spot_img
Wednesday, July 24, 2024
spot_imgspot_img
spot_img
spot_img

ಭಾರತದ ಗೋ ತಳಿಗಳ ಬಗ್ಗೆ ಒಂದಷ್ಟು ವಿಷಯ ತಿಳಿದುಕೊಳ್ಳೋಣ ಬನ್ನಿ

ಮಲೆನಾಡು ಗಿಡ್ಡ

ಮಲೆನಾಡು ಗಿಡ್ಡ ತಳಿಗಳು ಮಲೆನಾಡು ಭಾಗಗಳಲ್ಲಿ ದ.ಕ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿವೆ. ತೀರಾ ವೈಪರೀತ್ಯದ ಹವಾಗುಣಕ್ಕೂ ಹೊಂದಿಕೊಳ್ಳಬಲ್ಲವು. ಕಾಡು ಗುಡ್ಡಗಳಲ್ಲಿ ಹಸಿರು ಹುಲ್ಲು, ಸೊಪ್ಪು ಮೇಯುವುದರಿಂದ ರೋಗ ನಿರೋಧಕ ಶಕ್ತಿ ಹೊಂದಿದೆಯಲ್ಲದೆ ಹಾಲಿನಲ್ಲಿ ಔಷಧೀಯ ಗುಣವಿದೆ. ಮನೆ ಬಳಕೆಗೆ ಹಾಲು ಹಾಗೂ ಕೃಷಿಗೆ ಅನುಕೂಲಕರ

ಅಮೃತ ಮಹಲ್
ಅಮೃತ ಮಹಲ್ ತಳಿಯ ಕರ್ನಾಟಕದ ಹೆಮ್ಮೆಯ ತಳಿಯಾಗಿದೆ. ಹಾಸನ, ಧಾರವಾಡ, ಹಳೆ ಮೈಸೂರು ಭಾಗಗಳಲ್ಲಿ ಕಂಡುಬರುತ್ತವೆ. ಉಳುಮೆ ಜಾನುವಾರುಗಳೆಂದೇ ಪ್ರಸಿದ್ಧಿ

ಹಳ್ಳಿಕಾರ್
ಹಳ್ಳಿಕಾರ್ ಕರ್ನಾಟಕದ ಹಾಸನ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ ಉಳಮೆ ಜಾನುವಾರು ಎಂದು ಪ್ರಸಿದ್ಧಿ

ಡಾಂಗಿ
ಮಹಾರಾಷ್ಟ್ರದ ಅಹಮದ್ ನಗರ, ನಾಸಿಕ್, ಥಾಣೆ, ಕುಲಬಾ ಜಿಲ್ಲೆೆಗಳಲ್ಲಿದೆ. ಉಳುಮೆಗೆ ತಕ್ಕುದಾದ ತಳಿಯಿದು.

ಬರಗೂರು
ತಮಿಳುನಾಡಿನ ಕೊಯಮುತ್ತೂರು ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತ. ಹಳ್ಳಿಕಾರಿನಂತೆ ಶಕ್ತಿಯುತವಾದುದು.

ಬಾಚರ್
ಬಿಹಾರದ ಸೀತಾಮಾರಿ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುವ ಈ ತಳಿಯು ಉಳುಮೆಗೆ ಉಪಯುಕ್ತ

ಖೇರಿಗರ್
ಉತ್ತರಪ್ರದೇಶದ ಖೇರಿ ಮತ್ತು ಲಿಖಿಮ್‌ಪುರ ಜಿಲ್ಲೆಯಲ್ಲಿ ಪ್ರಚಲಿತವಿದ್ದು ಕರ್ನಾಟಕದ ಅಮೃತ ಮಹಲ್ ತಳಿಯಂತಿದೆ. ಇದು ಕೂಡ ಉಳುಮೆ ಜಾನುವಾರು ಎಂದು ಪ್ರಸಿದ್ಧಿ ಪಡೆದಿದೆ

