spot_img
Wednesday, January 15, 2025
spot_imgspot_img
spot_img
spot_img

ಗರಿಕೆ ಕೃಷಿಯಲ್ಲೂ ಇದೆ ಭರ್ಜರಿ ಅವಕಾಶ:ಗರಿಕೆ ಹುಲ್ಲಿನ ಈ ಮಹತ್ವ ತಿಳಿಯಿರಿ:

ಆರೋಗ್ಯವೆಂದರೆ ಯಾವುದೇ ರೀತಿಯ ಕಾಯಿಲೆಗಳು,  ಗಾಯಗಳು ಇಲ್ಲದೆ ಸುಸೂತ್ರವಾಗಿ ತಮ್ಮ ಕೆಲಸ ಕಾರ್ಯಗಳನ್ನು ಜನರು ಮಾಡಿಕೊಳ್ಳುವ ಸಹಜ ಸ್ಥಿತಿ. ಸಕಲ ಜೀವರಾಶಿಗಳ ರೋಗ ರುಜಿನಗಳನ್ನು ಗುಣಪಡಿಸಲು ಬೇಕಾಗುವ ಅಸಂಖ್ಯಾತ ಗಿಡಮೂಲಿಕೆಗಳನ್ನು ಲೋಹಗಳನ್ನು ಒಪ್ಪುಗಳನ್ನು ಭೂ ಮಾತೆ ನೀಡಿದ್ದಾಳೆ. ಅಂಥವುಗಳಲ್ಲಿ ಗರಿಕೆ ಹುಲ್ಲು ಸೇರಿದೆ.

ಗರಿಕೆ ಹುಲ್ಲು ದನಕರುಗಳಿಗೆ ಆಹಾರ, ರೋಗರುಜಿನಗಳಿಗೆ ಔಷಧಿ ಮತ್ತು ವಿಘ್ನೇಶ್ವರನ ಪೂಜೆಗೆ ಬಳಸುವ ಪವಿತ್ರ ಪತ್ರೆ.. ಅಂಬಟೆ ಹುಲ್ಲು, ಕರಿಕೆ ಹುಲ್ಲು, ಕರ್ಕೆರಿ ಹುಲ್ಲು, ಕಾಡು ಗರಿಕೆ ಕುಡಿಗರಿಕೆ ಹುಲ್ಲು, ಹರಿಯಾಳಿ ಹುಲ್ಲು, ಎಂಬುದಾಗಿ ಕನ್ನಡದಲ್ಲಿ ಇತರ ಹೆಸರುಗಳಿವೆ. ಸಂಸ್ಕೃತದಲ್ಲಿ ದೂರ್ವ, ಹರಿ ತಾಳಿ, ಹಿಂದಿಯಲ್ಲಿ ಧುಬ್, ಹರಿಯಾಳಿ; ತಮಿಳಿನಲ್ಲಿ ಅರುಗಮ್ ಪುಲ್ಲು, ತೆಲುಗಿನಲ್ಲಿ ಗರಿಕೆ, ಹರಿವಾಳಿ, ಮತ್ತು ಇಂಗ್ಲೀಷಿನಲ್ಲಿ ಕೌಚ್ ಗ್ರಾಸ್, ಕ್ರೀಪಿಂಗ್ ಗ್ರಾಸ್, ಬಹಮಾ ಗ್ರಾಸ್, ಡನ್ ಗ್ರಾಸ್, ಬೆರ್ಮುಡಾ ಗ್ರಾಸ್, ವೈರ್ ಗ್ರಾಸ್ ಮುಂತಾದ ಹೆಸರುಗಳಿವೆ.ಸೈನೋಡಾನ್ ಡ್ಯಾಕ್ಟಿಲೋನ್ ಎಂಬುದು ಲ್ಯಾಟಿನ್ ಭಾಷೆಯಲ್ಲಿ ಗರಿಕೆ ಹುಲ್ಲಿನ ವೈಜ್ಞಾನಿಕ ಹೆಸರಾಗಿದೆ.ಪೊಯೇಸಿ/ಗ್ರಾಮಿನೇ ೆ ಎಂಬ ಸಸ್ಯವರ್ಗ ಶಾಸ್ತçಜ್ಞರು ಗರಿಕೆ ಹುಲ್ಲನ್ನು ಸೇರಿಸಿದ್ದಾರೆ

