-ಸಂತೋಷ್ ರಾವ್ ಪೆರ್ಮುಡ
ಕರಿಮೆಣಸು ಒಂದು ಸಾಂಬಾರ ಬೆಳೆಯಾಗಿದ್ದು, ಆಯುರ್ವೇದ ಔಷಧಗಳಲ್ಲೂ ಇದನ್ನು ಹೇರಳವಾಗಿ ಬಳಸುತ್ತಾರೆ. ಕರಿಮೆಣಸಿನ ಬಳ್ಳಿಯಲ್ಲಿ ಬರುವ ಹಣ್ಣನ್ನು ಒಣಗಿಸಿ ಕರಿಮೆಣಸಿನ ಕಾಳುಗಳನ್ನು ಪಡೆಯುತ್ತಾರೆ. ಇದನ್ನು ಕರ್ನಾಟಕ ರಾಜ್ಯ ಸಹಿತವಾಗಿ ದಕ್ಷಿಣ ಭಾರತದಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ.
ಕರಿಮೆಣಸು ಒಂದು ಇತರ ಗಿಡಮರಗಳನ್ನು ಅಪ್ಪಿಕೊಂಡು ಬೆಳೆಯುವ ಸಸ್ಯ. ಬಳ್ಳಿಯ ಗಂಟುಗಳಲ್ಲಿ ಬೇರು ಮೂಡುತ್ತವೆ. ಬೇರುಗಳು ಆಧಾರ ಸಸ್ಯವನ್ನು ಅಪ್ಪಿಕೊಳ್ಳುತ್ತವೆ ಅಥವಾ ಮಣ್ಣಿನಲ್ಲಿ ಇಳಿಯುತ್ತವೆ. ಇದರ ವಿಶಿಷ್ಟವಾದ ಬೇರುಗಳು ಮಣ್ಣು ಅಥವಾ ಮರದ ಕಾಂಡದಿಂದ ಪೋಷಕಾಂಶಗಳನ್ನು ಪಡೆಯುತ್ತವೆ. ಇದರ ಹೂವುಗಳು ಸೂಕ್ಷ್ಮವಾಗಿದ್ದು ಗೆರೆಗಳ ಮೇಲೆ ಮೂಡುತ್ತವೆ. ಈ ಗೆರೆಗಳು ಎಳೆಯದಾದ ಎಲೆಗಳ ಸಂದಿಯಲ್ಲಿ ಹುಟ್ಟುತ್ತವೆ. ಎಳೆ ಗೆರೆಗಳು 4 ರಿಂದ 8 ಸೆಂ.ಮೀ ಉದ್ದವಿದ್ದು, ಸಂಪೂರ್ಣ ಬೆಳೆದ ಗೆರೆಯು 7 ರಿಂದ
15 ಸೆಂ.ಮೀ ಉದ್ದವಾಗಿರುತ್ತವೆ. ಬಳ್ಳಿಯು ಫಲವತ್ತಾದ ಹಾಗೂ ತುಸು ತೇವವಿರುವ ಮಣ್ಣಿನಲ್ಲಿ ಬೆಳೆಯುತ್ತದೆ. ಸ್ವಾಭಾವಿಕವಾಗಿ ಹಣ್ಣಿನಿಂದ ಹಾಗೂ ಕಾಂಡದಿಂದ ಬರುವ ಬಳ್ಳಿಯಿಂದ ಸಂತಾನಾಭಿವೃದ್ಧಿ ಆಗುತ್ತದೆ. ಕಾಳುಮೆಣಸನ್ನು ಕೃಷಿ ಮಾಡುವವರು ಬಳ್ಳಿಯನ್ನು 1 ಮೀ ಉದ್ದಕ್ಕೆ ಕತ್ತರಿಸಿ ನಾಟಿ ಮಾಡುತ್ತಾರೆ. ಗಟ್ಟಿ ಕಾಂಡದ ಸಸ್ಯಗಳ ಮೇಲೆ ಇವು ಬೇಗ ಬೆಳೆಯುತ್ತವೆ. ಉತ್ತಮ ಗಾಳಿ ಬೆಳಕು ಬಳ್ಳಿಗೆ ಅವಶ್ಯ, ಹಾಗೇಯೆ ಸ್ವಲ್ಪ ನೆರಳೂ ಅವಶ್ಯ. ಬಳ್ಳಿಯು 4 ರಿಂದ 5 ವರ್ಷಗಳಲ್ಲಿ ಫಲ ನೀಡುತ್ತದೆ. ಗೆರೆಯಲ್ಲಿ ಒಂದೆರಡು ಕಾಳುಗಳು ಹಣ್ಣಾದಾಗ ಕೊಯ್ಲು ಮಾಡಬಹುದು. ಕಾಳುಗಳು ಬಲಿತು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೊಯ್ಲು ಮಾಡಿದ ಗೆರೆಗಳಿಂದ ಕಾಳನ್ನು ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಿದರೆ 3-4 ಬಿಸಿಲಿನ ನಂತರ ಕಾಳುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ.
