spot_img
Wednesday, September 23, 2026
spot_imgspot_img

ಹೂಮಳೆಯಿಂದ ಮಲೆನಾಡು ಕಾಫಿ ಉತ್ಪಾದನೆಗೆ ಎದುರಾಗುತ್ತಿರುವ ಸವಾಲುಗಳು!

ಬರಹ: ಎ. ಕೆ. ಚಕ್ರವರ್ತಿ, ಹೇಮಾ ಕೆ., ಪ್ರಮೋದ್ ಕಟ್ಟೀ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ ), ಬೆಂಗಳೂರು

ಕಾಫಿ ಬೆಳೆ ಮಲೆನಾಡು ಪ್ರದೇಶದ ಆರ್ಥಿಕ ಹಾಗೂ ಪರಿಸರಾಧಾರಿತ ಜೀವನಕ್ಕೆ ವ್ಯವಸ್ಥೆಯ ಪ್ರಮುಖ ಆಧಾರವಾಗಿದೆ. ಇದು ಪಶ್ಚಿಮ ಘಟ್ಟಗಳ ಜೀವವೈವಿಧ್ಯವನ್ನು ಸಂರಕ್ಷಿಸುವುದರ ಜೊತೆಗೆ ಮಣ್ಣಿನ ಕೊರೆತವನ್ನು ತಡೆಯುತ್ತದೆ. ಆರ್ಥಿಕವಾಗಿ, ಮಲೆನಾಡು ಭಾಗವು ಭಾರತದ ಬಹುಪಾಲು ಕಾಫಿ ಉತ್ಪಾದನೆ ಹಾಗೂ ರಫ್ತು ಆದಾಯಕ್ಕೆ ಅಪಾರ ಕೊಡುಗೆ ನೀಡುತ್ತಿದ್ದು, ಲಕ್ಷಾಂತರ ರೈತರು ಮತ್ತು ಕಾರ್ಮಿಕರ ಜೀವನೋಪಾಯವನ್ನು ನೇರವಾಗಿ ಬೆಂಬಲಿಸುತ್ತಿದೆ. ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಸುಮಾರು 2.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳು ಭಾರತದ ಒಟ್ಟು ಕಾಫಿ ಉತ್ಪಾದನೆಯ 7೦% ಕ್ಕಿಂತ ಹೆಚ್ಚಿನ ಪಾಲು ಹೊಂದಿವೆ. ಇಪ್ಪತ್ತು ವರ್ಷಗಳ ಹಿಂದೆ ಮಲೆನಾಡಿನಲ್ಲಿ ಕಾಫಿ ಪ್ರದೇಶದ ಸುಮಾರು 7೦% ಕಾಫಿ ಪ್ರದೇಶದಲ್ಲಿ ಭಾಗದಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿತ್ತು; ಆದರೆ ಇಂದು ಸುಮಾರು 9೦% ಪ್ರದೇಶದಲ್ಲಿ ರೊಬಸ್ಟಾ ಕಾಫಿ ಬೆಳೆಯಲಾಗುತ್ತಿದೆ.

ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಬಿಳಿ ಕಾಂಡ ಕೊರೆಕ  ಕೀಟದ ಹಾವಳಿ ಹಾಗೂ ರೋಗಗಳ ಹೆಚ್ಚಳ, ಜೊತೆಗೆ ಅರೇಬಿಕಾ ಕಾಫಿಯ ಮೇಲೆ ಹವಾಮಾನ ವೈಪರೀತ್ಯಕ್ಕೆ ಮತ್ತು ಹೆಚ್ಚಿನ ನಿರ್ವಹಣಾ ವೆಚ್ಚದ ಕಾರಣಗಳಿಂದಾಗಿ ರೈತರು ರೊಬಸ್ಟಾ ಬೆಳೆ ಕಡೆಗೆ ತಿರುಗುವಂತೆ ಮಾಡಿದೆ. ಇದಾಗಿಯೂ ಅರೇಬಿಕಾ ಉತ್ತಮ ಗುಣಮಟ್ಟದ ಕಾಫಿಯಾಗಿದ್ದು, ಇದರಲ್ಲಿನ ಕ್ಯಾಫೀನ್ ಪ್ರಮಾಣವು ತೂಕದ ಆಧಾರದ ಮೇಲೆ ಸುಮಾರು 0.80% ರಿಂದ 1.5% ರವರೆಗೆ ಇರುತ್ತದೆ; ರೊಬಸ್ಟಾದಲ್ಲಿ 1.7% ರಿಂದ 3.5% ರವರೆಗೆ ಕಂಡುಬರುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಕಾಫಿ ಉತ್ಪಾದನೆಯ ಸ್ಥಿರತೆಯನ್ನು ಕಾಪಾಡುವಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ.

2021 ರಿಂದ 2026 ರವರೆಗೆ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ , ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ, ಬಾಳೆಹೊನ್ನುರು, ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು, ಪ್ರಗತಿಪರ ರೈತರು, ಹಾಗೂ ಇತರ ಸಹಭಾಗಿತ್ವ ಸಂಸ್ಥೆಗಳೊಂದಿಗೆ ಸೇರಿ ಮಲೆನಾಡು ಪ್ರದೇಶದಲ್ಲಿ ಕ್ಷೇತ್ರ ಅಧ್ಯಯನಗಳನ್ನು ನಡೆಸಲಾಯಿತು. ಈ ಅಧ್ಯಯನವು ಹವಾಮಾನ ವೈಪರೀತ್ಯ/ಬದಲಾವಣೆ, ಇಳುವರಿ, ರೈತರ ಪ್ರತಿಕ್ರಿಯೆಗಳು ಹಾಗೂ ಅನುಸರಿಸುತ್ತಿರುವ ಕ್ರಮಗಳನ್ನು ಅಧ್ಯಯನವನ್ನು ಕೈಗೊಳ್ಳಲಾಯಿತು.

