spot_img
Saturday, July 27, 2024
spot_imgspot_img
spot_img
spot_img

ನವೆಂಬರ್ ತಿಂಗಳ ಕೃಷಿಬಿಂಬ ದೀಪಾವಳಿ ವಿಶೇಷ ಸಂಚಿಕೆಯಲ್ಲಿ ಏನಿದೆ ಸ್ಪೆಷಲ್?

ರಾಜ್ಯ ರೈತ ಕುಟುಂಬದ ಒಡನಾಡಿ “ಕೃಷಿ ಬಿಂಬ”ಪತ್ರಿಕೆ ಯ ನವೆಂಬರ್ ದೀಪಾವಳಿ ವಿಶೇಷ ಸಂಚಿಕೆ ಇದೀಗ ಅಚ್ಚಿನಲ್ಲಿದೆ. ಕೃಷಿಬಿಂಬ ಮುದ್ರಣ ಸಂಚಿಕೆ ಇನ್ನೇನು ಕೃಷಿ ಮನಸ್ಸುಗಳ ಕೈಸೇರಿ ಖುಷಿ ನೀಡಲು ಸಿದ್ಧವಾಗಿದೆ. ಈ ತಿಂಗಳ ಕೃಷಿಬಿಂಬದಲ್ಲಿ ಎಂದಿನಂತೆ ಕೃಷಿ ಖುಷಿಯ ಸ್ವಾದ ನೀಡುವ ಬರಹಗಳಿವೆ. ಚೇತೋಹಾರಿ ಮಾಹಿತಿಗಳಿವೆ.

ದ್ರಾಕ್ಷಾರಸ (ಮದ್ಯ) ತಯಾರಿಕಗೆ ಸೂಕ್ತ ತಳಿ : ಮೆಡಿಕಾ ಕುರಿತು ಮತ್ತು ನೇರಳೆ ಹಾಗೂ ಡ್ರ್ಯಾಗನ್ ಹಣ್ಣಿನ ಔಷಧ ಗುಣಗಳ ಕುರಿತು ಡಾ. ಶಶಿಕುಮಾರ್ ಎಸ್ ಬರೆದಿದ್ದಾರೆ.  ಪ್ರೋಟ್ರೇ ವಿಧಾನದಿಂದ ಉತ್ತಮ ಗುಣಮಟ್ಟದ ತರಕಾರಿ ಸಸಿಗಳ ಉತ್ಪಾದನೆ ಕುರಿತು ಡಾ. ರಶ್ಮಿ ಆರ್.ಮತ್ತು ಡಾ. ಟಿ. ಜೆ.ರಮೇಶ ಅವರು ಸಮೃದ್ಧ ಮಾಹಿತಿ ನೀಡಿದ್ದಾರೆ.  ವರುಷಕ್ಕೆ ರೂ. ೩ ಕೋಟಿ ದಾಟಿದ ವಹಿವಾಟು ಮಾಡುವ ಹಾಂಗೆ ಸೋದರರ ಸಾವಯವ ಕೃಷಿಯ ಯಶೋಗಾಥೆ ಬಗ್ಗೆ  ಅಡ್ಡೂರು ಕೃಷ್ಣ ರಾವ್ ಬರಹವಿದೆ.

ಮಧುಮೇಹ ನಿವಾರಕವಾಗಿ ಅಡಿಕೆ ಸೋಗೆ  ಬಗ್ಗೆ ಡಾ. ಸರ್ಪಂಗಳ ಕೇಶವ ಭಟ್, ಮಂಗಳೂರು, ಕಿರುಧಾನ್ಯಗಳ ಕುರಿತು ಡಾ. ಚಂದ್ರಾವತಿ.ಬಿ ಮತ್ತು ಶ್ರೀಮತಿ. ಆಶಾ.ಎಂ ದೇವಿಹೊಸೂರು, ಸಮತೋಲಿತ ಸುಸ್ಥಿರ ಕೃಷಿ ಅಭಿವೃದ್ಧಿ ೨೦೨೩-೨೪ ನೇ ಸಾಲಿನ ರಾಜ್ಯ ಮುಂಗಡ ಪತ್ರದ ಕುರಿತು  ಡಾ.ಶರಶ್ಚಂದ್ರ ರಾನಡೆ ಬೆಂಗಳೂರು, ಕಾಂಪೋಸ್ಟ್ ಕುರಿತು ಎಂ.ಟಿ. ಶಾಂತಿಮೂಲೆ ಪೈಲಾರ್,

ಉಳಿದಂತೆ ಡಾ. ಬಸಬರಾಜ್ ಮೈಸೂರು,  ಚಿದಂಬರ ಪಿ.ನಿಂಬರಗಿ, ಡಾ.ಜಯವೀರ ಎ.ಕೆ, ಎಂ. ದಿನೇಶ್ ನಾಯಕ್, ರಾಧಾಕೃಷ್ಣ ತೊಡಿಕಾನ, ಸತೀಶ ಹೆಗಡೆ, ಆಶಾ ನೂಜಿ, ಗಣಪತಿ ಹಾಸ್ಪುರ, ಪಿ. ಆರ್. ಬದರಿಪ್ರಸಾದ್ ಮತ್ತು ಸುಹಾಸಿನಿ, ಸಂತೋಷ್ ರಾವ್ ಪೆರ್ಮುಡ, ಕಿರಣ್ ಎಂ. ಆರ್, ಡಾ. ಕೃಷ್ಣಮೂರ್ತಿ ಎ. ಟಿ, ಡಾ. ಸತೀಶ ಎನ್, ಡಾ. ಧನಲಕ್ಷ್ಮಿ ಡಿ,  ಶಬ್ನಂ ಪಿ.ಎಸ್,  ಡಾ. ರಶ್ಮಿ ಆರ್., ಡಾ. ರಮೇಶ, ಟಿ. ಜೆ., ಡಾ. ಶಿವಕುಮಾರ್ ಆರ್., ಡಾ. ಚೇತನ್ ಎನ್., ಡಾ. ಕೇದಾರನಾಥ, ಡಾ. ನವೀನ್ ಕುಮಾರ್, ಬಿ. ಟಿ.ಮತ್ತು ಡಾ. ಮಲ್ಲಿಕಾರ್ಜುನ ಎಲ್, ವೈಷ್ಣವಿ ಎಂ., ಪುಷ್ಪಾ ಎಸ್ ಗೋರೆ, ಶ್ವೇತಾ ಕೊಮ್ಮುಂಜೆ, ಹರಿದಾಸ ಬಿ.ಸಿ. ರಾವ್ ಶಿವಪುರ,  ಮೊದಲಾದ ಲೇಖಕರ ಆಸಕ್ತಿದಾಯಕ ಮಾಹಿತಿಪೂರ್ಣ ಬರಹಗಳಿದ್ದು ಒಂದೊಂದು ಬರಹಗಳೂ ಕೃಷಿ ಮನಸ್ಸುಗಳಿಗೆ ಸಮೃದ್ಧ ಸುಗ್ಗಿ.

 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group