spot_img
Saturday, July 27, 2024
spot_imgspot_img
spot_img
spot_img

ತರಕಾರಿ ಬೆಳೆಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಇಳುವರಿ ಪಡೆಯಲು ಏನು ಮಾಡಬೇಕು? ಓದಿ

ರೋಗ ನಿರೋಧಕ ಶಕ್ತಿಯೊಂದಿಗೆ ಬೆಳೆಯು ಆರೋಗ್ಯಕರವಾಗಿ ಬೆಳೆದು ಪೋಷಕಾಂಶಗಳನ್ನು ಒದಗಿಸುವಿದು ಅವಶ್ಯ, ಆದರೆ ಕೆಲವೇ ರೈತರು ಲಘು ಪೋಷಕಾಂಶಗಳ ಮಹತ್ವವನ್ನರಿತು ಬಳಸುತ್ತಿದ್ದಾರೆ. ಮಣ್ಣಿನಲ್ಲಿ ಸಾವಯವ ಅಂಶದ ಕೊರತೆ ರಸಗೊಬ್ಬರಗಳ ಹೆಚ್ಚು ಬಳಕೆ, ಹೆಚ್ಚು ಇಳುವರಿಯಿಂದ ಅಭಿವೃದ್ದಿಗೊಳಿಸಿದ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿಗೆ ಲಘು ಪೋಷಕಾಂಶಗಳ ಅವಶ್ಯಕತೆ ಹೆಚ್ಚಾಗಿತ್ತದೆ. ಹಾಗೆಯೆ ಕ್ಷೀಣಿಸುತ್ತಿರುವ ಮಣ್ಣಿನ ಗುಣಮಟ್ಟದಿಂದಾಗಿ ಲಘು ಪೋಷಕಾಂಶಗಳನ್ನು ಮಣ್ಣಿಗೆ ನೀಡಿದರೂ ಕೂಡ ಬೆಳೆಗಳಿಗೆ ಅವು ಲಭ್ಯವಾಗುತ್ತಿಲ. ಅದ್ದರಿಂದ ಗುಣ ಮಟ್ಟದ ಬೆಳೆ ಹಾಗೂ ಹೆಚ್ಚಿನ ಇಳುವರಿಗಾಗಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಆಗತ್ಯವಾಗಿದೆ.
ಪ್ರಸ್ತುತ ಲಘು ಪೋಷಕಾಂಶಗಳ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿರುವುದರಿಂದ, ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಅಧಿಕ ಖರ್ಚು ಮತ್ತು ಕಡಿಮೆ ಕಾರ್ಯ ಕ್ಷಮತೆಯ ನ್ಯೂನತೆಯನ್ನು ಹೋಗಲಾಡಿಸಲು ಐ. ಸಿ. ಎ. ಆರ್. – ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಇವರು ಅರ್ಕಾ ತರಕಾರಿ ಸ್ಪೆಷಲ್ ಲಘು ಪೋಷಕಾಂಶವನ್ನು ಉತ್ಕೃಷ್ಟ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸಿರುತ್ತಾರೆ.

ಸಸ್ಯಗಳು ಕೇವಲ ಬೇರಿನ ಮೂಲಕವಲ್ಲದೇ ಎಲೆ ಹಾಗೂ ಸಸ್ಯದ ಇತರೆ ಭಾಗಗಳಿಂದಲೂ ಸಹ ಪೋಷಕಾಂಶಗಳನ್ನು ಹೀರಿಕೊಂಡು ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತವೆ ಎಂಬ ಹೆಚ್ಚಿನ ಅರಿವನ್ನು ಮೂಡಿಸಲು ಸಸ್ಯದ ಎಲೆಗಳಿಗೆ ಸಿಂಪರಣೆ ಮೂಲಕ ಪೋಷಕಾಂಶಗಳನ್ನು ದೊರಕಿಸಿಕೊಟ್ಟು ಅಧಿಕ ಹಾಗೂ ಉತ್ತಮ ಗುಣಮತ್ತದ ಇಳುವರಿಯನ್ನು ಪಡೆಯಲು ಸಾಧ್ಯವೆಂದು ಸಂಸ್ಥೆ ಸುಮಾರು ೧೫ ವರ್ಷಗಳ ಸತತ ಸಂಶೋಧನೆಯಿಂದ ದೃಡಪಡಿಸಿದೆ. ಅರ್ಕಾ ತರಕಾರಿ ಸ್ಪೆಷಲ್ ಸತು-೩%, ಕಬ್ಬಿಣ-೨%, ಬೋರಾನ್-೦೧%, ತಾಮ್ರ-೦.೧% ಮತ್ತು ಮ್ಯಾಂಗನೀಸ್-೦೧% ಎಂಬ ಲಘು ಪೋಷಕಾಂಶಗಳನ್ನು ಹೊಂದಿದ್ದು ಇದರಿಂದ ಹಣ್ಣಿನ ಗಾತ್ರ, ಬಣ್ಣ, ಹೊಳಪು ಮತ್ತು ಇಳುವರಿಯನ್ನು ಹೆಚ್ಚಿಸಿ ರೈತರಿಗೆ ಅಧಿಕ ಲಾಭವನ್ನು ಪಡೆಯಲು ಸಹಕಾರಿಯಾಗುತ್ತಿದೆ.

