spot_img
Sunday, October 4, 2026
spot_imgspot_img
- Advertisement -spot_img

ಅಡಿಕೆ ತ್ಯಾಜ್ಯದಿಂದ ಇವರ ಕೈಯಲ್ಲಿ ಅರಳಿತು ಸುಂದರ ಕಲಾಕೃತಿಗಳು!

ಬರಹ: ರಾಧಾಕೃಷ್ಣ ತೊಡಿಕಾನ ಪ್ರಸಾದ್ ಶೆಣೈ 

ಶ್ರೀಕೃಷ್ಣನ ಸಾರಥ್ಯದ ರಥವೇರಿ ರಣಾಂಗಣಕ್ಕೆ ಹೊರಟ ಅರ್ಜುನ, ಧ್ಯಾನಸ್ಥ ಬುದ್ಧ, ವಿಘ್ನ ವಿನಾಶಕ ಗಣಪತಿ, ಜಾನಪದ ಲೋಕದ ಬದುಕನ್ನು ಬಿಂಬಿಸುವ ವಿವಿಧ ಮುಖಗಳು, ಪ್ರಾಣಿ–ಪಕ್ಷಿಗಳು. ಎಲ್ಲವೂ ಕಲಾಕೃತಿಗಳು ಕರಕುಶಲತೆಯ ಪ್ರತೀಕಗಳು. ಈ ಕಲಾಕೃತಿಗಳ ವಿಶೇಷತೆ ಎಂದರೆ ಅವುಗಳ ಹಿಂದಿರುವ ಮೂಲ ವಸ್ತು ಅಡಿಕೆಯ ತ್ಯಾಜ್ಯ. ಬೇಡವೆಂದು ಬಿಸಾಡುವ ತ್ಯಾಜ್ಯವೇ ಇಲ್ಲಿ ಕಲಾಕೃತಿಗಳಾಗಿ ಹೊಸ ರೂಪ ಪಡೆದುಕೊಂಡಿದೆ. ಕೆಲವೊಮ್ಮೆ ತ್ಯಾಜ್ಯವೆನಿಸುವ ವಸ್ತುವೊಂದು ಕಲಾತ್ಮಕ ಸ್ಪರ್ಶದಿಂದ ಆಪ್ತವಾಗುತ್ತದೆ. ಮನೆಯ ಅಲಂಕಾರಿಕ ವಸ್ತುವಾಗಿ ಅಯಕಟ್ಟಿನ ಜಾಗವನ್ನು ಅಲಂಕರಿಸುತ್ತದೆ. ಇಂತಹ ಕಲಾತ್ಮಕ ಪ್ರಯೋಗಗಳಿಗೆ ಜೀವ ತುಂಬುತ್ತಿರುವವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾದ ಶ್ರೀಮತಿ ಜಯಶ್ರೀ ವಿನಾಯಕ ಹೆಗಡೆ.

ಅಡಿಕೆ ಕೃಷಿಕ ಕುಟುಂಬದ ಹಿನ್ನೆಲೆಯ ಜಯಶ್ರೀ ಅವರು ಪಾರಂಪರಿಕ ಅಡಿಕೆ ಕೃಷಿಯ ಕೆಲಸಗಳ ನಡುವೆಯೂ ತಮ್ಮಲ್ಲಿರುವ ಸೃಜನಶೀಲತೆಯನ್ನು ಕರಕುಶಲ ಕಲೆ ಮೂಲಕ ಅನಾವರಣಗೊಳಿಸಿದ್ದಾರೆ. ಅಡಿಕೆಯನ್ನು ಸುಲಿದು ಬೇರ್ಪಡಿಸುವ ಸಂದರ್ಭದಲ್ಲಿ ದೊರೆಯುವ ತ್ಯಾಜ್ಯ, ಧೂಳಿನ ಕಣಗಳು ಅವರ ಕಲಾಕೃತಿಯ ಸಂಪನ್ಮೂಲ ವಸ್ತುಗಳು. ಇದಲ್ಲದೆ ಗೆರಟೆ ಬಿದಿರು ಮೊದಲಾದ ಪರಿಸರಸ್ನೇಹಿ ವಸ್ತುಗಳನ್ನು ಕಲಾಕೃತಿಗಳ ತಯಾರಿಕೆಗೆ ಬಳಸಿಕೊಳ್ಳುತ್ತಿದ್ದಾರೆ.