ಹವಾಮಾನ ಬದಲಾವಣೆ, ಮಳೆಯ ಅಸ್ಥಿರತೆಯು ಮತ್ತು ಕಾಫಿ ಉತ್ಪಾದನೆ ಮೇಲಿನ ಪರಿಣಾಮ

ಮಿನಿ ತೇಜಸ್ವಿ (2023) ಅವರ ಪ್ರಕಾರ, 2023 ರ ಸಮಯದಲ್ಲಿ ದೀರ್ಘಕಾಲ ಬರದ ಪರಿಸ್ಥಿತಿ ಕಂಡುಬಂದಿದ್ದು, ಇದಕ್ಕೆ ಮುಖ್ಯವಾಗಿ ಎಲ್-ನಿನೋ ಪರಿಣಾಮದಿಂದ ಮಳೆಯ ಕುಂಠಿತತೆ ಕಾರಣವಾಗಿತ್ತು. ಜನವರಿಯಲ್ಲಿ ಕೇವಲ ಸುಮಾರು 5 ಮಿ.ಮೀ ಮಳೆಯಷ್ಟೇ ದಾಖಲಾಗಿದ್ದು, ಏಪ್ರಿಲ್ ವರೆಗೆ ಬಹುತೇಕ ಮಳೆಯಾಗಲಿಲ್ಲ. ಅದೇ ವರ್ಷ ಮುಂಗಾರು ಸಾಮಾನ್ಯವಾಗಿ ಆರಂಭವಾಗುವ ಜೂನ್ ತಿಂಗಳ ಬದಲಾಗಿ ಜುಲೈ–ಆಗಸ್ಟ್ ಅವಧಿಗೆ ಮುಂದೂಡಲ್ಪಟ್ಟಿತು. ಇದರಿಂದ ಕಾಫಿ ಬೆಳೆಗಳ ಬೆಳವಣಿಗೆ ಸಮಸ್ಯೆ ಉಂಟಾಯಿತು. ಇದರ ಪರಿಣಾಮವಾಗಿ ಬೆರ್ರಿ ಬೆಳವಣಿಗೆಯ ಅವಧಿಯಲ್ಲಿ ಅಸಮತೋಲನ ಹಾಗೂ ಕೆಲವೊಮ್ಮೆ ಅತಿಯಾದ ಮಳೆಯು ಕಂಡುಬಂದು, ಹೆಚ್ಚಿನ ಪ್ರಮಾಣದಲ್ಲಿ ಬೆರ್ರಿಗಳು ಉದುರಿದವು. ಕ್ಷೇತ್ರಮಟ್ಟದ ಅಂದಾಜುಗಳ ಪ್ರಕಾರ ರೊಬಸ್ಟಾದಲ್ಲಿ 3೦–4೦% ಹಾಗೂ ಅರೇಬಿಕಾದಲ್ಲಿ 25–3೦% ಬೆರ್ರಿ ಉದುರುವಿಕೆ ಕಂಡುಬಂದಿತು.

ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ  ಬಾಳೆಹೊನ್ನೂರಿನ ಸಸ್ಯಶಾಸ್ತ್ರಜ್ಞ ಡಾ. ಸೋಮಶೇಖರ ಪಾಟೀಲ್ ಅವರು 2023 ರಲ್ಲಿ ಜನವರಿ–ಮಾರ್ಚ್ ಅವಧಿಯ ಅಸಮರ್ಪಕ ಮಳೆಯಾಗಿದ್ದು ಕಾಫಿ ಬೆರ್ರಿಗಳ ಅಸಮರ್ಪಕ ಬೆಳವಣಿಗೆಗೆ ಕಾರಣವಾಯಿತು. ಇದರ ಪರಿಣಾಮವಾಗಿ ಒಂದೇ ಗಿಡದಲ್ಲಿ ವಿವಿಧ ಗಾತ್ರದ ಬೆರ್ರಿಗಳು ಕಂಡುಬಂದಿದ್ದು, ಜುಲೈ–ಆಗಸ್ಟ್ ತಿಂಗಳಲ್ಲಿ ನೀರು ಮತ್ತು ಪೋಷಕಾಂಶಗಳ ಕೊರತೆಯಿಂದಾಗಿ ಬೆರ್ರಿ ಉದುರುವುಕೆ ಹೆಚ್ಚಾಯಿತೆಂದು ತಿಳಿಸಿದ್ದಾರೆ.

