಾಲಿ ಗೋಣಿಚೀಲದಲ್ಲಿ ಮಣ್ಣು ಹಾಕಿ ಗಡ್ಡೆಯ ಬೀಜವನ್ನಿಟ್ಟು ಮುಚ್ಚಿದರೆ ಮಳೆ (ಕಾಲ) ಬಂದಾಗ ಮೊಳಕೆ ಬಂದು ಗಿಡವಾಗುತ್ತದೆ. ಗಿಡಕ್ಕೆ ಒಂದು ಚಟ್ಟಿಯಷ್ಟು ಕರಿ ಮತ್ತು ಮಣ್ಣು ಮಿಶ್ರ ಮಾಡಿ ಸುರಿದರೆ ಸಾಕು. ಬೇರೆ ಏನೂ ಹಾಕದಿದ್ದರೂ ಬೇಸಿಗೆಗೆ ಗಡ್ಡೆ ಉಪಯೋಗಕ್ಕೆ ಬರುತ್ತದೆ. ಗಡ್ಡೆಯ ಮಧ್ಯಭಾಗವನ್ನು ಉಳಿಸಿ ಉಳಿದದ್ದು ತರಕಾರಿಯಾಗಿ ಉಪಯೋಗ.

ಮೂಲವ್ಯಾಧಿಗೆ: ಸುವರ್ಣ ಗಡ್ಡೆಯನ್ನು ಚಿಕ್ಕ ಹೋಳುಗಳಾಗಿ ಮಾಡಿ ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿ ಬಿಸಿಲಲ್ಲಿ ಒಣಗಿಸಿಟ್ಟು 1 ಕಿಲೋ ತೂಕಕ್ಕೆ ಅರ್ಧ ಕಿಲೋ ಬಿಳಿ ಎಳ್ಳು ಸ್ವಲ್ಪ ಹುರಿದು ಪುಡಿ ಮಾಡಿ ಹುಡಿ ಮಾಡಿಕೊಂಡು ಅರ್ಧ ಕಿಲೋ ಬೆಲ್ಲ (ಕಪ್ಪು)ಮಿಶ್ರಮಾಡಿ ಒಣಗಿದ ಗಡ್ಡೆಯೊಂದಿಗೆ ಚೆನ್ನಾಗಿ ಕುಟ್ಟಿ ಪುಡಿಮಾಡಿ ಮೆತ್ತಗಾದಾಗ ಪಾಕವನ್ನು ನೆಲ್ಲಿಕಾಯಿ ಗಾತ್ರದ ಉಂಡೆ ಮಾಡಿಟ್ಟು ಭರಣಿಯಲ್ಲಿ ಶೇಖರಿಸಿ ದಿನಾ ಮೂರು ಹೊತ್ತು ಒಂದು ಉಂಡೆಯನ್ನು ತಿನ್ನಬೇಕು. ಹೀಗೆ ಮೂರು ತಿಂಗಳು ಸೇವಿಸಿದರೆ ಮೂಲವ್ಯಾದಿ ಹರ ಮುಂಡಿ ಕೆಸು : ಇದರ ಎಲೆಯನ್ನು ಪತ್ರೊಡೆಗೆ ಉಪಯೋಗಿಸಬಹುದು. ಬಹಳ ರುಚಿಕರ ಖಾದ್ಯ. ಗಡ್ಡೆಯನ್ನು ಸಾಂಬಾರು, ಪಲ್ಯಕ್ಕೆ ಬಳಸಬಹುದು. ಬೇಯಿಸಿದ ಗಡ್ಡೆ ಗಾಗೆಯೇ ಉಪ್ಪಿಕಾಯಿ ಜತೆ ಸೇವಿಸಲು ಸೂಕ್ತ.

ಮುಂಡಿ ಗಡ್ಡೆ : ಹಾಲು ಮಂಡಿ ಎಂದು ಕರೆಯುವ ಗಡ್ಡೆ ಹಚ್ಚಿದರೆ ಬಿಳಿಯ ಹಾಲಿನಂಥ ದ್ರವ ಕಾಣಿಸುತ್ತದೆ. ಇದು ಪಲ್ಯ, ಸಾಂಬಾರು, ಕಾಯಿಹುಳಿಗೆ ಸೂಕ್ತ. ಕೆಲವರು ಬಿಳಿ ಕಡ್ಲೆ ಮಿಶ್ರ ಮಾಡಿ ಕಾಯಿ ಹುಳಿ ತಯಾರಿಸುತ್ತಾರೆ. (ನಾಲಗೆ ರುಚಿಗೆ) ಹೆಚ್ಚು ಬೆಳೆದ ತಳಭಾಗದ ಗಡ್ಡೆ ಬೀಜಕ್ಕೆ ಮತ್ತು ಉಳಿಕೆ ಎರೆಗೊಬ್ಬರಕ್ಕೆ ಉಪಯೋಗಿ.

