spot_img
Saturday, October 10, 2026
spot_imgspot_img
- Advertisement -spot_img

ಬದುಕು ಕೊಟ್ಟಿತು ಬೇಲದ ಹಣ್ಣು: ಬೇಲದ ಹಣ್ಣಿನ ಪಾನೀಯದಿಂದ ಆದಾಯದ ದಾರಿ ಕಂಡುಕೊಂಡ ಕೃಷಿಕ

-ರಾಧಾಕೃಷ್ಣ ತೊಡಿಕಾನ

“ಹಳ್ಳಿಯಲ್ಲಿ ಏನಿದೆ? ಮಣ್ಣು… ಎಂದು ಗೊಣಗುತ್ತಾ ಅವಕಾಶಗಳನ್ನು ಹುಡುಕಿ ನಗರಗಳತ್ತ ಮುಖ ಮಾಡುವವರು ಹಲವರು. ಆದರೆ ಅದೇ ಮಣ್ಣಿನೊಳಗೆ ಅನೇಕ ಅವಕಾಶಗಳು ಅಡಗಿರುವುದನ್ನು ಬಹಳಷ್ಟು ಮಂದಿ ಮರೆತು ಬಿಡುತ್ತಾರೆ. ಹಳ್ಳಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡುವ ದೃಷ್ಟಿಯಿದ್ದರೆ, ಸೃಷ್ಟಿಯಲ್ಲಿರುವ ಸಾಧ್ಯತೆಗಳೂ ತೆರೆದುಕೊಳ್ಳುತ್ತವೆ.

ಮಣ್ಣಿನಿಂದಲೇ ಕಾಯ, ಮಣ್ಣಿನಿಂದಲೇ ಸಕಲ ಜೀವ. ಮಣ್ಣಿನ ಜೀವಸತ್ವಗಳನ್ನು ಹೀರಿ ತನ್ನಿಂದ ತಾನೇ ಬೆಳೆದು, ಮನುಷ್ಯನ ಬದುಕಿಗೆ ಉಪಯುಕ್ತವಾಗುವ ಗಿಡಮರಗಳು ನಮ್ಮ ಸುತ್ತಮುತ್ತಲಿವೆ. ಬಿಸಿಲಿರಲಿ, ಚಳಿಯಿರಲಿ, ಮಳೆಯಿರಲಿ—ಕೆಲವು ಮರಗಳು ತಮ್ಮ ಸಹಜ ಗುಣದಿಂದ ಪರಿಸರದೊಂದಿಗೆ ಹೊಂದಿಕೊಂಡು ಬೆಳೆಯುತ್ತವೆ. ಬರದ ಬೇಗೆಯನ್ನೂ ಸಹಿಸಿಕೊಂಡು ರೈತನಿಗೆ ನೆರವಾಗುತ್ತವೆ.

 ಅಂತಹ ಮರಗಳಲ್ಲಿ ಪುರಾಣ ಪ್ರಸಿದ್ಧಿಯ ಇತಿಹಾಸದ ಕೊಂಡಿಯೊಂದಿಗೆ ಬೆಳೆದ ಬೇಲವೂ ಒಂದು. ರೈತರ ಸಮಗ್ರ ಕೃಷಿ ಹಾಗೂ ಬಹುಪದರದ ಕೃಷಿಗೆ ನೆರವಾಗಬಲ್ಲ ಬೇಲದ ಗುಣಧರ್ಮ ವಿಶಿಷ್ಠವಾದುದು. ಜಮೀನಿನ ಸುತ್ತ ಬೇಲದ ಮರಗಳನ್ನು ಬೆಳೆಸಿದಾಗ ಅದರ ಮೌಲ್ಯವನ್ನು ಕೇವಲ ಒಂದು ಆದಾಯದ ಮೂಲವಾಗಿ ಅಳೆಯಲು ಸಾಧ್ಯವಿಲ್ಲ. ಅದರ ಎಲೆ, ಕಾಂಡ, ಕಡ್ಡಿ, ಹೂ, ಕಾಯಿ ಹಾಗೂ ಹಣ್ಣು ಬೀಜ ಸೇರಿದಂತೆ ಮರದ ಎಲ್ಲಾ ಭಾಗಗಳು ಉಪಯುಕ್ತವೇ.