ಕರಿಮೆಣಸಿಗೆ ಆಂಗ್ಲ ಭಾಷೆಯ ಪದ ‘ಪೆಪ್ಪರ್’ ಎಂಬುದು ಸಂಸ್ಕೃತದ ಪದ ‘ಪಿಪ್ಪಲಿ’ ಎಂಬ ಪದದ ಗ್ರೀಕ್ ಭಾಷೆಯಿಂದ ಬಂದಿದೆ ಕಾಳುಮೆಣಸು ‘ಪೈಪರೇಸೀ’ ಕುಟುಂಬಕ್ಕೆ ಸೇರಿದ್ದು, ಇದರ ವೈಜ್ಞಾನಿಕ ಹೆಸರು ‘ಪೈಪರ್ ನೀಗ್ರಮ್’. ಮೆಣಸು ಕಾಳುಗಳನ್ನು ಅದರ ಮೂಲವನ್ನು ಅವಲಂಬಿಸಿ ವರ್ಗೀಕರಿಸಲಾಗಿದ್ದು, ಎರಡು ಜನಪ್ರಿಯ ತಳಿಗಳಾದ ಮಲಬಾರ್ ಅಥವಾ ತೆಲ್ಲಿಚೆರಿ ಮೆಣಸು, ಇದು ದೊಡ್ಡ ಗಾತ್ರದ ಹೆಚ್ಚು ಹಣ್ಣಾದ ಒಳ್ಳೆಯ ಜಾತಿಯ ತಳಿಯಾಗಿದೆ. ಎರಡನೆಯದ್ದು, ಸರವಾಕ ಎಂಬ ತಳಿಯ ಮೆಣಸು ಮಲೇಶಿಯದ ಬೋರ್ನಿಯೋ ಪ್ರಾಂತ್ಯದಲ್ಲಿ, ಹಾಗೂ ಲ್ಯಾಂಪೋAಗ್ ಎಂಬ ತಳಿ ಇಂಡೋನೇಶಿಯದ ಸುಮಾತ್ರ ದ್ವೀಪದಲ್ಲಿ ದೊರಕುತ್ತವೆ.
ಕಾಳುಮೆಣಸಿನಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಇದು ಮಳೆಗಾಲದಲ್ಲಿ ಕಾಡುವ ಶೀತ, ಕಫ ನೆಗಡಿಯಂತಹ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಕೆಯಾಗುತ್ತದೆ. ಹಿಂದಿನಿAದಲೂ ಅಡುಗೆಮನೆಯಲ್ಲಿ ವಿವಿಧ ರೀತಿಯಲ್ಲಿ ಹಾಗೂ ಮನೆ ಔಷಧಗಳಲ್ಲಿ ಕಾಳುಮೆಣಸನ್ನು ಬಳಸುವುದು ವಾಡಿಕೆ. ನಿಯಮಿತವಾಗಿ ವೈವಿಧ್ಯಮಯ ಅಡುಗೆಗಳಲ್ಲೂ ಕಾಳುಮೆಣಸನ್ನು ಅತ್ಯಲ್ಪ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ. ಇದೇ ರೀತಿಯಲ್ಲಿ ವಿವಿಧ ರೋಗರುಜಿನಗಳ ನಿಯಂತ್ರಣದಲ್ಲೂ ಕಾಳುಮೆಣಸನ್ನು ಇಂದಿಗೂ ಬಳಸಲಾಗುತ್ತಿದೆ.