ಗರಿಕೆ ಹುಲ್ಲು ರೈತರ ಜಮೀನುಗಳಲ್ಲಿ ಅಲ್ಲದೆ ಎಲ್ಲೆಲ್ಲಿ ಅದಕ್ಕೆ ಅನುಕೂಲಕರ ವಾತಾವರಣವಿದೆ ಅಲ್ಲೆಲ್ಲಾ ಬೆಳೆಯುತ್ತದೆ . ರೈತರು ತಿಳಿಯದೆ ಕಳೆಯೆಂದು ಕಿತ್ತು ಹಾಕುತ್ತಾರೆ. ದನಕರುಗಳಿಗೆ ಮೇವಾಗಿ ಕೊಡುತ್ತಾರೆ. ಗರಿಕೆ ಹುಲ್ಲು ಎಲ್ಲಾ ಕಡೆಯೂ ದೊರೆಯುತ್ತದೆ. ತುಳಸಿ, ಬಿಲ್ವಪತ್ರೆಯಂತೆ ಗರಿಕೆ ಹುಲ್ಲನ್ನು ದೇವರ ಪೂಜೆಗೆ ಬಳಸುತ್ತಾರೆ. ಶಿವಪುತ್ರ ಗಣೇಶನಿಗೆ ಪೂಜಿಸುವ ಪೂಜೆ ಸಲ್ಲಿಸುವಾಗ ಬಳಸುತ್ತಾರೆ. ತಾವು ಕೈಗೊಳ್ಳುವ ಕೆಲಸ ಕಾರ್ಯಗಳನ್ನು ನಿರ್ವಿಘ್ನವಾಗಿ ನೆರವೇರಿ ಒಳ್ಳೆಯದು. ಮಾಡು ಎಂದು ಗಣೇಶನಲ್ಲಿ ಬೇಡಿಕೊಳ್ಳುತ್ತಾರೆ. ನಮ್ಮ ಹಿರಿಯರು ಸುಖಾಸುಮ್ಮನೆ ಗರಿಕೆ ಹುಲ್ಲಿಗೆ ಮಹತ್ವ ನೀಡಿ ಪೂಜೆಗೆ ಬಳಸುತ್ತಿಲ್ಲ. ಅವರು ಗರಿಕೆ ಹುಲ್ಲಿನಲ್ಲಿರುವ ಅಪಾರ ಔಷಧಿಯ ಶಕ್ತಿಯನ್ನು ತಮ್ಮ ಅನುಭವಗಳಿಂದ ತಿಳಿದುಕೊಂಡು ಅದಕ್ಕೆ ಪವಿತ್ರ ಸ್ಥಾನ ನೀಡಿದ್ದಾರೆ. ದೇವರನ್ನು  ನಂಬದವರು ಅದರ ಸಂಕೇತವನ್ನು ಅರಿತುಕೊಳ್ಳಬಹುದು

ಜನರು ಆರೋಗ್ಯವಾಗಿರಬೇಕಾದರೆ ಶರೀರ ಧರ್ಮಗಳಾದ ದ್ರವ್ಯ, ಶಕ್ತಿ ಮತ್ತು  ಪ್ರಜ್ಞೆಯೂ ಸುಸ್ಥಿಯಲ್ಲಿ ಇರಬೇಕು. ಗರಿಕೆ ಹುಲ್ಲಿನ ರಸವು  ಈ ಶರೀರ ಧರ್ಮಗಳನ್ನು ಸುಸ್ಥಿತಿಯಲ್ಲಿಡುವಲ್ಲಿ ತನ್ನದೇ ಆದ ರೀತಿಯಲ್ಲಿ ಸಹಾಯಕವಾಗಿರುವುದರಿಂದ ಪ್ರಕೃತಿ ಚಿಕಿತ್ಸೆ, ಆಯುರ್ವೇದ, ನಾಟಿ ಪದ್ಧತಿ, ಮೂಲಿಕಾ ವಿಜ್ಞಾನ ಆಧಾರಿತ ಸಿದ್ಧ ವೈದ್ಯಕೀಯ ಪದ್ಧತಿಗಳಲ್ಲಿ ಔಷಧಿಯ ರೂಪದಲ್ಲಿ ಬಳಸಲಾಗುತ್ತಿದೆ.

