spot_img
Saturday, July 27, 2024
spot_imgspot_img
spot_img
spot_img

ಅವರೆ ಬೆಳೆಯ ಬೇಸಾಯ ಮಾಡೋದು ಹೇಗೆ? : ಒಂದಷ್ಟು ತಿಳ್ಕೊಳ್ಳೋಣ ಬನ್ನಿ !

ಬರಹ :ನಾಗೇಶ್, ಸಿ. ಆರ್- ಮತ್ತು ಸಹನ. ಎಸ್.ಆರ್ (ಕೃಷಿ ತಜ್ಞರು)

ಅವರೆ ಬೆಳೆಯು ದಕ್ಷಿಣ ಜಿಲ್ಲೆಗಳಲ್ಲಿ ಬೆಳೆಯುವ ಮುಖ್ಯ ದ್ವಿದಳ ಧಾನ್ಯ ಬೆಳೆಗಳಲ್ಲಿ ಒಂದು. ಸಾಮಾನ್ಯವಾಗಿ ರಾಗಿ ಬೆಳೆಯೊಂದಿಗೆ ಅಂತರ /ಮಿಶ್ರ ಬೆಳೆಯಾಗಿ ಬೆಳೆಯುವುದು ವಾಡಿಕೆ. ಇತ್ತಿಚಿನ ದಿನಗಳಲ್ಲಿ ಕಡಿಮೆ ಅವಧಿ ಹಾಗೂ ವರ್ಷವಿಡೀ ಬೆಳೆಯಬಹುದಾದ ತಳಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ಧಿಪಡಿಸಿರುವುದರಿಂದ ಅವರೆ ಬೆಳೆಯನ್ನು ಮುಖ್ಯ ಬೆಳೆಯಾಗಿ ಬೆಳೆಯುವುದು ಹೆಚ್ಚಾಗಿ ಕಂಡುಬರುತ್ತಿದೆ.

ಈ ಬೆಳೆಯಿಂದ ಬೇಳೆ ಅಲ್ಲದೆ ಹಸಿರು ತರಕಾರಿಯನ್ನು ಸಹ ಪಡೆಯಬಹುದು. ಅವರೆಯ ಒಣ ಕಾಳಿನಲ್ಲಿ ನಮ್ಮ ದೇಹಕ್ಕೆ ಬೇಕಾದ ಪೌಷ್ಠಿಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಪ್ರತಿ ನೂರು ಗ್ರಾಂನಲ್ಲಿ 25  ಗ್ರಾಂ ಸಸಾರಜನಕ, 60 ಗ್ರಾಂ ಶರ್ಕರ ಪಿಷ್ಠ, 3 ಗ್ರಾಂ ಖನಿಜಾಂಶವನ್ನು, 3 ಮಿ ಗ್ರಾಂ ಕಬ್ಬಿಣ ಮತ್ತು 60 ಮಿಗ್ರಾಂನಷ್ಟು ಕ್ಯಾಲ್ಸಿಯಂ  ಇರುತ್ತವೆ.

ನಮ್ಮ ರಾಜ್ಯದಲ್ಲಿ ಅವರೆ ಬೆಳೆಯು 1.60  ಲಕ್ಷ ಎಕರೆ ಪ್ರದೇಶದ ವಿಸ್ತಿರ್ಣವನ್ನು ಹೊಂದಿದ್ದು, 61 ಸಾವಿರ ಟನ್ ಗಳಷ್ಟು  ಉತ್ಪಾದನೆ ಮಾಡಲಾಗುತ್ತಿದೆ. ಈ ಬೆಳೆಯ ಸರಾಸರಿ ಇಳುವರಿಯು ಪ್ರತಿ ಎಕರೆಗೆ 6೦೦ ಕೆ.ಜಿ.ಗಳಷ್ಟು ಇದೆ. ಈ ಬೆಳೆಯನ್ನು ಹೆಚ್ಚಾಗಿ ಮೈಸೂರು, ತುಮಕೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಚಿತ್ರದುರ್ಗ, ಚಿಕ್ಕಮಂಗಳೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ.

ಮೊದಲಿಗೆ ಈ ಬೆಳೆಯನ್ನು ರಾಗಿಯೊಂದಿಗೆ ಮಿಶ್ರಬೆಳೆಯಾಗಿ ಮಾತ್ರ ಬೆಳೆಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಂಶೊಧನೆಯಿಂದ ಅಭಿವೃದ್ಧಿಪಡಿಸಿರುವ ವರ್ಷವಿಡೀ ಬೆಳೆಯಬಹುದಾದ ತಳಿಗಳು ಇರುವುದರಿಂದ ಈ ಬೆಳೆಯನ್ನು ಮುಖ್ಯ ಬೆಳೆಯಾಗಿಯು ಸಹ ಬೆಳೆಯುತ್ತಿದಾರೆ. ಅವರೆ ಒಂದು ದ್ವಿದಳ ಧಾನ್ಯ ಬೆಳೆಯಾಗಿದ್ದು, ಅದನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆಯನ್ನು ವೃದ್ಧಿಸಬಹುದು. ಆಧುನಿಕ ಬೇಸಾಯ ಕ್ರಮಗಳನ್ನು ಅನುಸರಿಸಿ ಬೆಳೆ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು.

ಬೇಸಾಯ ಕ್ರಮಗಳು ಹೇಗೆ?

ಬಿತ್ತನೆ ಕಾಲ:

ಮುಂಗಾರಿನಲ್ಲಿ ಬಿತ್ತುವುದಾದರೆ  ಆಗಸ್ಟ್ನಲ್ಲಿ, ಹಿಂಗಾರಿನಲ್ಲಿ ಬಿತ್ತುವುದಾದರೆ ಅಕ್ಟೋಬರ್‌ನಲ್ಲಿ ಹಾಗೂ ಬೇಸಿಗೆಯಲ್ಲಿ ಬಿತ್ತುವುದಾದರೆ ಫೆಬ್ರವರಿ-ಮಾರ್ಚ ನಲ್ಲಿ ಬಿತ್ತುವುದು ಸೂಕ್ತ.

ತಳಿಗಳು:

ಹೆಚ್ ಎ-3: ತಳಿಯ ಕಾಲಾವಧಿ 90-100 ದಿನಗಳಿದ್ದು ವರ್ಷವಿಡೀ ಬೆಳೆಯಬಹುದು.

ಹೆಚ್ ಎ-4: ತಳಿಯ ಕಾಲಾವಧಿ 95-105  ದಿನಗಳಿದ್ದು ವರ್ಷವಿಡೀ ಬೆಳೆಯಬಹುದು. ಮಣಿ ಅವರೆ ರೀತಿಯ ಕಾಯಿಗಳನ್ನು ಹೊಂದಿದ್ದು ಬೇಸಿಗೆಯಲ್ಲಿಯೂ ಸಹ ಸೊಗಡನ್ನು ಹೊಂದಿರುತ್ತದೆ.

ಸೂಚನೆ: ತರಕಾರಿಗಾಗಿ ಬೆಳೆದಲ್ಲಿ ಈ ತಳಿಗಳಿಂದ 70-75 ದಿವಸಗಳಲ್ಲಿ ಹಸಿಕಾಯಿಗಳನ್ನು ಕೊಯಿಲು ಮಾಡಬಹುದು.

ಬಿತ್ತನೆ ಬೀಜ: ಎಕರೆಗೆ 10-12  ಕೆ.ಜಿ. ಬಿತ್ತನೆ ಬೀಜ ಬೇಕಾಗುತ್ತದೆ.

ಭೂಮಿಯ ಆಯ್ಕೆ ಮತ್ತು ಸಿದ್ದತೆ: ಅವರೆ ಎಲ್ಲಾ ರೀತಿಯ ಭೂಮಿಯಲ್ಲಿ ಬೆಳೆಯಬಹುದು. ಆದರೆ ನೀರು ಸರಾಗವಾಗಿ ಬಸಿದು ಹೋಗುವಂತಹ ಭೂಮಿಯಲ್ಲಿ ಉತ್ತಮ. ಬಿತ್ತನೆಗೆ ಮಾಡುವ ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. ಶಿಫಾರಸ್ಸು ಮಾಡಿರುವ ಕೊಟ್ಟಿಗೆ ಗೊಬ್ಬರವನ್ನು ಬಿತ್ತನೆಗೆ 2-3 ವಾರಗಳ ಮುಂಚೆ ಮಣ್ಣಿಗೆ ಸೇರಿಸುವುದು.

