spot_img
Thursday, October 1, 2026
spot_imgspot_img
- Advertisement -spot_img

ಮಳೆ ಕೊರತೆ-ಬರದ ಛಾಯೆ, ಜಾನುವಾರುಗಳ ಮೇವಿಗೆ ಸಂಕಷ್ಟ!

-ಆರ‍್ಕೆ ಕಾರ್ಕಳ

ಮಳೆ ಇಲ್ಲದೆ ಬೆಳೆ ಇಲ್ಲ. ಬೆಳೆ ಇಲ್ಲದೆ ಆಹಾರವಿಲ್ಲ. ಮಳೆಯ ಕೊರತೆಯಿಂದ ರಾಜ್ಯದ ಹಲವು ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಮಳೆಯ ನಿರೀಕ್ಷೆಯಲ್ಲಿ ಬಿತ್ತಿದ ಬೆಳೆ ಒಣಗಲಾರಂಭಿಸಿದೆ. ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಬರದ ಪರಿಣಾಮ ಆಹಾರ ಉತ್ಪಾದನೆಯ ಮೇಲೂ ದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ.

ಆಹಾರ ಉತ್ಪಾದನೆ ಕುಂಠಿತವಾದರೆ ಜನರ ಆಹಾರ ಭದ್ರತೆಯ ಮೇಲಷ್ಟೇ ಅಲ್ಲದೆ, ಜಾನುವಾರುಗಳ ಪೋಷಣೆಯ ಮೇಲೂ ಪರಿಣಾಮ ಬೀರುತ್ತದೆ. ಕೃಷಿಯನ್ನೇ ಆರ್ಥಿಕ ಮೂಲವನ್ನಾಗಿಸಿಕೊಂಡಿರುವ ರೈತರಿಗೆ ಇದು ಮತ್ತಷ್ಟು ಸಂಕಷ್ಟ ತಂದೊಡ್ಡುತ್ತದೆ. ಹೈನುಗಾರಿಕೆಯನ್ನು ಅವಲಂಬಿಸಿರುವ ರೈತರಿಗೆ ಮೇವಿನ ಕೊರತೆ ನೇರವಾಗಿ ಆರ್ಥಿಕ ನಷ್ಟಕ್ಕೆ ತಂದೊಡ್ಡಬಹುದು.

ಮೇವಿನ ಕೊರತೆ: ಹೈನುಗಾರಿಕೆಗೆ ಹೊಡೆತ

ಜಾನುವಾರುಗಳ ಪೋಷಣೆಗೆ ಹಸಿರುಮೇವು, ಒಣಮೇವು ಹಾಗೂ ಪಶು ಆಹಾರ ಅತ್ಯಂತ ಮುಖ್ಯ. ಆದರೆ ಬರದ ಪರಿಸ್ಥಿತಿಯಲ್ಲಿ ವರ್ಷದ ಎಲ್ಲ ದಿನಗಳಲ್ಲೂ ಹಸಿರುಮೇವು ಲಭ್ಯವಾಗುವಂತೆ ಮಾಡುವುದು ಕಷ್ಟಸಾಧ್ಯ. ಹಸಿರುಮೇವಿನ ಕೊರತೆ ಎದುರಾದಾಗ ರೈತರು ಪಶು ಆಹಾರವನ್ನು ಅವಲಂಬಿಸಬೇಕಾಗುತ್ತದೆ. ಪಶು ಆಹಾರದ ಬೆಲೆ ಏರಿಕೆಯಾದರೆ ಹಾಲಿನ ಉತ್ಪಾದನಾ ವೆಚ್ಚವೂ ಹೆಚ್ಚುತ್ತದೆ.

ನೀರು ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದ ಜಾನುವಾರುಗಳ ಆರೋಗ್ಯ ಹಾಗೂ ಉತ್ಪಾದನಾ ಸಾಮರ್ಥ್ಯ ಕುಂಠಿತವಾಗಬಹುದು. ಇದರ ಪರಿಣಾಮವಾಗಿ ಹಾಲು, ಮಾಂಸ, ಮೊಟ್ಟೆ ಮತ್ತು ಉಣ್ಣೆಯಂತಹ ಪಶು ಉತ್ಪನ್ನಗಳ ಉತ್ಪಾದನೆಯಲ್ಲೂ ಇಳಿಕೆಯಾಗುವ ಸಾಧ್ಯತೆ ಇದೆ. ತೀವ್ರ ಮೇವಿನ ಹಾಗೂ ನೀರಿನ ಕೊರತೆಯ ಸಂದರ್ಭದಲ್ಲಿ ಜಾನುವಾರುಗಳು ಸೊರಗಿ ಬಡಕಲಾಗುತ್ತವೆ.

ಇಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳನ್ನು ಸಾಕಲು ಸಾಧ್ಯವಾಗದೆ ರೈತರು ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಬಹುದು. ಜಾನುವಾರುಗಳ ಸಾವು ಸಂಭವಿಸಿದರೆ ಅದು ರೈತರ ಆಹಾರ ಭದ್ರತೆ ಮಾತ್ರವಲ್ಲದೆ, ಅವರ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

ಬರಗಾಲದ ಸಂದರ್ಭದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅತ್ಯಂತ ಮುಖ್ಯ. ಸುಲಭವಾಗಿ ಲಭ್ಯವಿರುವ ಒಣಮೇವನ್ನು ಪೌಷ್ಟಿಕಗೊಳಿಸಿ ಜಾನುವಾರುಗಳಿಗೆ ನೀಡುವ ವಿಧಾನಗಳನ್ನು ರೈತರು ಅಳವಡಿಸಿಕೊಂಡರೆ ತಾತ್ಕಾಲಿಕವಾಗಿ ಮೇವಿನ ಕೊರತೆಯನ್ನು ನಿವಾರಿಸಿಕೊಳ್ಳಬಹುದು. ಒಣಮೇವಿನ ಪೌಷ್ಟಿಕ ಮೌಲ್ಯವನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಉತ್ತಮ ಗುಣಮಟ್ಟದ ಹಸಿರುಮೇವು ಲಭ್ಯವಿರುವ ಸಂದರ್ಭದಲ್ಲಿ ಅದನ್ನು ವ್ಯರ್ಥವಾಗಲು ಬಿಡದೆ ಒಣಗಿಸಿ ಹುಲ್ಲಿನ ರೂಪದಲ್ಲಿ ಅಥವಾ ಸೈಲೇಜ್ ರೂಪದಲ್ಲಿ ಸಂಗ್ರಹಿಸಿಡುವುದು ಮುಂದಿನ ದಿನಗಳಲ್ಲಿ ಉಪಯುಕ್ತವಾಗುತ್ತದೆ. ಮೇವಿನ ಸಂಗ್ರಹಣೆ ಮಾಡುವಾಗ ಮಳೆ, ತೇವಾಂಶ ಮತ್ತು ಕೊಳೆತದಿಂದ ಹಾನಿಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ಅಗತ್ಯ.

ಮೇವು ಕಟಾವು, ಒಣಗಿಸುವಿಕೆ ಮತ್ತು ಸಂಗ್ರಹಣೆಯಲ್ಲಿ ಸೂಕ್ತ ಯಂತ್ರೋಪಕರಣಗಳನ್ನು ಬಳಸುವುದರಿಂದ ಮೇವು ಪೋಲಾಗುವುದನ್ನು ಕಡಿಮೆ ಮಾಡಬಹುದು. ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಮೇವನ್ನು ಸಂಗ್ರಹಿಸಿ ಸಂರಕ್ಷಿಸಿಕೊಳ್ಳಲು ಸಹಕಾರಿಯಾಗುತ್ತದೆ. ಬರಗಾಲ ಎದುರಾಗುವ ಮೊದಲೇ ರೈತರು ತಮ್ಮ ಜಾನುವಾರುಗಳ ಅಗತ್ಯಕ್ಕೆ ತಕ್ಕಂತೆ ಮೇವಿನ ಲಭ್ಯತೆ ಮತ್ತು ಸಂಗ್ರಹಣೆಯ ಬಗ್ಗೆ ಯೋಜನೆ ರೂಪಿಸಿಕೊಳ್ಳುವುದು ಉತ್ತಮ. ಅಜೋಲಾ, ಹೈಡ್ರೋಪೋನಿಕ್ ಮೇವು ಉತ್ಪಾದನೆಯೂ ಸಹಕಾರಿಯಾಗಬಲ್ಲದು

ಬರವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲವಾದರೂ, ಅದರ ಪರಿಣಾಮವನ್ನು ಕಡಿಮೆ ಮಾಡಲು ಮುನ್ನೆಚ್ಚರಿಕೆಯ ಕ್ರಮಳಿಂದ ಸಾಧ್ಯವಾಗಬಹುದು. ಜಾನುವಾರುಗಳಿಗೆ ಅಗತ್ಯವಾದ ನೀರು, ಒಣಮೇವು, ಹಸಿರುಮೇವು ಹಾಗೂ ಪಶು ಆಹಾರದ ಲಭ್ಯತೆಯನ್ನು ಖಚಿತಪಡಿಸಿಕೊಂಡು, ಲಭ್ಯವಿರುವ ಮೇವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಬಳಸುವುದರಿಂದ ಬರಗಾಲದ ಸಂಕಷ್ಟವನ್ನು ಎದುರಿಸಲು ರೈತರಿಗೆ ನೆರವಾಗುತ್ತದೆ.

ಬರದ ಸಂದರ್ಭದಲ್ಲಿ ಬೆಳೆ ಸಂರಕ್ಷಣೆಯಷ್ಟೇ ಜಾನುವಾರುಗಳ ಸಂರಕ್ಷಣೆಯೂ ಮುಖ್ಯ. ಮೇವಿನ ಸಂಗ್ರಹಣೆ, ನೀರಿನ ನಿರ್ವಹಣೆ ಮತ್ತು ಪೌಷ್ಟಿಕ ಆಹಾರದ ಸಮರ್ಪಕ ಬಳಕೆಯಿಂದ ಪಶುಸಂಪತ್ತನ್ನು ಕಾಪಾಡಬಹುದು. ಸಂಕಷ್ಟದ ಸಂದರ್ಭದಲ್ಲಿ ಸರಕಾರಗಳೂ ರೈತರ ನೆರವಿಗೆ ಅತ್ಯವಶ್ಯ. ಬರದ ಸಮಯದಲ್ಲಿ ರೈತರು ಕಳೆದುಕೊಳ್ಳುವ ಪಶು ಸಂಪತ್ತಾಗಲಿ, ಆಹಾರೋತ್ಪನ್ನವಾಗಲಿ ಅವು ನಾಡಿನ ಸಾಮಾಜಿಕ, ಆರ್ಥಿಕ ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರಲಿದೆ

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group