ಗರಿಕೆ ಹುಲ್ಲು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಬಲಶಾಲಿ ಅರಣ್ಯ ಪ್ರಾಣಿಯಾದ ಆನೆಗೆ ಗರಿಕೆ ಪ್ರಿಯವಾದ ತಿನಿಸು ಎಂದು ಮಾವುತರು ಹೇಳುತ್ತಾರೆ. ಎಲಿಫ್ಯಾಂಟಿಡ ಪ್ರಭೇದಕ್ಕೆ ಸೇರಿದ ಅನೇಕ ಪ್ರಾಣಿಗಳು ನಶಿಸಿ ಹೋದರೂ ಆನೆ ಉಳಿದುಕೊಂಡಿದೆ. ಇದು ಗರಿಕೆಯ ಮಹತ್ವವನ್ನು ತಿಳಿಸುತ್ತದೆ. ಸಿದ್ಧ ವೈದ್ಯರ ಪ್ರಕಾರ ಸಕಲ ವಿಧವಾದ ರೋಗರುಜಿನ ಪೀಡಿತರಿಗೆ ಒಂದಲ್ಲ ಒಂದು ರೀತಿಯಲ್ಲಿ ಗರಿಕೆ ಪರಿಣಾಮಕಾರಿಯಾಗಿರುತ್ತದೆ. ಸಿದ್ಧ ವೈದ್ಯರು ಕಾಯಿಲೆಯಿಂದ ದುರ್ಬಲಗೊಂಡವರಿಗೆ ಚೈತನ್ಯ ಮರುಕಳಿಸಲು ಗರಿಕೆಯನ್ನು ಬಳಸುತ್ತಾg.É ಬುದ್ಧಿ ಚುರುಕುಗೊಳ್ಳಲು ಚೈತನ್ಯ ಮರುಕಳಿಸಲು ಗರಿಕೆಯನ್ನು ಬಳಸುತ್ತಾರೆ.

ಬುದ್ಧಿ ಚುರುಕುಗೊಳ್ಳಲು ನೆರವಾಗುವ ಗರಿಕೆ ಚರ್ಮ ಕಾಂತಿಯನ್ನು ಹೆಚ್ಚಿಸುತ್ತದೆ. ಮೈಕೈ ಕಡಿತ, ಗುಳ್ಳೆಗಳು, ಚರ್ಮದಲ್ಲಿ ಹೊಟ್ಟು ಉದುರುವುದು, ಇಸುಬು ಮುಂತಾದ ಚರ್ಮ ರೋಗಗಳನ್ನು ವಾಸಿ ಮಾಡುವಲ್ಲಿ ಗರಿಕೆ ಪರಿಣಾಮಕಾರಿಯಾಗುತ್ತದೆ. ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಗರಿಕೆ ಹುಲ್ಲು ಸಹಕಾರಿ. ಹಾಲು ಬೆಲ್ಲದೊಂದಿಗೆ ಗರಿಕೆ ಹುಲ್ಲು ರಸ ಕುಡಿದರೆ ರಕ್ತ ಪುಷ್ಟಿ ದೊರೆಯುತ್ತದೆ.

