spot_img
Tuesday, September 17, 2024
spot_imgspot_img
spot_img
spot_img

ತೋಟದ ಕಾಲುವೆಗೆ ಪ್ಲಾಸ್ಟಿಕ್ ಹೊದಿಕೆ: ಪರಿಶ್ರಮಿ ಕೃಷಿಕರ ತೋಟದಲ್ಲೊಂದು ಸುತ್ತು

-ಗಣಪತಿ ಹಾಸ್ಪುರ
ಆ ಸಾಲು ಸಾಲಾಗಿ ನಿಂತ ಫಲವತ್ತಾದ ಅಡಿಕೆ ತೋಟವನ್ನು ದೂರದಿಂದ ಕಂಡಾಗ ಮನಸ್ಸಿಗೆ ಖುಷಿ ಆಗಿದ್ದು ಸುಳ್ಳಲ್ಲ. ಆಕ್ಷಣ ಸಮೀಪಕ್ಕೆ ಹೋಗಿ ನೋಡಬೇಕು; ಅಲ್ಲಿನ ವೈವಿಧ್ಯ, ವೈಶಿಷ್ಟ್ಯ ವನ್ನು ಕಣ್ಣುತುಂಬಿಕೊಳ್ಳಬೇಕು, ಆ ತೋಟ ಸೂಜಿಗಲ್ಲಿನಂತೆ ಆಕರ್ಷಿಸಲು ಕಾರಣವೇನು ಎಂದು ತಿಳಿಬೇಕೆಂಬ ಉದ್ದೇಶದಿಂದ ಆ ತೋಟದ ಸಮೀಪವರೆಗೂ ಬೈಕ್‌ ಓಡಿಸಿದ್ದೆ. ಆಲ್ಲಿ ಓರ್ವ ಪ್ಲಾಸ್ಟಿಕ್ ಕೊಪ್ಪೆ ಸುಡಿಕೊಂಡು , ಕೈಯಲ್ಲೊಂದು ಗಜಗಾತ್ರದ ಕತ್ತಿಯನ್ನು ಹಿಡಿದು ಬರುತ್ತಿದ್ದ ಓರ್ವರನ್ನು ಕಂಡಾಗ ಅವರೇ ಆ ತೋಟದ ಮಾಲಿಕ ಆಗಿರಬಹುದು ಎಂದುಕೊಂಡು ಬೈಕ್ ನಿಲ್ಲಿಸಿ ಮಾತಿಗೆ ಇಳಿದಿದ್ದೆ.            ‌           ‌
ಹೌದು ಹೌದು ಅದು ನಮ್ದೆ ತೋಟ.ಅದ್ನ ಹಾಕಿ ಸುಮಾರು ಹದಿನೈದು ವರುಷವೇ ಆಯ್ತು ಅನ್ನುತ್ತಾ ಪಟಪಟನೆ ಮಾತಿಗೆ ಇಳಿದಿದ್ರು ಆ ತೋಟದ ಮಾಲೀಕ ಕೋಣೆಸರದ ಪ್ರಶಾಂತ ಹೆಗಡೆ. ಅಲ್ಲಿನ ಸರಗೋಲನ್ನು ದಾಟಿ ಅನತಿ ದೂರ ಸಾಗಿದಾಗ ಮನಸ್ಸಿಗೆ ಹಿತವಾಗಿತ್ತು. ಆಗಲೇ ಮೊಣಕಾಲೇತ್ತರಕ್ಕೆ ಬಲಿತ ಹಸಿರು ಹುಲ್ಲುಗಳು, ಮೈಸೆಟೆದು ನಿಂತಿದ್ದವು.