spot_img
Sunday, September 8, 2024
spot_imgspot_img
spot_img
spot_img

ಮೆಣಸಿನ ಸಂಸ್ಕರಣೆಯಲ್ಲಿ ತೊಡಗಿಕೊಂಡ ಬೈರುಂಬೆಯ ತೋಟಗಾಶಿ ಕಂಪನಿ!

 ‌ ‌ ‌‌‌‌‌# ಗಣಪತಿ ಹಾಸ್ಪುರ
ಮಲೆನಾಡಿನಲ್ಲೀಗ ಮೆಣಸಿನ ಕೊಯ್ಲಿನ ಅಬ್ಬರ ಮಾರಾಯ! ತೋಟದ ಬದಿಗೆ ಹೋಪದೆ ಬ್ಯಾಡ್ದ. ಎಲ್ಲ ಬಳ್ಳಿಯಲ್ಲೂ ಮೆಣಸು ಹಣ್ಣಾಗೋಯ್ತು. ಕೊಯ್ಲು ಮಾಡನ ಅಂದ್ರೆ ನಮ್ಮಲ್ಲೀಗ ಜನ ಸಿಕ್ತಿಲ್ಲೆ. ಅವ್ರ ಮನೆ ತೋಟದಲ್ಲಿ ಎಂತುವಾ ಮೆಣಸು ಹಾಸಿ ಬಿದ್ದಿ ಹೋದ್ವು… ಮೇಲಿನ ಮನೇಲಿ ಅಷ್ಟೇನು ಮೆಣಸು ಅಗ್ತಿಲ್ಲ.ಆದರೇ, ಅವ್ಕೆ ಆಳ್ಗಳ ಸಮಸ್ಯೆ ಇಲ್ಯ!… ಹೋದ ವರುಷ ಒಬ್ಬ ಖಾಯಂ ಬರ್ತಿದ್ದ. ಅಂತು ಇಂತು ಆ ವರುಷ ಅವ ನಾನು ಸೇರಿಕೊಂಡು ಮೆಣಸು ಕೊಯ್ಲು ಮುಗಿಸಿದ್ವ. ಆದ್ರೆ, ಈ ವರುಷ ಇನ್ನು ಜನ ಸಿಕ್ತಿಲ್ಲ.. ಬಿಸಿಲ ಹೊಡೆತಕ್ಕೆ ಮೆಣಸು ಬಹಳ ಹಣ್ಣಾಗಿ ಉದ್ರಾತಾ ಇದ್ದು ಮಾರಾಯ್ಯ. ಹೀಗೆ ಆದ್ರೆ ಮುಂದೆ ಮೆಣಸು ಬೆಳೆಯದು ಕಷ್ಟ ಅಗೊಗ್ತ..ಹೀಗೆ ಮಲೆನಾಡಿನ ಮೆಣಸು ಬೆಳೆಗಾರರು ಆತ್ಮೀಯರಲ್ಲಿ ತಮ್ಮ ಅಳಲನ್ನು ತೊಡಿಕೊಳ್ಳುತಿದ್ದಾರೆ. ರೈತರ ಇಂಥಹ ಬೇರೆ ಬೇರೆ ಸಮಸ್ಯೆ ಗಳನ್ನು ತಗ್ಗಿಸುವ ಸಲುವಾಗಿಯೇ ಎಲ್ಲೆಡೆ ರೈತರ ಬೆಳೆ ಸಂಸ್ಕರಿಸುವ ಕಂಪನಿ ಹುಟ್ಟಿಕೊಂಡಿವೆ.ಅಂತೆಯೇ ಶಿರಸಿ ತಾಲೂಕಿನ ಭೈರುಂಬೆಯಲ್ಲಿಯೂ ಸಹ ತೋಟಕಾಶಿ ಪ್ರೋಡ್ಯುಸರ ಕಂಪನಿಯೂ 2021 ರಲ್ಲಿಯೆ ಪ್ರಾರಂಭವಾಗಿ ವಿಭಿನ್ನ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಸುತ್ತಮುತ್ತಲಿನ ರೈತರ ಪ್ರೀತಿಗೆ ಪಾತ್ರರಾಗಿದೆ. ‌ ‌ ‌ ‌
‌ ‌
ಮೂಲ ಉದ್ದೇಶವೇನು?