ದೇವಣಿ
ದೇವಣಿ, ದೇವನಿ, ಡಿಯಾನಿ ಎಂದೆಲ್ಲಾ ಕೆರೆಸಿಕೊಳ್ಳು ಈ ತಳಿ ಕರ್ನಾಟಕದ ಬೀದರ್, ಮಹಾರಾಷ್ಟçದ ಲಾತೂರು, ಡಿಯಾನಿ, ನಾಂದೇಡ್, ಮರಾಠವಾಡ ಪ್ರದೇಶ ಹಾಗೂ ಅವಿಭಜಿತ ಆಂಧ್ರ ಪ್ರದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿದೆ. ಈ ತಳಿಯು ಹೈನುಗಾರಿಕೆಗೆ ಉಪಯುಕ್ತವಾದುದು. ವರ್ಷದ ೩೦೦ದಿನಗಳಲ್ಲಿ ೭೦೦-೧೦೦೦ ಕೆಜಿ ಹಾಲು ನೀಡಬಲ್ಲುದು.

ರೆಡ್ ಸಿಂಧಿ

ಪಶ್ಚಿಮ ಪಾಕಿಸ್ತಾನ, ಕರಾಚಿ, ಬಲೂಚಿಸ್ತಾನ, ದೇಶzಲ್ಲಿÀ ಕರ್ನಾಟಕ, ಓಡಿಸಾ, ಪಂಜಾಬ್ ಮೊದಲಾದ ಕಡೆಗಳಲ್ಲಿವೆ. ಹೈನುಗಾರಿಕೆಗೆ ಉತ್ತಮ. ೩೦೦ ದಿನಗಳಲ್ಲಿ ೧೦೦೦ದಿಂದ ೧೮೦೦ಕೆಜಿ ಹಾಲು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ.

ಓಂಗೋಲ್
ಆಂಧ್ರ ಪ್ರದೇಶದ ನಲ್ಲೂರು ಮತ್ತು ಗುಂಟೂರ್ ಜಿಲ್ಲೆಗಳಲ್ಲಿ ಹಾಗೂ ಕೃಷ್ಣ ಗೋದಾವರಿ ಜಿಲ್ಲೆಗಳಲ್ಲಿ ಕಂಡು ಬರುತ್ತದೆ ೪೦೦- ೫೦೦ ಕೆಜಿ ಹಾಲು ಉತ್ಪಾದನೆ ಸಾಮರ್ಥ್ಯ ಹೊಂದಿದೆ

ಗಾಲೊ
ಮಧ್ಯ ಪ್ರದೇಶದ ಮಿಧಾರ, ಚಿಂದ್ವಾಡ ಜಿಲ್ಲೆಗಳಲ್ಲಿ ಪ್ರಚಲಿತ. ಮುನ್ನೂರು ದಿನಗಳಲ್ಲಿ ಸುಮಾರು ೧೦೦೦ಕೆಜಿ ಹಾಲು ಉತ್ಪಾದನೆ ಸಾಮರ್ಥ್ಯ ಹೊಂದಿದೆ

ಹರಿಯಾಣ
ಹರಿಯಾಣ ರಾಜ್ಯದ ರೋಹ್ಟಕ್, ಕರ್ನಾಲು, ಹಿಸ್ಸಾರ್ ಪ್ರದೇಶದಲ್ಲಿ ಈ ತಳಿಯಿದ್ದು ೩೦೦ ದಿನಗಳಲ್ಲಿ ೬೦೦ರಿಂದ ೮೦೦ಕೆಜಿ ಹಾಲು ನೀಡುತ್ತವೆ ಉಳುಮೆಗೂ ಬಳಸಿಕೊಳ್ಳಬಹುದು

ಕಾಂಗ್ರಿಜ್
ಗುಜರಾತ್ ರಾಜ್ಯದ ಕಛ್ ಪ್ರದೇಶದಲ್ಲಿ ವ್ಯಾಪಕವಾಗಿದೆ. ಈ ತಳಿಯು ೩೦೦ರಿಂದ ೧೦೦೦ ಕೆಜಿ ಹಾಲು ಉತ್ಪಾದನೆ ಸಾಮರ್ಥ್ಯ ಹೊಂದಿದೆ.