ಬೇಲ ಆದಾಯಕ್ಕೆ ದಾರಿ:

ಬೇಲದ ಮರ ಮತ್ತು ಹಣ್ಣಿನ ಮಹತ್ವವನ್ನು ಅರಿತ ಕೃಷಿಕರಿಗೆ ಈ ಮರ ಕೇವಲ ಕಾಡುಬೆಳೆಯಲ್ಲ; ಅದು ಆದಾಯದ ಮೂಲ. ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರದ ಕೃಷಿಕ ವಿ.ಎಸ್. ಕುಮಾರ್ ಬೇಲದ ಹಣ್ಣಿನ ಪಾನೀಯ ತಯಾರಿಸಿ ಅದರಿಂದಲೂ ಆದಾಯದ ದಾರಿ ಕಂಡುಕೊಂಡಿದ್ದಾರೆ. ಬೇಲ ಇರುವ ಭಾಗಗಳಲ್ಲಿ ಬಾಯಾರಿ ಬಂದವರಿಗೆ ಬೇಲದ ಹಣ್ಣಿನ ಪಾನೀಯ ನೀಡುವುದು ಹಳ್ಳಿಗಳಲ್ಲಿ ಸಾಮಾನ್ಯ ಸಂಪ್ರದಾಯ. ಆದರೆ ಬೇಲವೂ ಸ್ವಾವಂಬನೆಗೆ ದಾರಿಯಾಗಬಲ್ಲದು ಎಂಬುದನ್ನು ಸಾಧಿಸಿದವರು ಕಡಿಮೆ.

ಕೃಷಿಕರಾದ ವಿ.ಎಸ್. ಕಮಾರ್ ಅವರು ಮಾವು, ತೆಂಗು, ಬಾಳೆ, ಬೇಲ, ಹಲಸು, ರಾಗಿ, ಭತ್ತ ಸೇರಿದಂತೆ ಹಲವು ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಬೆಳೆಯುತ್ತಾರೆ. ಚಿಕ್ಕಂದಿನಲ್ಲಿಯೇ ಕೃಷಿಯ ಒಡನಾಟದಲ್ಲಿಯೇ ಬೆಳೆದವರು. ಕೃಷಿಯಲ್ಲಿಯೇ ಖುಷಿ ಕಂಡವರು. ಅವರ ಪ್ರಧಾನ ಬೆಳೆ ಮಾವು. ಆದರೆ ಮಾವಿನ ಬೆಳೆಯನ್ನೇ ಸಂಪೂರ್ಣವಾಗಿ ಅವಲಂಬಿಸಿಲ್ಲ. ಜಮೀನಿನಲ್ಲಿರುವ ವಿವಿಧ ಬೆಳೆಗಳ ಸಮನ್ವಯದಿಂದ ರೂಪಿಸಿಕೊಂಡಿರುವ ಸಮಗ್ರ ಕೃಷಿ ಪದ್ಧತಿಯೇ ಅವರ ಬದುಕಿನ ಭದ್ರತೆಗೆ ಬುನಾದಿ. ಈ ಸಮಗ್ರ ಕೃಷಿಯಲ್ಲಿ ಬೇಲದ ಮರಗಳಿಗೂ ಪ್ರಮುಖ ಸ್ಥಾನವಿದೆ.

