spot_img
Tuesday, November 26, 2024
spot_imgspot_img
spot_img
spot_img

ದೇಶದ ಆಹಾರ ಬಟ್ಟಲನ್ನು ಸದೃಢಗೊಳಿಸುವ ಸಂಕಲ್ಪ:ಏನಿದು ಸರಕಾರದ ದೂರದೃಷ್ಟಿ?

-ಡಾ| ಜಿ.ಶರಶ್ಚಂದ್ರ ರಾನಡೆ

ಭಾರತದಲ್ಲಿ ಪ್ರಸ್ತುತ 14.20 ಕೋಟಿ ಹೆಕ್ಟೇರ್ ಕೃಷಿ ಯೋಗ್ಯ ಭೂಮಿಯಿದೆ. ಕೃಷಿ ಮತ್ತು ಹವಾಮಾನಕ್ಕೆ ಸಂಬಂಧಿಸಿದಂತೆ ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಬೇರೆ ಬೇರೆ ಭೌಗೋಳಿಕ ಪ್ರದೇಶಗಳು ನಮ್ಮಲ್ಲಿವೆ. ಸ್ವತಂತ್ರ ಬಂದಾಗ ನಾವು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಹಸಿರು ಕ್ರಾಂತಿ ಬಳಿಕ ಆಹಾರ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಆದರೂ ಭೂಮಿಯ ಆರೋಗ್ಯ ಕ್ಷೀಣಿಸುತ್ತಿರುವುದು, ಪೋಷಕಾಂಶಗಳ ಕೊರತೆ, ಕೃಷಿ ಭೂಮಿ ಕಡಿಮೆಯಾಗುತ್ತಿರುವುದು, ಯುವ ಪೀಳಿಗೆ ಕೃಷಿಯಿಂದ ವಿಮುಖವಾಗುತ್ತಿರುವುದು, ಕೃಷಿ ಕ್ಷೇತ್ರದಲ್ಲಿ ಕಡಿಮೆಯಾಗುತ್ತಿರುವ ಅವಕಾಶಗಳು ಮುಂತಾದ ಹೊಸ ಸಮಸ್ಯೆಗಳನ್ನು ಈಗ ಕೃಷಿ ಕ್ಷೇತ್ರವು ಎದುರಿಸುತ್ತಿದೆ.

ಈ ಸಮಸ್ಯೆಗಳನ್ನು ನಿವಾರಿಸಿ ಕೃಷಿ ಕ್ಷೇತ್ರವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಯ ಹಳಿಯ ಮೇಲೆ ತರಲು ರೈತ ಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರಕಾರವು ತನ್ನ 2024-25 ರ ಮುಂಗಡಪತ್ರದಲ್ಲಿ ಒತ್ತು ನೀಡಿದೆ. ಸಂಶೋಧನೆ, ತಂತ್ರಜ್ಞಾನ ಮತ್ತು ಡಿಜಿಟಲ್ ಸ್ಪರ್ಶದ ಮೂಲಕ ದೇಶದ ಆಹಾರ ಬಟ್ಟಲನ್ನು ಸದೃಢಗೊಳಿಸುವ ಸಂಕಲ್ಪವನ್ನು ಕೇಂದ್ರ ಸರ್ಕಾರ ತೊಟ್ಟಿದೆ

