ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಸಿಗೋಡಿನಲ್ಲಿರುವ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರವು ಹೊಸ ಎರಡು ಕಾಫಿ ತಳಿಗಳನ್ನು ಬಿಡುಗಡೆ ಮಾಡಿದೆ. ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವದ ಸಂದರ್ಭದಲ್ಲಿ ಈ ಎರಡು ತಳಿಗಳು ಲೋಕಾರ್ಪಣೆಗೊಂಡವು. ಕೇಂದ್ರವು ಶತವರ್ಷ ತುಂಬಿದ ನೆನಪಿಗೆ ಸಿಸಿಆರ್ ಐ – ಶತಾಬ್ದಿ (ಎಸ್. 5086) ಬಿಡುಗಡೆಯಾದರೆ ಸಿಸಿಆರ್ ಐ ಸುರಕ್ಷಾ (ಎಸ್. 4595) ಬಿಡುಗಡೆಯಾದ ಮತ್ತೊಂದು ತಳಿ ಶತಾಬ್ದಿಯು ಅರೇಬಿಕಾ ಕಾಫಿ ತಳಿಗಳ ಗುಂಪಿಗೆ ಸೇರಿದ ಅರೆ ಕುಬ್ಜ (ಗಿಡ್ಡ ) ತಳಿಯಾಗಿದೆ. ಎರಡೇ ವರ್ಷದಲ್ಲಿ ಹೂ ಬಿಡಲು ಆರಂಭಿಸಿ ಮೂರನೇ ವರ್ಷದಿಂದ ಕಾಫಿ ಫಸಲು ಪಡೆಯಬಹುದಾಗಿದೆ. ಈ ತಳಿಯಲ್ಲಿ ಹೆಕ್ಟೇರಿಗೆ ಸುಮಾರು 1800 ಕೆಜಿ ಕಾಫಿ ಇಳುವರಿ ದೊರೆಯಲಿದೆ ಉತ್ತಮ ಗುಣಮಟ್ಟದ ಕಾಫಿ ಬೀಜವನ್ನು ಹೊಂದಿದೆ. ಕಾಂಡ ಕೊರಕ ಕೀಟ ಬಾಧೆ ಸಹಿಷ್ಣುತೆಯ ಸಾಮರ್ಥ್ಯವಿದೆ.


ಸಿಸಿಆರ್ ಐ- ಸುರಕ್ಷಾ ಇದೇ ಸಂದರ್ಭದಲ್ಲಿ ಬಿಡುಗಡೆಯಾದ ಮತ್ತೊಂದು ತಳಿ. ಶತಾಬ್ದಿ ಅರೆ ಗಿಡ್ಡ ತಳಿಯಾದರೆ ಸುರಕ್ಷಾ ಅರೇಬಿಕಾ ವರ್ಗಕ್ಕೆ ಸೇರಿದ ಎತ್ತರದ ಮಿಶ್ರತಳಿ. ಕಾಂಡಕೋರಕ ಕೀಟ ಬಾಧೆ ನಿರೋಧಕ ಶಕ್ತಿ ಮತ್ತು ತುಕ್ಕು ರೋಗ ಸಹಿಷ್ಣತೆ ಸಾಮರ್ಥ್ಯ ಹೊಂದಿದೆ. ಹೆಕ್ಟೇರಿಗೆ ಸುಮಾರು 1400ಕೆಜಿ ಇಳುವರಿ ಪಡೆಯಬಹುದು.







