spot_img
Saturday, May 2, 2026
spot_imgspot_img

ಇಲ್ಲಿದೆ ರೈತರಿಗೆ ಅಮೂಲ್ಯ ತೋಟಗಾರಿಕಾ ಸಲಹೆಗಳು!

  • -ಡಾ. ಶಶಿಕುಮಾರ್ ಎಸ್.

ಕಾಯಿ ಕೊರಕ, ದುಂಡಾಣು ಅಂಗಮಾರಿ ರೋಗ ಹಾಗೂ ಶಿಲೀಂದ್ರ ರೋಗಗಳಿಗೆ ತುತ್ತಾದ ದಾಳಿಂಬೆ ಹಣ್ಣುಗಳನ್ನು ತೋಟಗಳಲ್ಲಿ ಹಾಗೇ ಬಿಡದೇ ಕನಿಷ್ಟ 2-3 ಅಡಿ ಆಳವಾದ ತೆಗ್ಗುಗಳಲ್ಲಿ ಹಾಕಿ ಮಣ್ಣು ಮುಚ್ಚಬೇಕು.

* ಬೇಸಿಗೆಯಲ್ಲಿ ಹಾಗೂ ಮಳೆ ಇಲ್ಲದ ಸಮಯದಲ್ಲಿ ತೆಂಗಿನ ಬೆಳೆಗೆ ಕನಿಷ್ಟ 10 ದಿನಗಳಿಗೊಮ್ಮೆ ನೀರು ಕೊಡುವದರಿಂದ ಉತ್ಪಾದನೆ ಹೆಚ್ಚಿಸಬಹುದಾಗಿದೆ.

* ಪಪಾಯ ಚಿಬ್ಬು ರೋಗದ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿ ಎಲೆಗಳಿಗೆ ಹಾಗೂ ಹಣ್ಣುಗಳಿಗೆ ಸಿಂಪಡಿಸಬೇಕು.

* ಬೇಸಿಗೆಯಲ್ಲಿ ಎಲ್ಲ ಬಹುವಾರ್ಷಿಕ ಬೆಳೆಗಳ ತೋಟಗಳ ಮಣ್ಣಿನಲ್ಲಿಯ ತೇವಾಂಶವನ್ನು ಕಾಪಾಡಲು ಲಭ್ಯವಿರುವ ತ್ಯಾಜ್ಯವಸ್ತುಗಳಿಂದ ಮಣ್ಣಿನ ಮೇಲೆ ಹೊದಿಕೆ ಮಾಡಬೇಕು.

* ಹಣ್ಣಿನ ಬೆಳೆಗಳಲ್ಲಿ (ಮಾವು, ಪೇರಲ, ಕಲ್ಲಂಗಡಿ) ಮಿಥೈಲ್ ಯುಜಿನಾಲ್ ಬಲೆಗಳನ್ನು ಹಾಗೂ ತರಕಾರಿ (ಕುಂಬಳ, ಸೌತೆ, ಹಾಗಲ, ಹೀರೆ ಇತ್ಯಾದಿ)ಗಳಲ್ಲಿ ಹಣ್ಣು ನೊಣಗಳಿಂದ ಆಗುವ ಹಾನಿಯನ್ನು ತಡೆಗಟ್ಟಲು ಪ್ರತಿ ಎಕರೆಗೆ ಐದರಂತೆ ಬಲೆಗಳನ್ನು ಹಾಕಬೇಕು. ಇಲ್ಲವೇ Neemazol or acephate   ಸಿಂಪಡಿಸಬೇಕು.

* ನೀರಿನ ಸೌಲಭ್ಯವಿರುವ ಸಣ್ಣ ಹಿಡುವಳಿದಾರರು ಬೇಸಿಗೆಯಲ್ಲಿ ತರಕಾರಿ ಬೆಳೆಯುವದು ಸೂಕ್ತ. ಒಂದೇ ಸಲಕ್ಕೆ ಪೂರ್ತಿ ಕ್ಷೇತ್ರದಲ್ಲಿ ಒಂದೇ ತರಹದ ತರಕಾರಿ ಬೆಳೆಯುವದಕ್ಕಿಂತ ಕ್ಷೇತ್ರವನ್ನು ವಿಭಜಿಸಿ ವಿವಿಧ ತರಕಾರಿಗಳನ್ನು ಬೆಳೆೆಯುವದು ಹೆಚ್ಚು ಲಾಭಕರ.

* ಎಲೆ ಬಳ್ಳಿ ಹಾಗೂ ಮೆಣಸಿನ ಬಳ್ಳಿಗಳಿಗೆ ಆಸರೆ ಸಸ್ಯವಾಗಿ ಬೆಳೆಯುತ್ತಿದ್ದ ಎರಿಥ್ರಿನಾ ಇಂಡಿಕಾ ಎಂಬ ಹಾಲವಾಣದ ಬದಲು ಇತ್ತೀಚೆಗೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಗುರುತಿಸಿದ ಗಂಟು ಹುಳುವಿನ ನಿರೋದಕ ಹಾಲವಾಣ “ಎರಿಥ್ರಿನಾ ಸಬ್‌ವುಂಬ್ರನ್ಸ್’’ ಎಂಬ ಜಾತಿಯ ಹಾಲವಾಣವನ್ನು ಬೆಳೆಯುವದು ಸೂಕ್ತ.

* ಬೇಸಿಗೆಯಲ್ಲಿ ಮಣ್ಣಿನ ಮಾದರಿ ತೆಗೆದು, ಮಣ್ಣು ಪರೀಕ್ಷೆ ಮಾಡಿಸಿ ಸೂಕ್ತವಾದ ಮಣ್ಣು ಫಲವತ್ತತೆ ನಿರ್ವಹಣಾ ಕ್ರಮಗಳನ್ನು ಅಳವಡಿಸಬೇಕು.

* ಮೇ-ಜೂನ್ ತಿಂಗಳುಗಳು ಹಣ್ಣಿನ ಗಿಡಗಳನ್ನು ನಾಟಿ ಮಾಡಲು ಸೂಕ್ತ ಸಮಯ. ಅದಕ್ಕೆ ಪೂರ್ವ ಬೇಸಿಗೆಯಲ್ಲಿಯೇ ಆಯಾ ಬೆಳೆಗಳಿಗೆ ಸಿಫಾರಸು ಮಾಡಿದ ಅಂತರದಲ್ಲಿ ತೆಗ್ಗುಗಳನ್ನು ಅಗೆದು ಬಿಡಬೇಕು. ತೆಗ್ಗುಗಳಲ್ಲಿ ಸಾವಯವ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರ ತುಂಬಿ, ಅನಂತರ ನಾಟಿ ಮಾಡಬೇಕು.

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group