ಯಾವುದೇ ಸಂಘ -ಸಂಸ್ಥೆ, ಕಂಪನಿ ಜನ್ಮತಾಳುವ ಹಿಂದೆ ಹತ್ತಾರು ಉದ್ದೇಶಗಳನ್ನು ಇಟ್ಟುಕೊಂಡು, ಕೈಗೆ ಕಾಣದ ಹಲವಾರು ಜನರ ಪರಿಶ್ರಮದ ಫಲವಾಗಿ ಅದು ಜನ್ಮತಾಳಿರುತ್ತದೆ. ಅದ್ನ ಮುನ್ನಡೆಸಲು ಯೋಗ್ಯ ಜನರ ಮುಂದಾಳತ್ವ, ಸಕಾಲದಲ್ಲಿ ಕೆಲಸವನ್ನು ಮಾಡಿಸುವ ಸಿಬ್ಬಂದಿ ಬಳಗ ಸಿಕ್ಕಿದಾಗ ಮಾತ್ರ ಆ ಸಂಘ, ಕಂಪನಿ ಸರಿಯಾದ ದಾರಿಯಲ್ಲಿ ಸಾಗಿ, ಹೆಮ್ಮರವಾಗಿ ಬೆಳೆಯಲು ಸಾಧ್ಯ. ಹಾಗೆಯೇ ನೂರೆಂಟು ಜನರ ಹಲವಾರು ಸಮಸ್ಯೆ ತಾಪತ್ರಯಗಳನ್ನು ಈಡೇರಿಸುವ ಸಲುವಾಗಿ ಮಾರ್ಚ್ 19, 2021 ರಂದು ಬೈರುಂಬೆಯ ಸೊಸೈಟಿ ಆವರಣದಲ್ಲಿಯೇ ಆರಂಭವಾದ ” ತೋಟಗಾಶಿ ಪ್ರೋಡ್ಯುಸರ್ ಕಂಪನಿ” ಯು ಈ ಭಾಗದ ರೈತರ ಬೆಳೆಗಳನ್ನು ಸಂಸ್ಕರಿಸಲು ಮೊದಲ ಆದ್ಯತೆ ನೀಡಿದೆ. ಸುಮಾರು 850 ಸದಸ್ಯರಿದ್ದು , ಅವರ ಬೆಳೆಗಳನ್ನು ಹಂತಹಂತವಾಗಿ (ಮೊದಲು ಬಂದವರಿಗೆ ಮೊದಲ ಆದ್ಯತೆ..) ಸಂಸ್ಕರಣೆ ಮಾಡುತ್ತಿದ್ದು, ಉತ್ತಮ ಸ್ಪಂದನೆ ಲಭಿಸಿದೆ.ಕಂಪನಿಯ ಸದಸ್ಯರ ಬೇಡಿಕೆಯ ಅನುಸಾರ ಹುಳಗೋಳ,ಬೊಮ್ಮನಹಳ್ಳಿ, ಹಾಗೂ ನಡುಗೋಡನಲ್ಲಿ ಸೆಂಟರುಗಳನ್ನು ತೆರೆದು ಅಡಿಕೆ ಬೆಳೆ ಸಂಸ್ಕರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ‌. ‌ ‌ ‌ ‌ ‌ ‌ ‌
‌ ‌ ಕೇವಲ ಅಡಿಕೆವೊಂದೆ ಅಲ್ಲದೇ, ಈ ವರುಷದಿಂದ ಕಾಳುಮೆಣಸಿನ ಪ್ರೋಸೆಸಿಂಗ್, ಒಣಗಿದ ಹಾಗೂ ಸತ್ತ ಅಡಿಕೆ ಮರಗಳನ್ನು ಕಡಿಸಿಕೊಡುವುದು, ಬಾಡಿಗೆಗೆ ದೋಟಿ ವ್ಯವಸ್ಥೆ, ಕೆಲಸದವರ ಸರಬರಾಜು, ಚಾಲಿ ಮತ್ತು ಕೆಂಪು ಗೋಟಿನ ಗೊರಬಲು ಹೊಡೆದು ಕೊಡುವುದು, ಅಲ್ಲದೇ ಭೈರುಂಬೆಯ ಸೊಸೈಟಿ ಯ ಸಹಕಾರದೊಂದಿಗೆ ಚಾಲಿ ಸುಲಿದು ಕೊಡುವ ವ್ಯವಸ್ಥೆಯನ್ನು ಸಹ ಈ ಕಂಪನಿ ಮಾಡಿಕೊಡುತ್ತಿರುವುದು ವಿಶೇಷ. ಈಗೀಗ ಹಳ್ಳಿಯಲ್ಲಿ ಕೂಲಿಯವರ ಸಮಸ್ಯೆ ಯೊಂದಿಗೆ ಹತ್ತುಹಲವಾರು ಜ್ವಲಂತ ಸಮಸ್ಯೆಗಳು ತಲೆದೋರಿವೆ. ದುಡಿಯಲು ಆಗದ ವಯೋವೃದ್ಧರು, ಅನಾರೋಗ್ಯವಂತರು ಹೀಗೆ ಪ್ರತಿಯೊಂದು ಮನೆಮನೆಯಲ್ಲಿಯೂ ಬೇರೆ ಬೇರೆ ಸಮಸ್ಯೆ ಗಳಿವೆ. ಅಂತಹ ರೈತರ ಬೆಳೆಗಳ ಸಂಸ್ಕರಣೆಗೆ ಈ ಕಂಪನಿಯೂ ಹೆಗಲುಕೊಟ್ಟು ಮಾಡಿಕೊಡುತ್ತಾ ಇರುವುದರಿಂದ, ಈ ಭಾಗದ ರೈತರಿಗೆ ಹಲವಾರು ದೃಷ್ಟಿಯಿಂದ ಅನುಕೂಲವೇ ಆಗಿದೆ ಎಂದರೂ ಅತಿಶಯೋಕ್ತಿ ಆಗಲಾರದು. ‌
‌ ‌‌ ‌‌
ಮೆಣಸಿನ ಸಂಸ್ಕರಣೆ…! ‌‌‌‌
ಭೈರುಂಬೆಯ ತೋಟಕಾಶಿ ಪ್ರೊಡ್ಯುಸರ ಕಂಪನಿಯು ಇದೇ ಮೊದಲ ಬಾರಿಗೆ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ಕಂಪನಿಯ ಸದಸ್ಯರ ಕಾಳು ಮೆಣಸಿನ ಪ್ರೊಸೆಸಿಂಗ್ ಮಾಡಿಕೊಡುವ ಸಾಹಸದ ಕಾರ್ಯಕ್ಕೆ ಮುಂದಾಗಿದೆ.ಕಪ್ಪು ಬಂಗಾರದ ಸಂಸ್ಕರಣೆ ಸುಲಭದ ಕೆಲಸವಲ್ಲ. ಆದರೂ, ಮೆಣಸಿನ ಪ್ರೊಸೆಸಿಂಗ್ ಮಾಡಲು ಪೂರ್ವ ಸಿದ್ದತೆ ಮಾಡಿಕೊಂಡಿರುವ ಈ ಕಂಪನಿಯೂ ಮೆಣಸು ತರುವ ಸದಸ್ಯರಿಗೆ ಅನೇಕ ನಿಯಮ, ಸೂಚನೆಯನ್ನು ನೀಡಿದೆ. ಪಾಳಿಯ ಪ್ರಕಾರ ( ಸಂಸ್ಕರಣೆಗೆ ಬರುವವರು ಮೊದಲೆ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು) ಮೆಣಸಿನ ಪ್ರೊಸೆಸಿಂಗ್ ಕೆಲಸವನ್ನು ಕಂಪನಿಯು ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಣೆ ಮಾಡಿಕೊಡಲು ಆರಂಭಿಸಿದೆ. ‌‌ ‌
ರೈತರು ಬಳ್ಳಿಯಿಂದ ಕೊಯ್ದು ತರುವ ಕಾಳುಮೆಣಸನ್ನು ಈ ಕಂಪನಿಯೂ ಅದ್ರಲ್ಲಿ ಇರುವ ಕಸ – ಎಲೆ
