spot_img
Friday, September 11, 2026
spot_imgspot_img

ಮಾತು ‘ಮೌನ’ವಾದರೂ ಹೈನುಗಾರಿಕೆಯಲ್ಲಿ ಇವರು ಬಂಗಾರ: ಹೈನು ಕಾಯಕದಲ್ಲಿಯೇ ಮಾತನಾಡಿದ ಯಶಸ್ವಿ ಹೈನುಗಾರನ ಕತೆಯಿದು!

ಬರಹ ♦ ರಾಧಾಕೃಷ್ಣ ತೊಡಿಕಾನ. ♦ಚಿತ್ರ- ರಾಮ್ ಅಜೆಕಾರ್

ದನಗಳಿಗೆ ಮಾತು ಬಾರದು. ಆದರೆ ತಮ್ಮ ಭಾವನೆಗಳನ್ನು ಅಂಬಾ ಎಂಬ ಕರೆಯ ಮೂಲಕವೋ, ಮುಖವನ್ನು ಮುಂದೊತ್ತಿ ನಾಲಗೆಯನ್ನು ಹೊರಚಾಚಿ ಕಚಗುಳಿಯಿಡುವಂತೆ ನೆಕ್ಕುತ್ತಾ ಏನನ್ನೋ ಸೂಚ್ಯವಾಗಿ ಹೇಳಬಲ್ಲವು. ಭಾಷೆ ಯಾವುದೇ ಇರಲಿ ಅದನ್ನು ಅರ್ಥೈಸಿಕೊಂಡು ತನ್ನ ಒಡೆಯನ ಆಜ್ಞೆಯನ್ನು ಪಾಲಿಸಬಲ್ಲವು. ಇದನ್ನೆಲ್ಲಾ ಅರಿತ ಅವರೊಬ್ಬ ಹೈನುಗಾರ. ಆದರೆ ಮಾತಿಲ್ಲ. ಹಾವಭಾವಗಳನ್ನು ಆಲಿಸಿ ಸ್ಪಂದಿಸಬಲ್ಲರು. ಹೈನುಗಾರಿಕೆಯನ್ನು ಕಾಯಕವನ್ನಾಗಿಸಿ ಸವಾಲುಗಳನ್ನು ಮೆಟ್ಟಿ ನಿಂತವರು. ನೋಡುಗರನ್ನು ಬೆರಗಾಗುವಂತೆ ಮಾಡಿವರು ಸಿದ್ಧಾಪುರದ ಬಾಳೆಬೇರು ಪ್ರಸನ್ನ ಕುಮಾರ್ ಶೆಟ್ಟರು.

ಮಾತು ಮೌನವಾದರೂ -ಕಾಯಕವೇ ಎಲ್ಲಾ:

ಪ್ರಸನ್ನ ಕುಮಾರ್ ಶೆಟ್ಟಿ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಆದರೆ ಅವರು ಉಳಿದವರಂತೆ ದುಡಿಯಬಲ್ಲರು. ಹೈನುಗಾರಿಕೆಯೊಂದಿಗೆ ಸ್ವಾವಲಂಬನೆ ಸ್ವ ಉದ್ಯೋಗದಿಂದ ಇತರರಿಗೂ ಮಾದರಿಯಾದವರು. ಬಹುತೇಕ ಕೃಷಿಕರು ಹೈನುಗಾರಿಕೆಯಿಂದ ದೂರ ಸರಿಯುತ್ತಿರುವ ಈ ಸಂದರ್ಭದಲ್ಲಿ ಹೆಚ್ಚು ಬಿಡುವೇ ಇಲ್ಲದ ಬದ್ಧತೆಯಿಂದ ದುಡಿಯಬೇಕಾದ ಕಸುಬನ್ನೇ ಆಯ್ದುಕೊಂಡು ಓರ್ವ ಯಶಸ್ವಿ ಹೈನುಗಾರನಾಗಿ ಬೆಳೆದು ಅಚ್ಚರಿ ಮೂಡಿಸಿದ್ದಾರೆ.