ನೈಸರ್ಗಿಕ ಕೃಷಿಗೆ ಪ್ರೋತ್ಸಾಹ

ನೈಸರ್ಗಿಕ ಕೃಷಿ ಪದ್ಧತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ದೇಶ ವ್ಯಾಪಿ ಒಂದು ಕೋಟಿ ರೈತರನ್ನು ನೈಸರ್ಗಿಕ ಕೃಷಿಗೆ ಒಳಪಡಿಸಲಾಗುತ್ತಿದೆ. ಈ ರೈತರಿಗೆ ತರಬೇತಿ ಮತ್ತು ಬ್ರಾö್ಯಂಡಿAಗ್ ಮೂಲಕ ಸರ್ಕಾರ ನೆರವು ನೀಡಲಿದೆ. ಆಸಕ್ತ ಗ್ರಾಮ ಪಂಚಾಯಿತಿಗಳಲ್ಲಿ ತಾಂತ್ರಿಕ ಸಂಸ್ಥೆಗಳ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಇಂತಹ ನೈಸರ್ಗಿಕ ಕೃಷಿ ಚಟುವಟಿಕೆ ನಡೆಸಲು ಅಗತ್ಯವಾದ ನೈಸರ್ಗಿಕ ರಸಗೊಬ್ಬರ ಮತ್ತು ಔಷಧವನ್ನು ತಯಾರಿಸಲು ದೇಶದಾದ್ಯಂತ 10,000 ಕೇಂದ್ರಗಳನ್ನು ಅವಶ್ಯಕತೆ ಮತ್ತು ಬೇಡಿಕೆ ಸರ್ಕಾರ ನಿರ್ಧರಿಸಿದೆ

ತಳಿ ಸಂಶೋಧನೆಯಲ್ಲಿ ಬದಲಾವಣೆ

ಕೃಷಿ ಉತ್ಪಾದಕತೆ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವ ತಳಿ ಅಭಿವೃದ್ಧಿ ಪಡಿಸಲು ಜಾರಿಯಲ್ಲಿರುವ ಕೃಷಿ ಸಂಶೋಧನೆ ವ್ಯವಸ್ಥೆ ಆಮುಲಾಗ್ರಹ ಬದಲಾವಣೆ ಮಾಡಲಾಗುವುದು. ಈ ರೀತಿಯ ಸಂಶೋಧನೆಗೆ ಅಗತ್ಯವಾದ ಹಣಕಾಸಿನ ನೆರವನ್ನು ಸರಕಾರ ನೀಡಲಿದೆ. ಇದಕ್ಕೆ ಚಾಲೆಂಜ್ ಮಾದರಿಯನ್ನು ಬಳಸಿಕೊಳ್ಳಲಾಗುವುದು. ಈ ಯೋಜನೆಯಲ್ಲಿ ಖಾಸಗಿ ವಲಯವನ್ನು ಬಳಸಿಕೊಳ್ಳಲಾಗುತ್ತದೆ. ಇಂತಹ ಸಂಶೋಧನೆಗಳ ಮೇಲೆ ವಿಷಯ ತಜ್ಞರು ಕಣ್ಗಾವಲು ಇರಿಸಲಿದ್ದಾರೆ

ಹೆಚ್ಚು ಇಳುವರಿ ಬರ ನಿರೋಧಕ ತಳಿಗಳ ಪೂರೈಕೆ

ಹೆಚ್ಚು ಇಳುವರಿ ಮತ್ತು ಬರ ನಿರೋಧಕವುಳ್ಳ ನೂರಕ್ಕೂ ಹೆಚ್ಚಿನ ಬೆಳೆ ತಳಿಗಳನ್ನು ರೈತರಿಗೆ ತಲುಪಿಸಲು ಸರ್ಕಾರ ದೃಢ ನಿಶ್ಚಯ ಮಾಡಿದೆ. ಇದರಿಂದ ರೈತರ ಆದಾಯ ಹೆಚ್ಚಲು ಸಾಧ್ಯವಾಗುತ್ತದೆ. ಅಧಿಕ ಇಳುವರಿ ನೀಡುವ ಮತ್ತು ಹವಾಮಾನ ವೈಪರಿತ್ಯ ತಾಳಿಕೊಳ್ಳುವ 107 ಬೆಳೆಗಳ ತಳಿಗಳನ್ನು ಒದಗಿಸಲಾಗುತ್ತದೆ