ಬೀಜೋಪಚಾರ:

ಬಿತ್ತನೆಗೆ ಮುಂಚೆ ಎಕರೆಗೆ ಬೇಕಾಗುವ 10-12 ಕೆ.ಜಿ. ಬೀಜಕ್ಕೆ ಶಿಫಾರಸ್ಸು ಮಾಡಿರುವ ಜೀವಾಣು ಗೊಬ್ಬರಗಳಿಂದ ಲೇಪನ ಮಾಡಿ ಬಿತ್ತನೆ ಮಾಡುವುದು.

ವಿಧಾನ:

50 ಗ್ರಾಂ ಬೆಲ್ಲ ಅಥವಾ ಸಕ್ಕರೆಯನ್ನು ಅರ್ಧ ಲೀಟರ್ ನೀರಿನಲ್ಲಿ ಕರಗಿಸಿ 5 ನಿಮಿಷಗಳ ಕಾಲ ಕುದಿಸಿ ಅಂಟು ದ್ರಾವಣವನ್ನು ಎಕರೆಗೆ ಬೇಕಾದ ಬಿತ್ತನೆ ಬೀಜಕ್ಕೆ ಲೇಪಿಸಿ ನಂತರ ಜೈವಿಕ ಗೊಬ್ಬರಗಳಾದ ರೈಜೋಬಿಯಂ(2೦೦ ಗ್ರಾಂ.) ಹಾಗೂ ರಂಜಕ ಕರಗಿಸುವ ಜೀವಾಣುಗಳನ್ನು (2೦೦ ಗ್ರಾಂ.) ಬೀಜಕ್ಕೆ ಲೇಪನ ಮಾಡುವುದು. ಅನಂತರ ಅರ್ಧ ಗಂಟೆ ನೆರಳಿನಲ್ಲಿ ಒಣಗಿಸಿ ಬಿತ್ತನೆಗೆ ಉಪಯೋಗಿಸುವುದು.

ಪೋಷಕಾಂಶಗಳು

ಕೊಟ್ಟಿಗೆ ಗೊಬ್ಬರ/ಕಾಂಪೋಸ್ಟ್: 3 ಟನ್/ಎಕರೆಗೆ

ರಾಸಯನಿಕ ಗೊಬ್ಬರಗಳು :10:2೦:10 ಕೆ.ಜಿ/ಎಕರೆಗೆ

ಬಿತ್ತನೆ ವಿಧಾನ ಮತ್ತು ಅಂತರ : ಭೂಮಿಯ ಫಲವತ್ತತೆಯನ್ನು ಆಧರಿಸಿ ಒಂದೂವರೆಯಿAದೆÄರಡು ಅಡಿ ಅಂತರದ ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ ಅರ್ಧ ಅಡಿ ಅಂತರವಿರುವAತೆ ಬಿತ್ತನೆ ಮಾಡುವುದು. ಬೀಜವನ್ನು 1-2 ಅಂಗುಲಕ್ಕಿAತ ಹೆಚ್ಚಿನ ಆಳಕ್ಕೆ ಬೀಳದಂತೆ ಬಿತ್ತನೆ ಮಾಡುವುದು. ಬಿತ್ತನೆ ಸಮಯದಲ್ಲಿ ರಾಸಾಯನಿಕ ಗೊಬ್ಬರಗಳೆಲ್ಲವನ್ನು ಸಾಲಿನಲ್ಲಿ ಕೊಟ್ಟು ಮಣ್ಣಿನಲ್ಲಿ ಬೆರೆಸುವುದು.

ನೀರು ನಿರ್ವಹಣೆ : ಬಿತ್ತನೆಯಾದ ಕೂಡಲೆ ನೀರನ್ನು ಒದಗಿಸಿ ನಂತರ 7-೧೦ ದಿನಗಳ ಅಂತರದಲ್ಲಿ ಹವಾಗುಣ ಮತ್ತು ಭೂಮಿಯಲ್ಲಿನ ತೇವಾಂಶಕ್ಕೆ ಅನುಗುಣವಾಗಿ ನೀರು ನಿರ್ವಹಣೆ ಮಾಡುವುದು. ಹೂವಾಡುವ ಮತ್ತು ಕಾಯಿ ಕಚ್ಚುವ ಹಂತಗಳು ಸಂದಿಗ್ಧ ಹಂತಗಳಾಗಿದ್ದು ಈ ಹಂತಗಳಲ್ಲಿ ತೇವಾಂಶ ಇಲ್ಲವಾದಲ್ಲಿ ಇಳುವರಿಯು ಗಣನೀಯವಾಗಿ ಕುಂಠಿತವಾಗುತ್ತದೆ. ಎಲ್ಲಾ ಹಂತಗಳಲ್ಲೂ ಭೂಮಿಯಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು.