ಕಾಳುಮೆಣಸಿನ ಉಪಯೋಗ:
ಕಾಳುಮೆಣಸನ್ನು ಬಹುಮುಖ್ಯವಾಗಿ ಕಫ ಹಾಗೂ ವಾತದೋಷ ನಿವಾರಣೆಗೆ ಹೆಚ್ಚಾಗಿ ಬಳಸುತ್ತಾರೆ. ಕಾಳುಮೆಣಸನ್ನೇ ಪ್ರತ್ಯೇಕವಾಗಿ ಔಷಧವಾಗಿ ಬಳಸುವ ವಾಡಿಕೆಯಿದ್ದು, ವಿವಿಧ ಚರ್ಮರೋಗಗಳ ನಿಯಂತ್ರಣಕ್ಕಾಗಿ ಕಾಳುಮೆಣಸನ್ನು ಲೇಪದ ರೂಪದಲ್ಲೂ ಬಳಸುತ್ತಾರೆ. ಕಾಳುಮೆಣಸು ತೀರಾ ತೀಕ್ಷ÷್ಣವಾಗಿ ಇರುವುದರಿಂದ ಅಲ್ಪಪ್ರಮಾಣದ ಕಾಳುಮೆಣಸನ್ನು ನೀರಿನ ಜೊತೆ ಮಿಶ್ರ ಮಾಡಿ ಅಥವಾ ಕಹಿಬೇವಿನ ಎಣ್ಣೆಯ ಜೊತೆಯಲ್ಲಿ ಕಲಸಿ ಚರ್ಮರೋಗ ಇರುವಲ್ಲಿಗೆ ತೆಳುವಾಗಿ ಲೇಪ ಹಚ್ಚುತ್ತಾರೆ. ಉರಿಯೂತಗಳಿದ್ದಾಗ ಅಲ್ಪಪ್ರಮಾಣದ ಕಾಳುಮೆಣಸಿನ ಪುಡಿಯನ್ನು ಅರಸಿನ ಪುಡಿಯ ಜೊತೆಗೆ ನೀರಿನಲ್ಲಿ ಕಲಸಿ ಹಚ್ಚಬಹುದು.
ವಾತ ಎನ್ನುವ ವಿಶೇಷವಾದ ಗಂಟಿನ ತೊಂದರೆಗಳಲ್ಲಿ ಗಂಟಿನಲ್ಲಿ ನೋವು ಹಾಗೂ ಊತವಿರುತ್ತದೆ. ಈ ಸಂದರ್ಭದಲ್ಲಿ ನೀರು ಬೆರೆಸಿ ತಯಾರಿಸಿದ ಕರಿಮೆಣಸಿನ ಲೇಪವನ್ನು ಹಚ್ಚುವುದರಿಂದ ನೋವು ಹಾಗು ಊತ ಶಮನವಾಗುತ್ತದೆ. ಹಲ್ಲಿನ ಹುಳುಕಿದ್ದರೆ ಕಾಳುಮೆಣಸನ್ನು ಮನೆ ಔಷಧವಾಗಿ ಬಳಸಿದರೆ ನೋವು ಕಡಿಮೆಯಾಗುತ್ತದೆ. ಕಾಳುಮೆಣಸಿನ ಸೂಕ್ಷ್ಮ ಪುಡಿಯನ್ನು ನೋವಿರುವ ದವಡೆಗಳಿಗೆ ಹಚ್ಚಬಹುದು. ಅಥವಾ ಹತ್ತಿಯಲ್ಲಿ ಈ ಪುಡಿಯನ್ನು ಹಾಕಿ ನೋವಿರುವ ದವಡೆ ಅಥವಾ ಹಲ್ಲಿನ ಮೇಲೆ ಇಡಬಹುದು. ಕಾಳುಮೆಣಸಿನ ಪುಡಿಯನ್ನು ಹಲ್ಲುಜ್ಜುವ ಪುಡಿಯೊಂದಿಗೆ ಅಥವಾ ಪೇಸ್ಟಿನೊಂದಿಗೆ ಬಳಸಿದರೂ ಹಲ್ಲು ನೋವು ಕಡಿಮೆಯಾಗುತ್ತದೆ. ಒಂದು ಚಮಚ ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಿ 1೦೦ ಮಿ.ಲೀ ನೀರಿನೊಂದಿಗೆ ಕುದಿಸಿ ಕಷಾಯ ಮಾಡಿ ಬಾಯಿ ಮುಕ್ಕಳಿಸಿದರೆ ಬಾಯಿಗೆ ಸಂಬAಧಿಸಿದ ರೋಗಗಳು ಶಮನವಾಗುತ್ತದೆ.
