spot_img
Sunday, September 8, 2024
spot_imgspot_img
spot_img
spot_img

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ವೆಬ್-ಸೈಟಿಗೆ ಚಾಲನೆ

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ವೈಬ್ಸೈಟ್ ಅನಾವರಣ ಕಾರ್ಯಕ್ರಮ ನಡೆಯಿತು. ಕಳೆದ ಹನ್ನೊಂದು ವರುಷಗಳಲ್ಲಿ ಬಳಗವು ಸಂಘಟಿಸಿದ ಹಲವು ಕಾರ್ಯಕ್ರಮಗಳ ಮಾಹಿತಿ ಮತ್ತು ಫೋಟೋಗಳು ಈ ವೆಬ್-ಸೈಟಿನಲ್ಲಿ ಲಭ್ಯ. ಜೊತೆಗೆ ಸಾವಯವ ಕೃಷಿ ಹಾಗೂ ವಿಷಮುಕ್ತ ಆಹಾರ ಆಂದೋಲನದಲ್ಲಿ ಸಕ್ರಿಯವಾಗಿರುವ ಇತರ ಸಂಘಸಂಸ್ಥೆಗಳ ಕಿರು ಮಾಹಿತಿ ಕೂಡ ವೆಬ್-ಸೈಟಿನಲ್ಲಿದೆ. ಅದಲ್ಲದೆ, ಬಳಗದ ಸದಸ್ಯರಾದವರಿಗೆ ಬಳಗದ ಸದಸ್ಯತನದಿಂದ ಆಗುವ ಅನುಕೂಲಗಳ ಬಗ್ಗೆಯೂ ಮಾಹಿತಿಯಿದೆ. ಇಂಗ್ಲಿಷ್ ಮತ್ತು ಕನ್ನಡ – ಎರಡೂ ಭಾಷೆಗಳಲ್ಲಿ ಮಾಹಿತಿ ಲಭ್ಯವಿರುವುದು ಈ ವೆಬ್-ಸೈಟಿನ ವಿಶೇಷ: savayavabalaga.org

ದ.ಕ. ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಪ್ರದೀಪ್ ಕಮಾರ್ ಕಲ್ಕೂರ್ ಅವರು ಸಾವಯವ ಕೃಷಿಕ ಗ್ರಾಹಕ ಬಳಗವು ಸ್ಥಾಪಿಸಲಿರುವ “ರೈತ ಉತ್ಪಾದಕರ ಕಂಪೆನಿ”ಯ ಸದಸ್ಯತ್ವ ಅರ್ಜಿಗಳನ್ನು ಬಿಡುಗಡೆಗೊಳಿಸಿದರು.

ಸಾವಯವ ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡುವುದು; ಸಾವಯವ ಸೊಪ್ಪು, ತರಕಾರಿ, ಹಣ್ಣುಗಳಿಗೆ ಆಧುನಿಕ ಶೇಖರಣಾ ಸೌಲಭ್ಯ ಒದಗಿಸುವುದು; ಕೃಷಿಕರಿಗೆ ವರ್ಷಪೂರ್ತಿ ಮಾರುಕಟ್ಟೆ ಮತ್ತು ಗ್ರಾಹಕರಿಗೆ ವರ್ಷವಿಡೀ ಆಯಾ ಹಂಗಾಮಿನ ತಾಜಾ ಉತ್ಪನ್ನಗಳು ದೊರೆಯುವಂತೆ ಮಾಡುವುದು ಈ ಕಂಪೆನಿಯ ಪ್ರಧಾನ ಉದ್ದೇಶಗಳಾಗಿವೆ

ಇದೇ ಕಾರ್ಯಕ್ರಮದಲ್ಲಿ ದ.ಕ. ಮತ್ತು ಕಾಸರಗೋಡಿನ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರನ್ನು ಬಳಗವು ಸನ್ಮಾನಿಸಿತು:

ಅಕ್ಟೋಬರ್ ೨೦೨೩ರಲ್ಲಿ ರೈತರ ಹಕ್ಕುಗಳ ಜಾಗತಿಕ ಸಿಂಪೋಸಿಯಮ್‌ನಲ್ಲಿ ಭಾರತದ ರಾಷ್ಟ್ರಪತಿಯವರಿಂದ “ಸಸ್ಯ ತಳಿಗಳ ರೈತ ಸಂರಕ್ಷಕ” ಪ್ರಶಸ್ತಿ ಸ್ವೀಕರಿಸಿದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬಿ.ಕೆ. ದೇವರಾವ್, ೨೦೨೨ರಲ್ಲಿ ಪದ್ಮಶ್ರೀ ಪುರಸ್ಕೃತರಾದ ಕಿತ್ತಳೆ ಮಾರಾಟದ ಉಳಿತಾಯ ಹಣದಿಂದಲೇ ಶಾಲೆ ನಿರ್ಮಿಸಿದ ಹರೇಕಳ ಹಾಜಬ್ಬ, ೨೦೨೪ರಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಭತ್ತದ ತಳಿ ಸಂರಕ್ಷಕ ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ಸತ್ಯನಾರಾಯಣ ಬೆಳೇರಿ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸ್ನೇಹ ರವೀಶ್ ಭಟ್ ರಚಿಸಿದ ಹಾಗೂ ಬಳಗವು ಆರನೇ ಪುಸ್ತಕ “ಅಲಂಕಾರಿಕಾ ವಿವಿಧ ಗಿಡಗಳ ಬೇಸಾಯದ ಮಾಹಿತಿ ಕೈಪಿಡಿ” ಯನ್ನು ಬಿ.ಕೆ. ರಾವ್ ಲೋಕಾರ್ಪಣೆ ಮಾಡಿದರು. ಸಾವಯವ ಕೃಷಿಕ ಗ್ರಾಹಕ ಬಳಗದ ಲಾಂಛನವಿರುವ ಬನಿಯನ್ ಮತ್ತು ಟೋಪಿ ಬಿಡುಗಡೆ ಹರೇಕಳ ಹಾಜಬ್ಬ ಹಾಗೂ “ಸಾವಯವ ಪರೀಕ್ಷಾ ಉಪಕರಣ”ವನ್ನು ಲೋಕಾರ್ಪಣೆ ಸತ್ಯನಾರಾಯಣ ಬೆಳೇರಿ ಅವರು ನೆರವೇರಿಸಿದರು.

ಸಾವಯವ ಕೃಷಿಕ ಗ್ರಾಹಕ ಬಳಗವು “ವಿಷಮುಕ್ತ ಊಟದ ” ಆಂದೋಲನವನ್ನು ಮುನ್ನಡೆಸಲು ಕಳೆದ ೧೧ ವರುಷಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸಿದೆ: “ಸಾವಯವ ಕೈತೋಟ/ ಚಾವಣಿ ತೋಟ ನಿರ್ವಹಣೆ” ಬಗ್ಗೆ  ಉಚಿತ ತರಬೇತಿ ಶಿಬಿರಗಳು; ಆರು ಹಲಸಿನ ಹಬ್ಬಗಳು; ಮೂರು “ಮನೆಮದ್ದು ಶಿಬಿರಗಳು”; ಎರಡು “ಕೃಷಿ ಜೀವನ ಶಿಬಿರಗಳು”; ಎರಡು “ಸಾವಯವ ಕೈತೋಟ ನಿರ್ವಹಣಾ ಸರ್ಟಿಫಿಕೇಟ್ ಕೋರ್ಸ್ಗಳು” ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಗ್ಗೆ ಅಡ್ಡೂರು ಕೃಷ್ಣ ರಾವ್ ಈ ಸಂದರ್ಭದಲ್ಲಿ ಮಾಹಿತಿಯಿತ್ತರು.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group