spot_img
Saturday, July 27, 2024
spot_imgspot_img
spot_img
spot_img

ಜೇವರ್ಗಿಯಲ್ಲಿ ರೈತರಿಗಾಗಿ ನೆಲ, ಜಲ, ಸಂಸ್ಕೃತಿ ಶಿಬಿರ ಪ್ರಾರಂಭೋತ್ಸವ

ಕಲಬುರ್ಗಿ: ಸಹಬಾಳ್ವೆ ಸಂಸ್ಥೆ ಬೆಂಗಳೂರು ಹಾಗೂ ಗಿರಿಕರ್ಣಿಕ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೂಡಿ ದರ್ಗಾ ಸಮೀಪದಲ್ಲಿ ರೈತರು ಹಾಗೂ ರೈತರ ಮಕ್ಕಳಿಗೆ ನೆಲ, ಜಲ, ಸಂಸ್ಕೃತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಇತ್ತೀಚೆಗೆ ಒಂದು ದಿನದ ಕೃಷಿ ಕಾರ್ಯಾಗಾರ ಶಿಬಿರವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಪ್ರೌಢ ಶಾಲಾ ಶಿಕ್ಷಕರು ಹಾಗೂ ಸಮಾಜ ಚಿಂತಕರಾದ ಗುರುದೇವ ದೊಡ್ಡೇನ್ ಈ ಕಾರ್ಯಕ್ರಮವನ್ನು ಆಯೋಜಿಸಿ ಪ್ರಸ್ತುತ ಪಡಿಸಿದರು.

ಸಹಬಾಳ್ವೆ ಸಂಸ್ಥೆಯ ಅಧ್ಯಕ್ಷರಾದ ಡಾ. ರಾಘವೇಂದ್ರ ಪ್ರಸಾದ್ ಹಾಗೂ ಶಿಕ್ಷಕರಾದ  ಗುರುದೇವ ದೊಡ್ಡೇನ್ ಈಗಾಗಲೇ ಶಿಕ್ಷಣದ ಕ್ಷೇತ್ರದಲ್ಲಿ ೨೦೧೬ ರಿಂದ ಬೀದರ್ ಜಿಲ್ಲೆಯ ಭಾಗಗಳಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜ್ಞಾನಯಜ್ಞ ಎಂಬ ಕಾರ್ಯಕ್ರಮವನ್ನು ಈಗಾಗಲೇ  ನಡೆಸಿದ್ದಾರೆ. ಕಳೆದ ವರ್ಷದಿಂದ ಗುರುದೇವ ಮಾಸ್ತರ ಮಾರ್ಗದರ್ಶನದಲ್ಲಿ ಹಾಗೂ  ಸಿದ್ದಪ್ಪ ಗುರೂಜಿಯವರ ಆಶೀರ್ವಾದದಿಂದ ನಿರ್ಮಿತವಾದ ಓಂ ಪರಂಧಾಮ್ ಆಶ್ರಮ ನಿರ್ಣಾವಾಡಿ ಜೊತೆಗೆ ಸಹಬಾಳ್ವೆ ಸಂಸ್ಥೆಯು ಈ ಕಾರ್ಯಕ್ರಮವನ್ನು ನಡೆಸುತ್ತಿದೆ.

ಈ ಪ್ರೇರಣೆಯಿಂದ ಬಂದ ಮತ್ತೊಂದು ಕಾರ್ಯಕ್ರಮವೇ ನೆಲ, ಜಲ, ಸಂಸ್ಕೃತಿ, ಕೃಷಿಕ ವರ್ಗಕ್ಕಾಗಿ. ಅದರಲ್ಲೂ ಬಡ ಕೃಷಿಕರ ಮಕ್ಕಳನ್ನು ಪ್ರೋತ್ಸಾಹಿಸಿಲು ಮತ್ತು ಅವರ ಮುಂದಿನ ಜೀವನಕ್ಕೆ ದಾರಿದೀಪವಾಗಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕಳೆದ ಭಾನುವಾರ ೪ ಗಂಟೆಗಳ ಚೊಚ್ಚಲ ಕಾರ್ಯಾಗಾರವನ್ನು ಎಸ್. ಎನ್. ಕೋಬಾಳ ಕೃಷಿ ಭೂಮಿ, ಕೂಡಿ ದರ್ಗಾ ಸಮೀಪ, ಜೇವರ್ಗಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಕೃಷಿ ವಿಜ್ಞಾನಿ ಹಾಗೂ ಖ್ಯಾತ ಬರಹಗಾರಾದ ಶ್ರೀ. ಮಲ್ಲಿನಾಥ್ ಹೇಮಾಡಿ ಅವರು ನಡೆಸಿಕೊಟ್ಟರು. ಹಾಗೂ ಜೀವಾಮೃತ ಎಂಬ ಒಂದು ಸಾವಯವ ಸಿಂಪರಣೆಯ ತಯಾರಿಸುವ ವಿಧಾನವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಗಿರಿಕರ್ಣಿಕ ಸಂಸ್ಥೆಯ ಅಧ್ಯಕ್ಷೆಯಾದ  ಗೀತಾ ಜಿ. ದೊಡ್ಡೇನ್, ಸ್ಥಳದ ಮಾಲೀಕರಾದ ಕೋಬಾಳ ಸಹೋದರರು, ಗಿರಿಕರ್ಣಿಕ ಟ್ರಸ್ಟಿಗಳಾದ  ಅಮೃತ್ ಬಿರಾದಾರ್ ಮತ್ತು ಶ್ರೀಮತಿ ಮೀನಾಕ್ಷಿ ಹಾಗೂ ಸಹಬಾಳ್ವೆ ಸಂಸ್ಥೆಯ ಅಧ್ಯಕ್ಷರಾದ ಡಾ. ರಾಘವೇಂದ್ರ ಪ್ರಸಾದ್  ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಗುರುದೇವ ದೊಡ್ಡೇನ್ ಸಂಚಾಲನೆ ಮಾಡಿದರು.

ಈ ಕಾರ್ಯಕ್ರಮವು ನಿರಂತರವಾಗಿ ಈ ಭಾಗದಲ್ಲಿ ಜರುಗುತ್ತಿದ್ದು. ಇದು ಕೃಷಿಕರ ಮಕ್ಕಳು ವಿದ್ಯಾವಂತರಾಗಿ ಒಳ್ಳೆಯ ಪದವಿಗಳನ್ನು ಗಳಿಸಬೇಕು ಜೊತೆಗೆ ಭಾರತದ ಬೆನ್ನೆಲಬು ಆಗಿರುವ ಸಾವಯವ ಕೃಷಿಯನ್ನು ವೈಜ್ಞಾನಿಕವಾಗಿ ಎತ್ತಿಹಿಡಿಯಬೇಕು ಮತ್ತು ಈ ಕ್ಷೇತ್ರದಲ್ಲಿ ಉತ್ತಮ ಸಂಶೋಧನೆ ನಡೆಸಬೇಕು ಎಂಬ ಉದ್ದೇಶದಿಂದ ನೆಲ, ಜಲ, ಸಂಸ್ಕೃತಿ ಶಿಬಿರವನ್ನು ನಡೆಸುತ್ತಿದ್ದೇವೆ ಎಂದು ಡಾ. ರಾಘವೇಂದ್ರ ಪ್ರಸಾದ್ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೇಳಿದರು.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group