ಕುಮಾರ್ ಅವರ ಜಮೀನಿನಲ್ಲಿ ಮೂರು ನಾಲ್ಕು ತಲೆಮಾರುಗಳನ್ನು ದಾಟಿ ಬಂದ ಸುಮಾರು 300 ವರ್ಷಗಳಷ್ಟು ಹಳೆಯ ಬೇಲದ ಮರವಿದೆ. ವಿಶಾಲವಾಗಿ ಹರಡಿದ ಈ ಮರದ ಜೊತೆಗೆ ಮತ್ತೂ 10- 13 ಬೇಲದ ಮರಗಳಿವೆ. ಅವುಗಳೆಲ್ಲವೂ ಹಣ್ಣು ನೀಡುತ್ತಿವೆ. ವರ್ಷಕ್ಕೆ ಒಂದು ಟನ್ನಿಗಿಂತಲೂ ಅಧಿಕ ಬೇಲದ ಹಣ್ಣು ದೊರೆಯುತ್ತದೆ.

ವರ್ಷದ ಕೆಲವು ತಿಂಗಳುಗಳನ್ನು ಹೊರತುಪಡಿಸಿದರೆ, ಉಳಿದ ಅವಧಿಯಲ್ಲಿ ಬೇಲದ ಮರಗಳಲ್ಲಿ ಹೂ, ಕಾಯಿ ಮತ್ತು ಹಣ್ಣುಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತವೆ. ಜಮೀನಿನಲ್ಲಿ ಬಿದ್ದು ಹಾಳಾಗುತ್ತಿದ್ದ ಹಣ್ಣುಗಳನ್ನು ಹಾಗೆಯೇ ಬಿಡದೆ, ಅವುಗಳನ್ನು ಸಂಗ್ರಹಿಸಿ ಅದರಿಂದ ಪಾನೀಯ ತಯಾರಿಸಲು ಕುಮಾರ್ ಆರಂಭಿಸಿದರು. ಹಳ್ಳಿಯ ಸಾಂಪ್ರದಾಯಿಕ ಪಾನೀಯ ನಗರದ ಜನತೆಯನ್ನೂ ಆಕರ್ಷಿಸಿತು. ಅದರ ಜನಪ್ರಿಯತೆಯಿಂದ ಪಾನೀಯ ತಯಾರಿಕೆಗೆ ತನ್ನ ತೋಟದ ಹಣ್ಣುಗಳು ಸಾಲದಾದವು.

ಆ ಸಂದರ್ಭದಲ್ಲಿ ಸುತ್ತಮುತ್ತಲಿನ ರೈತರಿಂದಲೂ ಬೇಲದ ಹಣ್ಣುಗಳನ್ನು ಖರೀದಿಸುತ್ತಾರೆ. ಸ್ಥಳೀಯವಾಗಿ ಲಭ್ಯವಾಗುವ ಹಣ್ಣುಗಳನ್ನು ಮೌಲ್ಯವರ್ಧಿತ ಉತ್ಪನ್ನವಾಗಿ ಪರಿವರ್ತಿಸಿ, ಬೇಲದ ಪಾನೀಯ ತಯಾರಿಕೆಯು ಸ್ವ ಉದ್ಯೋಗವಾಗಿ ಮಾರ್ಪಟ್ಟಿತು.