2026 ರ ಆರಂಭದಲ್ಲಿ ಕರ್ನಾಟಕದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಕಾಫಿಯ ಹೂಮಳೆಯ ಮಾದರಿಯಲ್ಲಿ ಗಮನಾರ್ಹ ವ್ಯತ್ಯಯ ಉಂಟಾಯಿತು. ಹೂ ಅರಳಲು ಮತ್ತು ಉತ್ಪಾದನೆಗೆ ಅತ್ಯಗತ್ಯವಾದ ಮುಂಗಾರು ಪೂರ್ವ ಮಳೆಯ ಸಮಯ ಬದಲಾಗಿದ್ದು ನೆರಳಿನ ಆಶ್ರಯದಲ್ಲಿ ಬೆಳೆಯುವ ಭಾರತೀಯ ಕಾಫಿಗೆ ನಿರ್ದಿಷ್ಟ ಎತ್ತರ, ಮಳೆಯ ಪ್ರಮಾಣ ಮತ್ತು ನೆರಳು ಅಗತ್ಯ. ಹವಾಮಾನ ಬದಲಾವಣೆಯಿಂದ ಈಗ ಹೂಮಳೆಯ ಸಮಯದಲ್ಲಿ ಭಾರೀ ಪ್ರಮಾಣದ ಬದಲಾವಣೆ ಕಂಡುಬಂದಿದ್ದು ಇದರಿಂದ ರೊಬಸ್ಟಾದ (ಮಾರ್ಚ್) ಮತ್ತು ಅರೇಬಿಕಾ ಕಾಫಿಯಲ್ಲಿ (ಏಪ್ರಿಲ್) ಹೂ ಬಿಡುವ ಅವಧಿ ಅಸ್ತವ್ಯಸ್ತವಾಗಿದೆ.

ಮಳೆಯ ಅಸ್ಥಿರತೆಯಿಂದ ಉಂಟಾಗುವ ವಿವಿಧ ರೀತಿಯ ಪರಿಣಾಮಗಳು

ಮಳೆ ಕೊರತೆಯು ಹೂ ಬಿಡುವಿಕೆಯಲ್ಲಿ ಕಡಿಮೆಯಾಗುವುದು, ಹಣ್ಣಿನ/ಬೆರ್ರಿಯ ರಚನೆ, ಕಾಫಿ ಬೀಜದ ಗಾತ್ರ ಕುಗ್ಗುವುದು, ಕೀಟ ಹಾಗೂ ರೋಗಗಳ ಹಾವಳಿ ಹೆಚ್ಚಾಗುವುದು. ಅತಿಯಾದ ಅಥವಾ ಅಕಾಲಿಕ ಮಳೆಯಿಂದಾಗಿ ಹೂ ಉದುರುವಿಕೆ, ಶಿಲೀಂಧ್ರ ಸೋಂಕು, ಬೇರುಗಳಿಗೆ ಹಾನಿ ಹಾಗೂ ಮಣ್ಣಿನ ಕೊರೆತ ಸಂಭವಿಸುತ್ತದೆ.

ಆರಂಭಿಕ ಮಳೆಯು ಅವಧಿಗೂ ಮುನ್ನ ಹೂ ಬಿಡುವಿಕೆಗೆ ಕಾರಣವಾಗುತ್ತದೆ; ಆದರೆ ತಡವಾದ ಮಳೆಯು ತೇವಾಂಶದ ಕೊರತೆ ಉಂಟುಮಾಡಿ ಹೂ ಬಿಡುವಿಕೆಯನ್ನು ವಿಳಂಬಗೊಳಿಸಿ ಗಿಡದ ಬೆಳವಣಿಗೆಯನ್ನು ಕುಗ್ಗಿಸುತ್ತದೆ. ನಿರ್ವಾಹಣ ಪದ್ಧತಿಯ ಆಧಾರದ ಮೇಲೆ ಅರೇಬಿಕಾ ಸಾಮಾನ್ಯವಾಗಿ ಪರ್ಯಾಯ (ದ್ವೈವಾರ್ಷಿಕ) ವರ್ಷಗಳಲ್ಲಿ ಹೆಚ್ಚು ಫಲ ನೀಡುತ್ತದೆ. ರೊಬಸ್ಟಾದ ಉತ್ಪಾದನಾ ಸ್ವರೂಪ ನಿರ್ವಹಣಾ ಕ್ರಮಗಳನ್ನು ಅವಲಂಬಿಸಿ ವಾರ್ಷಿಕ ಅಥವಾ ಪರ್ಯಾಯ ಮಾದರಿಯಲ್ಲಿ ಕಂಡುಬರುತ್ತದೆ.

ಹೂಮಳೆ ಏಕೆ ಅತ್ಯಂತ ಮಹತ್ವದ್ದಾಗಿದೆ?

ಕರ್ನಾಟಕದಲ್ಲಿ ಮಾರ್ಚ್–ಏಪ್ರಿಲ್ ಅವಧಿಯ ಮುಂಗಾರು ಪೂರ್ವ ಮಳೆಯ ಸಂದರ್ಭದಲ್ಲಿ ಕಾಫಿ ಹೂ ಬಿಡುವಿಕೆ ಪ್ರಾರಂಭಿಸುವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಏಕರೂಪವಾದ ಹೂ ಬಿಡುವಿಕೆ ಪರಾಗಸ್ಪರ್ಶ ಮತ್ತು ಹಣ್ಣಿನ ಕಟ್ಟುವಿಕೆಗೆ ಅತ್ಯಗತ್ಯ. ಇದರಿಂದ ಬೆರ್ರಿಗಳ ಸಮಾನಾಂತರ ಬೆಳವಣಿಗೆ ಮತ್ತು ಉತ್ತಮ ಗುಣಮಟ್ಟ ಕೊಯ್ಲು ಸಾಧ್ಯವಾಗುತ್ತದೆ.