ಸ್ವಲ್ಪ ಪ್ರಮಾಣದಲ್ಲಿ ಕಾಳುಮೆಣಸಿನ ಪುಡಿಯನ್ನು ತುಪ್ಪ ಹಾಗೂ ಅರಸಿನ ಪುಡಿಯ ಜೊತೆಗೆ ಕಲಸಿ ಅತಿಸಾರವಾದಾಗ ಸ್ವಲ್ಪ ಇಂಗನ್ನು ಸೇರಿಸಿ ಮಜ್ಜಿಗೆಯೊಂದಿಗೆ ಕುಡಿಯಲು ಕೊಡಬೇಕು. ಹಸಿವು ಕಡಿಮೆಯಾದಾಗ ಅಜೀರ್ಣ ನಿವಾರಣೆಗೆ ಕಾಳುಮೆಣಸಿನ ಕಷಾಯ ಅತ್ಯುತ್ತಮ ಔಷಧಿ. ೦5 ಗ್ರಾಂನಷ್ಟು ಕಾಳುಮೆಣಸನ್ನು 1೦೦ಮೀ.ಲೀ ನೀರಿನಲ್ಲಿ ಕುದಿಸಿ ಸೋಸಿ ಕುಡಿಯಬೇಕು. ಇದೇ ರೀತಿ ಕಷಾಯಮಾಡಿ ಹೊಟ್ಟೆ ಉಬ್ಬರವಿದ್ದಾಗ, ಹೊಟ್ಟೆಯಲ್ಲಿ ಹುಳುಗಳು ಇದ್ದಾಗ ದಿನಕ್ಕೆ ಎರಡು ಬಾರಿಯಂತೆ 3-4 ದಿನಗಳ ಕಾಲ ಸೇವಿಸಬೇಕು. 3 ಗ್ರಾಂ ಕಾಳುಮೆಣಸು ೦3 ಗ್ರಾಂ ಶುಂಠಿ ಹಾಗೂ ೦3 ಗ್ರಾಂ ಸೈಂಧವ ಲವಣವನ್ನು ಮಜ್ಜಿಗೆಯೊಂದಿಗೆ ಮಿಶ್ರಣ ಮಾಡಿ ಸೇವಿಸಿದರೆ ಅಜೀರ್ಣ, ಕಡಿಮೆಯಾಗಿರುವ ಹಸಿವು ಹಾಗೂ ಅರುಚಿ ನಿವಾರಣೆ ಆಗುತ್ತದೆ.
ಕಾಳುಮೆಣಸು ಗಾಳಿಗೆ ಮತ್ತು ಬೆಳಕಿಗೆ ಒಡ್ಡಿದರೆ ತನ್ನ ಸ್ವಾದ ಹಾಗೂ ಪರಿಮಳವನ್ನು ಕಳೆದುಕೊಳ್ಳುತ್ತದೆ, ಏಕೆಂದರೆ ಬೆಳಕಿನಲ್ಲಿ ‘ಪೈಪರೈನ್’ ಅಂಶವು ರುಚಿಯಿರದ ‘ಇಸೊಚವಿಸಿನ್’ ಆಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಶೇಖರಿಸವಾಗ ಗಾಳಿಯಾಡದ ಜಾಗದಲ್ಲಿ ಇದನ್ನು ಶೇಖರಿಸಿದರೆ ಕಾಳುಮೆಣಸು ದೀರ್ಘಕಾಲ ತನ್ನ ಸಾಂಬಾರ ಗುಣಗಳನ್ನು ಉಳಿಸಿಕೊಳ್ಳುತ್ತದೆ. ಒಮ್ಮೆ ಪುಡಿಮಾಡಿದ ನಂತರ ಮೆಣಸಿನ ಸುಗಂಧ ಬಹಳ ಬೇಗನೆ ಆವಿಯಾಗುವುದರಿಂದ ಅಡುಗೆಯಲ್ಲಿ ಕಾಳುಮೆಣಸನ್ನು ಪುಡಿ ಮಾಡಿದೊಡನೆ ಬಳಸುತ್ತಾರೆ. ಆರ್ಥಿಕವಾಗಿ ಕರಿಮೆಣಸು ಪ್ರಪಂಚದಲ್ಲೇ ಅತಿ ಹೆಚ್ಚು ವ್ಯಾಪಾರವಾಗುವ ಸಾಂಬಾರ ಪದಾರ್ಥ. 2002 ರಲ್ಲಿ ದೇಶದ ಸಾಂಬಾರ ಪದಾರ್ಥಗಳ ಒಟ್ಟು ಆಮದಿನಲ್ಲಿ 2೦% ಕರಿಮೆಣಸನ್ನೇ ಆಮದು ಮಾಡಿಕೊಳ್ಳಲಾಗಿತ್ತು.