ಹಾಗೆ ಮುಂದೆ ಸಾಗಿದಾಗ ಅಲ್ಲಿನ ಸಾಲು ಸಾಲಾಗಿ ನಿಂತ ಅಡಿಕೆ ಮರಗಳನ್ನು ಕಂಡಾಗ  ನಿಜಕ್ಕು ರೊಮಾಂಚನಗೊಂಡಿದ್ದೆ! ಒಂದೆ ಒಂದು ಮರವು ಅಂಕುಡೊಂಕಾಗಿ ಇರುವುದು ಕಾಣಲಿಲ್ಲ. ಶಿಸ್ತಿನ ಸಿಪಾಯಿಗಳಂತೆ ಬಲಿತು ನಿಂತ ಅಲ್ಲಿನ ಅಡಿಕೆ ತೋಟವನ್ನು  ನೋಡುತ್ತಲೇ ಇರೋಣ ಎನ್ನುವಷ್ಟು ಸುಂದರವಾಗಿದೆ. ಅಕ್ಕಪಕ್ಕದಲ್ಲಿ ಬೇರೆ ಬೇರೆ ರೈತರ ತೋಟವು ಇದ್ದರೂ, ಅವು ಮನಸ್ಸಿಗೆ ಹಿತವಾಗಲಿ, ಮತ್ತೊಮ್ಮೆ ನೋಡುವಷ್ಟು  ಖುಷಿಯಾಗಲಿ ಆಗದೇ ಇರುವುದರಿಂದ , ಮದ್ಯದಲ್ಲಿರುವ ಕೋಣೇಸರ ಪ್ರಶಾಂತ ಹೆಗಡೆ ಅವರ  ಸೋಂದಾ ಕೋಟೆ ಸಮೀಪ ಇರುವ ಸುಮಾರು ಒಂದುವರೆ ಎಕರೆ ತೋಟ ಎಲ್ಲ ದೃಷ್ಟಿಯಿಂದ ಉತ್ತಮವಾಗಿದೆ.                  ‌                                   ‌                   ‌
ಪರಿಶ್ರಮಿ ಕೃಷಿಕರು
ಶಿರಸಿ ತಾಲೂಕಿನ ಸೋಂದಾ- ಕೋಣೆಸರದ ಮಾಬ್ಲೆಶ್ವರ ಹೆಗಡೆ, ಹಾಗೂ ಪ್ರಶಾಂತ ಹೆಗಡೆ ಸಹೋದರರು ಪರಿಶ್ರಮ ಪಡುವ ಕೃಷಿಕರು. ಅವರಿಗೆ ಮೂರು ಕಡೆಗಳಲ್ಲಿ ಕೃಷಿ ಜಮೀನು ಇದೆ. ಹಿಂದೆ ಭತ್ತದ ಬೇಸಾಯವನ್ನೆ ಮಾಡುತ್ತಾ ಬಂದಿರುವ ಈ ಸಹೋದರರು ಹಂತ ಹಂತವಾಗಿ ಭತ್ತದ ಭೂಮಿಯನ್ನು  ಅಡಿಕೆ ತೋಟವನ್ನಾಗಿ ಪರಿವರ್ತಿಸುತ್ತಾ ಬಂದರೂ, ಈಗಲೂ ಮನೆ ಬಳಿ ಸುಮಾರು ಎರಡು ಎಕರೆಯಷ್ಟು ಭತ್ತದ ಬೇಸಾಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.