ಹೂಮಳೆಯ ಕೊರತೆ ಅಥವಾ  ಬಾರಿ ಪ್ರಮಾಣದಲ್ಲಿ ಮಳೆ ಬಂದರೆ ಹೂ ಬಿಡುವಿಕೆ ಪ್ರಕಾರದಲ್ಲಿ ವ್ಯತ್ಯಯ ಉಂಟಾಗುತ್ತದೆ, ಕಾಯಿ ಕಟ್ಟುವುದಿಲ್ಲ, ಕಾಯಿಗಳು ಬೇರೆ ಬೇರೆ ಸಮಯದಲ್ಲಿ ಹಣ್ಣಾಗುತ್ತವೆ. ಇದರಿಂದಾಗಿ ಉತ್ಪಾದನೆ 25-30%  ಇಳಿಕೆಗೆ ಕಾರಣವಾಗುತ್ತದೆ. ಹೂ ಬಿಡುವಿಕೆಯ ಸಮಯದಲ್ಲಿ ಸುಮಾರು 21 ದಿನಗಳ ಬಳಿಕ “ಬ್ಯಾಕಿಂಗ್ ಶವರ್”ನ ಮಳೆ ಅಗತ್ಯವಾಗಿದ್ದು, ಇದು ಬೆರ್ರಿ ಉದುರುವಿಕೆಯನ್ನು ತಡೆಯುತ್ತದೆ. 

ಮಳೆಯ ಸಮಯ

ಜನವರಿಯಿಂದ ಫೆಬ್ರವರಿ ಮಧ್ಯಭಾಗದವರೆಗೆ ಸುಮಾರು 45 ದಿನಗಳಷ್ಟು ಮಳೆರಹಿತ ಅಥವಾ ಅತಿ ಕಡಿಮೆ ಮಳೆಯ ಅವಧಿ ಅಗತ್ಯವಾಗುತ್ತದೆ. ಇದು ಕಾಫಿ ಹೂವಿನ ಪ್ರಕ್ರಿಯೆಗೆ ಮೊಗ್ಗುಗಳಿಗೆ ಅಗತ್ಯವಾದ ತೇವಾಂಶವನ್ನು ಒದಗಿಸುತ್ತದೆ. ರೊಬಸ್ಟಾ ಕಾಫಿಗೆ ಮಾರ್ಚ್ 15 ರೊಳಗೆ ಹಾಗೂ ಅರೇಬಿಕಾಗೆ ಮಾರ್ಚ್ ಅಂತ್ಯದಿಂದ ಏಪ್ರಿಲ್ ಆರಂಭದೊಳಗೆ 25-30 ಮಿ.ಮೀ ಪ್ರಮಾಣದ ಹೂಮಳೆ ಆಗಬೇಕು. ಈ ಮಳೆ ಗಿಡದ ಎಲ್ಲಾ ಭಾಗಗಳಿಗೂ ತೇವಾಂಶ ನೀಡಿ ಏಕರೂಪ ಹೂ ಬಿಡುವಿಕೆಯನ್ನು ಪ್ರಾರಂಭಿಸುತ್ತದೆ. ರೊಬಸ್ಟಾದಲ್ಲಿ ಸಾಮಾನ್ಯವಾಗಿ 1.5-2 ತಿಂಗಳ ಬರದ ನಂತರ ಹೂ ಬಿಡುವಿಕೆ ಸಂಭವಿಸುತ್ತದೆ. ಅರೇಬಿಕಾದಲ್ಲಿ ಸುಮಾರು ೩ ತಿಂಗಳ ಬರ ಅವಧಿಯ ನಂತರ ಹೂ ಬಿಡುವಿಕೆ ಆರಂಭವಾಗುತ್ತದೆ. ಹೂ ಬಿಡುವಿಕೆಯ 21 ದಿನಗಳೊಳಗೆ 20-40 ಮಿ.ಮೀ ಪ್ರಮಾಣದ ಬ್ಯಾಕಿಂಗ್ ಶವರ್ ಅಗತ್ಯವಾಗಿದ್ದು, ಇದು ಹಣ್ಣಿನ ಕಟ್ಟುವಿಕೆಯನ್ನು ಬಲಪಡಿಸುತ್ತದೆ. ನಂತರ ಜೂನ್ ವರೆಗೆ ಇದೇ ಪ್ರಮಾಣದ ಪೂರಕ ಮಳೆಯು ಬೆರ್ರಿ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಆದರೆ ಸಮಯಕ್ಕೆ ಸರಿಯಾಗಿ ಕೃತಕ ನೀರಾವರಿ ಮಾಡಿದರೂ ಸಹ 10–3೦% ಇಳುವರಿಯಲ್ಲಿ ನಷ್ಟ ಉಂಟಾಗುತ್ತಿದೆ. ಕಾರಣ, ಕೃತಕ ನೀರಾವರಿ ನೈಸರ್ಗಿಕ ಹೂಮಳೆಯ ಪರಿಣಾಮವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಜೂನ್ನಿಂದ ಸೆಪ್ಟೆಂಬರ್ ವರೆಗೆ ಬೀಳುವ ನೈಋತ್ಯ ಮುಂಗಾರು ಮಳೆ (1500 2500ಮಿ.ಮೀ) ಇದು ಬೆರ್ರಿ ಹಾಗೂ ಗಿಡದ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ. ಅರೇಬಿಕಾಗೆ 1500–2೦೦೦ ಮಿ.ಮೀ; ರೊಬಸ್ಟಾಗೆ 2೦೦೦–3,೦೦೦ ಮಿ.ಮೀ ನಷ್ಟು ವಾರ್ಷಿಕ ಮಳೆಯ ಅಗತ್ಯವಿರುತ್ತದೆ.