ತುರಿಕೆಯಿಲ್ಲದ ಕೆಸು : ಇದರ ಎಲೆ ಹಸಿಯಾಗಿಯೇ ‘ಸಲಾಡ್’ಗೆ ಉಪಯೋಗಿಸಬಹುದು. ರುಚಿಗೆ ಲಿಂಬೆ ಹಣ್ಣಿನ ಚಿಕ್ಕ ಚಿಕ್ಕ ಹೋಳನ್ನು ಮಿಶ್ರ ಮಾಡಿಕೊಳ್ಳಬಹುದು. ಇದರ ಗಿಡವನ್ನು ಗೋಣಿಚೀಲ (ಪಾಲಿಥೀನ್)ದಲ್ಲಿ ಬೆಳೆಯಬಹುದು. ಗಡ್ಡೆಯನ್ನು ಸಾಂಬಾರಿಗೆ ಉಪಯೋಗಿಸುತ್ತಾರೆ.

ತುಪ್ಪ ಕನಸು : ಎರಡು ಜಾತಿಯ ಗೆಣಸು ನಮ್ಮಲ್ಲಿದೆ. ಉರುಟಾದ ಹೊರಮೈ ಇರುವ ಗೆಣಸು ಮತ್ತು ಉದ್ದಕ್ಕೆ ಆಳಕ್ಕೆ ಇಳಿಯುವ ಪಾತಾಳ ಗೆಣಸು, (ತೂಣಗಣಸು), ಈ ಗೆಣಸು ಬೇಯಿಸಿದರೆ ಗರಿಗರಿಯಾಗಿದ್ದು ಚಟ್ನಿ ಜೊತೆ ತಿನ್ನಲು ರುಚಿಕರವಾಗಿದೆ. ತೂಣಗೆಣಸು ಮೇಲ್ಭಾಗ ಬೀಜಕ್ಕೆ ಉಪಯೋಗ. ಮೇಲ್ಭಾಗಕ್ಕೆ ಕಹಿಯಾಯಗಿದ್ದು ಇಲಿ ಹೆಗ್ಗಣಗಳು ಕೂಡಾ ಮುಟ್ಟುವುದಿಲ್ಲ. ತುದಿ ಭಾಗ ಬಹಳ ರುಚಿಯಾಗಿದೆ. ಇದನ್ನು ಗುಂಡಿಯ ತಳ ಭಾಗಕ್ಕೆ ಕಲ್ಲು ತುಂಬಿ ನಾಟಿ ಮಾಡಿದರೆ ಕಿತ್ತು ತೆಗೆಯಲು ಅನುಕೂಲ. ಪಾಲಿಥೀನ್ ಚೀಲದಲ್ಲಿ ಬೆಳೆದು ಸುಲಭವಾಗಿ ಕಿತ್ತು ತೆಗೆಯಲು ಸಾಧ್ಯವಾಗುವುದು.

ಕಂದ ಮೂಲಗಳೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಔಷಧೀಯ ಗುಣ ಹೊಂದಿದ್ದು ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಲೆಯಾಳ ಭಾಷೆಯಲ್ಲಿ ಒಂದು ನಾಣ್ನುಡಿಯಿದೆ ”ಚಕ್ಕ ಮಾಙ ರಂಡು ಮಾಸಂ, ತಾಳುಂ ತವರಂ ರಂಡು ಮಾಸಂ, ಅಙನೇ ಇಙನೇ ರಂಡು ಮಾಸಂ” ಆರು ತಿಂಗಳು ಸ್ಥಳೀಯ ಹಲಸು, ಮಾವು, ಕೇಸು-ಗಿಸು (ಗಡ್ಡೆ) ಎರಡು ತಿಂಗಳು ಹಾಗೂ ಹೀಗೂ ಎರಡು ತಿಂಗಳು. ಎಂದು ಹೇಳುವುದು ಇದರ ಅರ್ಥ. ಅಂದರೆ ಹಲಸಿನ ಬೀಜ, ನೀರಲ್ಲಿ (ಉಪ್ಪು)ಹಾಕಿದ ಮಾವು, ಹಲಸಿನ ತೊಳೆ, ಬೀಜ ಇತ್ಯಾದಿ ಅಲ್ಪ-ಸ್ವಲ್ಪ ಇತರ ತರಕಾರಿ ಬೆಳೆದು ಆರೋಗ್ಯಕರ ಆಹಾರ ಸೇವಿಸಬಹುದು.

