spot_img
Friday, October 11, 2024
spot_imgspot_img
spot_img
spot_img

ಕೃಷಿಕರೇ, ಹೈನುರಾಸುಗಳಿಗೆ ನೀಡಿ ಸಮತೋಲನ ಆಹಾರ:ಈ ಬರಹ ಓದಿ

ಪಶು ಆಹಾರದಲ್ಲಿ ಶಕ್ತಿ ಮತ್ತು ಸಸಾರಜನಕವನ್ನು ಪೂರೈಸುವ ಪದಾರ್ಥಗಳು, ಲವಣಾಂಶಗಳು ಮತ್ತು ಜೀವಸತ್ವಗಳನ್ನು ಸೇರಿಸಲಾಗುತ್ತದೆ. ಏಕದಳ ಧಾನ್ಯಗಳಾದ ಜೋಳ, ಮುಸುಕಿನ ಜೋಳ, ಗೋಧಿ, ರಾಗಿ, ನವಣೆ ಇತ್ಯಾದಿ ಶರ್ಕರ ಪಿಷ್ಠಗಳನ್ನು ಪೂರೈಸುವ ಪ್ರಧಾನ ಪದಾರ್ಥಗಳಾಗಿವೆ. ಎಣ್ಣೆಕಾಳು ಹಿಂಡಿಗಳಲ್ಲಿ ಮುಖ್ಯವಾಗಿ ಕಡಲೆಕಾಯಿ ಹಿಂಡಿ, ಹತ್ತಿ ಬೀಜದ ಹಿಂಡಿ, ಅಗಸೆ, ಸೂರ್ಯಕಾಂತಿ ಹಿಂಡಿ, ಎಳ್ಳು ಹಿಂಡಿ ಸಸಾರಜನಕವನ್ನು ಪೂರೈಸುತ್ತವೆ. ಪಶು ಆಹಾರದಲ್ಲಿ ಎಣ್ಣೆಕಾಳು ಹಿಂಡಿಯು ಶೇಕಡ ಮೂವತ್ತಕ್ಕಿಂತ ಹೆಚ್ಚಿರಬಾರದು.

ಈ ಮಿತಿಯನ್ನು ಮೀರಿದರೆ ಅಮೋನಿಯಾ ಉತ್ಪಾದನೆ ಅಧಿಕವಾಗಿ ಗರ್ಭಕೋಶದ ಸೋಂಕು ಉಂಟಾಗಲು ಅವಕಾಶವಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಕರು ಹಾಕಿದ ನಂತರ ಗರ್ಭಕೋಶವು ತನ್ನ ಮೂಲ ಸ್ಥಿತಿಗೆ ಬರಲು ವಿಳಂಬವಾಗುತ್ತದೆ. ಕೆಲವು ಕೃಷಿ ಕೈಗಾರಿಕಾ ಉತ್ಪನ್ನಗಳಾದ ಅಕ್ಕಿ ತೌಡು, ಗೋಧಿ ಬೂಸಾ, ಕಡಲೆ, ಹೆಸರು ಅಥವಾ ಉದ್ದಿನ ಕಾಳಿನ ಹೊಟ್ಟು ಸಸಾರಜನಕ ಮತ್ತು ಶರ್ಕರಪಿಷ್ಟ ಇವೆರಡನ್ನೂ ಮಧ್ಯಮ ಪ್ರಮಾಣದಲ್ಲಿ ಒಳಗೊಂಡಿರುತ್ತದೆ. ಹೈನುರಾಸುಗಳು ಸಮತೋಲನ ಆಹಾರದಲ್ಲಿ ಶೇ.೨ರಷ್ಟು ಲವಣ ಮಿಶ್ರಣವನ್ನು ಸೇರಿಸಬೇಕು. ಅಲ್ಲದೆ ಶೇ.೧Àರಷ್ಟು ಸಾಮಾನ್ಯ ಉಪ್ಪನ್ನು ಸಹ ಬೆರೆಸಬೇಕು. ಕೇವಲ ಒಣ ಮೇವನ್ನು ಒದಗಿಸುತ್ತಿದ್ದಲ್ಲಿ ಜೀವಸತ್ವ “ಎ” ಅನ್ನು ಸೇರಿಸಲು ಮರೆಯಬಾರದು. ಹಸಿರು ಮೇವನ್ನು ಪೂರೈಸುವಾಗ ಈ ಕ್ರಮ ಅಗತ್ಯವಿಲ್ಲ. ಸಮತೋಲನ ಆಹಾರವನ್ನು ತಯಾರಿಸುವಾಗ ಸ್ಥಳೀಯವಾಗಿ ಲಭ್ಯವಿರುವ ಆಹಾರ ಪದಾರ್ಥಗಳನ್ನು ಬಳಸಿಕೊಂಡರೆ ವೆಚ್ಚವನ್ನು ಕಡಿಮೆ ಮಾಡಬಹುದು. ಆಹಾರ ಧಾನ್ಯಗಳನ್ನು ಪುಡಿಮಾಡಿ ಮಿಶ್ರಣ ಮಾಡಬೇಕು