    ತ್ಯಾಜ್ಯವೇ ಸಂಪನ್ಮೂಲ

ಕರಕುಶಲ ವಸ್ತುಗಳನ್ನು ತಯಾರಿಸುವಲ್ಲಿ ಮೊದಲಿನಿಂದಲೂ ಅವರಿಗೆ ಆಸಕ್ತಿ. ಅದಕ್ಕಾಗಿ ಸುತ್ತಮುತ್ತ ಹುಡುಕಾಡುತ್ತಿದ್ದಾಗ ಜಯಶ್ರೀ ಅವರಿಗೆ ಅಡಿಕೆ ತ್ಯಾಜ್ಯವೇ ಹೊಸ ಸಂಪನ್ಮೂಲವಾಗಿ ಕಂಡಿತು. ಆರಂಭದಲ್ಲಿ ಇದು ಹೊಸ ಪ್ರಯೋಗ. ಸೋಲು ಗೆಲುವಿನ ಅಳುಕು. ಆದರೂ ನಿಧಾನವಾಗಿ ಅದೇ ಅವರ ಸಾಧನೆಯ ಹಾದಿಯನ್ನು ತೆರೆದಿಟ್ಟಿತು.

ಅಡಿಕೆ ತ್ಯಾಜ್ಯದಿಂದ ದೇವರ ವಿವಿಧ ಮೂರ್ತಿಗಳು, ಪುರಾಣ–ಇತಿಹಾಸದ ಮಹಾಪುರುಷರ ಪ್ರತಿಕೃತಿಗಳು, ಪ್ರಾಣಿ–ಪಕ್ಷಿಗಳ ರೂಪಗಳು, ಜಾನಪದ ಬದುಕಿನ ಚಿತ್ರಣಗಳು ಸೇರಿದಂತೆ ಅನೇಕ ಬಗೆಯ ಕಲಾಕೃತಿಗಳು ಮೂಡಿಬಂದಿವೆ. ಸಾಮಾನ್ಯವಾಗಿ ಕಣ್ಣಿಗೆ ಕಂಡರೂ ಕಾಣದಂತಿರುವ ತ್ಯಾಜ್ಯ ವಸ್ತುಗಳಿಗೆ ಕಲ್ಪನೆ ಮತ್ತು ಕರಕುಶಲತೆಯ ಸ್ಪರ್ಶ ದೊರೆತಾಗ ಅವು ಎಷ್ಟು ಸುಂದರವಾದ ರೂಪ ಪಡೆದುಕೊಳ್ಳಬಹುದು ಎಂಬುದಕ್ಕೆ ಜಯಶ್ರೀ ಅವರ ಕಲಾಕೃತಿಗಳು ಸಾಕ್ಷಿಯಾಗಿವೆ.

ತಮ್ಮ ಕಲಾತ್ಮಕ ಚಟುವಟಿಕೆಗಳಿಗೆ ಇನ್ನಷ್ಟು ವ್ಯವಸ್ಥಿತ ರೂಪ ಮತ್ತು ವಿಸ್ತರಿತ ನೋಟ ನೀಡುವ ಉದ್ದೇಶದಿಂದ ಅವರು ‘ಅರಿಕಾ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅಡಿಕೆ ತ್ಯಾಜ್ಯ ಹಾಗೂ ಇತರ ಪರಿಸರಸ್ನೇಹಿ ವಸ್ತುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಮೂಲಕ ತಮ್ಮ ಪ್ರತಿಭೆಯನ್ನು ಉದ್ಯಮದ ರೂಪಕ್ಕಿಳಿಸಿದ್ದಾರೆ. ಬಿಸಾಡುವ ವಸ್ತುವಿಗೂ ಬೆಲೆ ಇದೆ; ಅದನ್ನು ಗುರುತಿಸುವ ಸೃಜನಶೀಲ ಕಣ್ಣು ಮತ್ತು ರೂಪ ನೀಡುವ ಕೈಚಳಕ ಇದ್ದರೆ ಸಾಕು.