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅವಲಂಬನೆ ಇಳಿಕೆಗೆ ಒತ್ತು

ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಮೇಲಿನ ಅವಲಂಬಿಕೆಯನ್ನು ಕಡಿಮೆಗೊಳಿಸಿ, ಮಣ್ಣಿನ ಆರೋಗ್ಯ ಜೀವ ವೈವಿಧ್ಯಗಳ ಹೆಚ್ಚಳ ಹಾಗೂ ಕೃಷಿ ವೆಚ್ಚ ತಗ್ಗಿಸುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಇದರಿಂದಾಗಿ ಗ್ರಾಮೀಣ ಭಾಗದ ಆರ್ಥಿಕತೆ ವೃದ್ಧಿಗೊಳ್ಳುತ್ತದೆ

ದ್ವಿದಳ ಧಾನ್ಯ ಎಣ್ಣೆಕಾಳು ಸ್ವಾವಲಂಬನೆಗೆ ಅಭಿಯಾನ

ದೇಶದಲ್ಲಿ ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳು ಬಳಕೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಉತ್ಪಾದನೆ ಹೆಚ್ಚಿಸಲು ಪ್ರಯತ್ನಗಳು ಸಾಗಿವೆ. ಈ ಎರಡೂ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಅಭಿಯಾನವನ್ನು ಕೈಗೊಳ್ಳಲಾಗುತ್ತದೆ. ಈ ಬೆಳೆಗಳ ಉತ್ಪಾದನೆ ಮತ್ತು ಮಾರುಕಟ್ಟೆ ಜಾಲವನ್ನು ಸದೃಢಗೊಳಿಸಲಾಗುತ್ತದೆ. ಕಳೆದ ಮಧ್ಯಂತರ ಮುಂಗಡಪತ್ರದಲ್ಲಿ ಘೋಷಿಸಿರುವಂತೆ ಸಾಸಿವೆ, ಶೇಂಗಾ, ಎಳ್ಳು ಸೋಯಾಬಿನ್ ಮತ್ತು ಸೂರ್ಯಕಾಂತಿಯAಥ ಎಣ್ಣೆಕಾಳು ವಿಭಾಗದಲ್ಲಿ ಆತ್ಮ ನಿರ್ಭರತೆ ಸಾಧಿಸುವ ಮಹತ್ವದ ಗುರಿ ಹೊಂದಲು ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ

ತರಕಾರಿ ಉತ್ಪಾದನೆ ಪೂರೈಕೆ ಸರಪಳಿ

ಕೃಷಿ ಉತ್ಪಾದನೆಯಲ್ಲಿ ತೋಟಗಾರಿಕಾ ಬೆಳೆಗಳು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ತರಕಾರಿ ಉತ್ಪಾದನೆಗೆ ದೊಡ್ಡ ಪ್ರಮಾಣದ ಕ್ಲಸ್ಟರ್‌ಗಳನ್ನು ಬಳಕೆ ಕೇಂದ್ರಗಳು ಸಮೀಪ ಸ್ಥಾಪಿಸಿ ಅಭಿವೃದ್ಧಿಪಡಿಸಲಾಗುತ್ತದೆ. ಸಂಗ್ರಹಣೆ, ದಾಸ್ತಾನು ಹಾಗೂ ಮಾರುಕಟ್ಟೆ ಜಾಲ ಸೇರಿ ತರಕಾರಿ ಪೂರೈಕೆ ಸರಪಳಿಯನ್ನು ಸದೃಢಗೊಳಿಸಲು ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ), ಸಹಕಾರಿಗಳು ಮತ್ತು ನವೋದ್ಯಮವನ್ನು ಉತ್ತೇಜಿಸಲು ಹೆಚ್ಚಿನ ಹೊತ್ತು ನೀಡಲಾಗುತ್ತದೆ