ಕಾಫಿ ಸಂಶೋಧನಾ ಉಪಕೇಂದ್ರ, ಚೆಟ್ಟಳ್ಳಿಯ (ಕೊಡಗು) ಡಾ. ಮಂಜುನಾಥ್ ರೆಡ್ಡಿ ಅವರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಹೂಮಳೆಯ ಅಕಾಲಿಕ ಸಮಯ ಹೆಚ್ಚಾಗಿದೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ ಮಳೆಯಿಲ್ಲದಿದ್ದರೆ ರೈತರು ಕೃತಕ ನೀರಾವರಿಯ ಮೇಲೆ ಅವಲಂಬಿತರಾಗುತ್ತಾರೆ; ಆದರೂ ಹೂಗುಚ್ಛಗಳು ಸರಿಯಾಗಿ ಫಲ ನೀಡುವುದಿಲ್ಲ. ಆರಂಭಿಕ ಹೂಮಳೆಯ ನಂತರ ಸುಮಾರು 15-20 ದಿನಗಳಲ್ಲಿ ಬ್ಯಾಕಿಂಗ್ ಶವರ್ ಅಗತ್ಯವಾಗಿದ್ದು, ಅದು ಇಲ್ಲದಿದ್ದರೆ ವಿಶೇಷವಾಗಿ ರೊಬಸ್ಟಾದಲ್ಲಿ 5೦% ವರೆಗೆ ಉತ್ಪಾದನಾ ನಷ್ಟ ಸಂಭವಿಸಬಹುದು. ಇನ್ನೊಂದು ಸಮಸ್ಯೆಯೆಂದರೆ “ರನ್ನಿಂಗ್ ಬ್ಲಾಸಮ್” ಅಥವಾ ಹಂತ ಹಂತವಾಗಿ ಹೂ ಬಿಡುವಿಕೆ ಪ್ರಕ್ರಿಯೆಯಲ್ಲಿ ಕೆಲವು ಹೂಗಳು ಅರಳುವಾಗ ಕೆಲವು ಅರಳದೇ ಉಳಿಯುತ್ತವೆ; ನಿಗದಿತ ಸಮಯದಲ್ಲಿ ಅರಳುವುದಿಲ್ಲ. ಇದರಿಂದ ಬೆರ್ರಿಗಳ ಗುಣಮಟ್ಟ ಕಡಿಮೆಯಾಗಿ ಅಸಮರ್ಪಕವಾಗಿ ಹಣ್ಣಾಗುತ್ತವೆ.

ಮಳೆಯ ಪ್ರಮಾಣ

ಕಾಫಿ ಹೂ ಬಿಡುವಿಕೆಯ ಸಮಯದಲ್ಲಿ ಅಗತ್ಯವಿರುವ ಮಳೆಯ ಪ್ರಮಾಣ 25-40 ಮಿ.ಮೀ ಆಗಿದೆ. ಸಂಶೋಧನೆಗಳ ಪ್ರಕಾರ 40-50 ಮಿ.ಮೀ ಸಮತೋಲನ ಮಳೆಯು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಮಳೆಯ ಕೊರತೆ (25 ಮಿ.ಮೀ ಕ್ಕಿಂತ ಕಡಿಮೆ), ಅಪೂರ್ಣ ಅಥವಾ ಭಾಗಶಃ ಹೂ ಬಿಡುವಿಕೆ, ಅಸಮ ಹಣ್ಣಿನ ಕಟ್ಟುವಿಕೆಯಿಂದಾಗಿ 25–3೦% ಉತ್ಪಾದನಾ ಕುಸಿತ, ಹೂ ಬಿಡುವಿಕೆಯ ವೈಫಲ್ಯ ಕಂಡುಬಂದಿದೆ. ಅತಿಯಾದ ಮಳೆ (5೦ ಮಿ.ಮೀ ಕ್ಕಿಂತ ಹೆಚ್ಚು), ಹೂಗಳು ಉದುರುವುದು, ಪರಾಗ ಕಣಗಳ ತೊಳೆದುಹೋಗುವಿಕೆ, ಶಿಲೀಂಧ್ರ ರೋಗಗಳ ಹೆಚ್ಚಳ, ಎಲೆ ತುಕ್ಕು ರೋಗದ ಸಮಸ್ಯೆ, ಹಣ್ಣಿನ ಕಟ್ಟುವಿಕೆ ಕಡಿಮೆಯಾಗುವುದು ಕಂಡುಬಂದಿದೆ. 2026 ರ ಜನವರಿ–ಫೆಬ್ರವರಿ ಅವಧಿಯಲ್ಲಿ ದಾಖಲಾದ ಮಳೆಯ ಪ್ರಮಾಣವು 5.೦ ರಿಂದ 36 ಮಿ.ಮೀ ನಡುವಿನ ಅಸಮ ಮಳೆ ವಿತರಣೆಯ ದಾಖಲಾಗಿದೆ.

