spot_img
Tuesday, September 17, 2024
spot_imgspot_img
spot_img
spot_img

ಯೂರಿಯಾ ಗೋಲ್ಡ್ ಕುರಿತು ಕೃಷಿಕರು ತಿಳಿದುಕೊಳ್ಳಲೇಬೇಕಾದ ಸಂಗತಿಗಳು!

ಶೃತಿ ಹೆಚ್. ಆರ್. (ಕ್ಷೇತ್ರ ವ್ಯವಸ್ಥಾಪಕರು) ಮತ್ತು ಡಾ. ಆರ್. ಗಿರೀಶ್, ವಿಜ್ಞಾನಿ (ಸಸ್ಯ ಸಂರಕ್ಷಣೆ), ಡಾ. ಅಂಜಲಿ ಎಂ.ಸಿ, ವಿಜ್ಞಾನಿ (ಮಣ್ಣು ಸಂರಕ್ಷಣೆ) ಐ.ಸಿ.ಎ.ಆರ್.- ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ

ಭಾರತದಲ್ಲಿ ಯೂರಿಯಾ ಬಳಕೆ 2009-10 ರಲ್ಲಿ 26.7 ಮಿಲಿಯನ್ ಟನ್ ಇದ್ದು, 2022-23 ರಲ್ಲಿ ಇದರ ಬಳಕೆ 35.7 ಮಿಲಿಯನ್ ಟನ್ ಆಗಿದೆ. ಹೆಚ್ಚು ಯೂರಿಯಾವನ್ನು ರೈತರು ಬಳಸುತ್ತಲೆ ಇದ್ದಾರೆ. ಯೂರಿಯಾದಲ್ಲಿ ವಿವಿಧ ಬಗೆಯ ಆವಿಷ್ಕಾರಗಳನ್ನು ಕಾಣಬಹುದು. ಅವುಗಳೆಂದರೆ ಬೇವು ಲೇಪಿತ ಯೂರಿಯಾ, ದ್ರವ ರೂಪದ ನ್ಯಾನೊ ಯೂರಿಯಾ ಮತ್ತು ಯೂರಿಯಾ ಗೋಲ್ಡ್.

ಬೇವು ಲೇಪಿತ ಯೂರಿಯಾವು ಒಂದು ವಿಶೇಷ ಗೊಬ್ಬರವಾಗಿದ್ದು, ಇದನ್ನು ಬೇವಿನ ಎಣ್ಣೆಯಿಂದ ಲೇಪಿಸಲಾಗಿದೆ. ಬೇವು ಲೇಪಿತ ಯೂರಿಯಾವು, ಸಾರಜನಕ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ಈ ನಿಯಂತ್ರಿತ ಬಿಡುಗಡೆಯು ಸಾರಜನಕ ಸೋರಿಕೆ ಮತ್ತು ಬಾಷ್ಪೀಕರಣವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇದರಿಂದ ಸಾರಜನಕ ಬಳಕೆಯು ಸಮರ್ಪಕವಾಗಿ ಸಸ್ಯಗಳಲ್ಲಿ ಕಾಣಬಹುದಾಗಿದೆ. ಪ್ರತಿ ಎಕರೆ ಯೂರಿಯಾ ಪ್ರಮಾಣವನ್ನು ಕಡಿಮೆ ಮಾಡಿ, ರೈತರ ಪರಿಕರ ಖರ್ಚು ತಗ್ಗಿಸುತ್ತದೆ. ಬೇವಿನ ಎಣ್ಣೆಯು ನೈಸರ್ಗಿಕ ಕೀಟನಾಶಕ ಗುಣವನ್ನು ಹೊಂದಿದೆ.