ಸಿಗಡಿ ಉತ್ಪಾದನೆ ಮತ್ತು ರಫ್ತು

ಸಿಗಡಿ ಉತ್ಪಾದಕತೆ ಹೆಚ್ಚಿಸಲು ಅಗತ್ಯವಾದ ಸಿಗಡಿ ಮೀನು ಮರಿಗಳ ಉತ್ಪಾದನಾ ಕೇಂದ್ರ ಆರಂಭಿಸಲು ಸರ್ಕಾರ ಹಣಕಾಸು ನೆರವು ನೀಡುತ್ತದೆ. ಸಿಗಡಿ ಮೀನು ಉತ್ಪಾದನೆ, ಸಂಸ್ಕರಣೆ ಮತ್ತು ರಫ್ತು ಕಂಪನಿಗಳಿಗೆ ನಬಾರ್ಡ್ ಮೂಲಕ ನೆರವು ನೀಡಲಾಗುತ್ತದೆ

ಭೂ ಅಕ್ರಮಗಳಿಗೆ ಕಡಿವಾಣ

ಗ್ರಾಮೀಣ ಪ್ರದೇಶದಲ್ಲಿ ಭೂಮಿಗೆ ವಿಶಿಷ್ಟ ಗುರುತಿನ ಸಂಖ್ಯೆ ಅಥವಾ ‘ಭೂ-ಆಧಾರ್’ ನೀಡಲಾಗುತ್ತದೆ. ಎಲ್ಲಾ ಭೂ ದಾಖಲೆಗಳನ್ನು ನೀಡಲಾಗುತ್ತದೆ. ಎಲ್ಲಾ ನಗರ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ. ಈ ಮೂಲಕ ಭೂ ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ

ಕೃಷಿ ಕ್ಷೇತ್ರದಲ್ಲೂ ಸಾರ್ವತ್ರಿಕ ಡಿಜಿಟಲ್ ಮೂಲ ಸೌಕರ್ಯ(ಡಿಪಿಐ) ಕಲ್ಪಿಸುವ ಪ್ರಾಯೋಗಿಕ ಯೋಜನೆಗಳು ಯಶಸ್ವಿಯಾಗಿವೆ. ಹೀಗಾಗಿ ರಾಜ್ಯಗಳ ಸಹಭಾಗಿತ್ವದಲ್ಲಿ ದೇಶದ ದೇಶದಾದ್ಯಂತ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ರೈತರು ಮತ್ತು ಅವರ ಬೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ. ಪ್ರಸ್ತುತ ವರ್ಷ ಡಿಪಿಐ ಯೋಜನೆಯಡಿ ಡಿಜಿಟಲ್ ಸ್ವರೂಪದಲ್ಲಿ ಮುಂಗಾರು ಬೆಳೆಗಳ ಸಮೀಕ್ಷೆಯನ್ನು 4೦೦ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ.

ಕೃಷಿ ನವೋದ್ಯಮಗಳಿಗೆ ಏಂಜಲ್ ವರ

ದೇಶದಲ್ಲಿ ನೋಂದಣಿಯಾಗಿಲ್ಲದ ಕಂಪೆನಿಗಳು ಹೂಡಿಕೆದಾರರಿಗೆ ತಮ್ಮ ಶೇರುಗಳನ್ನು ಹಂಚಿಕೆ ಮಾಡಿ ಸಂಗ್ರಹಿಸುತ್ತಿದ್ದ ಬಂಡವಾಳದ ಮೇಲೆ ವಿಧಿಸಲಾಗುತ್ತಿದ್ದ ಏಂಜಲ್ ಟ್ಯಾಕ್ಸನ್ನು ರದ್ದುಗೊಳಿಸಿರುವುದರಿಂದ ಕೃಷಿ ನವೋದ್ಯಮಗಳಿಗೆ ಉತ್ತೇಜನ ಸಿಗುತ್ತದೆ