ಕಾರ್ಮಿಕ ಶಕ್ತಿ ಇತ್ತೀಚಿನ ವರ್ಷಗಳಲ್ಲಿ ಕಾಫಿ ತೋಟಗಳಲ್ಲಿ ಕಾರ್ಮಿಕರ ಕೊರತೆ ಗಂಭೀರ ಸಮಸ್ಯೆಯಾಗಿದೆ. ಸ್ಥಳೀಯವಾಗಿ ತೋಟಗಳಲ್ಲಿ ಕೆಲಸ ಮಾಡಲು ಸಾಕಷ್ಟು ಕಾರ್ಮಿಕರು ಲಭ್ಯವಾಗುತ್ತಿಲ್ಲ. ಆದ್ದರಿಂದ ಅಸ್ಸಾಂ, ಬಿಹಾರ, ಒಡಿಶಾ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ಮತ್ತು ಇತರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಆದರೆ ಅವರಿಗೂ ಸ್ಥಳೀಯ ಪರಿಸ್ಥಿತಿಗಳು ಹಾಗೂ ನಿರ್ವಹಣೆಗೆ ಸಂಬಂಧಿಸಿದ ಕೆಲವು ಅಡಚಣೆಗಳಿದ್ದು, ಸಮಯಕ್ಕೆ ಸರಿಯಾಗಿ ಕೃಷಿ ಕಾರ್ಯಗಳನ್ನು ಕೈಗೊಳ್ಳುವುದು ಕಷ್ಟವಾಗುತ್ತಿದೆ. ಮಲೆನಾಡಿನ ಅನೇಕ ಬೆಳೆಗಾರರ ಅಭಿಪ್ರಾಯದಂತೆ, ಹಿಂದಿನ ದಶಕಗಳಲ್ಲಿ ಒಬ್ಬ ಕಾರ್ಮಿಕನು ಒಂದು ದಿನದಲ್ಲಿ ಮಾಡುವ ಕೆಲಸಕ್ಕೆ ಈಗ ನಾಲ್ವರು ಕಾರ್ಮಿಕರ ಅಗತ್ಯವಿದೆ. ಇದು ಕಾರ್ಮಿಕ ದಕ್ಷತೆಯಲ್ಲಿ ಉಂಟಾದ ಗಮನಾರ್ಹ ಕುಸಿತವನ್ನು ಸೂಚಿಸುತ್ತದೆ.

ಸಕಲೇಶಪುರದ ಡಾ. ಆನಂದ್ ಪೆರೈರಾ ಅವರ ಪ್ರಕಾರ, ಕಾಫಿ ಕೊಯ್ಲಿನ ಸಮಯದಲ್ಲಿ ಮಳೆಯಾದರೆ ಅದೇ ಸಮಯದಲ್ಲಿ ಹೊಸ ಹೂಗಳು ಕಾಣಿಸಿಕೊಳ್ಳುತ್ತವೆ. ಕಾರ್ಮಿಕರು ಹಣ್ಣಾದ ಬೆರ್ರಿಗಳನ್ನು ಕೀಳುವಾಗ ಅರಳಿದ ಹೂಗಳಿಗೂ ಹಾನಿಯಾಗುವುದರಿಂದ 20-30 % ವರೆಗೆ ಉತ್ಪಾದನಾ ನಷ್ಟ ಸಂಭವಿಸಬಹುದು. ಕಾಫಿ ಮಂಡಳಿ, ಸಕಲೇಶಪುರದ ಡಾ. ರಂಜಿತ್ ಅವರ ಪ್ರಕಾರ ಅಸಮ ಹೂ ಬಿಡುವಿಕೆ ಈಗ ಸಾಮಾನ್ಯ ಸಮಸ್ಯೆಯಾಗಿದೆ. ನೆರಳಿನ ಅವಶ್ಯಕತೆ ಪ್ರಭೇದಾನುಸಾರ ಬದಲಾಗುತ್ತದೆ: ಅರೇಬಿಕಾ: ಸುಮಾರು 6೦% ನೆರಳು; ರೊಬಸ್ಟಾ: ಸುಮಾರು 3೦–35% ನೆರಳು. ಈ ಹಂಗಾಮಿನಲ್ಲಿ ಗಾಳಿಯ ವೇಗ ಮತ್ತು ತೇವಾಂಶ ಎರಡೂ ಕಡಿಮೆಯಾಗಿದ್ದು, ನೀರಾವರಿ ಇಲ್ಲದ ರೊಬಸ್ಟಾ ತೋಟಗಳಲ್ಲಿ40–5೦% ವರೆಗೆ ಉತ್ಪಾದನಾ ನಷ್ಟ ಕಂಡುಬಂದಿದೆ. ಇದಕ್ಕೆ ಪರ್ಯಾಯವಾಗಿ ಅರೇಬಿಕಾ ದೀರ್ಘಕಾಲದ ಒಣ ಪರಿಸ್ಥಿತಿಯನ್ನು ಕೆಲವು ಮಟ್ಟಿಗೆ ಸಹಿಸಬಲ್ಲದು.

ಪರಾಗಸ್ಪರ್ಶಕಗಳ ಸಂರಕ್ಷಣೆ ತಂಡದ ಅಧ್ಯಯನದ ಪ್ರಕಾರ, ಮಲೆನಾಡಿನಲ್ಲಿ ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕಗಳನ್ನು ವರ್ಷಪೂರ್ತಿ ಉಳಿಸಿಕೊಳ್ಳಲು ವಿವಿಧ ಹೂ ಬಿಡುವ ಅವಧಿಯ ಸ್ಥಳೀಯ ಮರಗಳು ಮತ್ತು ಕೃಷಿ–ಅರಣ್ಯ ವ್ಯವಸ್ಥೆಗಳು ಅಗತ್ಯ.

ಈ ವ್ಯವಸ್ಥೆಯಲ್ಲಿ (ಕಾಡು ಛತ್ರಿ ಮರ) ಪ್ರಮುಖ ಜೇನುಸಸ್ಯವಾಗಿದೆ. ಇದು ಮಾರ್ಚ್ನಿಂದ ಜೂನ್ ವರೆಗೆ ಹೂ ಬಿಡುತ್ತದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮಕರಂದ ಹಾಗೂ ಪರಾಗ ಒದಗಿಸುತ್ತದೆ. ಇದು ಜೇನುನೊಣಗಳನ್ನು ಹೆಚ್ಚು ಆಕರ್ಷಿಸುತ್ತದೆ.