ಒಂದು ಕ್ವಿಂಟಲ್ ಪಶು ಆಹಾರ ಮಿಶ್ರಣ ತಯಾರಿಕೆ
• ಮುಸುಕಿನ ಜೋಳ ೩೦ ಕೆಜಿ, ಕಡಲೆಕಾಯಿ ಹಿಮಡಿ ೩೦ಕೆಜಿ, ಗೋಧಿ ಬೂಸಾ ೩೦ಕೆಜಿ, ಬೇಳೆಕಾಳುಗಳ ಹೊಟ್ಟು ೭ಕೆಜಿ, ಲವಣಾಂಶ ಮಿಶ್ರಣ ೨ ಕೆಜಿ, ಉಪ್ಪು ಒಂದು ಕೆಜಿ

• ಜೋಳ, ಮುಸುಕಿನ ಜೋಳ ಇವೆರಡನ್ನು ಸಮಪ್ರಮಾಣದಲ್ಲಿ ಬಳಸಬಹುದು. ಸಮತೋಲನ ಪಶು ಆಹಾರದಲ್ಲಿ ಶೇ.೧೬ರಷ್ಟು ಸಸಾರಜನಕವಿರಬೇಕು. ಇದರಲ್ಲಿ ಶೇಕಡಾ ೬೫ರಷ್ಟು ಮೆಲುಕು ಚೀಲದಲ್ಲಿ ಕರಗುವಂತಿರಬೇಕು. ೧೦ ಲೀಟರ್‌ಗಿಂತ ಹೆಚ್ಚು ಹಾಲು ಕೊಡುವ ಹಸುಗಳ ಪಶುಆಹಾರದಲ್ಲಿ ಶೇ.೧೮ರಷ್ಟು ಸಸಾರಜನಕವಿರಬೇಕು.

• ಹತ್ತರಿಂದ ಇಪ್ಪತ್ತು ಲೀಟರ್ ಹಾಲು ಉತ್ಪಾದಿಸುವ ಹಸುವಿಗೆ ತನ್ನ ಶರೀರದ ಪೋಷಣೆಗೆ ೧.೫ರಿಂದ ೨ಕೆಜಿ ಮತ್ತು ಪ್ರತಿ ಲೀಟರ್ ಹಾಲಿನ ಉತ್ಪಾದನೆ ೪೦೦ ಗ್ರಾಮ ಸಮತೋಲನ ಆಹಾರ ಕೊಡಬೇಕಾಗುತ್ತದೆ.

• ೭ರಿಂದ ೧೦ಲೀಟರ್ ಹಾಲು ಉತ್ಪಾದಿಸುವ ಹಸುವಿಗೆ ೨.೦ರಿಂದÀ ೨.೫೦ಕೆಜಿ ಶರೀರ ಪೋಷಣೆಗೆ ಮತ್ತು ಪ್ರತೀ ಲೀ ಹಾಲಿನ ಉತ್ಪಾದನೆಗೆ ೫೦೦ಗ್ರಾಂ ಪಶು ಆಹಾರ ಕೊಡಬೇಕಾಗುತ್ತದೆ.