ಮೀನಿನ ಆಹಾರ ಸಿಗಡಿ ಮೇಲಿನ ಬೇಸಿಕ್ ಕಸ್ಟಮ್ಸ್ ಡ್ಯೂಟಿಯನ್ನು ಶೇಕಡ ಐದಕ್ಕೆ ಇಳಿಸಲಾಗಿದೆ. ಇದರಿಂದ ಸಮುದ್ರ ಉತ್ಪನ್ನಗಳ ರಫ್ತುವಿಗೆ ಉತ್ತೇಜನ ಸಿಗುತ್ತದೆ. ಉಡುಪು, ಚೀಲ ಹಾಗೂ ಶೂ ಉತ್ಪಾದನೆಯಲ್ಲಿ ಬಳಸಲಾಗುವ ಚರ್ಮದ ವಸ್ತುಗಳ ಮೇಲಿನ ಸುಂಕ ಕಡಿಮೆಯಾಗಿದೆ. ಇದರಿಂದ ಈ ಉದ್ಯಮಕ್ಕೆ ಪ್ರೋತ್ಸಾಹವಾದಂತಾಗಿದೆ

1೦೦ ಆಹಾರ ತಪಾಸಣಾ ಕೇಂದ್ರಗಳ ಸ್ಥಾಪನೆ

ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಪರೀಕ್ಷೆ ನಡೆಸುವ ನೂರು ಪ್ರಯೋಗಾಲಯಗಳನ್ನು ತೆರೆಯಲು ನೆರವು ನೀಡಲಾಗುತ್ತದೆ. ಇಂಥ ಪ್ರಯೋಗಾಲಾಯಗಳಿಗೆ ಎನ್ಎಬಿಎಲ್ ಅಥವಾ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಗಳಿಗಾಗಿ ರಾಷ್ಟ್ರೀಯ ಮಾನ್ಯತೆ ಮಂಡಳಿಯ ಪ್ರಮಾಣ ಪತ್ರ ನೀಡಲಾಗುತ್ತದೆ. ಇದಲ್ಲದೆ ೫೦ ಬಹು ಉತ್ಪನ್ನ ಆಹಾರ ವಿಕಿರಣಾ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ನೆರವು ನೀಡಲಾಗುತ್ತದೆ.

ನೂರು ವಾರದ ಸಂತೆ ಹಾಗೂ ಬೀದಿ ಆಹಾರ ಕೇಂದ್ರಗಳಿಗೆ ಬಲ

ಗ್ಲೋಬಲ್ ಮಾರುಕಟ್ಟೆ ಜೊತೆಗೆ ಲೋಕಲ್ ಮಾರುಕಟ್ಟೆಯನ್ನು ಸದೃಢಗೊಳಿಸಲು ಚಿಂತನೆ ನಡೆಸಿರುವ ಕೇಂದ್ರ ಸರ್ಕಾರದ ಆಶಯದಂತೆ ಆಯ್ದ ನಗರಗಳಲ್ಲಿ ನೂರು ವಾರದ ಸಂತೆ ಹಾಗೂ ಬೀದಿ ಬದಿ ಆಹಾರ ಕೇಂದ್ರಗಳಿಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಅಡಿ ಬೀದಿ ಬದಿ ಆಹಾರ ಕೇಂದ್ರಗಳಿಗೆ ಬಲ ತುಂಬಲು ಪ್ರತಿ ವರ್ಷ ನೂರು ವಾರದ ಸಂತೆ ಹಾಗೂ ಬೀದಿಬದಿ ಆಹಾರ ಕೇಂದ್ರಗಳಿಗೆ ನೆರವು ಸಿಗಲಿದೆ. ಮುಂದಿನ ವರ್ಷ ೫೦೦ ವಾರದ ಸಂತೆ ಬೀದಿ ಬದಿ ಆಹಾರ ಕೇಂದ್ರಗಳಿಗೆ ಈ ಲಾಭ ಸಿಗುತ್ತದೆ.