ಮೇವಾಟಿ
ರಾಜಸ್ಥಾನದ ಮಥುರಾ, ಭರತ್ಪುರ, ಅಲ್ವಾರ್ ಪ್ರದೇಶಗಳಲ್ಲಿ ಕಾಣಬಹುದು. ಈ ತಳಿಯು ೩೦೦ ದಿನಗಳಲ್ಲಿ ೫೦೦ರಿಂದ ೬೦೦ ಕೆಜಿ ಹಾಲು ನೀಡುವ ಸಾಮರ್ಥ್ಯ ಹೊಂದಿದೆ

ಥಾರ್ ಪಾರ್ಕರ್
ಪಶ್ಚಿಮ ಪಾಕಿಸ್ತಾನದ ಪಾರ್ಕರ್ ಜಿಲ್ಲೆ ರಾಜಸ್ಥಾನದ ಜ್ಯೋದ್‌ಪುರ, ಕಛ್, ಜೈಸಲ್ಮೇರ್ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ತಳಿಯು ೭೦೦- ೮೦೦ ಕೆಜಿ ಹಾಲು ಉತ್ಪಾದನೆ ಸಾಮರ್ಥ್ಯ ಹೊಂದಿದೆ ಉಳುಮೆಗೆ ಬಳಸಬಹುದಾಗಿದೆ

ಸಾಹಿವಾಲ್
ಈ ತಳಿಯ ಹಸು ಪಂಜಾಬ್, ಉತ್ತರಪ್ರದೇಶ, ಬಿಹಾರ, ದೆಹಲಿ, ಪಶ್ಚಿಮ ಪಾಕಿಸ್ತಾನ ಪ್ರದೇಶದಲ್ಲಿ ಕಂಡುಬರುತ್ತದೆ ೩೦೦ ದಿನಕ್ಕೆ ೧೩೫೦ ಕೆಜಿ ಹಾಲು ಉತ್ಪಾದನೆ ಸಾಮರ್ಥ್ಯ ಹೊಂದಿದೆ

ಸಿರಿ
ಡಾರ್ಜಿಲಿಂಗ್ ಬೆಟ್ಟ ಪ್ರದೇಶಗಳಲ್ಲಿ ಇರುವ ಚಿಕ್ಕ ಗಾತ್ರದ ಈ ತಳಿಯು ಚಳಿ, ಮಳೆ, ಗಾಳಿಗೆ ಹೊಂದಿಕೊಳ್ಳುವ ತಳಿಯಾಗಿದ್ದು ಹಾಲು ಮತ್ತು ಹೊರೆ ಹೊರುವ ಸಾಮರ್ಥ್ಯ ಹೊಂದಿದೆ. ಈ ತಳಿಗಳು ಸ್ವಲ್ಪ ಪ್ರಮಾಣದ ಹಾಲು ಉತ್ಪಾದನೆ ಹಾಗೂ ಕೃಷಿ ಚಟುವಟಿಕೆ ಪ್ರಯೋಜನಕಾರಿ

ಕೃಷ್ಣ ವ್ಯಾಲಿ
ಕೃಷ್ಣ ನದಿ ತೀರದಲ್ಲಿ ಅಂದರೆ ಕೋಲಾಪುರ, ಮೀರಜ್, ಸಾಂಗ್ಲಿ, ಸತಾರ, ಧಾರವಾಡ ಜಿಲ್ಲೆಗಳಲ್ಲಿ ಕಾಣಬಹುದಾಗಿದೆ. ೩೦೦ ದಿನಗಳಲ್ಲಿ ೪೦೦ರಿಂದ ೬೦೦ ಕೆಜಿ ಹಾಲು ಉತ್ಪಾದನೆ ಸಾಮರ್ಥ್ಯವಿದೆ.

