spot_img
Wednesday, September 23, 2026
spot_imgspot_img

ಕೃಷಿಕರಿಗಾಗಿ ‘ಭಾರತ್-ವಿಸ್ತಾರ್’ AI: ಕೃಷಿ ಸಲಹೆಗಳು ಸಿಗುತ್ತೆ ಒಂದೇ ವೇದಿಕೆಯಲ್ಲಿ, ಇನ್ನೂ ಹಲವಾರು ಉಪಯೋಗಗಳು!

ನವದೆಹಲಿ: ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಸರ್ಕಾರ ‘ಭಾರತ್-ವಿಸ್ತಾರ್’ (Bharat-VISTAAR) ಎಂಬ ಬಹುಭಾಷಾ AI ಆಧಾರಿತ ವೇದಿಕೆಯನ್ನು ಪರಿಚಯಿಸಿದೆ.

Bharat-VISTAAR ಎಂದರೆ Virtually Integrated System to Access Agricultural Resources. ಇದು AgriStack ಪೋರ್ಟಲ್‌ಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR)ನ ಕೃಷಿ ಪದ್ಧತಿಗಳ ಮಾಹಿತಿ ಹಾಗೂ AI ವ್ಯವಸ್ಥೆಗಳನ್ನು ಸಂಯೋಜಿಸುವ ಉದ್ದೇಶ ಹೊಂದಿದೆ. ರೈತರಿಗೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾದ ಕೃಷಿ ಸಲಹೆಗಳನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಏನಿದು ಭಾರತ್-ವಿಸ್ತಾರ್?

ಭಾರತ್-ವಿಸ್ತಾರ್ ಅನ್ನು ರೈತರಿಗೆ ಒಂದೇ ಡಿಜಿಟಲ್ ವೇದಿಕೆಯಲ್ಲಿ ಕೃಷಿ ಮಾಹಿತಿ ಮತ್ತು ಸಲಹೆಗಳನ್ನು ಒದಗಿಸುವ AI ಆಧಾರಿತ ವ್ಯವಸ್ಥೆಯಾಗಿ ರೂಪಿಸಲಾಗಿದೆ. ಬೆಳೆ ನಿರ್ವಹಣೆ, ಹವಾಮಾನ, ಮಾರುಕಟ್ಟೆ ಬೆಲೆ, ಕೀಟ ಮತ್ತು ರೋಗಗಳ ಎಚ್ಚರಿಕೆ, ಮಣ್ಣಿನ ಆರೋಗ್ಯ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಪಡೆಯಲು ಇದು ನೆರವಾಗಲಿದೆ. ಇದರಲ್ಲಿ ಮುಖ್ಯವಾಗಿ ಎರಡು ಪ್ರಮುಖ ಮಾಹಿತಿ ಮೂಲಗಳನ್ನು ಸಂಯೋಜಿಸಲಾಗುತ್ತದೆ:

  • AgriStack: ರೈತರು ಮತ್ತು ಕೃಷಿಗೆ ಸಂಬಂಧಿಸಿದ ಡಿಜಿಟಲ್ ದತ್ತಾಂಶ ಹಾಗೂ ಸರ್ಕಾರಿ ಕೃಷಿ ಸೇವೆಗಳ ವ್ಯವಸ್ಥೆ.
  • ICAR ಕೃಷಿ ಮಾಹಿತಿ: ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಭಿವೃದ್ಧಿಪಡಿಸಿರುವ ವೈಜ್ಞಾನಿಕ ಕೃಷಿ ಪದ್ಧತಿಗಳು ಮತ್ತು ಶಿಫಾರಸುಗಳು.

ರೈತರಿಗೆ ಏನೆಲ್ಲಾ ಉಪಯೋಗ?

ಸ್ಥಳೀಯ ಭಾಷೆಯಲ್ಲಿ ಮಾಹಿತಿ:
ಭಾರತ್-ವಿಸ್ತಾರ್ ಬಹುಭಾಷಾ ವ್ಯವಸ್ಥೆಯಾಗಿದೆ. ಮುಂದಿನ ಹಂತಗಳಲ್ಲಿ ಪ್ರಾದೇಶಿಕ ಭಾಷೆಗಳಿಗೂ ವಿಸ್ತರಿಸುವ ಉದ್ದೇಶವಿದೆ. ರೈತರು ಧ್ವನಿ ಅಥವಾ ಪಠ್ಯದ ಮೂಲಕ ಪ್ರಶ್ನೆಗಳನ್ನು ಕೇಳಿ ಕೃಷಿ ಮಾಹಿತಿ ಪಡೆಯಬಹುದು.

ಹವಾಮಾನ ಮತ್ತು ಬೆಳೆ ಸಲಹೆ:
ಹವಾಮಾನ ಪರಿಸ್ಥಿತಿ, ಬೆಳೆ ನಿರ್ವಹಣೆ ಹಾಗೂ ಸ್ಥಳೀಯ ಕೃಷಿ ಪರಿಸ್ಥಿತಿಗೆ ಸಂಬಂಧಿಸಿದ ಸಲಹೆಗಳನ್ನು ಪಡೆಯಲು ಸಾಧ್ಯವಾಗಲಿದೆ.

