spot_img
Sunday, December 8, 2024
spot_imgspot_img
spot_img
spot_img

ಕಿನ್ನಿಗೋಳಿಯಲ್ಲಿ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮ 

ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ಕಥೋಲಿಕ್ ಸಭಾ ಕಿನ್ನಿಗೋಳಿ ಘಟಕ, ಭಾರತೀಯ ಕಿಸಾನ್ ಸಂಘ, ಮೂಲ್ಕಿ ತಾಲೂಕು ಇವರ ಸಹಯೋಗದಲ್ಲಿ ಮನೆ ಮನೆಯಲ್ಲಿ ಮಲ್ಲಿಗೆ ಕೃಷಿ, ವೈಜ್ಞಾನಿಕ ಪದ್ಧತಿಯಲ್ಲಿ ಲಾಭದಾಯಕ ಮಲ್ಲಿಗೆ ಕೃಷಿ, ಭತ್ತ , ಹಾಗೂ ತೋಟಗಾರಿಕಾ / ಹಣ್ಣಿನ ಬೆಳೆಯ ಸಮಗ್ರ ಮಾಹಿತಿ ಶಿಬಿರ ಕಾರ್ಯಕ್ರಮವನ್ನು ದಿನಾಂಕ ಮೇ 17ರ ಸಾಯಂಕಾಲ ಗಂಟೆ 4.30ಕ್ಕೆ ಸಹಕಾರ ಸೌಧ ಕಿನ್ನಿಗೋಳಿಯಲ್ಲಿ ಹಮ್ಮಿಕೊಳ್ಳಲಾಗಿದೆ.
  ವೈಜ್ಞಾನಿಕವಾಗಿ ಕಡಿಮೆ ಖರ್ಚು , ಕಡಿಮೆ ನೀರು ಗೊಬ್ಬರ ಶ್ರಮ ಬಳಸಿ ಲಾಭದಾಯಕ ಕೃಷಿ ಮಾಡುವ ವಿಧಾನಗಳು , ನಾಟಿ ನಿರ್ವಹಣೆ , ಕೀಟ – ರೋಗ ಬಾಧೆ ಹತೋಟಿ ಕ್ರಮಗಳು ಕುರಿತಾದ ಸಮಗ್ರ ಮಾಹಿತಿ ನೀಡುವ ಕಾರ್ಯಕ್ರಮ ಇದಾಗಿದ್ದು , ರೈತ ಬಾಂಧವರು ಮತ್ತು ಕೃಷಿ ಆಸಕ್ತರೆಲ್ಲರೂ ಸಭೆಯಲ್ಲಿ ಭಾಗವಹಿಸಬೇಕು . ಹೆಚ್ಚಿನ ಮಾಹಿತಿಗಾಗಿ (9611203043) ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group