spot_img
Monday, November 25, 2024
spot_imgspot_img
spot_img
spot_img

ಅಮೇರಿಕನ್ ಫ್ಲವರ್ ಬಗ್ಗೆ ಒಂದಷ್ಟು ಸಂಗತಿ ತಿಳಿದುಕೊಳ್ಳೋಣ.

# ಸತೀಶ ಹೆಗಡೆ

ಶ್ರಾವಣ ಮಾಸದಲ್ಲಿ ಮಲೆನಾಡಿನ ಮನೆಗಳ ಅಂಗಳದಲ್ಲಿ ಕಾಣುವ ಚಂಡೆಯಾಕಾರದ ಹೂವು ಈ ಕ್ಲಿಯೋಂ. ಸ್ಪೈಡರ್ ಪ್ಲವರ್ ಎಂದು ಕರೆಯಲ್ಪಡುವ ಹೂವು ಹೂವಿನ ಪ್ರಾರಂಭದಲ್ಲಿ ಉದ್ದದ ಬಳ್ಳಿಯಾಕಾರದ ದೇಟನ್ನು ಹೊಂದಿರುತ್ತದೆ. ಕಪ್ಪರೇಸಿ ಕುಟುಂಬಕ್ಕೆ ಸೇರಿದ ಈ ಹೂವು ಕ್ರಿ.ಶ. 1800 ರಿಂದಲೂ ಉದ್ಯಾನದ ವಾರ್ಷಿಕ ಹೂವಾಗಿ ಪರಿಗಣಿತವಾಗಿದೆ. ಈ ಹೂವಿನ ಮೂಲ ಹುಡುಕುತ್ತಾ ಹೋದರೆ ದಕ್ಷಿಣ ಅಮೇರಿಕಾದ ದೇಶಗಳ ಮೂಲ ಈ ಹೂವು.

ಈ ಹೂವಿನ ಗಿಡದ ವಿಶೇಷತೆಯೆಂದರೆ ತುಂಬಾ ವೇಗವಾಗಿ ಬೆಳೆಯುವ ವಾರ್ಷಿಕ ಗಿಡ, ಸುಮಾರು 6 ಅಡಿ ಎತ್ತರದ ವರೆಗೂ ಬೆಳೆಯಬಲ್ಲದು ಮತ್ತು ತುಂಬಾ ಆಳವಾಗಿ ತನ್ನ ತಾಯಿಬೇರು ಚಾಚಬಹುದು. ಗಿಡಕ್ಕೆ ಬೆಳೆಯಲು ಜಾಗವಿದ್ದರೆ 6 ಅಡಿವರೆಗೂ ಹಾರಡಿಕೊಳ್ಳಬಹುದು ಸಹಾ.

ಇದರ ಸಸ್ಯಾಭಿವೃದ್ಧಿ ಬೀಜದಿಂದಾಗುತ್ತದೆ. ಬೀಜ ಸೋಡಿಗೆಯಲ್ಲಿ ಇರುವುದಲ್ಲದೇ ಸೋಡಿಗೆ ಸಿಡಿದು ಎಲ್ಲ ಕಡೆಗೂ ಬೀಜವನ್ನು ಪಸರಿಸುವ ಶಕ್ತಿ ಈ ಗಿಡಕ್ಕಿದೆ. ಬೀಜವನ್ನು ನೇರವಾಗಿ ಸಸಿಮಡಿಯಲ್ಲಿ ನಾಟಿ ಮಾಡಬಹುದು. ಗಿಡದ ಬೆಳವಣಿಗೆಗೆ ಬಿಸಿಲು ತುಂಬಾ ಅಗತ್ಯ. ಒಣವಾತಾವರಣವನ್ನು ಸಹಿಸಬಲ್ಲದಾದರೂ ನೀರುಣಿಸಿದರೆ ಹೂವಿನ ಚಂಡೆಚಂಡೆಗಳನ್ನೇ ಪಡೆಯಲು ಸಾಧ್ಯವಾಗುವುದರಿಂದ ಉದ್ಯಾನಕ್ಕೆ ಮನೆಯಂಗಳಕ್ಕೆ ಒಂದು ಮನಮೋಹಕ ವಾತಾವರಣ ಸೃಷ್ಟಿಸಬಲ್ಲದು ಈ ಕ್ಲಿಯೋಂ.

 

ಹೂಗಳು ಚಂಡೆಯಾಕಾರದಲ್ಲಿ ಗಿಡದ ತುದಿಯಲ್ಲಿ ಬಿಡುತ್ತವೆ. ಈ ಗಿಡ ಚಳಿಯನ್ನು ಸಹಿಸಲಾರದು. ಹೂವು ಸುಮಾರು ಒಂದರಿಂದ ಒಂದುವರೆ ಇಂಚು ಉದ್ದವಾಗಿ ಕೊಳವೆ ಆಕಾರದಲ್ಲಿ ಬರುತ್ತದೆ. ಜೇನು, ದುಂಬಿ ಹಾಗೂ ಪಾತರಗಿತ್ತಿಗಳು ಈ ಹೂವಿನಿಂದ ಆಕರ್ಷಿಸಲ್ಪಡುತ್ತವೆ. ಹೂವು ಬಿಳಿ, ಗುಲಾಬಿ, ನೇರಳೆ, ಕೆಂಪು ಬಣ್ಣದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ.

 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group