ಬೇಲದ ಪಾನೀಯಕ್ಕೆ ಬೇಡಿಕೆ

ಬೆಂಗಳೂರು ನಗರದ ಸಮೀಪವಿರುವುದರಿಂದ ಬೇಲದ ಹಣ್ಣಿನಿಂದ ತಯಾರಿಸುವ ಪಾನೀಯಕ್ಕೆ ಬೇಡಿಕೆ ಹೆಚ್ಚುತ್ತಿದೆ. ಸಭೆ, ಸಮಾರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬೇಡಿಕೆ ಬಂದಾಗ ಪಾನೀಯವನ್ನು ತಯಾರಿಸಿ ಪೂರೈಸುತ್ತಾರೆ. ಹೀಗೆ ಜಮೀನಿನಲ್ಲಿ ಸಿಗುವ ಹಣ್ಣನ್ನು ಕಾಡು ಹಣ್ಣು ಎಂದು ಕಡೆಗಣಿಸಲಿಲ್ಲ. ಕಚ್ಚಾ ಹಣ್ಣನ್ನು ಮಾರಾಟ ಮಾಡುವ ಬದಲು, ಅದಕ್ಕೆ ಮೌಲ್ಯವರ್ಧನೆ ಮಾಡಿ ಪಾನೀಯವನ್ನಾಗಿ ಪರಿವರ್ತಿಸುವ ಮೂಲಕ ಹೆಚ್ಚುವರಿ ಆದಾಯದ ಅವಕಾಶವನ್ನು ಸೃಷ್ಟಿಸಿಕೊಂಡಿದ್ದಾರೆ. ರಾಸಾಯನಿಕ ಸ್ಪರ್ಶದ ಲವಲೇಷವಿಲ್ಲ. ನೈಸರ್ಗಿಕವಾಗಿ ಬೆಳೆದ ಹಣ್ಣಿನ ಪಾನೀಯವಾದುದರಿಂದ ಗ್ರಾಹಕರಿಂದ ಬೇಡಿಕೆಯೂ ಹೆಚ್ಚಿದೆ. ಬೇಲದ ಮರವು ಅವರಿಗೆ ಮೌಲ್ಯವರ್ಧಿತ ಉತ್ಪನ್ನ ಮತ್ತು ಗಳಿಕೆಯ ದಾರಿಯನ್ನೂ ತೋರಿಸಿದೆ.

ಬೇಲ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳನ್ನು ನೀಡಬಲ್ಲ ಬೆಳೆ. ಈಗ ಕಸಿಗಿಡಗಳೂ ದೊರೆಯುವುದರಿಂದ ಇತರ ತೋಟಗಾರಿಕಾ ಬೆಳೆಗಳಂತೆ ಬೆಳೆಯಬಹುದು. ಬೇಲದ ಬೆಳೆಯನ್ನು ವಾಣಿಜ್ಯ ದೃಷ್ಟಿಯಿಂದಲೂ ಪರಿಗಣಿಸಬಹುದು. ಎಂಬ ಅಭಿಪ್ರಾಯ ವಿಎಸ್. ಕುಮಾರ್ ಅವರದ್ದಾಗಿದೆ.

ಪೋಷಕಾಂಶಗಳಿರುವ ನೈಸರ್ಗಿಕ ಹಣ್ಣು

ಬೇಲದ ಹಣ್ಣಿನಲ್ಲಿ ಹಲವು ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಾಂಶಗಳು ಇರುವುದಾಗಿ ಪರಿಗಣಿಸಲಾಗುತ್ತದೆ. ಬೇಲದ ಹಣ್ಣಿನಿಂದ ತಯಾರಿಸುವ ಪಾನೀಯವು ದೇಹಕ್ಕೆ ಅಗತ್ಯವಾದ ದ್ರವಾಂಶವನ್ನು ಒದಗಿಸುವ ಜೊತೆಗೆ ವಿವಿಧ ಪೋಷಕಾಂಶಗಳನ್ನೂ ನೀಡುವುದರಿಂದ ಆರೋಗ್ಯವರ್ಧಕ ಪಾನೀಯವಾಗಿದೆ. ಹಣ್ಣಿನ ಹೊರಮೈ ಗಟ್ಟಿಯಾಗಿರುವುದರಿಂದ

