spot_img
Saturday, November 23, 2024
spot_imgspot_img
spot_img
spot_img

 ಶೃಂಗ ಶ್ಯಾಮಲಾದಲ್ಲಿ ‘ಭತ್ತದ ಬೆಳೆಯ ಕ್ಷೇತ್ರೋತ್ಸವ

ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಪಾರಂಪರಿಕ ಭತ್ತದ ತಳಿಗಳಿಗೆ ವಿಶೇಷ ಮಹತ್ವವಿದೆ. ಭತ್ತದ ‘ತಾಯಿ ತಳಿ’ ಎಂದು ಕರೆಸಿಕೊಳ್ಳುವ ‘ಜೋಳಗ’, ಮಧುಮೇಹಿಗಳೂ ಬಳಸಬಹುದಾದ ‘ಸಣ್ಣವಾಳ್ಯ’, ಬೆಟ್ಟು ಗದ್ದೆಯ ತಳಿ ‘ಬೆಟ್ಸಣ’್ಣ ಹೀಗೆ ಹೆಸರಿಸಬಲ್ಲ ಅನೇಕ ತಳಿಗಳು ಇಲ್ಲಿವೆ. ಪ್ರಸ್ತುತ ಬಹುಪಾಲು ತಳಿಗಳ ಹೆಸರು ಮಾತ್ರ ಗೊತ್ತಿದ್ದು ಬೀಜ ಸಿಗುತ್ತಿಲ್ಲ. ಭತ್ತ ಉಳಿಯಬೇಕಾದರೆ ಅದನ್ನು ಬೆಳೆಸಿ ಬಳಸಬೇಕು. ಈ ಉದ್ದೇಶದಿಂದಲೇ ಆಸಕ್ತ ಭತ್ತದ ಬೆಳೆಗಾರರನ್ನು ಮತ್ತು ಈಗಾಗಲೇ ಭತ್ತದ ತಳಿಗಳನ್ನು ಆಸಕ್ತಿಯಿಂದ ಬೆಳೆಸಿ ಸಂರಕ್ಷಿಸುತ್ತಿರುವ ಸಾಧಕರನ್ನು ಒಂದೆಡೆ ಸೇರಿಸುವ ಪ್ರಯತ್ನ ಕೃಷಿ ಪ್ರಯೋಗ ಪರಿವಾರದ್ದು.

ಈ ನಿಟ್ಟಿನಲ್ಲಿ ಅದಮಾರು ಮಠದ ಪರಮಪೂಜ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ‘ಭತ್ತದ ಬೆಳೆಯ ಕ್ಷೇತ್ರೋತ್ಸವ’ ಕಾರ್ಯಕ್ರಮ ಕಾರ್ಕಳದ ಬಾರಾಡಿಯ ಶೃಂಗ ಶ್ಯಾಮಲಾದಲ್ಲಿ ಸಂಪನ್ನಗೊಂಡಿತು. ಶೃಂಗ ಶ್ಯಾಮಲಾದ ವೆಂಕಟೇಶ್ ಮಯ್ಯ ಇವರ ಕೃಷಿ ಭೂಮಿಯಲ್ಲಿ ಮುರತ್ತಂಗಡಿಯ  ಆಸ್ಮಾಬಾನು ಹಾಗೂ ಅಬುಬಕ್ಕರ್ ಇವರ ಕುಟುಂಬ ಕಳೆದ ಹಲವಾರು ವರ್ಷಗಳಿಂದ ನಾಡಿನಾದ್ಯಂತ ಸಂಚರಿಸಿ ಸುಮಾರು ೮೦೦ ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಸಂಗ್ರಹಿಸಿ, ಬೆಳೆದು ಸಂರಕ್ಷಿಸುತ್ತಿದ್ದಾರೆ.ಇವರ ಈ ಕಾಯಕವನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಯಿತು. ಜೊತೆಗೆ ಭತ್ತದ ತಳಿ ಸಂರಕ್ಷಣೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರಾದ  ಬಿ ಕೆ ದೇವರಾವ್ ಹಾಗೂ ದೇಶಿ ಭತ್ತದ ತಳಿಗಳನ್ನು ಬೆಳೆಯುತ್ತಿರುವ ಯುವ ರೈತರನ್ನು ಸಹ ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರವರು ಕೃಷಿಯಲ್ಲಿ ತೊಡಗಲು ಪ್ರೇರೇಪಿಸುವಂತ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ ಎಂದು ಆಶೀರ್ವದಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಆಸ್ಮಾಬಾನುರವರು ಆಧುನಿಕತೆಯತ್ತ ಮುಖಮಾಡಿರುವ ಯುವ ಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.ಇದರಿಂದ ಅತ್ಯುತ್ತಮ ಔಷಧೀಯ ಗುಣಗಳಿರುವಂತಹ ಅನೇಕ ದೇಶಿ ಭತ್ತದ ತಳಿಗಳನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭತ್ತವನ್ನು ಬೆಳೆದು ಈ ಎಲ್ಲಾ ತಳಿಗಳನ್ನು ಉಳಿಸುವಂತಾಗಲಿ ಎಂದು ಕರೆನೀಡಿದರು.
ಶ್ರೀ ವೆಂಕಟೇಶ್ ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿ ಪ್ರಯೋಗ ಪರಿವಾರದ ನಿರ್ವಾಹಕ ವಿಶ್ವಸ್ತರಾದ ಶ್ರೀ ದಿನೇಶ್ ಬಿ ಎಸ್, ಹಾಗೂ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ  ನವೀನ್‌ಚಂದ್ರ ಜೈನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ  ಶ್ರೀನಿವಾಸ್ ಭಟ್ ಸ್ವಾಗತ,  ಶ್ರೀವತ್ಸ ಪ್ರಸ್ತಾವನೆ,  ಸತ್ಯನಾರಾಯಣ ಉಡುಪ ವಂದನಾರ್ಪಣೆ ಹಾಗೂ  ಚಂದ್ರಹಾಸ ಶೆಟ್ಟಿ ನಿರೂಪಣೆ ಮಾಡಿದರು.
ಈ ಕಾರ್ಯಕ್ರಮ ಉಡುಪಿ ಜಿಲ್ಲೆಯ ಭಾರತೀಯ ಕಿಸಾನ್ ಸಂಘ, ಹಾಗೂ ಸಾವಯವ ಕೃಷಿ ಪರಿವಾರ(ರಿ.)ಇದರ ಸಹಕಾರದೊಂದಿಗೆ ಆಯೋಜನೆಗೊಂಡಿತ್ತು.

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group