spot_img
Tuesday, August 18, 2026
spot_imgspot_img

ಬೆಂಡೆಕಾಯಿ ಗಿಡಕ್ಕೂ ಹಳದಿ ರೋಗ!

ಕಾಯಿಲೆಗಳು ನಮಗೆ ಮಾತ್ರ ಅಲ್ಲ. ಪ್ರಕೃತಿಯಲ್ಲಿ ಗಿಡಮರಗಳನ್ನು ಬಿಟ್ಟಿಲ್ಲ. ನಾವು ಬೆಳೆಯುವ ತರಕಾರಿ, ತೋಟಗಾರಿಕಾ ಬೆಳೆಗಳಲ್ಲೂ ಕಾಣಿಸಿಕೊಂಡು ಫಸಲಿನ ಮೇಲೆ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಫಂಗಸ್, ವೈರಸ್, ನಂಜು ರೋಗ ಹೀಗೆ ಸರ್ವೇಸಾಮಾನ್ಯ. ಕೆಲವು ತನ್ನಿಂದ ತಾನೇ ನಿಯಂತ್ರಣಕ್ಕೆ ಬರುತ್ತದೆ. ಇನ್ನು ಕೆಲವಕ್ಕೆ ಔಷಧಿ ಬಳಕೆ ಅಗತ್ಯ. ಈ ಬೆಂಡೆಕಾಯಿ ಗಿಡಕ್ಕೆ ಕಾಡಿರುವುದು ಹಳದಿ ರೋಗ. ಇದರಿಂದ ಎಲೆಗಳಗಳು ಹಳದಿಯಾಗುತ್ತವೆ. ಗಿಡಗಳು ಸೊರಗುತ್ತವೆ. ಇಳುವರಿ ಕುಂಠಿತವಾಗುತ್ತವೆ.

ರೋಗಗ್ರಸ್ತ ಗಿಡಗಳನ್ನು ಕಿತ್ತು ಬಿಸಾಡುವುದು. ಅಥವಾ ಸುಟ್ಟು ಹಾಕುವುದು ಇದಕ್ಕೆ ಪರಿಹಾರ. ಈ ರೋಗ ಬಾರದಂತೆ ತಡೆಗೆ ರೋಗಕಾರಕ ಕೀಟ ನಿಯಂತ್ರಣ, ಕಳೆಗಿಡಗಳ ನಿರ್ವಹಣೆ, ಸಾರಜನಕಯುಕ್ತ ಗೊಬ್ಬರ ಅತಿಯಾಗಿ ಬಳಸದೆ ಸಮತೋಲಿತ ಪೋಷಕಾಂಶಗಳ ನಿರ್ವಹಣೆ ಅವಶ್ಯಕ.

ಬರಹ-ಕುಮಾರ್ ಪೆರ್ನಾಜೆ ಪುತ್ತೂರು

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group