spot_img
Friday, January 24, 2025
spot_imgspot_img
spot_img
spot_img

ಬೇಸಿಗೆ ಬಂದಿದೆ, ಜೀವಸಂಕುಲಗಳ ನೀರಿನ ದಾಹ ತಣಿಸಿ…

  1. # ಕುಮಾರ ಪೆರ್ನಾಜೆ ಪುತ್ತೂರು
     ನೀರು ನಮ್ಮೆಲ್ಲರ ಜೀವನ. ಪ್ರತಿಯೊಂದು  ಹನಿ ನೀರು ತುಂಬಾ ಮುಖ್ಯ.ಗಿಡ- ಮರ, ಪ್ರಾಣಿ -ಪಕ್ಷಿ ಹಾಗೂ ಮಾನವರಿಗೆ ನೀರು ಬೇಕೇ ಬೇಕು. ದಿನೇ ದಿನೇ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನ ಹಕ್ಕಿಗಳಿಗೆ ಬಿಸಿಲಿನ ಶಾಕದ ಹೊಡೆತದಿಂದ ರಕ್ಷಿಸಲು ಅವುಗಳಿಗೆ ಕುಡಿಯುವ ನೀರು ಒದಗಿಸುವುದು ಅತ್ಯವಶ್ಯಕ . ಹಿಂದೆ ಕೆರೆಕಟ್ಟೆಗಳಲ್ಲಿ ಸಾಕಷ್ಟು ನೀರಿದ್ದು ಇದೀಗ ಅವೆಲ್ಲ ಮಾಯವಾಗಿದೆ.ಬೋರ್ವೆಲ್ ಗಳ ಹನಿ ಹನಿಸಿಂಚನ ಬಿಸಿಲಿನತೀವ್ರತೆಗೆ ಜನಸಾಮಾನ್ಯರಿಗೆ ಮಾತ್ರವಲ್ಲದೆ, ಹಕ್ಕಿಗಳಿಗೆ ಕೂಡ ನೀರಿನ ಅಭಾವದಿಂದ ತೊಂದರೆಗಳಾಗುವ ಸಾಧ್ಯತೆ ಇದೆ. ದಿನೇ ದಿನೇ ಎಲ್ಲೆಡೆ ನೀರಿಗಾಗಿ ಅಹಾಕಾರ.ಮನುಷ್ಯ ಮಾತ್ರ ಅಲ್ಲ ಪ್ರಾಣಿ ಪಕ್ಷಿ ಗಳು ನೀರಿಲ್ಲದೆ ಸೊರಗುತ್ತಿವೆ. ಎಲ್ಲೆಡೆ ಬತ್ತಿದ ನದಿ- ತೊರೆಗಳು, ಕೆರೆಕಟ್ಟೆಗಳು,ಕಾದ ಇಳೆಗೆ ತಂಪೆರೆಯಲು ವರುಣನೇ ಬರಬೇಕು.
ಆದರೂ, ಟಬ್ ಪಾತ್ರೆ ಮತ್ತು ಮಡಕೆಗಳಲ್ಲಿ ನೀರು ತುಂಬಿಸಿ ಇಡುವ ಮೂಲಕ ಪಕ್ಷಿಗಳು ಪ್ರಾಣಿಗಳಿಗೆ
ನೀರುಣಿಸಿ.ನಮ್ಮಿಂದ ಸಾಧ್ಯವಾದ ಮಟ್ಟಿಗೆ ನಮ್ಮಲ್ಲಿರುವ ಗೆರಟೆ,ಬಾಟಲ್ ಇವುಗಳನ್ನು ಸದ್ಬಳಕೆ ಮಾಡಿ ತಮ್ಮಿಂದಾಗುವ ಸಹಾಯ ಮಾಡಿ ನೀರುಣಿಸಿ.  ಹೀಗೆ ಪ್ರಾಣಿ – ಪಕ್ಷಿಗಳಿಗೆ ದಣಿವಾರಿಸಿಕೊಳ್ಳಲು ವ್ಯವಸ್ಥೆ ಮಾಡಬೇಕು ತಮ್ಮ ಬಿಡುವಿನವೇಳೆಯಲ್ಲಿ ನಾವು ಮಾಡುವ ಕೆಲಸವನ್ನು ನೋಡಿ ನಮ್ಮ ಮಕ್ಕಳು ಮಾಡುವಂತೆ

ಪ್ರೇರೇಪಿಸುತ್ತದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group