ದೇಸಿ ವಸ್ತುಗಳ ರಫ್ತು ಉತ್ತೇಜನಕ್ಕೆ ಇ-ಕಾಮರ್ಸ್ ಹಬ್ ಸ್ಥಾಪನೆ

ದೇಶಿಯ ಕುಶಲಕರ್ಮಿಗಳ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದಕ್ಕೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ರಫ್ತು ಉತ್ತೇಜನಕ್ಕಾಗಿ ಸಾರ್ವಜನಿಕ-ಖಾಸಗಿ-ಪಾಲುದಾರಿಕೆ ಮಾದರಿಯಲ್ಲಿ ಇ-ಕಾಮರ್ಸ್ ಹಬ್ ಸ್ಥಾಪಿಸಲಾಗುತ್ತದೆ. ಈಗಾಗಲೇ ಇ-ಕಾಮರ್ಸ್ ಸೇವೆಗಳ ಮೂಲಕ ದೇಶದಲ್ಲಿ ಐದು ವಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ. ಈ ಪ್ರಮಾಣವನ್ನು ಮುಂಬರುವ ವರ್ಷಗಳಲ್ಲಿ ೫೦-೧೦೦ ಬಿಲಿಯನ್ ಡಾಲರ್‌ಗೆ ಹೆಚ್ಚಿಸಲು ಯೋಚಿಸಲಾಗಿದೆ. ಇದಕ್ಕಾಗಿ ಸರಕು ಸೇವಾ ಚೌಕಟ್ಟಿನ ಅನ್ವಯ ಒಂದೇ ಸೂರಿನಡಿಯಲ್ಲಿ ದೇಶದ ರಫ್ತು ಸಂಬAಧಿಸಿದ ಸೇವೆಗಳನ್ನು ತರಲಾಗುತ್ತದೆ.

ಇ-ಕಾಮರ್ಸ್ ಇತ್ತೀಚಿನ ವರ್ಷಗಳಲ್ಲಿ ಬೆಳೆಯುತ್ತಿರುವ ಬಹುದೊಡ್ಡ ವ್ಯಾಪಾರ ವೇದಿಕೆಯಾಗಿದ್ದು ಕಳೆದ ವರ್ಷ ಭಾರತದ ೮೦೦ ಬಿಲಿಯನ್ ಡಾಲರ್‌ವರೆಗಿನ ವಹಿವಾಟನ್ನು ವಿದೇಶಗಳೊಂದಿಗೆ ಭಾರತ ನಡೆಸಿದೆ. ಈ ಯೋಜನೆಯಿಂದ ಕೃಷಿ ಮತ್ತು ಸಾಗರ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಭಾರತದ ರಫ್ತು ವಹಿವಾಟು ಇದರಿಂದಾಗಿ ೨ ಲಕ್ಷ ಕೋಟಿ ಡಾಲರಿಗೆ ತಲುಪುವ ಸಾಧ್ಯತೆಯನ್ನು ಹೊಂದಲಾಗಿದೆ

ಕೃಷಿ ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ

ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸುವುದಕ್ಕಾಗಿ ನೂರು ಕೋಟಿ ರೂಗಳ ಕ್ರೆಡಿಟ್ ಗ್ಯಾರಂಟಿ ಯೋಜನೆ ಘೋಷಿಸಲಾಗಿದೆ. ಇದು ಯಂತ್ರೋಪಕರಣಗಳ ಖರೀದಿಗೆ ಸಾಲವನ್ನು ಒದಗಿಸುತ್ತದೆ. ಈ ಯೋಜನೆಯ ಸಾಲವನ್ನು ಪಡೆದುಕೊಳ್ಳಲು ಎಂಎಸ್ಎAಇಗಳಿಗೆ ಮೂರನೇ ವ್ಯಕ್ತಿಯ ಖಾತರಿಯ ಅಗತ್ಯತೆಗಳನ್ನು ತೆಗೆದುಹಾಕುತ್ತದೆ. ಸಾಲ ತೆಗೆದುಕೊಳ್ಳುವಾಗ ಎದುರಿಸಬೇಕಾದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಸಾಲ ಪಡೆದುಕೊಂಡವರು ಗ್ಯಾರಂಟಿ ಶುಲ್ಕ, ವಾರ್ಷಿಕ ಶುಲ್ಕವನ್ನಷ್ಟೇ ಪಾವತಿಸಬೇಕಾಗುತ್ತದೆ. ಇದರಿಂದ ಕೃಷಿ ಸಣ್ಣ ಉದ್ದಿಮೆದಾರರಿಗೆ ತಮ್ಮ ಉದ್ದಿಮೆಯನ್ನು ಸಬಲಗೊಳಿಸಲು ಸಾಧ್ಯವಾಗುತ್ತದೆ.