ಸಣ್ಣ ನೂನ್ಯತೆ ಇದ್ದರೂ ಕೆಲವೊಮ್ಮೆ ಮಾನಸಿಕವಾಗಿ ಕುಗ್ಗುತ್ತಾರೆ. ಕುಟುಂಬದ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಾರೆ. ಆದರೆ ಪ್ರಸನ್ನ ಕುಮಾರ್ ಶೆಟ್ಟಿಯವರಿಗೆ ಅವರ ಕೂಡು ಕುಟುಂಬ ಯಶಸ್ಸಿನ ಹಿಂದೆ ನಿಂತು ಪ್ರೋತ್ಸಾಹಿಸಿದೆ. ಓರ್ವ ಹೈನುಗಾರನಾಗಿ ಬೆಳೆಯಲು ಸಾಧ್ಯವಾಗಿಸಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ಧಾಪುರ ಗ್ರಾಮದ ಬಾಳೆಬೇರು ಪ್ರಸನ್ನ ಕುಮಾರ್ ಶೆಟ್ಟಿಯವರು ಎಲ್ಲರಂತೆ ಬೆಳೆದರೂ ಮಾತು ಅವರಿಂದ ದೂರ. ಬೇರೆಯವರು ಹೇಳುವುದನ್ನು ಸುಲಭವಾಗಿ ಗ್ರಹಿಸಿಬಲ್ಲರು. ಅದಕ್ಕೆ ಸಂಜ್ಞೆಯಿಂಲೇ ಮಾರುತ್ತರ ನೀಡುತ್ತಾರೆ. ಮಾತುಕತೆ ಇಲ್ಲದೆ ಕಾಯಕವೇ ಸರ್ವಸ್ವವೆಂದು ದುಡಿಮೆಯಲ್ಲಿ ಸಂತೃಪ್ತಿ ಪಡೆದಿದ್ದಾರೆ.

ಮುಂಜಾವದ 4 ಗಂಟೆಯಿಂದ ಅವರ ಕಾಯಕ ಆರಂಭವಾಗಿ 10 ಗಂಟೆಗೆ ಒಂದು ಹಂತದ ಕೆಲಸ ಮುಗಿಯುತ್ತದೆ. ಮತ್ತೆ ಮಧ್ಯಾಹ್ನದ ನಂತರ ಮೂರುಗಂಟೆಯಿಂದ 5ಗಂಟೆಯವರೆಗೆ ಹಾಲು ಹಿಂಡಿ ಸೊಸೈಟಿಗೆ ಕಳುಹಿಸುವವರೆಗೆ ಅವರಿಗೆ ವಿರಾಮವಿಲ್ಲ.

15 ಹಾಲು ಕೊಡುವ ಹಸುಗಳು. ಕರುಗಳು ಸೇರಿದಂತೆ 30 ದನಗಳನ್ನು ಪಾಲನೆ ಮಾಡುತ್ತಿದ್ದಾರೆ. ಒಂದೆರಡು ಊರ ತಳಿಯ ದನಗಳನ್ನು ಸಾಕಲು ಕಷ್ಟ ಕಷ್ಟ ಎನ್ನುವ ಈ ದಿನಗಳಲ್ಲಿ ಇವೆಲ್ಲಾವನ್ನೂ ಮಮತೆಯಿಂದಲೇ ಆರೈಕೆ ಮಾಡುತ್ತಾರೆ. ದಿನವೊಂದಕ್ಕೆ 5೦-6೦ ಲೀಟರ್ ಹಾಲು ಸೊಸೈಟಿಗೆ ನೀಡುತ್ತಿದ್ದಾರೆ. ಹಿಂದೆ 7೦-8೦ ಲೀಟರ್ ಹಾಲು ಸೊಸೈಟಿಗೆ ನೀಡಿದ ದಿನಗಳಿದ್ದವು.

ಕಳೆದ 3೦ ವರ್ಷಗಳಿಂದ ಹೈನುಗಾರಿಕೆ ಅವರ ಜೀವಾಳ. ದನಗಳೇ ಇವರ ಸಂಪತ್ತು. ಗೌರವಯುತ ಬದುಕಿಗೆ ಆಧಾರ ಮತ್ತು ಆದಾಯ. ಇವರ ತಂದೆ ನಾಗಪ್ಪ ಶೆಟ್ಟಿಯವರು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರ ತಾಯಿ ರುಕ್ಮಿಣಿ ಕೃಷಿ ಮತ್ತು ಹೈನುಗಾರಿಕೆ ಮಾಡುತ್ತಿದ್ದರು. ಎಮ್ಮೆ ದನ ಸಾಕಿದವರು. ಅದನ್ನೆಲ್ಲಾ ನೋಡುತ್ತಾ, ಸಹಾಯ ಮಾಡುತ್ತಾ ಬೆಳೆದ ಅವರಿಗೆ ದನ ಸಾಕಣೆ ಪ್ರೇರಣೆಯಾಯಿತು. ಮಗನ ಆಸಕ್ತಿಯನ್ನು ಕಂಡ ತಾಯಿ ಮತ್ತು ಕುಟುಂಬ ವರ್ಗದವರು ಪ್ರೋತ್ಸಾಹ ನೀಡಿದರು. ಅವರದೇ ಆದಾಯ ಇರುವಂತೆ ನೋಡಿಕೊಂಡರು.