• ಶೇ.೪.೫ ರಷ್ಟು ಬೆಣ್ಣೆ ಅಂಶವಿರುವ ಹತ್ತು ಲೀಟರ್ ಹಾಲು ಉತ್ಪಾದಿಸುವ ಹಸುವಿಗೆ ೩೦ಕೆಜಿ ಮುಸುಕಿನ ಜೋಳದ ಹಸಿದಂಟು, ೨೦ಕೆಜಿ ಅಲಸಂಡೆಅಥವಾ ಕುದುರೆ ಮೆಂತೆ ಸೊಪ್ಪು ನೀಡಿದರೆ ಪಶು ಆಹಾರವನ್ನು ಒಂದು ಕೆಜಿಯಷ್ಟು ಕೊಟ್ಟರೆ ಸಾಕಾಗುತ್ತದೆ.

• ಹಾಲಿನ ಉತ್ಪಾದನೆಯ ತ್ವರಿತವಾಗಿ ಏರಿಕೆಯಾಗುವ ಹಂತದಲ್ಲಿ ಅಗತ್ಯವಿದ್ದಷ್ಟು ಪಶುಆಹಾರವನ್ನು ಕೊಡದಿದ್ದರೆ ಶರೀರವು ದಿನೇ ದಿನೇ ಕ್ಷೀಣಿಸುತ್ತದೆ. ಹೀಗೆ ಕ್ಷೀಣಿಸಿದರೆ ಕರು ಹಾಕಿದ ನಂತರ ೬೦ರಿಂದ ೯೦ ದಿನಗಳಲ್ಲಿ ಬೆದೆಗೆ ಬರುವುದಿಲ್ಲ. ಬಂದರೂ ಗುರುತಿಸಲಾಗುವುದಿಲ್ಲ. ಒಮು ವೇಳೆ ಗುರುತಿಸಿ ಕೃತಕ ಗರ್ಭದಾರಣೆ ಅಳವಡಿಸಿದರೂ ಗರ್ಭ ಧರಿಸುವ ಸಾಧ್ಯತೆ ಕಡಿಮೆ.

• ಕರು ಹಾಕಿದ ನಂತರ ಹಸುವಿನ ಹಾಲಿನ ಇಳುವರಿ ಎಷ್ಟೇ ಇದ್ದರೂ ತನ್ನ ಶರೀರದ ತೂಕದಲ್ಲಿ ಶೇಕಡ ಹತ್ತರಷ್ಟು ಮಾತ್ರ ಉತ್ಪಾದನೆಗೆ ವರ್ಗಾಯಿಸಬಲ್ಲದು. ಆದ್ದರಿಂದ ಶಾರೀರಿಕ ತೂಕವು ಕ್ಷೀಣಿಸದಂತೆ ಅಗತ್ಯ ಪ್ರಮಾಣದಲ್ಲಿ ಸಮತೋಲನ ಪಶು ಆಹಾರವನ್ನು ಪೂರೈಸುವುದು ಸಾಮಾನ್ಯವಾಗಿ ಹಾಲುಕರೆಯುವ ಸಮಯದಲ್ಲಿ ಪಶುಆಹಾರವನ್ನು ಪೂರೈಸುವುದು ಸೂಕ್ತ.

• ಸಾಮಾನ್ಯವಾಗಿ ಹಾಲು ಕರೆಯುವ ಸಮಯದಲ್ಲಿ ಪಶು ಆಹಾರವನ್ನು ಕೊಡುವುದು ವಾಡಿಕೆ. ಈ ಸಂದರ್ಭದಲ್ಲಿ ಕೊಟ್ಟರೆ ಹಸುಗಳು ಚೆನ್ನಾಗಿ ಹಾಲಿಳಿಸುತ್ತವೆ ಎಂದು ಕೆಲವರು ನಂಬಿದ್ದಾರೆ. ಹಾಲು ಕರೆಯುವುದಕ್ಕೆ ಒಂದು ಗಂಟೆ ಮೊದಲು ಕೊಡುವುದು ಒಳ್ಳೆಯದು. ಇದನ್ನು ಅಭ್ಯಾಸ ಮಾಡಿದರೆ ಸಮಸ್ಯೆ ಇರುವುದಿಲ್ಲ.