ಪ್ರಧಾನ ಮಂತ್ರಿ ಚಹಾ ಶ್ರಮಿಕ ಪ್ರೋತ್ಸಾಹಕ ಯೋಜನೆಯನ್ನು ರೂಪಿಸಿ ಅದಕ್ಕೆ ೧೦೦೦ ಕೋಟಿ ರೂ ಒದಗಿಸಿದ್ದು ಇದರಿಂದ ದೇಶದ ಚಹಾ ತೋಟಗಾರಿಕಾ ಸಮುದಾಯಕ್ಕೆ ಸಾಕಷ್ಟು ನೆರವು ಹಾಗೂ ಅವಕಾಶಗಳು ಒದಗಲಿವೆ

ಉದ್ಯಮ ಮಾರುಕಟ್ಟೆ ಪ್ರವೇಶಿಸಲು ಮಹಿಳಾ ಸ್ವಸಹಾಯ ಗುಂಪುಗಳಿಗೆ ಅವಕಾಶ

ಮಹಿಳಾ ಸಬಲೀಕರಣ ಹಾಗೂ ನೇತೃತ್ವ ಉತ್ತೇಜಿಸಲು ಈ ಬಾರಿ ಮುಂಗಡಪತ್ರದಲ್ಲಿ ಹೆಣ್ಣು ಮಕ್ಕಳ ಯೋಜನೆಗಳಿಗಾಗಿ ಮೂರು ಲಕ್ಷಗಳಿಗೂ ಅಧಿಕ ಅನುದಾನವನ್ನು ನೀಡಲಾಗಿದೆ. ನಿರ್ದಿಷ್ಟ ಕೌಶಲ್ಯ ಕಾರ್ಯಕ್ರಮಗಳು ರೂಪಿಸಿ ಮಹಿಳಾ ಸ್ವಸಹಾಯ ಗುಂಪುಗಳು ಉದ್ಯಮ, ಮಾರುಕಟ್ಟೆ ಪ್ರವೇಶಿಸಲು ಪಾಲುದಾರಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ.

ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯ

ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯದಿಂದ ಅನ್ನದಾತರಿಗೆ ಕೃಷಿ ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಾಗುತ್ತದೆ. ಬೆಳೆ ಸಮೀಕ್ಷೆ, ಬೆಳೆ ಸಲಹಾ ಸೇವೆಗಳು, ಯಂತ್ರೋಪಕರಣಗಳು, ಹವಾಮಾನ, ಮುನ್ಸೂಚನೆ, ಸರ್ಕಾರಿ ಯೋಜನೆಗಳ ಸೌಲಭ್ಯಗಳು, ಮಾರುಕಟ್ಟೆ ಬೆಲೆ, ದಾಸ್ತಾನು ಸೌಲಭ್ಯ ಇನ್ನಿತರ ಬಹು ಸುಲಭವಾಗಿ ಬೆರಳ ತುದಿಯಲ್ಲಿ ರೈತರಿಗೆ ಸಿಗುತ್ತವೆ

ಕೃಷಿ ಚಟುವಟಿಕೆಗಳಿಗೆ ರಾಸಾಯನಿಕ ಗೊಬ್ಬರಕ್ಕಾಗಿ 1.64 ಲಕ್ಷ ಕೋಟಿ ರೂ. ಒದಲಾಗಿದ್ದರೆ ಆಹಾರ ಭದ್ರತೆ ಸಹಾಯಧನಕ್ಕಾಗಿ 2.5 ಲಕ್ಷ ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ. ಆಹಾರ ಭದ್ರತೆ ಶಾಸನದಡಿ ಬಳಕೆದಾರರಿಗೆ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತದೆ ರಾಸಾಯನಿಕ ಗೊಬ್ಬರ ತೆರಿಗೆ ಹಣ

ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ದೃಷ್ಟಿಯಿಂದ 1. ಕೃಷಿ ಉದ್ಯೋಗ ಮತ್ತು ಕೌಶಲ್ಯ 2. ಅಂತರ್ಗತ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ 3. ಉತ್ಪಾದಕತೆ ಮತ್ತು ಸೇವೆಗಳು 4. ನಗರ ಅಭಿವೃದ್ಧಿ 5. ಇಂಧನ ಭದ್ರತೆ 6 ಮೂಲ ಸೌಕರ್ಯ 7. ನಾವಿನ್ಯತೆ 8. ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು 9. ಉತ್ಪಾದಕತೆ ಹಾಗೂ ಸ್ಥಿತಿಸ್ಥಾಪಕತ್ವಗಳ ಸುಧಾರಣೆಗೆ ಆದ್ಯತೆ ನೀಡಲಾಗಿದೆ

ಎಫ್‌ಡಿಐ ನಿಯಮ ಸರಳ

ಎಫ್‌ಡಿಐ ಉತ್ತೇಜನಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಸದ್ಯ ಇರುವ ನಿಯಮಗಳನ್ನು ಮತ್ತಷ್ಟು ಸರಳಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದ ಆಹಾರ ಸಂಸ್ಕರಣ ಉದ್ಯಮದಲ್ಲಿ ಮತ್ತಷ್ಟು ವಿದೇಶ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಕಳೆದ ವರ್ಷದ ಆಯವ್ಯಯಕ್ಕೆ ಹೋಲಿಸಿದಾಗ ಕೃಷಿ ಕ್ಷೇತ್ರಕ್ಕೆ 12000 ಕೋಟಿ ರೂ ಹೆಚ್ಚಿಸಿ ಅನುದಾನ ನೀಡಿ ಕೇಂದ್ರ ಸರ್ಕಾರ ದೇಶದ ಆಹಾರ ಬಟ್ಟಲನ್ನು ಸದೃಢಗೊಳಿಸುವಲ್ಲಿ ವಿಶೇಷ ಕೊಡುಗೆಯನ್ನು ನೀಡಿದೆ. ವ್ಯಕ್ತಿಗಳಿಗೆ ಆಧಾರ ಸಂಖ್ಯೆ ನೀಡುವಂತೆ ಗ್ರಾಮೀಣ ಭಾಗಗಳಲ್ಲಿ ರೈತನ ಜಮೀನಿಗೂ “ಭೂ ಆಧಾರ್”À ಸಂಖ್ಯೆ ನೀಡಲು ನಿರ್ಧರಿಸುವುದು ಒಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ಎಣ್ಣೆ ಕಾಳಿನ ಉತ್ಪಾದನೆಯಲ್ಲಿ ನೈಸರ್ಗಿಕ ಕೃಷಿಗೆ ಪ್ರೋತ್ಸಾಹ, ಕೃಷಿ ಸಂಶೋಧನೆ ಮತ್ತು ಉತ್ಪಾದಕತೆಗೆ ಹೆಚ್ಚಿನ ಒತ್ತು ಕೊಟ್ಟಿರುವುದು, ಗ್ರಾಮೀಣ ಅಭಿವೃದ್ಧಿ ಮತ್ತು ಸಂಪನ್ಮೂಲ ಇಲಾಖೆಗೆ ನೀಡಿರುವ ಅನುದಾನಗಳ ಮೂಲಕ ಕೇಂದ್ರ ಸರಕಾರವು ಅನ್ನದಾತರ ಏಳಿಗೆಗೆ ಕಂಕಣಬದ್ಧವಾಗಿದೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group