ಇವನ್ನೆಲ್ಲ ಬೇರ್ಪಡಿಸಿ,ಕಾಳುಮೆಣಸಿನ ಕಸಗಳನ್ನು ಪ್ರತ್ಯೇಕಿಸಿ ಯಂತ್ರದ ಮೂಲಕ ಕಾಳನ್ನಾಗಿ ಉದುರಿಸಿಕೊಳ್ಳತ್ತದೆ.ನಂತರ ಬೇರ್ಪಡಿಸಿದ ಮೆಣಸಿನ ಕಾಳನ್ನು ಸಮತಟ್ಟಾದ ಜಾಗದಲ್ಲಿ ಹರಡಿ ಒಂದು ಬಿಸಿಲು ಸೋಲಾರೈಸೇಷನ್( ಪ್ಲಾಸ್ಟಿಕ್ ಮುಚ್ಚಿ ಒಣಗಿಸುವ ಕ್ರಮ) ಮಾಡಿ, ನಂತರ ಒಂದೆರಡು ದಿನಗಳ ಕಾಲ ಬಿಸಿಲಿನಲ್ಲೆ ಒಣಗಿಸುತ್ತಾರೆ. ಸರಿಯಾಗಿ ಒಣಗಿದರೆ ( ಅಂದರೆ ಮೋಯ್ಚ್ಟರ್ 8% ಗಿಂತ ಹೆಚ್ಚು, 10% ರ ಒಳಗಡೆ ಇರುವುದನ್ನು ಖಾತ್ರಿ ಪಡಿಸಿಕೊಂಡು ) ತೆಗೆಯುತ್ತಾರೆ. ಹೀಗೆ ಒಣಗಿದ ಕಾಳನ್ನು ಬ್ಲೊವೆರ್ ಮಷಿನ ನ ಮೂಲಕ ಹಾಯಿಸಿ, ಅದ್ರಲ್ಲಿರುವ ಕಸ, ಧೂಳನ್ನು ತೆಗೆಯುತ್ತಾರೆ. ಆ ನಂತರ ಗ್ರಾವಿಟಿ ಸೆಪರೇಟರ್ ಗೆ ಹಾಕಿ ಗಟ್ಟಿ ಕಾಳು, ಜೊಳ್ಳು ಕಾಳನ್ನು ಪ್ರತ್ಯೇಕಿಸಿ ಸ್ವಚ್ಛ ಮಾಡಿಯೇ ಚೀಲ ತುಂಬುವ ವ್ಯವಸ್ಥೆ ಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿವೆ. ರೈತರ ವಿಶ್ವಾಸದೊಂದಿಗೆ ಮೆಣಸಿನ ಸಂಸ್ಕರಣೆ ವ್ಯವಸ್ಥಿತವಾಗಿ ಮಾಡುತ್ತದ್ದೇವೆ ಎಂದು ಕಂಪನಿಯ ಮುಖ್ಯಸ್ಥರು ಹೇಳುತ್ತಾರೆ. ‌
ಈ ವ್ಯವಸ್ಥೆ ಯಲ್ಲಿ ಸ್ವಲ್ಪವೂ ಲೋಪ ದೋಷವಾಗದಂತೆ ಗಮನ ಹರಿಸಿದ್ದು, ಮೆಣಸು ತರುವ ರೈತರ ಆಗ್ರಹದ ಮೇರೆಗೆ ಒಣಗಿದ ಕಾಳನ್ನು ಶಿಲ್ಕು ಇಡುವ ರೈತರಿಗೆ ಗೋಣಿಚೀಲದೊಳಗೆ ಪ್ಲಾಸ್ಟಿಕ್ ಹಾಕಿ ಕಾಳನ್ನು ತುಂಬುವುದೋ, ಅಥವಾ ಸಾದಾ ಚೀಲದಲ್ಲಿ ತುಂಬಿಡುವುದನ್ನು ಅವರವರ ಇಚ್ಚೆಯ ಅನುಸಾರ ಮಾಡುವ ವ್ಯವಸ್ಥೆ ಇದೆ. ಎಲ್ಲ ರೈತರಿಗೂ ಈ ರೀತಿಯ ವ್ಯವಸ್ಥೆ, ಸುಧಾರಿತ ಪದ್ದತಿಯಲ್ಲಿ ಒಣಗಿಸುವ ವಿಧಾನ ತಿಳಿಯದೇ ಇರುವ ಕಾರಣ , ನಾವು ಕಂಪನಿ ವತಿಯಿಂದ ವೈಜ್ಞಾನಿಕ ವಿಧಾನದಲ್ಲಿ ಕಾಳು ಮೆಣಸನ್ನು ಒಣಗಿಸಿ ಕೊಡುವ , ಹಾಗೂ ಹೀಗೆ ಒಣಗಿಸುವುದರಿಂದ ಯಾವ ರೀತಿಯ ಅನುಕೂಲವಾಗುತ್ತದೆ ಎಂಬುದನ್ನು ತಮ್ಮ ಸದಸ್ಯ ರಿಗೆ ತಿಳಿಸುವ ಕಾರಣಕ್ಕೆ ಮೆಣಸಿನ ಸಂಸ್ಕರಣೆಯ ಕೆಲಸ ಕಷ್ಟ ವೆಂದು ಅನಿಸಿದರೂ ಆ ಘನ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ತೋಟಕಾಶಿಯ ಕಂಪನಿಯ ನೇತಾರರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಕಳೆದ ಮೂರು ವರುಷಗಳಿಂದ ರೈತರ ಬೆಳೆ ಸಂಸ್ಕರಣೆ ಯ ವಿಭಿನ್ನ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವ ಭೈರುಂಬೆಯ ಈ ತೋಟಕಾಶಿ ಕಂಪಯು ನಿವಿ.ಎಸ್ ಹೆಗಡೆ ಕೆಶಿನ್ಮನೆಯ ಅವರ ಮುಂದಾಳತ್ವದಲ್ಲಿ, ಪ್ರದೀಪ ಹೆಗಡೆ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರ ವಿಶ್ವಾಸ, ಪ್ರೀತಿಯನ್ನು ಉಳಿಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ. ‌‌ ಗ್ರಾಮೀಣ ಪ್ರದೇಶದಲ್ಲಿ ಈಗ ಬಹುತೇಕ ವಯಸ್ಸಾದವರು, ಅನಾರೋಗ್ಯವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ,ಅವರವರ ಮನೆಯ ಅಡಿಕೆ, ಕಾಳುಮೆಣಸು ಬೆಳೆಗಳನ್ನು ಕೊಯ್ದು ಸಂಸ್ಕರಣೆ ಮಾಡುವುದೇ ಕಷ್ಟವಾಗಿದೆ.ಅಲ್ಲದೇ ಈ ಕಾಳುಮೆಣಸಿನ ಸಂಸ್ಕರಣೆ ಸುಧಾರಿತ ಪದ್ದತಿಯಲ್ಲಿ ಮಾಡುವ ಕ್ರಮ ,ವೈಜ್ಞಾನಿಕ ವಿಧಾನದ ಮಾಹಿತಿ ಎಲ್ಲರಿಗೂ ತಿಳಿಯುವುದಿಲ್ಲ. ಇಂಥಹ ಕಷ್ಟ ದ ಕಾಲದಲ್ಲಿ ಆಪತ್ಭಾಂಧವರಾಗಿ ಜನ್ಮತಾಳಿರುವ ತೋಟಕಾಶಿ ಕಂಪನಿಯು ರೈತರ ಬೇಡಿಕೆಯ ಅನುಸಾರ ಕಾಳುಮೆಣಸನ್ನು ಸಂಸ್ಕರಿಸುವ ಕಾರ್ಯವನ್ನು ಈ ವರುಷ ಆರಂಭ ಮಾಡಿದೆ.