1998ರಲ್ಲಿ ಒಟ್ಟು ಸಾಂಬಾರ ಪದಾರ್ಥ ವ್ಯಾಪಾರದಲ್ಲಿ ಕರಿಮೆಣಸಿನ ಪಾಲು ೩೯% ಇತ್ತು. ಅಂತರರಾಷ್ಟಿçÃಯ ಕರಿಮೆಣಸು ವಿನಿಮಯ ಕೇಂದ್ರವು ಕೇರಳದ ಕೊಚ್ಚಿಯಲ್ಲಿದೆ.
ಇತ್ತೀಚಿಗೆ ವಿಯೆಟ್ನಾಮ್ ದೇಶವು ಅತಿ ಹೆಚ್ಚು ಕರಿಮೆಣಸು ಉತ್ಪಾದಕ ಹಾಗು ರಪ್ತು ಮಾಡುವ ರಾಷ್ಟçವಾಗಿದೆ. 2003ರ ಅಂಕಿ ಅಂಶದ ಪ್ರಕಾರ ಕೆಲವು ಪ್ರಮುಖ ಕರಿಮೆಣಸು ಉತ್ಪಾದಕ ದೇಶಗಳೆಂದರೆ ವಿಯೆಟ್ನಾಮ್ (85,೦೦೦ ಟನ್), ಇಂಡೊನೇಷ್ಯಾ (67,೦೦೦ ಟನ್), ಭಾರತ (65,೦೦೦ ಟನ್), ಬ್ರೆಜಿಲ್ (35,೦೦೦ ಟನ್), ಮಲೇಷ್ಯಾ (22,೦೦೦ ಟನ್), ಶ್ರೀಲಂಕಾ (12,750 ಟನ್). ವಿಯೆಟ್ನಾಮ್ ದೇಶವು ತನ್ನ ಒಟ್ಟು ಉತ್ಪಾದನೆಯ ಬಹುಪಾಲು ಕರಿಮೆಣಸನ್ನು ರಪ್ತು ಮಾಡುತ್ತದೆ. ಕರಿಮೆಣಸನ್ನು 2003ರ ಅಂಕಿ ಅಂಶಗಳ ಪ್ರಕಾರ ವಿಯೆಟ್ನಾಮ್ (82,೦೦೦ ಟನ್),, ಬ್ರೆಜಿಲ್ (17940 ಟನ್), ಮಲೇಷ್ಯಾ (18,5೦೦ ಟನ್), ಭಾರತ, (17200 ಟನ್) ರಪ್ತು ಮಾಡಿವೆ.
ಕಾಳುಮೆಣಸಿನಲ್ಲಿರುವ ವಿಟಮಿನ್ ‘ಎ’ ಮತ್ತು ‘ಸಿ’ ಅಂಶಗಳು ರಕ್ತನಾಳಗಳ ಗೋಡೆಗಳನ್ನು ಬಲಪಡಿಸಿ ಒಳಭಾಗದಲ್ಲಿ ಕೆಟ್ಟ ಕೊಲೆಸ್ಟಾçಲ್ ಸಂಗ್ರಹವಾಗಿದ್ದರೆ ಇವನ್ನು ಒಡೆದು ರಕ್ತದ ಹರಿವನ್ನು ಸುಗಮಗೊಳಿಸಿ ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತದೆ. ಕಾಳುಮೆಣಸಿನಲ್ಲಿರುವ ಖಾರಕ್ಕೆ ಕಾರಣವಾಗಿರುವ ಕ್ಯಾಪ್ಸೆöÊಸಿನ್ ಎಂಬ ಪೋಷಕಾಂಶವು ಕೆಲವು ಬಗೆಯ (ರಕ್ತ ಕ್ಯಾನ್ಸರ್ ಸಹಿತ) ಕ್ಯಾನ್ಸರ್ ತರಿಸುವ ಜೀವಕೋಶಗಳನ್ನು ಕೊಲ್ಲುವುದರಿಂದ ಇದು ಕ್ಯಾನ್ಸರನ್ನು ನಿಯಂತ್ರಿಸುತ್ತದೆ. ಪ್ರತಿದಿನವೂ ಮಸಾಲೆಯುಕ್ತ ಆಹಾರ ಸೇವಿಸುವವರಲ್ಲಿ ಹೃದ್ರೋಗದ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳು ತಿಳಿಸಿವೆ. ಈ ತೊಂದರೆಗೆ ಮುಖ್ಯ ಕಾರಣವಾಗಿರುವ ಎಲ್.ಡಿ.ಎಲ್ ಎಂಬ ಕೆಟ್ಟ ಕೊಲೆಸ್ಟಾçಲನ್ನು ಒಡೆಯುವ ಮೂಲಕ ಕಾಳುಮೆಣಸು ಹೃದಯವನ್ನು ಕಾಪಾಡುತ್ತದೆ.
ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ತ್ವಚೆಯ ಸೆಳೆತ ಹೆಚ್ಚಿಸಿ ನೆರಿಗೆ ಮತ್ತು ಸೂಕ್ಷö್ಮಗೆರೆಗಳನ್ನು ನಿವಾರಿಸಿ ರಕ್ತಪರಿಚಲನೆಯನ್ನು ಉತ್ತಮಗೊಳಿಸುವ ಮೂಲಕ ಚರ್ಮದ ಅಡಿಯಿಂದ ಪೋಷಣೆ ಒದಗಿಸುತ್ತದೆ. ಕಾಳುಮೆಣಸಿನಲ್ಲಿ ಇರುವ ವಿಟಮಿನ್ ಸಿ ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕವಾಗಿದ್ದು ಆಹಾರದ ಜೊತೆಗೆ ಸೇವಿಸಿದಾಗ ಸಾಮಾನ್ಯ ಶೀತ ಹಾಗೂ ಮೂಗು ಕಟ್ಟಿಕೊಳ್ಳುವ ಸಮಸ್ಯೆಯನ್ನು ನಿವಾರಿಸುತ್ತದೆ. ಕಾಳುಮೆಣಸು ಜೀರ್ಣಾಂಗದ ವಾಯುಪ್ರಕೋಪವನ್ನು ತಡೆದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ತನ್ಮೂಲಕ ಸಣ್ಣ ಕರುಳಿನಲ್ಲಿ ಆಹಾರ ಸುಲಭವಾಗಿ ಜೀರ್ಣಗೊಂಡು ಪೋಷಕಾಂಶಗಳು ಸರಿಯಾಗಿ ಹೀರಲ್ಪಡುತ್ತವೆ. ಕಾಳುಮೆಣಸು ಖಾರವಿರುವುದರಿಂದ ಇದನ್ನು ಸೇವಿಸಿದರೆ ದೇಹದ ಉಷ್ಣ ಹೆಚ್ಚಿ ಶೀತ ಕಡಿಮೆ ಮಾಡುತ್ತದೆ. ದೇಹದ ಉಷ್ಣತೆ ಹೆಚ್ಚಿದಾಗ ವೈರಸ್ಸುಗಳು ಸಾಯುತ್ತವೆ. ಇದರೊಂದಿಗೆ ದೇಹ ಬಿಸಿಯನ್ನು ಉತ್ಪಾದಿಸಲು ದೇಹ ಕೊಬ್ಬನ್ನು ಬಳಸಿಕೊಳ್ಳುವುದರಿಂದ ತೂಕ ಕಡಿಮೆಯಾಗುತ್ತದೆ.
