spot_img
Sunday, November 24, 2024
spot_imgspot_img
spot_img
spot_img

ಕೃಷಿಕರೇ ಮೋಸ ಹೋಗದಿರಿ: ನೊಂದ ಕೃಷಿಕರೊಬ್ಬರು ಹೇಳಿದ ಈ ಕಿವಿಮಾತು ಕೇಳಿ!

ಮಳೆಗಾಲ ಆರಂಭವಾಗಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಗಿಡಗಳಿಗೆ ಗೊಬ್ಬರ ಹಾಕುವ ತರಾತುರಿ. ಇಂಥ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ನಾನಾ ಗೊಬ್ಬರದ ವ್ಯಾಪಾರಿಗಳು, ಮಧ್ಯವರ್ತಿಗಳು ಅಥವಾ ಕಂಪೆನಿಗಳ ಪ್ರತಿನಿಧಿಗಳು ರೈತರ ಮನೆಗಳಿಗೆ ಬರುವುದು ವಾಡಿಕೆ, ಕುರಿ ಗೊಬ್ಬರ, ಕೋಳಿಗೊಬ್ಬರ, ಹರಳು ಹಿಂಡಿ, ಕಹಿಬೇವಿನ ಹಿಂಡಿ, ಮೀನು ಗೊಬ್ಬರ, ಸಾವಯುವ ಗೊಬ್ಬರ, ದ್ರವ ಗೊಬ್ಬರ, ಹೀಗೆ ಹತ್ತು ಹಲವು ಗೊಬ್ಬರಗಳನ್ನು ಅನೇಕ ಮಂದಿ ಮನೆ ಬಾಗಿಲಿಗೆ ತರುತ್ತಾರೆ. ಕೆಲವರು ಉತ್ತಮ ಗುಣಮಟ್ಟದ ಗೊಬ್ಬರ ವಿತರಕರೂ ಇದ್ದಾರೆ. ಇನ್ನು ಕೆಲವರು “ನಮ್ಮ ಗೊಬ್ಬರವನ್ನು ಬಳಸಿ ನಿಮ್ಮ ತೋಟದಲ್ಲಿ ಬಂಗಾರ ಬೆಳೆಸಿ” ಎಂಬ ಉಚಿತ ಸಲಹೆ ಮಾರ್ಗದರ್ಶನವನ್ನು ಗಂಟೆಗಟ್ಟಲೆ ಹೇಳಿ ರೈತರನ್ನು ಮರುಳು ಮಾಡಿ ತಮ್ಮ ಜೇಬು ಗಟ್ಟಿ ಮಾಡಿಕೊಳ್ಳತ್ತಾರೆ. ಇವರ ರಂಗುರಂಗಿನ ಮಾತುಗಾರಿಕೆಯು ಕೇಳುಗರಿಗೆ ಜೇನು ಸವಿದ ಅನುಭವದಂತೆ ಆಗುತ್ತದೆ. ಇವರ ಮಾತಿಗೆ ಮರುಳಾಗಿ ಕೃಷಿಕರು ಹೆಚ್ಚು ವಿಮರ್ಶ ಮಾಡದೆ ಟನ್ನುಗಟ್ಟಲೆ ಗೊಬ್ಬರ ಖರೀದಿ ಮಾಡುತ್ತಾರೆ. ಇದರಲ್ಲಿ ಅಸಲಿ ಯಾವುದು ನಕಲಿ ಯಾವುದು ಎಂಬುದು ಗೊತ್ತಾಗುವುದೇ ಇಲ್ಲ.