ಇವರ ಸೋಂದಾ ಕೋಟೆಯ ಸಮೀಪ ಸುಮಾರು ಒಂದುವರೆ ಎಕರೆಯಷ್ಟು ಭತ್ತ ಬೆಳೆಯುತ್ತಾ ಇರುವ  ಜಾಗವನ್ನು ಅಡಿಕೆ ತೋಟವನ್ನಾಗಿ ಮಾಡಿದ್ದಾರೆ‌ . ಸುಮಾರು ಹದಿನೈದು ವರುಷದ ಹಿಂದೆ  ತಮಗೆ ತಿಳಿದ ಪದ್ದತಿಯಲ್ಲಿ ಗಿಡವನ್ನು ನೆಟ್ಟು ಪೋಷಿಸಿದ ತೋಟವಿಂದು ಫಲವತ್ತಾಗಿ ಬಲಿತಿದ್ದು, ಅವರ ನಿರೀಕ್ಷೆಯಷ್ಟು ಫಲ ನೀಡುತ್ತಿದೆ. ಈ ತೋಟವನ್ನು ಕಳೆದ ಬೇಸಿಗೆಯಲ್ಲಿ ಭಿನ್ನ ಬರಣ ಮಾಡಿ ಹೊಸದಾಗಿ ಮಂಡಗಾಲುವೆ ಹಾಗೂ ಚೀಪ್ ಗಾಲುವೆಯನ್ನು ತೆಗೆಸಿದ್ದಾರೆ. ಬರಣದ ತುಂಬೆಲ್ಲ ಹೊಸ ಮಣ್ಣು ಹಾಕಿ ಲಕ್ಷಾಂತರ ರೂಪಾಯಿಯ ಕೆಲಸವನ್ನು ಮಾಡಿಸಿದ್ದಾರೆ. ಹಿಂದೆಲ್ಲ ಹೊಸದಾಗಿ ಕಾಲುವೆ ತೆಗೆದ್ರೆ ಅದು ಮಳೆಗಾಲದಲ್ಲಿ ಹಿಸಿಯಬಾರದು ಎನ್ನುವ ಕಾರಣಕ್ಕೆ ಸೋಗೆ, ಅಡಿಕೆ ಹಾಳೆ ಮುಚ್ಚಿ ಸಂರಕ್ಷಣೆ ಮಾಡಿಕೊಳ್ಳುತ್ತಿದ್ದರು. ಆದ್ರೆ, ಈ ಸುಧಾರಣೆಯ ಕಾಲದಲ್ಲಿ ಕಾಲುವೆಯ ರಕ್ಷಣೆಗೂ ಪ್ಲಾಸ್ಟಿಕ್ ಮುಚ್ಚುವ ವ್ಯವಸ್ಥೆ ಬಂದಿರುವುದರಿಂದ  ಅದ್ನ ಮಾರುಕಟ್ಟೆಯಿಂದ ತಂದು  ಹೊದೆಸಿದ್ದಾರೆ.         
                           ‌                 ‌
 ಪ್ಲಾಸ್ಟಿಕ್ ಹೊದಿಕೆ!            ‌       ‌‌‌ ‌‌         ‌                                       
 ಕೋಣೆಸರದ ಸಹೋದರರು  ತಮ್ಮ ಅಡಿಕೆ ತೋಟಕ್ಕೆ ಹೊಸದಾಗಿ ತೆಗೆದ ಕಾಲುವೆಗಳನ್ನು ಮಳೆಗಾಲದಲ್ಲಿ ಸ್ವಖಾಸುಮ್ಮನೆ ಬೀಡಲಿಲ್ಲ. ಕಾಲುವೆ ಮುಚ್ಚುವಷ್ಟು ಸೋಗೆಯಾಗಲಿ, ಅಡಿಕೆ ಹಾಳೆಯಾಗಲಿ ಆ ತೋಟದಲ್ಲಿ ಇಲ್ಲದೇ ಇರುವುದರಿಂದ  ಆಯಾ ಕಾಲುವೆಗೆ ಬೇಕಾಗುವಷ್ಟು ಅಗಲದ ಪ್ಲಾಸ್ಟೀಕ್ ಕವರನ್ನು ತಂದು ಹೊದೆಸಿದ್ದಾರೆ.  ಇದು ಎಲ್ಲ ದೃಷ್ಟಿಯಲ್ಲಿಯೂ ಉತ್ತಮ , ಹಾಗೂ ಅದ್ನ ಹೊದೆಸುವುದು ಅತೀ ಸುಲಭ ಎನ್ನುತ್ತಾರೆ ಪ್ರಶಾಂತ ಹೆಗಡೆ. ಪ್ಲಾಸ್ಟಿಕ್ ಗಾಳಿಗೆ ಹಾರಿ ಹೋಗದಂತೆ ಮೇಲಿಂದ ಭಾರವಾದ ವಸ್ತುಗಳನ್ನು ಇಡಬೇಕು.ಪ್ಲಾಸ್ಟಿಕ್ ನ ಒಳಗೆ ಕಳೆಯು ಹುಟ್ಟುವುದಿಲ್ಲ, ಕಾಲುವೆಯು ಹಿಸಿಯಲಾರದು. ಮಳೆ ಮುಗಿದ ನಂತರ ಇದೇ ಪ್ಲಾಸ್ಟಿಕ್ ನ್ನು ವ್ಯವಸ್ಥಿವಾಗಿ ತೆಗೆದಿಟ್ಟರೇ, ಮುಂದಿನ ಸೀಜನ್ನಗೂ ಕಾಲುವೆಗೆ ಹೊದೆಸಲು ಇದೇ ಪ್ಲಾಸ್ಟೀಕ್ ಬರಬಹುದು ಎನ್ನುತ್ತಾರೆ  ಕೋಣೆಸರದ ಪ್ರಶಾಂತ ಹೆಗಡೆ.