ಬೆಳೆ ಅವಧಿಯಲ್ಲಿ ಮೂರು ಸಿಂಪರಣೆಯನ್ನು ಶಿಫಾರಸ್ಸು ಮಾಡಲಾಗುತ್ತದೆ. ಸೂಕ್ತ ಪೋಷಕಾಂಶಗಳ ಬಗ್ಗೆ ರೈತರು ಹೆಚ್ಚಿನ ಗಮನವಹಿಸುವುದಿಲ್ಲ. ತರಕಾರಿ ಸ್ಪೆಷಲ್ ಲಘು ಪೋಷಕಾಂಶಗಳ ಮಿಶ್ರಣದ ಬಳಕೆಯಿಂದ ಬೀಜವು ಬೇಗ ಮೊಳಕೆಯೊಡೆಯುವಂತೆ ಮಾಡಿ ಸಸ್ಯದ ಬೆಳೆವಣಿಗೆ, ದೃಢತೆ ಮತ್ತು ಇಳುವರಿ ಅಧಿಕಗೊಳ್ಳುತ್ತದೆ. ತರಕಾರಿ ಬೆಳೆಗಳಲ್ಲಿ ಶೇ. ೧೦ ರಿಂದ ೧೭ ರಷ್ಟು ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಸಸ್ಯದಲ್ಲಿ ಹುದುಗಿದ ಸುಪ್ತ ಹಸಿವನ್ನು  ನೀಗಿಸುವುದರಿಂದ ಹೆಚ್ಚಿನ ಗುಣಮಟ್ಟದ ಫಸಲು ಹಾಗೂ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯ. ಈ ಕಾರಣಕ್ಕಾಗಿ “ತರಕಾರಿ ಸ್ಪೆಷಲ್” ಮಿಶ್ರಣವನ್ನು ಸಿಂಪರಣೆ ಮಾಡುವುದು ಹೆಚ್ಚು ಲಾಭದಾಯಕ. ಈ ಮಿಶ್ರಣದ ಬಳಕೆ ರೈತರ ಕ್ಷೇತ್ರ ಮಟ್ಟದಲ್ಲಿ ಉತ್ತಮ ಫಲಿತಾಂಶ ನೀಡಿದೆ.

ಸಿಂಪರಣಾ ಪ್ರಮಾಣ, ಸಮಯ ಮತ್ತು ವಿಧಾನ: ತರಕಾರಿ ಸ್ಪೆಷಲ್ ಲಘು ಪೋಷಕಾಂಶವನ್ನು ೭೫ ಗ್ರಾಂ. (ಪ್ರತಿ ಲೀ. ನೀರಿಗೆ ೫.೦ ಗ್ರಾಂ ನಂತೆ) ೧೫ ಲೀ. ನೀರಿನಲ್ಲಿ ಕರಗಿಸಿ, ಇದಕ್ಕೆ ೨ ಮಿ. ಲೀಟರ್ ಸಾಬೂನು ದ್ರಾವಣ ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಒಂದು ರೂಪಾಯಿ ಬೆಲೆಯ ಶ್ಯಾಂಪು ಪೊಟ್ಟಣ ದ್ರಾವಣವನ್ನು ಹಾಗೂ ಒಂದು ನಿಂಬೆ ಹಣ್ಣಿನ ರಸವನ್ನು ಒಟ್ಟಿಗೆ ಬೆರೆಸಿ. ನಾಟಿ ಮಾಡಿದ ಒಂದೂವರೆ ತಿಂಗಳ ನಂತರ ಮೊದಲ ಸಿಂಪರಣೆ ಮತ್ತು ಮೊದಲ ಸಿಂಪರಣೆ ನಂತರ ೧೫ ದಿನಗಳ ಅಂತರದಲ್ಲಿ ಇತರ ಎರಡು ಸಿಂಪರಣೆಗಳನ್ನು ಮಾಡಬೇಕಾಗುತ್ತದೆ.

ಸಿಂಪರಣೆಯ ಪ್ರಯೋಜನಗಳು:
 ಪೋಷಕಾಂಶದ ಕೊರತೆ ಬಹುಬೇಗನೆ ನೀಗಿಸುವುದು
 ಕಡಿಮೆ ರಸಗೊಬ್ಬರದ ಬಳಕೆ
 ಶೀಘ್ರ ಬೆಳೆ ಮತ್ತು ಹೆಚ್ಚಿನ ಇಳುವರಿ
 ಹಣ್ಣಿನ ರುಚಿ ಮತ್ತು ಗೋಚರತೆ ಕಾಪಾಡುವ ದೃಷ್ಟಿಯಂದ ಹಣ್ಣಿನ ಗುಣಮಟ್ಟವನ್ನು ಹೆಚ್ಚಿಸುತ್ತz

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಭಾ. ಕೃ. ಅ. ಪ. – ಕೃಷಿ ವಿಜ್ಞಾನ ಕೇಂದ್ರ,
ಮೀನುಗಾರಿಕಾ ಕಾಲೇಜು ಆವರಣ, ಎಕ್ಕುರು, ಕಂಕನಾಡಿ ಅಂಚೆ,
ಮಂಗಳೂರು, ದಕ್ಷಿಣ ಕನ್ನಡ – ೫೭೫೦೦೨
www.kvkdk.org , [email protected],0824-2431872

ಲೇಖಕರು: ಡಾ. ರಶ್ಮಿ ಆರ್, ಡಾ. ರಮೇಶ, ಟಿ. ಜೆ., ಕುಮಾರಿ. ವಿಜಿತ ವಿ., ಡಾ. ಚೇತನ್ ಎನ್., ಡಾ. ಕೇದಾರನಾಥ,
ಡಾ. ನವೀನ್ ಕುಮಾರ್, ಬಿ. ಟಿ. ಮತ್ತು ಡಾ. ಮಲ್ಲಿಕಾರ್ಜುನ ಎಲ್.
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ
ಭಾ. ಕೃ. ಅ. ಪ. – ಕೃಷಿ ವಿಜ್ಞಾನ ಕೇಂದ್ರ., ದಕ್ಷಿಣ ಕನ್ನಡ, ಮಂಗಳೂರು – ೫೭೫ ೦೦೨

 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group