ಗರಿಕೆ ಹುಲ್ಲಿನಿಂದ ಸಿದ್ಧೌಷಧವನ್ನು ತಯಾರಿಸಿಕೊಳ್ಳುವುದರ ಬಗೆಗೆ ವೈದ್ಯರು ಹೆಚ್ಚಿನ ಮಾಹಿತಿ ನೀಡುತ್ತಾರೆ. ಆಯುರ್ವೇದ, ನಾಟಿ ಪದ್ಧತಿ, ಪ್ರಕೃತಿ ಚಿಕಿತ್ಸೆಗಳಲ್ಲಿ ಗರಿಕೆ ಹುಲ್ಲನ್ನು ಬಳಸಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲಾಗುತ್ತದೆ. ಮೂಗಿನಿಂದ ಉಂಟಾಗುವ ರಕ್ತಸ್ರಾವ, ಮೂತ್ರ ವಿಸರ್ಜನೆ ಸಮಸ್ಯೆ,  ಗಾಯಗಳು,  ಕಜ್ಜಿ, ತುರಿಕೆ, ನವೆ, ದದ್ದು, ಕುರುವಾಗುವುದು, ಮೂಲವ್ಯಾಧಿ, ವಾಂತಿ, ಜ್ವರ,  ಹಸಿವಿಲ್ಲದಿರುವುದು, ಅಜೀರ್ಣ, ನಿಶ್ಯಕ್ತಿ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಗರಿಕೆಯಿಂದ ಔಷಧಿ ತಯಾರಿಸಿ ಆಯುರ್ವೇದ, ನಾಟಿ, ಪ್ರಕೃತಿ ಚಿಕಿತ್ಸೆ ವೈದ್ಯರು ರೋಗಿಗಳಿಗೆ ನೀಡುತ್ತಾರೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಗರಿಕೆ ಹುಲ್ಲಿನ ಔಷಧಿ ಕೊಡುವಾಗ ಆರೋಗ್ಯ ಸಮಸ್ಯೆಗೆ ಅನುಗುಣವಾಗಿ ಗೋವಿನ ಹಾಲು, ತಾಟಿ ಬೆಲ್ಲ, ಶುದ್ಧ ಕೊಬ್ಬರಿ ಎಣ್ಣೆ, ಅರಿಶಿಣ, ನೀರು ಜೇನುತುಪ್ಪಗಳನ್ನು ಆಯುರ್ವೇದ ವೈದ್ಯರು ಬಳಸುತ್ತಾರೆ. ಸಿದ್ದ ವೈದ್ಯರು ಸಿದ್ಧೌಷಧಿಗಳನ್ನು ಆರೋಗ್ಯ ಸಮಸ್ಯೆಗಳಿಗೆ ಅನುಗುಣವಾಗಿ ಕಾಳುಮೆಣಸು, ಜೀರಿಗೆ, ಎಳ್ಳೆಣ್ಣೆ, ಅರಿಶಿಣ, ನೆಲನೆಲ್ಲಿ, ಮೊಸರು, ಬೆಣ್ಣೆ, ಹಾಲು, ಕಲ್ಲುಸಕ್ಕರೆ, ಮುಂತಾದವುಗಳನ್ನು ಬಳಸುತ್ತಾರೆ.

ಗರಿಕೆ ಹುಲ್ಲನ್ನು ಹೇಗೆ ಬಳಸುವುದು, ಹೇಗೆ ಅದರಿಂದ ಪ್ರಯೋಜನ ಪಡೆಯುವುದು ಎಂಬ ಪ್ರಶ್ನೆಗಳು ಬರುತ್ತವೆ. ಆಯುರ್ವೇದ, ಪ್ರಕೃತಿ ಚಿಕಿತ್ಸೆ, ನಾಟಿ ಔಷಧಿ, ಸಿದ್ಧ ಪದ್ಧತಿ, ರೋಗ ಸಮಸ್ಯೆಗಳು ಮತ್ತು ಆರೋಗ್ಯ ವೃದ್ಧಿ ಇವುಗಳನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಂಡು ಗರಿಕೆ ಹುಲ್ಲನ್ನು ಬಳಸಿ ಔಷಧಿಗಳನ್ನು ನೀಡುತ್ತಾರೆ. ರೋಗ ಬರದಂತೆ ಜನರು ಗರಿಕೆ ಹುಲ್ಲನ್ನು ಸದ್ಬಳಕೆ ಮಾಡಿಕೊಳ್ಳುವ ಸುಲಭ ಉಪಾಯವೆಂದರೆ ಕಷಾಯವನ್ನು ತಯಾರಿಸಿಕೊಳ್ಳುವುದು, ಸುಖೋಷ್ಣದಲ್ಲ್ಲಿ ಕಷಾಯವನ್ನು ಕುಡಿಯುವುದು, ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ಅನೇಕರಿಗೆ ಅವರ ದೇಹಪ್ರಕೃತಿಯೇ ತಿಳಿಸುತ್ತದೆ