ಅಂತರ ಬೇಸಾಯ ಮತ್ತು ಕಳೆ ನಿರ್ವಹಣೆ : ಮಣ್ಣು ಮತ್ತು ಹವಾಗುಣ ಅನುಸರಿಸಿ, 2-3 ಸಾರಿ ಅಂತರ ಬೇಸಾಯ ಮಾಡುವುದು. ಕಳೆ ತೆಗೆಯುವುದರ ಕಡೆಗೆ ಗಮನ ಹರಿಸುವುದು.

ಕೊಯ್ಲು ವಿಧಾನ : ಕಾಯಿಕಗಳು ಒಣಗಿದ ನಂತೆ ಕೀಳುವುದು. ಒಕ್ಕಣೆಮಾಡಿ ಸ್ವಚ್ಚಗೊಳಿಸುವುದು. ತರಕಾರಿಗಾಗಿ ಬಳಕೆ ಮಾಡುವುದಾದಲ್ಲಿ ಬಲಿತ ಹಸಿಕಾಯಿಯನ್ನು ಕೀಳುವುದು.

ಇಳುವರಿ

ಕಾಳು : 3-4 ಕ್ವಿಂ/ಎಕರೆಗೆ

ಹಸಿಕಾಯಿ : 12-15 ಕ್ವಿಂ/ಎಕರೆಗೆ

ಮುಖ್ಯವಾದ ಕಡಿಮೆ ಖರ್ಚಿನ ಬೇಸಾಯ ಕ್ರಮಗಳು

  • ಶಿಫಾರಸ್ಸು ಮಾಡಿದ ತಳಿಗಳನ್ನೇ ಬಳಸುವುದು.
  • ಶಿಫಾರಸ್ಸು ಮಾಡಿದ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡುವುದು.

ಸಸ್ಯ ಸಂರಕ್ಷಣೆ   ಚಿಗುರು ಎಲೆ, ಹೂ, ಮೊಗ್ಗು, ಎಳಕಾಯಿಗಳಿಂದ ನೂರಾರು ಸಸ್ಯಹೇನುಗಳು ರಸ ಹೀರುತ್ತಿರುತ್ತವೆ. ಎಲೆಗಳಿಂದ ಮೇಲೆ ಅಂಟು ದ್ರಾವಣ ಕಾಣಿಸುತ್ತದೆ. ಗಿಡಗಳಲ್ಲಿ ಕಪ್ಪು ಬೂಷ್ಟು ಬೆಳೆಯುವುದು ಹಾಗೂ ಕಾಳುಗಳು ಚೀಕಾಗುವುದು.

ನಿರ್ವಹಣಾ ಕ್ರಮಗಳು

  • ಎಕರೆಗೆ 8-10 ಹಳದಿ ಅಂಟು ಬಲೆಗಳನ್ನು ಹಾಕಬೇಕು.
  • ಮೊದಲ ಹಂತದಲ್ಲಿ ಸಸ್ಯ ಹೇನಿನ ಬಾಧೆ ಕಂಡು ಬಂದಾಗ ಬೇವಿನ ಎಣ್ಣೆಯನ್ನು 5 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಪ್ರಮುಖ ರೋಗಗಳು ಹಾಗೂ ನಿರ್ವಹಣೆ

ನಂಜುರೋಗ: ಹಾನಿಯ ಲಕ್ಷಣ ಹಸಿರು ಮಿಶ್ರಿತ ಹಳದಿ ಕಾಂತಿ ಹೀನಗೊಳ್ಳುತ್ತವೆ ಹಾಗೂ ಹೂವು ಸರಿಯಾಗಿ ಬಿಡುವುದಿಲ್ಲ.

ನಿರ್ವಹಣಾ ಕ್ರಮಗಳು : ರೋಗಪೀಡಿತ ಗಿಡಗಳನ್ನು ಕಿತ್ತು ನಾಶಪಡಿಸಿ. ಬೇವಿನ ಎಣ್ಣೆಯನ್ನು ೫ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

– ನಾಗೇಶ್, ಸಿ. ಆರ್- ಮತ್ತು ಸಹನ. ಎಸ್.ಆರ್ (ಕೃಷಿ ತಜ್ಞರು)

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group