• ಪಶು ಆಹಾರದಲ್ಲಿ ಪದೇ ಪದೇ ಅಥವಾ ತುರ್ತು ಬದಲಾವಣೆಗಳನ್ನು ಮಾಡಬಾರದು. ಕಾಲಕ್ರಮೇಣ ಸ್ವಲ್ಪ ಸ್ವಲ್ಪವೇ ಬದಲಾವಣೆ ಮಾಡಬೇಕು. ಆಹಾರದಲ್ಲಿ ವ್ಯತ್ಯಾಸಗಳಾಗಿ ಹಾಲಿನ ಉತ್ಪಾದನೆಯಲ್ಲಿಯೂ ಬದಲಾವಣೆಗಳಾಗುತ್ತವೆ ಹಾಲಿನ ಇಳುವರಿ ಕಡಿಮೆ ಆದರೆ ಅಷ್ಟೇ ತ್ವರಿತವಾಗಿ ಉತ್ಪಾದನೆ ಹೆಚ್ಚಾಗಲಾರದು

• ಪಶು ಆಹಾರವನ್ನು ದಿನದಲ್ಲಿ ಮೂರು – ನಾಲ್ಕು ಬಾರಿ ಕೊಟ್ಟರೆ ಹಾಲಿನ ಉತ್ಪಾದನೆಯೂ ಶೇ.೧೦ರಷ್ಟು ಹೆಚ್ಚುತ್ತದೆ ಹಾಗೂ ಹಾಲಿನಲ್ಲಿ ಬೆಣ್ಣೆ ಅಂಶವು ಹೆಚ್ಚುತ್ತದೆ

• ಪಶು ಆಹಾರದಲ್ಲಿ ಯೂರಿಯಾ ಪ್ರಮಾಣ ಶೇ.೨ನ್ನು ಮೀರಬಾರದು. ಈ ಪ್ರಮಾಣವನ್ನು ಮೀರಿದರೆ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ

• ಪ್ರತೀ ೧ಲೀ.ಹಾಲಿನ ಉತ್ಪಾದನೆಗೆ ೪೦೦ ಗ್ರಾಂನAತೆ ಪಶು ಆಹಾರವನ್ನು ಕೊಡಬೇಕು. ಸಮತೋಲನ ಆಹಾರವನ್ನು ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಕೊಡಬಾರದು. ಹಾಗೇನಾದರೂ ಮಾಡಿದರೆ ಹಾಲಿನಲ್ಲಿ ಬೆಣ್ಣೆ ಅಂಶ ಕಡಿಮೆಯಾಗುತ್ತದೆ. ಹಸುವಿನ ಮೆಲುಕು ಚೀಲದಲ್ಲಿ ಕ್ಷಾರತೆ ಹೆಚ್ಚಾಗಿ ಅಜೀರ್ಣ ಹೊಟ್ಟೆಯುಬ್ಬರ ಇತ್ಯಾದಿ ಸಮಸ್ಯೆಗಳಾಗಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಕಾಲಿನ ಗೊರಸುಗಳು ಮೆದುವಾಗಿ ಇತರ ಸಮಸ್ಯೆಗಳು ಉದ್ಭವಿಸುತ್ತವೆ. ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ. ಶರೀರದಲ್ಲಿ ಕೊಬ್ಬು ಶೇಖರಣೆಯಾಗಿ ಗರ್ಭಧಾರಣೆಯಲ್ಲಿ ದೋಷಗಳು ಕಂಡುಬರುತ್ತವೆ.

• ಪಶು ಆಹಾರದಲ್ಲಿ ಹಳಸಿದ ಅಥವಾ ಕೆಟ್ಟು ಹೋದ ಯಾವುದೇ ಆಹಾರ ಪದಾರ್ಥಗಳು, ಕಲಗಚ್ಚು ಅಥವಾ ಅನ್ನ ಇತ್ಯಾದಿ ಪದಾರ್ಥಗಳನ್ನು ಬೆರೆಸಬಾರದು

• ೧೦೦ ಲೀಟರ್ ನೀರಿನ ತೊಟ್ಟಿಗೆ ೧೦ ಕೆಜಿ ಸುಣ್ಣ ಬೆರೆಸಬೇಕು. ಆಕ್ಸಾಲೇಟ್ಸ್ನಿಂದ ಕ್ಯಾಲ್ಸಿಯಂ ಕೊರತೆಯಾಗುವುದನ್ನು ತಡೆಯಬಹುದು

-ಡಾ. ನಾಗರಾಜ್ ಬಳೆಗಾರ್

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group