spot_img
Tuesday, October 13, 2026
spot_imgspot_img
- Advertisement -spot_img

ಶಿವಮೊಗ್ಗ: ಕೃಷಿ ವಿದ್ಯಾರ್ಥಿಗಳಿಂದ ಎರೆಹುಳು ಗೊಬ್ಬರ ತಯಾರಿಸುವ ವಿಧಾನ ಮತ್ತು ಮಹತ್ವದ ಕುರಿತು ಗುಂಪು ಚರ್ಚೆ

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ರಾಮನಗರ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ವತಿಯಿಂದ ಎರೆಹುಳು ಗೊಬ್ಬರ ತಯಾರಿಸುವ ವಿಧಾನ ಹಾಗೂ ಅದರ ಮಹತ್ವದ ಕುರಿತು ಗುಂಪು ಚರ್ಚೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಎರೆಹುಳು ಗೊಬ್ಬರವು ಸಾವಯವ ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುವ ಗೊಬ್ಬರವಾಗಿದ್ದು, ಕೃಷಿ ತ್ಯಾಜ್ಯ, ಒಣ ಎಲೆಗಳು, ಕೊಟ್ಟಿಗೆ ಗೊಬ್ಬರ ಹಾಗೂ ಇತರ ಕೊಳೆಯುವ ಸಾವಯವ ವಸ್ತುಗಳನ್ನು ಎರೆಹುಳುಗಳ ಸಹಾಯದಿಂದ ಉತ್ತಮ ಗುಣಮಟ್ಟದ ಗೊಬ್ಬರವನ್ನಾಗಿ ಪರಿವರ್ತಿಸಬಹುದು ಎಂದು ವಿವರಿಸಿದರು.

ಎರೆಹುಳು ಗೊಬ್ಬರ ತಯಾರಿಸಲು ಸೂಕ್ತ ಸ್ಥಳದ ಆಯ್ಕೆ, ತ್ಯಾಜ್ಯ ವಸ್ತುಗಳ ಸಂಗ್ರಹಣೆ, ಪದರ ಪದರವಾಗಿ ಸಾವಯವ ವಸ್ತುಗಳನ್ನು ಜೋಡಿಸುವುದು, ಎರೆಹುಳುಗಳನ್ನು ಬಿಡುವುದು ಹಾಗೂ ತೇವಾಂಶವನ್ನು ಕಾಪಾಡಿಕೊಳ್ಳುವ ವಿಧಾನಗಳ ಕುರಿತು ವಿದ್ಯಾರ್ಥಿಗಳು ಮಾಹಿತಿ ನೀಡಿದರು. ಗೊಬ್ಬರ ತಯಾರಿಸುವ ಸಂದರ್ಭದಲ್ಲಿ ನೇರ ಬಿಸಿಲು ಮತ್ತು ನೀರು ನಿಲ್ಲುವುದನ್ನು ತಪ್ಪಿಸುವುದರ ಮಹತ್ವವನ್ನೂ ತಿಳಿಸಿದರು.
ಎರೆಹುಳು ಗೊಬ್ಬರದ ಬಳಕೆಯಿಂದ ಮಣ್ಣಿನ ರಚನೆ ಮತ್ತು ಫಲವತ್ತತೆ ಸುಧಾರಿಸಲು, ಪೋಷಕಾಂಶಗಳ ಲಭ್ಯತೆ ಹೆಚ್ಚಿಸಲು ಹಾಗೂ ಮಣ್ಣಿನಲ್ಲಿನ ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಚಟುವಟಿಕೆಗೆ ಉತ್ತೇಜನ ನೀಡಲು ಸಹಕಾರಿಯಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಕೃಷಿ ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಸಾವಯವ ಗೊಬ್ಬರ ತಯಾರಿಸುವ ಮೂಲಕ ಸುಸ್ಥಿರ ಕೃಷಿಗೆ ಉತ್ತೇಜನ ನೀಡಬಹುದು ಎಂದು ವಿವರಿಸಿದರು.

ಈ ಗುಂಪು ಚರ್ಚೆಯಲ್ಲಿ ಎರೆಹುಳು ಗೊಬ್ಬರ ತಯಾರಿಕೆಯ ವಿವಿಧ ಹಂತಗಳು, ಅದರ ಬಳಕೆ ಹಾಗೂ ಕೃಷಿಯಲ್ಲಿ ಅದರ ಪ್ರಯೋಜನಗಳ ಕುರಿತು ಚರ್ಚಿಸಲಾಯಿತು. ರೈತರು ಮತ್ತು ಗ್ರಾಮಸ್ಥರು ಸಾವಯವ ಕೃಷಿ ಪದ್ಧತಿಗಳ ಬಗ್ಗೆ ಅರಿವು ಮೂಡಿಸಿಕೊಂಡರು.

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group