ಪೇರಳೆ, ಮಾವು ಮೊದಲಾದ ಹಣ್ಣುಗಳಂತೆ ಪ್ರಾಣಿ ಪಕ್ಷಿಗಳಿಗೆ ಸುಲಭದ ತುತ್ತಲ್ಲ. ಆನೆ,ಮಂಗಗಳಿಗೆ ಪ್ರಿಯವಾದ ಈ ಹಣ್ಣನ್ನು ಕಾಡುಹಣ್ಣು ಎಂದು ನಿರ್ಲಕ್ಷಿಸಲಾಗುತ್ತಿತ್ತು. ಈಗ ಅದರ ಮೌಲ್ಯದ ಅರಿವು ಹೆಚ್ಚಿದೆ. ಮುರುಗಲ(ಪನರ್ಪುಳಿ)ದಂತೆ ತಂಪುಪಾನೀಯದ ಅಂಗಡಿಗಳಲ್ಲಿ ಸ್ಥಾನ ಪಡೆದಿದೆ. ಬೇಲದ ಹಣ್ಣಿನಿಂದ ಜಾಮು, ಸಿರಪ್, ಐಸ್‌ಕ್ರೀಮ್ ಮೊದಲಾದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಕುಮಾರ್ ಅವರು ಹಣ್ಣಿನಿಂದ ಜಾಮು ತಯಾರಿಸುತ್ತಿದ್ದು. ಮುಂದಿನ ದಿನಗಳಲ್ಲಿ ಬೇರೆಬೇರೆ ಉತ್ಪನ್ನಗಳನ್ನು ತಯಾರಿಸುವ ಯೋಜನೆ ಅವರಲ್ಲಿದೆ. ಕರ್ನಾಟಕ ರಾಜ್ಯ ಕೃಷಿ ಉತ್ಪಾದಕರ ರೈತ ಸಂಘದ ಪ್ರೋತ್ಸಾಹವೂ ಅವರಿಗೆ ದೊರೆತಿದೆ

ರೈತರು ತಮ್ಮ ಜಮೀನಿನಲ್ಲಿರುವ ಸಣ್ಣಪುಟ್ಟ ಅವಕಾಶಗಳನ್ನು ಗುರುತಿಸಿ, ಅವುಗಳಿಗೆ ಮೌಲ್ಯವರ್ಧನೆ ಮಾಡಿದರೆ ಕೃಷಿಯಿಂದಲೇ ಹೆಚ್ಚುವರಿ ಆದಾಯದ ಮಾರ್ಗಗಳನ್ನು ಸೃಷ್ಟಿಸಬಹುದು ಎಂಬುದಕ್ಕೆ ಕುಮಾರ್ ಅವರ ಪ್ರಯತ್ನ ಸಾಕ್ಷಿಯಾಗಿದೆ. ತನ್ನ ಕೃಷಿ ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಮತ್ತು ಬೆಳೆಗಳಿಗೆ ಉತ್ತಮ ಧಾರಣೆಯಿದ್ದರೆ ರೈತ ಸೋಲುವುದಿಲ್ಲ. ಎಂಬುದು ಕುಮಾರ್ ಅವರ ಆತ್ಮವಿಶ್ವಾಸದ ಮಾತು.

ಹಳ್ಳಿಯಲ್ಲಿ ಅವಕಾಶಗಳಿಲ್ಲ ಎಂದ ಕೊರಗುವುದಕ್ಕಿಂತ ಹಳ್ಳಿಯಲ್ಲಿರುವ ಅವಕಾಶಗಳನ್ನು ತಮ್ಮಾದಾಗಿಸಿಕೊಳ್ಳುವುದು ಮುಖ್ಯ. ಮಣ್ಣನ್ನು ಕೇವಲ ಮಣ್ಣು ಎಂದು ನೋಡದೆ ಮಣ್ಣಿನೊಳಗಿನ ಜೀವ, ಮರ, ಬೆಳೆ ಮತ್ತು ಮೌಲ್ಯವನ್ನು ಅರಿತಾಗ ಬದುಕಿನ ಹೊಸ ದಾರಿಗಳು ತೆರೆದುಕೊಳ್ಳುತ್ತವೆ.ಬೇಲದ ಮರದ ಕೃಷಿಯೂ ಉದ್ಯಮವಾಗಬಹುದು; ಮರದ ಹಣ್ಣು ಆದಾಯದ ಮೂಲವಾಗಬಹುದು. ಮಾಹಿತಿಗಾಗಿ: 99800 27058

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group