ಅಡಿಕೆ ತ್ಯಾಜ್ಯದಿಂದ ಅರಳದ ಕಲಾಕೃತಿಗಳಿಲ್ಲ ಎನ್ನುವಷ್ಟರ ಮಟ್ಟಿಗೆ ಇವರ ಪ್ರಯೋಗಗಳು ವೈವಿಧ್ಯಮಯವಾಗಿವೆ. ದೇವರ ಮೂರ್ತಿಗಳು, ಪ್ರಾಣಿ–ಪಕ್ಷಿಗಳು, ಜನಪದೀಯ ಬದುಕಿನ ವಿವಿಧ ಚಿತ್ರಣಗಳು, ಅಲಂಕಾರಿಕ ವಸ್ತುಗಳು ಹೀಗೆ ಹಲವು ಬಗೆಯ ಉತ್ಪನ್ನಗಳು ಇವರ ಕೈಚಳಕದಿಂದ ರೂಪುಗೊಳ್ಳುತ್ತವೆ. ಸ್ಮರಣಿಕೆಗಳು ಹಾಗೂ ಉಡುಗೊರೆ ವಸ್ತುಗಳ ಜೊತೆಗೆ ತೆಂಗಿನ ಗೆರಟೆ, ಬಿದಿರು ಮುಂತಾದ ಪರಿಸರಸ್ನೇಹಿ ವಸ್ತುಗಳನ್ನೂ ಕಲಾಕೃತಿಗಳ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ನಿರ್ದಿಷ್ಟ ಗಾತ್ರ ಮತ್ತು ವಿನ್ಯಾಸದ ಕಲಾಕೃತಿಗಳನ್ನೂ ತಯಾರಿಸಿಕೊಡುತ್ತಾರೆ. ಸುಮಾರು 100ರಿಂದ 1500 ರೂಪಾಯಿವರೆಗೆ ವಿವಿಧ ಬೆಲೆಯ ಕಲಾಕೃತಿಗಳಿವೆ. ಕಲಾಕೃತಿಯ ಗಾತ್ರ, ವಿನ್ಯಾಸ ಹಾಗೂ ತಯಾರಿಕೆಗೆ ಬೇಕಾಗುವ ಶ್ರಮದ ಆಧಾರದ ಮೇಲೆ ಬೆಲೆ ನಿಗದಿಯಾಗುತ್ತದೆ.

ಗ್ರಾಮೀಣ ಉದ್ಯೋಗಕ್ಕೂ ದಾರಿ

ಜಯಶ್ರೀ ಅವರ ಕಲಾಕೃತಿ ತಯಾರಿಕೆಯ ಪ್ರಯತ್ನ ಕೇವಲ ವೈಯಕ್ತಿಕ ಸೃಜನಶೀಲತೆಯ ಅಭಿವ್ಯಕ್ತಿಯಾಗಿ ಉಳಿದಿಲ್ಲ. ಸ್ಥಳೀಯವಾಗಿ ದೊರೆಯುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲೇ ಉದ್ಯೋಗದ ಅವಕಾಶಗಳನ್ನೂ ತೆರೆದಿರಿಸಿದೆ. ದೊಡ್ಡ ಪ್ರಮಾಣದ ಸಂಪನ್ಮೂಲ ಅಥವಾ ಬಂಡವಾಳದ ಅವಶ್ಯಕತೆ ಇಲ್ಲದೆ ಸ್ಥಳೀಯವಾಗಿ ಲಭ್ಯವಿರುವ ತ್ಯಾಜ್ಯ ಮತ್ತು ಪರಿಸರಸ್ನೇಹಿ ವಸ್ತುಗಳಿಗೆ ಮೌಲ್ಯ ನೀಡುವ ಮೂಲಕ ಸಣ್ಣ ಪ್ರಮಾಣದ ಕರಕುಶಲ ಉದ್ಯಮವನ್ನು ಬೆಳೆಸಬಹುದು ಎಂಬುದನ್ನು ಜಯಶ್ರೀ ಅವರ ಪ್ರಯತ್ನ ತೋರಿಸಿಕೊಟ್ಟಿದೆ.

ಅಡಿಕೆ ಕೃಷಿಯೊಂದಿಗೆ ಕರಕುಶಲತೆಯನ್ನೂ ಬೆಸೆದುಕೊಂಡಿರುವ ಜಯಶ್ರೀ ಅವರು ಕೃಷಿ ತ್ಯಾಜ್ಯವನ್ನು ಸಮಸ್ಯೆಯಾಗಿ ನೋಡುವ ಬದಲು ಅದರಲ್ಲಿ ಅಡಗಿರುವ ಕಲಾ ಸಾಧ್ಯತೆಯನ್ನು ಗುರುತಿಸಿದ್ದಾರೆ. ತ್ಯಾಜ್ಯಕ್ಕೆ ಹೊಸ ರೂಪ, ಹೊಸ ಮೌಲ್ಯ ನೀಡುವ ಅವರ ಸೃಜನಶೀಲ ಪ್ರಯತ್ನ ಪರಿಸರ ಸಂರಕ್ಷಣೆಯ ಜೊತೆಗೆ ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೂ ಪೂರಕವಾಗಿದೆ. ಮಾಹಿತಿಗೆ-9449994918

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group