ನ್ಯಾನೋ ಯೂರಿಯಾದಲ್ಲಿ ನ್ಯಾನೊಸ್ಕೇಲ್‌ನ ಸಾರಜನಕ ಕಣಗಳು ಸಣ್ಣ ಗಾತ್ರವನ್ನು (30-50) ಹೊಂದಿರುತ್ತದೆ. ಸಾಂಪ್ರದಾಯಿಕ ಯೂರಿಯಾಗಿಂತ ಹೆಚ್ಚು  ವಿಸ್ತೀರ್ಣ ಮತ್ತು ಕಣಗಳ ಸಂಖ್ಯೆ ಹೊಂದಿದೆ. ನ್ಯಾನೋ ಯೂರಿಯಾ ದ್ರಾವಣವನ್ನು ಸಸ್ಯಗಳ ಮೇಲೆ ಸಿಂಪಡಿಸಿದಾಗ, ಎಲೆಗಳ ಸ್ಟೋಮಾಟಲ್ ರಂಧ್ರಗಳ ಮೂಲಕ ಪ್ರವೇಶಿಸಿ ಹೆಚ್ಚು ಪರಿಣಾಮಕಾರಿಯಾಗಿ ಸಾರಜನಕವನ್ನು ಹೀರಿಕೊಂಡು, ಸಸ್ಯಗಳ ಉತ್ತಮ ಬೆಳೆವಣಿಗೆ, ಉತ್ಪಾದಕತೆ ಹಾಗೂ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯಬಹುದಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜಸ್ಥಾನದ ಸಿಕ್ಕಾರನಲ್ಲಿ ಯೂರಿಯಾ ಗೋಲ್ಡ್ ಗೊಬ್ಬರವನ್ನು ಇತ್ತೀಚೆಗೆ ಬಿಡುಗಡೆ ಮಾಡಿದರು. ಯೂರಿಯಾ ಗೋಲ್ಡ್ ಒಂದು ಗಂಧಕ ಲೇಪಿತ ಯೂರಿಯಾ, ಇದರಲ್ಲಿ ಶೇ. 37 ರಷ್ಟು ಸಾರಜನಕ ಹಾಗೂ ಶೇ.17 ರಷ್ಟು ಗಂಧಕವನ್ನು ಹೊಂದಿದೆ. ಈ ಗೊಬ್ಬರವು ಮಣ್ಣಿನಲ್ಲಿನ ಗಂಧಕದ ಕೊರತೆಯನ್ನು ಪರಿಹರಿಸಲು ಮತ್ತು ರೈತರ ಪರಿಕರ ಖರ್ಚು ತಗ್ಗಿಸುವ ಗುರಿಯನ್ನು ಹೊಂದಿದೆ. ಇಂದು ಬಳಕೆಯಲ್ಲಿರುವ ಯೂರಿಯಾಗಿಂತಲು ಆರ್ಥಿಕವಾಗಿ ಕಾರ್ಯಕ್ಷಮತೆಯನ್ನು ಹೊಂದಿದೆ ಹಾಗೂ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಇದು ಬೆಳೆಗಳಲ್ಲಿ ಸಮರ್ಪಕ ಸಾರಜನಕ ಬಳಕೆಯ ಹೆಚ್ಚಿಸಿ, ರಸಗೊಬ್ಬರ ಪ್ರಮಾಣವನ್ನು ಕಡಿಮೆಗೊಳಿಸುವುದರ ಜೊತೆಗೆ ಬೆಳೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಗಂಧಕ ಲೇಪನವು ಯೂರಿಯಾ ಪ್ರಮಾಣವನ್ನು ತಗ್ಗಿಸಿ ಬೆಳೆಗಳಲ್ಲಿ ಪೋಷಣೆಯನ್ನು ನೀಡಿ, ಇಳುವರಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಯೂರಿಯಾ ಗೋಲ್ಡ್ ಬೇರೆ ಯೂರಿಯಾಗಿಂತ ಹೇಗೆ ಭಿನ್ನ

ಗಂಧಕ ಲೇಪಿತ ಯೂರಿಯಾವು ಬೆಳೆಗಳಿಗೆ ಸಾರಜನಕವನ್ನು ಸುಲಭವಾಗಿ ಲಭ್ಯವಿರುವಂತೆ ಹಾಗೂ ಹೀರಿಕೊಳ್ಳುವಂತೆ ಮಾಡುತ್ತವೆ. ಗೊಬ್ಬರಕ್ಕೆ ಹ್ಯೂಮಿಕ್ ಆಮ್ಲದ ಸೇರ್ಪಡೆಯಿಂದ, ಇದು ಮತ್ತಷ್ಟು ಉಪಯುಕ್ತವಾಗಿದೆ. ಈ ಉತ್ಪನ್ನವು ಸಾಂಪ್ರದಾಯಿಕ ಯೂರಿಯಾ ಬಳಕೆಯನ್ನು ಬದಲಿಸುವುದಲ್ಲದೆ, ರಸಗೊಬ್ಬರ ಬೇಡಿಕೆಯನ್ನು ಕಡಿಮೆಗೊಳಿಸಿದೆ.

ನಿಧಾನ ಬಿಡುಗಡೆ: ಸಲ್ಫರ್ ಲೇಪಿತ ಯೂರಿಯಾವು, ಸಾರಜನಕವನ್ನು ಕ್ರಮೇಣವಾಗಿ ಬೆಳೆಗಳಿಗೆ ಸುಲಭವಾಗಿ ಹೀರಿಕೊಳ್ಳುವಂತೆ ಮಾಡುತ್ತವೆ. ವಿಸ್ತೃತ ಜೀವಿತಾವಧಿ: ಯೂರಿಯಾ ಗೋಲ್ಡ್ನಲ್ಲಿ ಹ್ಯೂಮಿಕ್ ಆಮ್ಲದ ಸೇರ್ಪಡೆಯು ಅದರ ಜೀವಿತಾವಧಿಯನ್ನು ಇನ್ನಷ್ಟು ವಿಸ್ತರಿಸುತ್ತದೆ.

ಒಟ್ಟಾರೆ ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡುತ್ತದೆ: ಮನಿ ಕಂಟ್ರೋ¯ರವರ ವಿಶ್ಲೇಷಣೆಯ ಪ್ರಕಾರ ೧೫ಕೆ.ಜಿ ಯೂರಿಯಾ ಗೋಲ್ಡ 2೦ ಕೆಜಿ ಸಾಂಪ್ರದಾಯಿಕ ಯೂರಿಯಾಗೆ ಸಮನಾಗಿದೆ, ಇದು ರೈತರಿಗೆ ವೆಚ್ಚಾದಾಯಕ ಮತ್ತು ಪರಿಣಾಮದಾಯಕವಾಗಿದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group