ಅಡ್ಡ ಪರಿಣಾಮಗಳು:
ಇದರಲ್ಲಿರುವ ಕ್ಯಾಪ್ಸೈಸಿನ್ ಅತಿ ಪ್ರಭಲವಾದ ಖಾರವಾಗಿದ್ದು ಇದರ ಪ್ರಮಾಣ ಕೊಂಚ ಹೆಚ್ಚಾದರೂ ಹೊಟ್ಟೆಯಲ್ಲಿ ಆಮ್ಲೀಯತೆ ಅತೀವವಾಗಿ ಏರುತ್ತದೆ ಹಾಗೂ ಹೊಟ್ಟೆಯಲ್ಲಿ ಉರಿ ಪ್ರಾರಂಭವಾಗುತ್ತದೆ. ಹುಳಿತೇಗು ಕಾಣಿಸಿಕೊಂಡು ಅನ್ನನಾಳವನ್ನು ಅತಿಯಾಗಿ ಉರಿಸಬಹುದು. ಇದು ಪ್ರತಿ ವ್ಯಕ್ತಿಯ ಆರೋಗ್ಯವನ್ನು ಅವಲಂಬಿಸಿದ್ದು ಈ ಉರಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಅನಾರೋಗ್ಯಕ್ಕೆ ಇತರ ಔಷಧಿಗಳನ್ನು ಸೇವಿಸುತ್ತಿರುವ ವ್ಯಕ್ತಿಗಳು ಕಾಳುಮೆಣಸನ್ನು ಮಿತಗೊಳಿಸಬೇಕು. ಏಕೆಂದರೆ, ಇದರ ಸೇವನೆಯಿಂದ ಔಷಧಿಗಳ ಪರಿಣಾಮ ಭಿನ್ನವಾಗಬಹುದು ಹಾಗೂ ಕೆಲವೊಮ್ಮೆ ವ್ಯತಿರಿಕ್ತವೂ ಆಗಬಹುದು. ಅದರಲ್ಲೂ ಖಾರದ ಊಟದ ಬಳಿಕ ನಮ್ಮ ಯಕೃತ್ ಕೆಲವು ಔಷಧಿಗಳನ್ನು ಒಡೆದು ದೇಹಕ್ಕೆ ಒದಗಿಸುವ ಕಾರ್ಯದಲ್ಲಿ ತೊಡಕು ಎದುರಾಗುವುದನ್ನು ಅಧ್ಯಯನಗಳು ಸಾಬೀತುಗೊಳಿಸಿವೆ. ನಮ್ಮ ರಕ್ತ ಗಾಳಿಯ ಸಂಪರ್ಕಕ್ಕೆ ಬಂದ ತಕ್ಷಣವೇ ಇದರಲ್ಲಿರುವ ಪ್ಲೇಟ್ಲೆಟ್‌ಗಳು ಪರಸ್ಪರ ಅಂಟಿಕೊಂಡು ಗಟ್ಟಿಯಾಗಿ ರಕ್ತ ಹೊರ ಹರಿಯುವುದನ್ನು ತಡೆಯುತ್ತವೆ. ಕಾಳುಮೆಣಸು ಈ ಗುಣವನ್ನು ತುಸು ಕಡಿಮೆ ಮಾಡುವ ಅಪಾಯವಿದ್ದು, ಮಧುಮೇಹಿಗಳು ಕಾಳುಮೆಣಸನ್ನು ಹೆಚ್ಚು ಸೇವಿಸಬಾರದು.
ಪ್ರಕೃತಿ ಮಾನವ ಕುಲಕ್ಕೆ ಅನೇಕ ಮಸಾಲೆ ಪದಾರ್ಥಗಳನ್ನು ಬಳುವಳಿಯಾಗಿ ನೀಡಿದೆ, ಅದರಲ್ಲಿ ಮನುಷ್ಯನು ಕೆಲವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿದ್ದು, ಅವುಗಳ ಪೈಕಿ ಕರಿಮೆಣಸೂ ಒಂದು. ಇದರ ಬಾಳಿಕೆ ಮತ್ತು ಮೌಲ್ಯದಿಂದಾಗಿ ಇದನ್ನು ‘ಕಪ್ಪುಚಿನ್ನ’ ಎಂದೂ ಮತ್ತು ಇದನ್ನು ‘ಸಾಂಬಾರ ಪದಾರ್ಥಗಳ ರಾಜ’ ಎಂದೂ ಪರಿಗಣಿಸಲಾಗುತ್ತದೆ.