ಅದೇ ರೀತಿ, ಮಲೆನಾಡಿನಲ್ಲಿ ಅಲಂಕಾರಿಕವಾಗಿ ಬೆಳೆಸುವ ಕೆಲವು ಸಸ್ಯಗಳು ಏಪ್ರಿಲ್ನಿಂದ ಜೂನ್ ವರೆಗೆ ಸುಗಂಧ ಹೂಗಳನ್ನು ನೀಡುವುದರಿಂದ ಪರಾಗಸ್ಪರ್ಶಕಗಳಿಗೆ ಆಹಾರ ಮೂಲವಾಗುತ್ತವೆ. ಕೆಲವು ಪ್ರಭೇದದ ಸಸ್ಯಗಳು ಸಹ ಪರಾಗಸ್ಪರ್ಶಕಗಳನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜೊತೆಗೆ ಹಲವಾರು ಹಣ್ಣಿನ ಮರಗಳು ಮತ್ತು ಅರಣ್ಯ ಜಾತಿ ಮರಗಳೂ ಮಕರಂದ ಮತ್ತು ಪರಾಗವನ್ನು ಒದಗಿಸುತ್ತವೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಬತ್ತಮಕ್ಕಿಯ ಶ್ರೀ ರಾಜಣ್ಣ ಅವರ ಪ್ರಕಾರ, ಸುಮಾರು ಹತ್ತು ವರ್ಷಗಳ ಹಿಂದೆ ಕಾಫಿ ಹೂ ಬಿಡುವಿಕೆ ಮತ್ತು ಪರಾಗಸ್ಪರ್ಶ ನಿರ್ದಿಷ್ಟ ಸಮಯದಲ್ಲಿ ನಡೆಯುತ್ತಿತ್ತು. ಆದರೆ ಈಗ ಹವಾಮಾನ ಬದಲಾವಣೆ, ವಿಶೇಷವಾಗಿ ಮಳೆಯ ಅಸ್ಥಿರತೆ ಮತ್ತು ಅಕಾಲಿಕ ಮಳೆಯಿಂದ ಈ ಪ್ರಕ್ರಿಯೆ ಅಸ್ತವ್ಯಸ್ತವಾಗಿದೆ.

ಜೀವನೋಪಾಯದ ಮೇಲೆ ಬೀರುತ್ತಿರುವ ಪರಿಣಾಮ

ಹವಾಮಾನ ಬದಲಾವಣೆಯು ತೋಟಗಾರಿಕೆಯನ್ನು ಅವಲಂಬಿಸಿರುವ ಕುಟುಂಬಗಳ ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಇದರಿಂದ ಕುಟುಂಬದ ಸಮಾರಂಭಗಳ ವೇಳಾಪಟ್ಟಿ ಅಸ್ತವ್ಯಸ್ತವಾಗುವುದು, ಆರ್ಥಿಕ ಒತ್ತಡ ಹೆಚ್ಚಾಗುವುದು, ಉದ್ಯೋಗಾವಕಾಶಗಳು ಕಡಿಮೆಯಾಗುವುದು, ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀಳುವುದು, ಕೆಲಸಕ್ಕಾಗಿ ಕುಟುಂಬಗಳ ವಲಸೆ ಹೆಚ್ಚಾಗುವುದು, ಮಾನಸಿಕ ಒತ್ತಡ ಮತ್ತು ಗ್ರಾಮೀಣ ಜೀವನದ ಗುಣಮಟ್ಟದ ಗಣನೀಯವಾಗಿ ಪರಿಣಾಮ ಬೀರುತ್ತಿದೆ.

ತಗ್ಗಿಸುವಿಕೆ ಮತ್ತು ಹೊಂದಾಣಿಕೆ ಕ್ರಮಗಳು

ಕಾಫಿ ಉತ್ಪಾದನೆಯನ್ನು ಕಾಪಾಡಲು ಈ ಕ್ರಮಗಳು ಅಗತ್ಯ. ಸಮರ್ಪಕ ನೀರಾವರಿ ನಿರ್ವಹಣೆ, ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಸರಿಪಡಿಸುವುದು, ಸಮತೋಲಿತ ರಸಗೊಬ್ಬರ ಬಳಕೆ, ಸೂಕ್ಷ್ಮಜೀವಿ ಸಂಯೋಜನೆಗಳು ಹಾಗೂ ಬೆಳವಣಿಗೆ ನಿಯಂತ್ರಕಗಳ ಬಳಕೆ, ಮಣ್ಣಿನ ಫಲವತ್ತತೆ ಕಾಪಾಡುವುದು, ಹವಾಮಾನ–ಸ್ಮಾರ್ಟ್ ಕಾಫಿ ಕೃಷಿ ಕ್ರಮಗಳಲ್ಲಿ: ಹನಿ ನೀರಾವರಿ, ಮಳೆನೀರು ಸಂಗ್ರಹಣೆ, ಮಲ್ಚಿಂಗ್ ಮೂಲಕ ತೇವಾಂಶ ಸಂರಕ್ಷಣೆ, ಸ್ಥಳೀಯ ಅಥವಾ ನೈಟ್ರೋಜನ್ ಸ್ಥಿರೀಕರಣ ಮರಗಳೊಂದಿಗೆ ನೆರಳು ನಿರ್ವಹಣೆ, ಹವಾಮಾನ ಸಹಿಷ್ಣು ಮತ್ತು ರೋಗ ನಿರೋಧಕ ತಳಿಗಳ ಬಳಕೆ, ಅಂತರ ಬೆಳೆ ಪದ್ಧತಿ, ಮಣ್ಣಿನ ಪರೀಕ್ಷೆ ಮತ್ತು ಸಾವಯವ ಕೃಷಿ ಪರಾಗಸ್ಪರ್ಶಕಗಳ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಕೃಷಿ ಕ್ರಮಗಳು ಉತ್ಪಾದಕತೆ ಹೆಚ್ಚಿಸಲು ಸಹಕಾರಿ. ಉತ್ಪಾದಕತೆಯನ್ನು ಕಾಯ್ದುಕೊಂಡು ರಾಸಾಯನಿಕ ಗೊಬ್ಬರ ಬಳಕೆಯನ್ನು 25-30 % ವರೆಗೆ ಕಡಿಮೆ ಮಾಡುವ ಸಾಧ್ಯತೆ ಇದೆ.