ದನ ಸಾಕಣೆಗೆ ಅನುಕೂಲವಾಗುವಂತೆ ನೇಪಿಯರ್ ಹುಲ್ಲು ಬೆಳೆಯಲಾಗಿದೆ. ತೋಟದಲ್ಲಿ ನೈಸರ್ಗಿಕ ಹುಲ್ಲು ಯಥೇಚ್ಛವಾಗಿದೆ. ಅಡಿಕೆ ಹಾಳೆಯನ್ನು ಸಣ್ಣದಾಗಿ ತುಂಡರಿಸಿ ನೀಡುತ್ತಾರೆ. ಇದರೊಂದಿಗೆ ಪೋಷಕಾಂಶಗಳುಳ್ಳ ಪಶು ಆಹಾರವನ್ನು ನೀಡುತ್ತಾರೆ. ಹಾಲು ಹಿಂಡುವುದಕ್ಕೆ ಯಂತ್ರವಿದೆ. ಹೈನುಗಾರಿಕೆಯಿಂದ ಹಾಲು ಉತ್ಪಾದನೆ ಒಂದೆಡೆಯಾದರೆ ತೋಟಕ್ಕೆ ಬೇಕಾದ ಗೊಬ್ಬರ ದೊರೆಯುತ್ತದೆ. ಎರಡು ಸ್ಲರಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದು ಅಡುಗೆಗೆ ಗೋಬರ್ ಗ್ಯಾಸ್ ಸಿಗುವುದರಿಂದ ಅಡುಗೆ ಅನಿಲ ಅವಲಂಬಿಸಬೇಕಾಗಿಲ್ಲ. ಪ್ರಸನ್ನರ ಸಹೋದರಿ ಗುಣವತಿ, ಅವರ ಪತಿ ಸಂತೋಷ್ ಕುಮಾರ್ ಶೆಟ್ಟಿ , ಪ್ರಸನ್ನ ಅವರ ಪತ್ನಿ ಸವಿತಾ ಸೇರಿದಂತೆ ಇವರ ಯಶಸ್ಸಿನ ಹಿಂದೆ ಕುಟುಂಬದ ಎಲ್ಲಾ ಸದಸ್ಯರು ಕೈ ಜೋಡಿಸಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.

ಪ್ರಸನ್ನ ಅವರು ವಾಹನ ಚಾಲನೆಯ ಪರವಾನಿಗೆಯನ್ನು ಹೊಂದಿದ್ದು ವಾಹನ ಚಾಲನೆಯಲ್ಲೂ ನಿಷ್ಣಾತ. ಕೃಷಿ ಹಾಗೂ ಇತರ ಯಂತ್ರೋಪಕರಣಗಳ ದುರಸ್ತಿಯನ್ನು ಮಾಡುತ್ತಾರೆ. ಪ್ರಸನ್ನರವರ ಹಾಲಿನ ಲೆಕ್ಕಪತ್ರಗಳನ್ನು ಅವರ ಭಾವ ಸಂತೋಷ್ ಕುಮಾರ್ ಶೆಟ್ಟಿಯವರು ನೋಡಿಕೊಳ್ಳುತ್ತಿದ್ದಾರೆ. ಅವರು ಇಂಜಿನಿಯರ್. ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ರಸನ್ನ ಕುಮಾರ್ ಶೆಟ್ಟಿಯವರ ಸಾಧನೆಯನ್ನು ಗುರುತಿಸಿ ಸಿದ್ದಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಗಿದೆ. ಸ್ಥಳೀಯ ಸಂಘಟನೆಯಿಂದಲೂ ಗೌರವಿಸಲಾಗಿದೆ.

ಈ ಲೇಖನಗಳನ್ನೂ ಓದಿ

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group