 ಈ ಪ್ಲಾಸ್ಟಿಕ್ ನ್ನು ಕಾಲುವೆಗೆ ಹೊದೆಯಿಸಿದ್ದರಿಂದ ನಷ್ಟವೇನು ಇಲ್ಲ. ಇದು ಬಹಳ ಉಪಯುಕ್ತವೇ ಆಗಿದೆ. ಕಾಲುವೆಯಲ್ಲಿ ಅನವಶ್ಯಕ ಕಳೆ ಬೆಳೆಯುತ್ತಿತ್ತು. ಹೊಸದಾಗಿ ಕಾಲುವೆ ಮಾಡಿದ್ದರಿಂದ ಅಲ್ಲಲ್ಲಿ ಕಾಲುವೆ ಹೀಸಿಯುತಿತ್ತು. ಈ ಪ್ಲಾಸ್ಟಿಕ್ ಕವರ್ ನ್ನು ಹೊದೆಯಿಸಿದ್ದರಿಂದ ಅವೆಲ್ಲವನ್ನು ತಡೆಕಟ್ಟಲು ಸಾಧ್ಯವಾಗಿದೆ.ಲಕ್ಷಾಂತರ ರೂಪಾಯಿ ತೋಟಕ್ಕೆ ಹಾಕಿ ಮಣ್ಣು ಕೆಲಸವನ್ನು, ಕಾಲುವೆಯೋ ಮಾಡಿಕೊಂಡು ಮಳೆಗಾಲದ ಸಮಯದಲ್ಲಿ ಹಾಗೆ ಬಿಟ್ಟರೇ ಮಾಡಿದ ಕೆಲಸ ಹೊಳೆಲಿ ಮಾಡಿದ ಹೋಮವೇ ಆದೀತು.
ಎಮ್ಮೆ ತಂದವನಿಗೆ ದಾಬು ತರಲು  ಕಂಜೂಸಿ ತನ ಮಾಡಿದರೇ ಲಕ್ಷಾಂತರ ವ್ಯಯ ಮಾಡಿ ಸುವ್ಯವಸ್ಥಿತ ವಾಗಿ ಮಾಡಿದ ಕಾಲುವೆಗಳು ಹೀಸಿದು ಹೋಗಬಹುದು. ಹೀಗೆ ಎಲ್ಲ ದೃಷ್ಟಿಯಿಂದ ನೋಡಿದರೇ ತೋಟದ ಕಾಲುವೆಗಳಿಗೆ ಪ್ಲಾಸ್ಟಿಕ್ ಹೊದಿಕೆ ಮಾಡುವುದರಿಂದ ಬಹಳ ಉಪಯುಕ್ತ ಎಂಬುದು ಅವರ ಮನದಾಳ ಅಂಬೋಣ.
                                   ‌
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group