ಸದಸ್ಯರ ಸ್ಪಂದನೆ ತುಂಬಾ ಚನ್ನಾಗಿ ಇರುವುದರಿಂದ ಆ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ,ಅತೀ ಕಾಳಜಿಯಿಂದ ನಿರ್ವಹಿಸುತ್ತಿದ್ದಾರೆ. ಒಂದು ದಿನ ನಾಲ್ಕಾರು ಸದಸ್ಯರ ಸುಮಾರು ಇಪ್ಪತ್ತು ಕ್ವಿಂಟಲ್ ಹಸಿ ಮೆಣಸು ಬಂದರೂ, ಅವಷ್ಟನ್ನು ಆ ದಿನವೇ ಸಂಸ್ಕರಿಸುವ ಸಾಮರ್ಥ್ಯ ಈ ಕಂಪನಿಯೂ ಸಿದ್ದ ಮಾಡಿಕೊಂಡಿದೆ. ಕಾಳುಮೆಣಸಿನ ಈ ವ್ಯವಸ್ಥೆ ತೋಟಕಾಶಿ ಕಂಪನಿಯು ಮಾಡುವುದರಿಂದ ಈ ಭಾಗದ ಕೃಷಿಕರ ಹಲವಾರು ಕಷ್ಟ ಹಾಗೂ ಸಮಸ್ಯೆ ಗಳನ್ನು ನಿವಾರಿಸಿರುವುದು ಬಹಳ ರೈತರಿಗೆ ಅನುಕೂಲವಾಗಿದೆ. ಈ ಕಂಪನಿಯು ರೈತರ ಒಡನಾಡಿ ಆಗಿದೆ ಎನ್ನುವುದಕ್ಕಿಂತ , ಸಂಕಷ್ಟದಲ್ಲಿದ್ದ ರೈತರ ಕಷ್ಟವನ್ನು ದೂರ ಮಾಡಿ, ರೈತರ ಬೆನ್ನೆಲುಬಾಗಿ ಪರಿಶ್ರಮ ಪಡುತ್ತಿದೆ ಎಂದರೆ ಅತೀಶಯೋಕ್ತಿ ಆಗಲಾರದು.
ಸಂಪರ್ಕ: 8073342350 ‌ ‌‌ ‌‌ ಹಲವಾರು ಉದ್ದೇಶದಿಂದ ಆರಂಭ ಆಗಿರುವ ಭೈರುಂಬೆಯ ತೋಟಕಾಶಿ ಪ್ರೊಡ್ಯುಸರ್ ಕಂಪನಿಯೂ 2021ರಲ್ಲಿ 350. ಕ್ವಿಂಟಲ್ ಒಣ ಅಡಿಕೆ , 2022 ರಲ್ಲಿ 230 ಕ್ವಿಂಟಲ್, ಹಾಗೂ 2023 ರಲ್ಲಿ ಸುಮಾರು 360 ಕ್ವಿಂಟಲ್ ಒಣ ಅಡಿಕೆಯನ್ನು ಸಂಸ್ಕರಣೆ ಮಾಡಿದ ಹೆಗ್ಗಳಿಕೆ ಈ ಕಂಪನಿಯದ್ದು.ಕೇವಲ ಮೂರು ಸೀಜನ್ನಿನಲ್ಲಿ ಜನಮನ್ನಣೆ ಗಳಿಸಿಕೊಂಡಿದೆ.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group