ಖಿಲ್ಹಾರಿ
ಈ ತಳಿಯು ಮಹಾರಾಷ್ಟ್ರದ ಕೊಲ್ಲಾಪುರ, ಸತಾರ ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತ. ಅಮೃv ಮಹಲ್ ಮಹಲ್ ತಳಿಗೆ ಹೋಲಿಸಬಹುದಾಗಿದೆ. ಉಳುಮೆಗೆ ಉಪಯೋಗಿ

ಪೊನ್ವಾರ್
ಉತ್ತರ ಪ್ರದೇಶದ ಫಿಲಿಬಿಟ್ ಲಿಖೀಮ್‌ಪುರ ಜಿಲ್ಲೆಯಲ್ಲಿ ಹೆಚ್ಚು ಕಂಡುಬರುವ ತಳಿಯಿದು. ಭಾರ ಹೊರುವ ಸಾಮರ್ಥ್ಯವುಳ್ಳದ್ದು

ಗೀರ್
ಗುಜರಾತಿನ ಗೀರ್, ಜುನಾಗಡ್, ಮಹಾರಾಷ್ಟ್ರ, ಬರೋಡ ಪ್ರದೇಶದಲ್ಲಿದೆ. ೩೦೦ ದಿನಗಳಲ್ಲಿ ೯೦೦ ಕೆಜಿ ಹಾಲಿನ ಸಾಮರ್ಥ್ಯ ಹೊಂದಿದೆ

ವೆಚೂರ್
ಈ ತಳಿಯು ಕೇರಳ ಮೂಲದ್ದು. ವಿಶ್ವದಲ್ಲೇ ಅತ್ಯಂತ ಗಿಡ್ಡ ತಳಿಯೆಂಬ ಖ್ಯಾತಿ.

ಕಾಸರಗೋಡು ಗಿಡ್ಡ
ಮಲೆನಾಡು ಗಿಡ್ಡದಂತೆ ಚಿಕ್ಕ ಗಾತ್ರದವು. ಕಡಿಮೆ ಆಹಾರ ಸಾಕು. ಕೃಷಿಗೆ ಪೂರಕ.

ಅಂಬ್ಲಾಚೇರಿ-ತಮಿಳುನಾಡು ಮೂಲದ ಕೆಲಸಗಾರ ತಳಿಯಿದು.