ಗೊಬ್ಬರ ಮಾರಿಕೊಂಡು ನನ್ನ ಮನೆಗೆ ಬಂದ ಬೇರೆ ಬೇರೆ ಇಬ್ಬರು ವ್ಯಾಪಾರಿಗಳಿಂದ ನಾನು ಹರಳು ಹಿಂಡಿ ಖರೀದಿಸಿದೆ. ಒಬ್ಬರು ಕೊಟ್ಟ ಹರಳು ಹಿಂಡಿಗೆ ಕಿಲೋ ಒಂದಕ್ಕೆ ೨೦ರೂ ಆಗಿತ್ತು. ಮತ್ತೊಬ್ಬರ ಹರಳು ಹಿಂಡಿಗೆ ೧ ಕೆಜಿಗೆ ೩೨ ಆಗಿತ್ತು. ಈ ಎರಡು ಜನರು ತಂದ ಹಿಂಡಿ ನೋಡುವಾಗ ಒಂದೇ ರೀತಿ ಇದ್ದರೂ ಕ್ರಯದಲ್ಲಿ ೧೨ರೂಪಾಯಿ ವ್ಯತ್ಯಾಸ. ಇದನ್ನು ಮನಗಂಡು ಅವರಲ್ಲಿ ವಿಚಾರಿಸಿದೆ. ಆಗ ಅವರ ಉತ್ತರ ಕಡಿಮೆ ಬೆಲೆಯ ಹಿಂಡಿಗೆ ಕಲಬೆರಕೆ ಮಾಡುತ್ತಾರೆ. ನಾನು ಕೊಟ್ಟ ಹಿಂಡಿ ಮಾತ್ರ ಶುದ್ಧ ಹಿಂಡಿ ಆದ್ದರಿಂದ ಕ್ರಯ ಜಾಸ್ತಿ ಎಂದು ಹೇಳಿದರು. ನನಗೆ ಗೊಂದಲವುಂಟಾದ ಕಾರಣ ಇದನ್ನು ಬೇರೆ ಬೇರೆಯಾಗಿ ಲ್ಯಾಬಿನಲ್ಲಿ ಪರೀಕ್ಷೆ ಮಾಡಲು ಬೇರೆ ಬೇರೆ ಕಡೆ ತೆಗೆದುಕೊಂಡು ಹೋದೆ. ಆದರೆ ಎಲ್ಲಾ ಕಡೆಯೂ ಹರಳು ಹಿಂಡಿಯನ್ನು ನಾವು ಟೆಸ್ಟ್ ಮಾಡುವುದಿಲ್ಲ ಎಂಬುದೇ ಉತ್ತರ. ಸಂಶೋಧನಾ ಕೇಂದ್ರ ಹಾಗೂ ಇಲಾಖೆಗಳಿಗೂ ಸುತ್ತಾಡಿದೆ. ಪರಿಹಾರೋಪಾಯ ಎಲ್ಲೂ ದೊರೆಯಲಿಲ್ಲ. ಮಣ್ಣು ಪರೀಕ್ಷೆಗಳಿದ್ದಂತೆ ಸಂಶೋಧನಾ ಕೇಂದ್ರಗಳಲ್ಲಿ, ಇಲಾಖೆಗಳಲ್ಲಿ ಗೊಬ್ಬರದ ತಾಜಾತನದ ಬಗ್ಗೆ ಪರೀಕ್ಷೆಯ ವ್ಯವಸ್ಥೆಗಳಿದ್ದರೆ ಉತ್ತಮ. ಇಲ್ಲವಾದರೆ ಅಸಲಿ-ನಕಲಿ ಪತ್ತೆ ಹಚ್ಚಲಾಗದೆ ರೈತರು ಮೋಸ ಹೋಗುವುದೇ ಹೆಚ್ಚು. ಗೊಬ್ಬರ ಕಲಬೆರಕೆ ಖಚಿತ, ಅವರ ಜೇಬು ತುಂಬುವುದು ಉಚಿತ, ಹಾನಿ ಆಗುವುದು ರೈತರಿಗೆ ನಿಶ್ಚತ. ಆದುದರಿಂದ ರೈತರು ಜಾಗರೂಕರಾಗಿರಬೇಕು. ವಿಶ್ವಾಸಾರ್ಹರಿಂದಲೇ ಗೊಬ್ಬರ ಖರೀದಿಸುವುದು ಒಳಿತು.

ನೊಂದ ಕೃಷಿಕ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group