ಕೀಟ ಮತ್ತು ರೋಗಗಳ ಮಾಹಿತಿ:
ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಕೀಟ ಹಾಗೂ ರೋಗಗಳ ನಿರ್ವಹಣೆಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿಯನ್ನು ಒದಗಿಸುವ ವ್ಯವಸ್ಥೆ ಇದಾಗಿದೆ.

ಮಾರುಕಟ್ಟೆ ಮಾಹಿತಿ:
ಕೃಷಿ ಉತ್ಪನ್ನಗಳ ಮಾರುಕಟ್ಟೆ ಬೆಲೆ ಸೇರಿದಂತೆ ರೈತರ ನಿರ್ಧಾರಕ್ಕೆ ಅಗತ್ಯವಾದ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಗುರಿ ಹೊಂದಿದೆ

ಸರ್ಕಾರಿ ಯೋಜನೆಗಳ ಮಾಹಿತಿ:
ಮೊದಲ ಹಂತದಲ್ಲಿ PM-KISAN, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಮಣ್ಣಿನ ಆರೋಗ್ಯ ಕಾರ್ಡ್, ಕಿಸಾನ್ ಕ್ರೆಡಿಟ್ ಕಾರ್ಡ್ ಸೇರಿದಂತೆ 10 ಪ್ರಮುಖ ಕೇಂದ್ರ ಯೋಜನೆಗಳನ್ನು ವೇದಿಕೆಗೆ ಸಂಯೋಜಿಸಲಾಗಿದೆ.

ಭಾರತ್-ವಿಸ್ತಾರ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಭಾರತ್-ವಿಸ್ತಾರ್ ವಿವಿಧ ಕೃಷಿ ದತ್ತಾಂಶ ಮತ್ತು ವೈಜ್ಞಾನಿಕ ಮಾಹಿತಿಯನ್ನು AI ವ್ಯವಸ್ಥೆಯ ಮೂಲಕ ಸಂಯೋಜಿಸಿ ರೈತರಿಗೆ ಸಲಹೆ ನೀಡುವ ರೀತಿಯಲ್ಲಿ ರೂಪಿಸಲಾಗಿದೆ. ರೈತರ ಪ್ರಶ್ನೆಗಳಿಗೆ ಉತ್ತರಿಸುವುದರ ಜತೆಗೆ ಸ್ಥಳ, ಬೆಳೆ ಮತ್ತು ಕೃಷಿ ಪರಿಸ್ಥಿತಿಗೆ ಸಂಬಂಧಿಸಿದ ಮಾಹಿತಿಯನ್ನು ಬಳಸಿಕೊಂಡು ವೈಯಕ್ತಿಕ ಸಲಹೆ ನೀಡುವುದು ಇದರ ಉದ್ದೇಶವಾಗಿದೆ.

ಇದು ಕೇವಲ ಮೊಬೈಲ್ ಆ್ಯಪ್‌ಗೆ ಸೀಮಿತವಾಗಿಲ್ಲ. 155261 ಸಂಖ್ಯೆಯ ಮೂಲಕ ಧ್ವನಿ ಆಧಾರಿತ ಸೇವೆ ಹಾಗೂ IVRS ಸೌಲಭ್ಯವನ್ನೂ ಒದಗಿಸಲಾಗಿದೆ. ಹೀಗಾಗಿ ಸ್ಮಾರ್ಟ್‌ಫೋನ್ ಇಲ್ಲದ ರೈತರೂ ಸೇವೆ ಬಳಸಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.

ಆರಂಭವಾಗಿದೆ ಸೇವೆ

ಭಾರತ್-ವಿಸ್ತಾರ್‌ನ ಮೊದಲ ಹಂತವನ್ನು 2026ರ ಫೆಬ್ರವರಿ 17ರಂದು ಆರಂಭಿಸಲಾಗಿದೆ. ಪ್ರಸ್ತುತ ಮೊದಲ ಹಂತದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸೇವೆ ಲಭ್ಯವಿದ್ದು, ಮುಂದಿನ ಹಂತಗಳಲ್ಲಿ ಮತ್ತಷ್ಟು ಭಾರತೀಯ ಭಾಷೆಗಳನ್ನು ಸೇರಿಸುವ ಯೋಜನೆ ಇದೆ

ಒಟ್ಟಿನಲ್ಲಿ, ಕೃಷಿ ಮಾಹಿತಿ ವಿವಿಧ ವೇದಿಕೆಗಳಲ್ಲಿ ಚದುರಿಹೋಗಿರುವ ಪರಿಸ್ಥಿತಿಯಲ್ಲಿ ಅವುಗಳನ್ನು AI ಆಧಾರಿತ ಒಂದೇ ವ್ಯವಸ್ಥೆಯಡಿ ತಂದು, ರೈತರಿಗೆ ವೈಜ್ಞಾನಿಕ ಮತ್ತು ಸ್ಥಳಾಧಾರಿತ ಸಲಹೆಗಳನ್ನು ಸುಲಭವಾಗಿ ತಲುಪಿಸುವುದು ಭಾರತ್-ವಿಸ್ತಾರ್‌ನ ಪ್ರಮುಖ ಉದ್ದೇಶವಾಗಿದೆ.

ಈ ಲೇಖನಗಳನ್ನೂ ಓದಿ

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group