ನವೀನ ಬೆಳೆಗಾರರು: ಮಲೆನಾಡಿನ ಕಾಫಿ ಬೆಳೆಗಾರರು ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದುವಂತೆ ಹಲವು ನವೀನ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದ ಕೆರೆಹಳ್ಳಿಯ ಡಾ. ಆನಂದ್ ಮತ್ತು ಡಾ. ಗೀತಾ ಪೆರೈರಾ ರವರು ಹೂಮಳೆಯ ಅಸ್ಥಿರತೆಯನ್ನು ಎದುರಿಸಲು ಕೇವಲ 24 ಗಂಟೆಗಳೊಳಗೆ 1೦೦ ಎಕರೆ ಕಾಫಿ ತೋಟಕ್ಕೆ ನೀರಾವರಿ ಒದಗಿಸಲು ಕೈಗೊಂಡಿರುವ ಕ್ರಮದ ವಿವರಗಳನ್ನು ಸಂಗ್ರಹಿಸಲಾಯಿತು. ಹಿಂದೆ ಇದೇ 1೦೦ ಎಕರೆ ಪ್ರದೇಶಕ್ಕೆ ನೀರಾವರಿ ನೀಡಲು 2 ರಿಂದ 2.5 ತಿಂಗಳು ಬೇಕಾಗುತ್ತಿತ್ತು. ಆಸ್ಟ್ರಿಯಾದ ತಂತ್ರಜ್ಞಾನವನ್ನು ಬಳಸಿಕೊಂಡು ರೊಬಸ್ಟಾ ತೋಟಗಳಿಗೆ ನೀರಾವರಿ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ವ್ಯವಸ್ಥೆಯ ಮೂಲಕ ಹಿಂದಿನ ತಲೆಮಾರಿನಿಗಿಂತ ಮೂರು ಪಟ್ಟು ಹೆಚ್ಚಿನ ಉತ್ಪಾದನೆ ಸಾಧಿಸಲಾಗಿದೆ ಎಂದು ಡಾ. ಆನಂದ್ ಪೆರೈರಾ ತಿಳಿಸಿದ್ದಾರೆ.

ಕಾಫಿ ಮಂಡಳಿಯ ಪಾತ್ರ

ಕಾಫಿ ಮಂಡಳಿಯು ತುಂತುರು ಮತ್ತು ಹನಿ ನೀರಾವರಿ, ನೀರು ಸಂಗ್ರಹ ಟ್ಯಾಂಕ್ಗಳು, ಕೆರೆಗಳು, ರಿಂಗ್ವೆಲ್ಗಳು, ತೋಟಗಳ ಪುನರುಜ್ಜೀವನಕ್ಕೆ ಬೆಂಬಲ ನೀಡುತ್ತಿದೆ. ಬದಲಾಗುತ್ತಿರುವ ಹೂಮಳೆ ಮಾದರಿ ಹಾಗೂ ಜಾಗತಿಕ ಗೊಬ್ಬರ ಕೊರತೆಯ ನಡುವೆ ಉತ್ಪಾದನೆ ಕಾಪಾಡಲು ರೈತರು ಮುಂಚಿತವಾಗಿ ಪೋಷಕಾಂಶ ನಿರ್ವಹಣೆ ಮತ್ತು ನೀರಿನ ಸಂಪನ್ಮೂಲ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಭಾರತದಲ್ಲಿ ಕಾಫಿ ತೋಟಗಳನ್ನು ಸಂಪೂರ್ಣ ಯಾಂತ್ರೀಕರಿಸುವುದು ಸಾಧ್ಯವಿಲ್ಲ. ಕಾಫಿ ಕೇವಲ ಒಂದು ಬೆಳೆ ಅಲ್ಲ; ಅದು ಪರಿಸರ, ಜೀವವೈವಿಧ್ಯ, ವನ್ಯಜೀವಿ, ಜೀವನೋಪಾಯ ಮತ್ತು ಸದಾಕಾಲ ಹಸಿರಾಗಿರುವ ಉಷ್ಣವಲಯ ಅರಣ್ಯಗಳೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಆದ್ದರಿಂದ ಬದಲಾಗುತ್ತಿರುವ ಹವಾಮಾನ ಮತ್ತು ವ್ಯಾಪಾರ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾಫಿ ಪರಿಸರ ವ್ಯವಸ್ಥೆಯ ನಿರ್ವಹಣಾ ವಿಧಾನಗಳನ್ನು ಮರುಪರಿಶೀಲಿಸುವ ಅವಶ್ಯಕತೆ ಇದೆಯೆಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಈ ಲೇಖನಗಳನ್ನೂ ಓದಿ

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group