ರೈತರಿಗೆ ತಮ್ಮ ಜಮೀನುಗಳಲ್ಲಿ ಗರಿಕೆ ಹುಲ್ಲು ಯಥೇಚ್ಛವಾಗಿ ಸಿಗುತ್ತದೆ. ದನಕರುಗಳಿಗೆ ಇದನ್ನು ಮೇವಾಗಿ ಬಳಸುತ್ತಾರೆ. ನಗರವಾಸಿಗಳು ಮತ್ತು ಎಲ್ಲರಿಗೂ ಬೆಳಿಗ್ಗೆ ವಾಕಿಂಗ್ ಹೋದಾಗ ಅಲ್ಲಲ್ಲಿ ಬೆಳೆದಿರುವ ಗರಿಕೆ ಹುಲ್ಲನ್ನು ಕಿತ್ತು ತರಬಹುದು. ಗರಿಕೆ ಹುಲ್ಲಿನ ಬೇರು ಬಂದರೂ ಒಳ್ಳೆಯದು. ಭೂಮಿಯಲ್ಲಿ ಕೆಲವು ಬೇರುಗಳು ಉಳಿದು ಗರಿಕೆ ಹುಲ್ಲು ನಿರಂತರವಾಗಿ ಬೆಳೆಯುತ್ತಿರುತ್ತದೆ. ಮನೆಗೆ ತಂದ ಗರಿಕೆ ಹುಲ್ಲು ಮತ್ತು ಬೇರುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಸ್ವಚ್ಛತೆ ಬಹಳ ಮುಖ್ಯ. ಮನೆಯಲ್ಲಿ ೫ ಜನರಿದ್ದರೆ ಆರು ಲೋಟ ನೀರನ್ನು ಒಲೆಯ ಮೇಲಿಟ್ಟು ಶುದ್ಧೀಕರಿಸಿದ ಗರಿಕೆ ಹುಲ್ಲನ್ನು ಅಡಿಗೆ ಮನೆಯ ಕತ್ತರಿಯಲ್ಲಿ ಚೂರುಚೂರಾಗಿ ಕತ್ತರಿಸಿ ಒಲೆಯ ಮೇಲಿರುವÀ ನೀರಿಗೆ ಹಾಕಬೇಕು. ಕುದಿಯುತ್ತಿದ್ದಂತೆ ನೀರು ಹುಲ್ಲಿನ ಹಸಿರು ಬಣ್ಣಕ್ಕೆ ಬರುತ್ತದೆ. ಕಷಾಯ ಸಿದ್ಧಗೊಳ್ಳುತ್ತದೆ. ಈ ಕಷಾಯವನ್ನು ಹಾಗೆಯೇ ಸಪ್ಪೆಯಾಗಿ ಕುಡಿಯಬಹುದು. ಜೇನುತುಪ್ಪ, ನಿಂಬೆ ಹಣ್ಣಿನ ರಸದೊಂದಿಗೆ ಅಥವಾ ಜೇನುತುಪ್ಪ, ಬೆಲ್ಲದೊಂದಿಗೆ ಕುಡಿಯಬಹುದು. ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯಗುತ್ತದೆ.

-ಬಸವರಾಜ್ ಮೈಸೂರು

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group