ಶಿವಮೊಗ್ಗ: ತಾಲ್ಲೂಕಿನ ರಾಮನಗರ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ಕೃಷಿಗೆ ಸಂಬಂಧಪಟ್ಟ ಆ್ಯಪ್ಗಳ ಮಹತ್ವದ ಬಗ್ಗೆ ಗುಂಪು ಚರ್ಚೆಯನ್ನು ರಾಮನಗರದಲ್ಲಿ ಸೆ.28 ರಂದು ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿಗಳು, ರೈತರು ತಂತ್ರಜ್ಞಾನದ ಸಹಾಯದಿಂದ ಈಗ ಹೊಸ ಯುಗಕ್ಕೆ ಕಾಲಿಟ್ಟಿದ್ದಾರೆ. ಕೃಷಿ ಸಂಬಂಧಿತ ಮೊಬೈಲ್ ಆ್ಯಪ್ಗಳು ಹವಾಮಾನ ಮಾಹಿತಿ, ಬೆಳೆ ಸಲಹೆ, ಮಾರುಕಟ್ಟೆ ಬೆಲೆಗಳು ಮತ್ತು ಕೀಟ ನಿಯಂತ್ರಣದಂತಹ ಮಾಹಿತಿಯನ್ನು ಕನ್ನಡದಲ್ಲೇ ಒದಗಿಸುತ್ತವೆ. ಇವುಗಳ ಮೂಲಕ ರೈತರು ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಂಡು ಇಳುವರಿ ಹೆಚ್ಚಿಸಬಹುದು.
ಪ್ರಮುಖ ಕೃಷಿ ಆ್ಯಪ್ಗಳಾದ ಕೃಷಿ ಮಿತ್ರ ಆ್ಯಪ್, ಕೃಷಿ ಸೆಂಟ್ರಲ್, ಕೃಷಿ ಕಿಸಾನ್, ಕೃಷಿ ನೆಟ್ವರ್ಕ್ ಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಗಳಂತಹ ಕೃಷಿ ಆ್ಯಪ್ಗಳ ಬಗ್ಗೆ ಮಾಹಿತಿ ನೀಡಿದರು.
ಈ ಆ್ಯಪ್ಗಳು ಪತ್ರಿಕೆಗಳ ಕೃಷಿ ಸುದ್ದಿ, ಹವಾಮಾನ, ಮಂಡಿ ಬೆಲೆಗಳು ಮತ್ತು ಕೃಷಿ ಇಲಾಖೆ ಸಂಪರ್ಕಗಳನ್ನು ನೀಡುತ್ತವೆ. ರೈತರು ತಮ್ಮ ಪಹಣಿ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಪಡೆಯಬಹುದು ಹಾಗೂ ರೈತರಿಗೆ ವೈಜ್ಞಾನಿಕ ಕೃಷಿ ಸಲಹೆಗಳು ದೊರೆಯುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಆ್ಯಪ್ಗಳ ಮಹತ್ವ ಏನೆಂದರೆ, ಮಧ್ಯವರ್ತಿಗಳನ್ನು ತಪ್ಪಿಸಿ ನೇರ ಮಾರಾಟ ಸಾಧ್ಯಗೊಳಿಸುತ್ತವೆ. ಇದರಿಂದ ರೈತರ ಆದಾಯ 20–30% ಹೆಚ್ಚಾಗುತ್ತದೆ. ಹಾಗೆಯೇ ಆಧಾರಿತ ಕೀಟ-ರೋಗ ಗುರುತಿಸುವಿಕೆ ಮತ್ತು ಮಣ್ಣು ಪರೀಕ್ಷೆಯ ಮೂಲಕ ಬೆಳೆ ನಷ್ಟ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ರೈತರು ಆಂಡ್ರಾಯ್ಡ್ ಪ್ಲೇ ಸ್ಟೋರ್ನಿಂದ ಈ ಕೃಷಿ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡು ಬಳಸಿಕೊಂಡು ಸಮೃದ್ಧಿ ಸಾಧಿಸಿ ಎಂದು ವಿದ್ಯಾರ್ಥಿಗಳು ಸಲಹೆ ನೀಡಿದರು..ಈ ಕಾರ್ಯಕ್ರಮದಲ್ಲಿ ಡಾ ಪ್ರಶಾಂತ್ ಸಹಾಯಕ ಪ್ರಾಧ್ಯಾಪಕರು, ಕೃಷಿ ವಿಸ್ತರಣಾ ವಿಭಾಗ,ಇರುವಕ್ಕಿ ಹಾಗೂ ವಿದ್ಯಾರ್ಥಿಗಳು ಮತ್ತು ರೈತರು ಪಾಲ್ಗೊಂಡಿದ್ದರು.