ನಮ್ಮ ಸುತ್ತ ಮುತ್ತ ಬೆಳೆಯುವ ಔಷಧೀಯ ಗಿಡಗಳಾದ ಒಂದೆಲಗ, ಚಗತೆ, ವಿಟಮಿನ್ ಸೊಪ್ಪು, ಅಯೋಡಿನ್ ಸೊಪ್ಪು ಇತ್ಯಾದಿ. ಒಂದೆಲಗ ರಕ್ತದೊತ್ತಡವನ್ನು ಸ್ಥಿರೀಕರಿಸುತ್ತದೆ. ಚಗತೆ ಸೊಪ್ಪು ಕೊಕ್ಕೆ ಹುಳ ನಿಯಂತ್ರಕ. ರಕ್ತ ಹೀನತೆಗೆ ಅಯೋಡಿನ್ (ನೇರಳೆ ಎಲೆ) ಕೊರತೆ ನಿವಾರಿಸುತ್ತದೆ. ನಾಲ್ಕು ಪಪ್ಪಾಯಿ ಗಿಡ ಬೆಳೆದರೆ ಅದರ ಹಣ್ಣು ಉಪಯೋಗಿಸಿ ಕೊಕ್ಕೆ ಹುಳ ನಿಯಂತ್ರಣ ಮಾಡುತ್ತದೆ. ಅಗ್ನಿ ಬಲ ವೃದ್ಧಿಸುತ್ತದೆ. ಇದ್ದ ಜಾಗದಲ್ಲಿ ನಾಲ್ಕು ಸೌತೆ ಬಳ್ಳಿ ಬೆಳೆಯಿರಿ. ಒಡ್ಡು ಸೌತೆ ಎಂದು ಇದಕ್ಕೊಂದು ಅನ್ವರ್ಥ ಹೆಸರಿದೆ. ಗದ್ದೆ ಕೊಯ್ಲು ಆದ ಮೇಲೆ ಗದ್ದೆಯಲ್ಲಿ ಸಾಲು ಮಾಡಿ ಒಡ್ಡು (ಬೈಹುಲ್ಲಿನ ಅವಶೇಷ) ಹಾಕಿ ಮುಚ್ಚಿ ಸುಡುಮಣ್ಣಿನಲ್ಲಿ ಬೀಜ ಬಿತ್ತಿ ಬೆಳೆಯುತ್ತಿದ್ದರು. ಕಾಲ ಬದಲಾಗಿದೆ. ಆಹಾರ ಬೆಳೆಯ ಹೊಲವೆಲ್ಲ ಅಡಿಕೆ ತೋಟ. ತರಕಾರಿ ಬೆಳೆಯಲು ಜಾಗ ಬಿಟ್ಟಿಲ್ಲ. ಹೊಸ ಅಕ್ಕಿ ಊಟಕ್ಕೆ ಮಾರುಕಟ್ಟೆ ಅಕ್ಕಿಯೇ ಗತಿ ಪರಿಸ್ಥಿತಿಯನ್ನು ಬದಲಾಯಿಸಲು 5 ಸೆಂಟ್ಸ್ ಜಾಗವನ್ನಾದರೂ ಮೀಸಲಿಡಿ. ಮನೆಯಂಗಳದಲ್ಲಿ ಮಳೆಗಾಲವಾದರೂ ತರಕಾರಿ ಬೆಳೆದು ರಾಸಾಯನಿಕಕ್ಕೆ ತಿಲಾಂಜಲಿ ನೀಡಿ. ಮುಂದಿನ ಪೀಳಿಗೆ ಆರೋಗ್ಯವಾಗಿರಲಿ ಎಂದು ಹಾರೈಸುತ್ತೇನೆ

ವಿ.ಸೂ : ಗೆಡ್ಡೆ ಗೆಣಸಿನ ಬೀಜ, ಮುಂಡಿ, ತುರಿಕೆಯಿಲ್ಲದ ಕೆಸು, ಗಿಡಗಳಿಗೆ ಮನೆಗೆ ಬನ್ನಿ. ಕೊಂಡು ಹೋಗಿ ನಾಟಿ ಮಾಡಿ. ದಾರಿ ಖರ್ಚು ನಿಮ್ಮದು. ಗಿಡ ಪುಕ್ಕಟೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group