ನಿಮಾರಿ-ನರ್ಮದಾ ಕಣಿವೆ (ಮಧ್ಯಪ್ರದೇಶ), ಮಹಾರಾಷ್ಟçದ ಜಲಗಾಂವಿ ಪ್ರದೇಶದ್ದು. ಗೀರ್ ಮತ್ತು ಖಿಲ್ಲಾರಿ ತಳಿಗಳ ಸಂಕರಣ
ನಾಗೋರಿ- ರಾಜಸ್ಥಾನ ಮೂಲದ ತಳಿ. ಮರುಭೂಮಿಯಲ್ಲೂ ಬದುಕುವ ಸಾಮರ್ಥ್ಯ ಹೊಂದಿದೆ. ಕೃಷಿ ಚಟುವಟಿಕೆಗೆ ಉಪಕಾರಿ
ಮಾಳವಿ- ಮಧ್ಯಪ್ರದೇಶದ ತಳಿ. ರಾಜ್‌ಘರ್, ಶಾಜಾಪುರ್, ರಾಟ್ಲಮ್, ಉಜ್ಜೆಯಿನಿ ಮೊದಲಾದ ಕಡೆ ಪ್ರಚಲಿತ. ಸರಕು ಸಾಗಾಟಕ್ಕೆ ಅನುಕೂಲ. ೬೨೭ರಿಂದ ೧೨೨೭ಕೆಜಿಯವರೆಗೆ ಹಾಲು ನೀಡುವ ಸಾಮರ್ಥ್ಯ ಹೊಂದಿದೆ.
ಜವಾರಿ- ಉತ್ತರ ಕರ್ನಾಟಕ ಭಾಗದ ತಳಿ. ಬರಗಾಲ, ಹವಮಾನ ವೈಪರಿತ್ಯವನ್ನು ಸಹಿಸಿಕೊಳ್ಳಬಲ್ಲದು
ಗಂಗಾತೀರಿ
ಗAಗಾ ತೀರ ಪ್ರದೇಶದ ತಳಿಯಿದು. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿವೆ. ಹಾಲು ಮತ್ತು ಕೆಲಸಗಾರ ತಳಿಯಿದು. ೯೦೦-೧೨೦೦ಕೆಜಿ ಹಾಲು ನೀಡುವ ಸಾಮರ್ಥ್ಯ ಹೊಂದಿದೆ.
ಬೇಹಲಿ
ಹರಿಯಾಣ, ಮಧ್ಯಪ್ರದೇಶ ಮೂಲದ ತಳಿ.ಅಂಬಾಲಾ, ಪಂಚಕುಲ,ಯಮುನಾ ನಗರ,ಚಂಡೀಗಡ ಪರಿಸರದವು. ಉಳುಮೆ ಹಾಗೂ ಹಾಲಿಗೂ ಉಪಯುಕ್ತ.
ಪುಂಗನೂರು
ಆಂಧ್ರಪ್ರದೇಶ,ಚಿತ್ತೂರು ಪರಿಸರದಲ್ಲಿ ಪ್ರಚಲಿತ.ಹೈನುಗಾರಿಕೆಗೆ ಉತ್ತಮ. ಅಲ್ಲದೆ ಕೆಲಸಗಾರ ತಳಿಯೂ ಆಗಿದೆ.
ಕೊಂಕಣ ಕಪಿಲಾ
ಮಹಾರಾಷ್ಟç, ಗೋವಾ ಪರಿಸರದವು. ಸಣ್ಣ ಮಧ್ಯಮ ಗಾತ್ರದ ಕೆಲಸಗಾರ ತಳಿ.
ಪುಲಿಕಳಮ್
ತಮಿಳ್‌ನಾಡು ಮೂಲದ ತಳಿ. ಪುಲಿಕಳಮ್ ಎಂಬ ಹಳ್ಳಿಯದು. ಶಿವಗಂಗೆ ಮತ್ತಿತರ ಪರಿಸರದವುಗಳು. ಜಲ್ಲಿಕಟ್ಟು ಹಾಗೂ ಸ್ವರ್ಧಾತ್ಮಕ ಕ್ರೀಡೆಗಳ ಖ್ಯಾತಿ ಪಡೆದಿದೆ.
ಕೆಂಕಥಾ
ಉತ್ತರ ಪ್ರದೇಶದ ಲಲಿತ್‌ಪುರ್, ಹಮೀರ್‌ಪುರ, ಬುಂದೇಲ್‌ಖAಡ ಮತ್ತು ಮಧ್ಯಪ್ರದೇಶದವುಗಳು. ಕೃಷಿ ಮತ್ತು ಸರಕು ಸಾಗಾಟಕ್ಕೆ ಅನುಕೂಲ
ಮೋಟು
ಓಡಿಶಾ, ಛತ್ತೀಸ್‌ಗಢ ಮತ್ತು ಆಂದ್ರ ಪ್ರದೇಶ ಪರಿಸರದ ತಳಿ.ಹಾಲು. ಕೃಷಿ ಸಾಗಾಟಗಳಿಗೆ ಉಪಯುಕ್ತ
ಘಂಸಾರಿ
ಓಡಿಶಾ ಮೂಲದ ತಳಿ. ಹಾಲು ಮತ್ತು ಉಳುಮೆಗೆ ಉಪಯೋಗಿ
ಖರಿಯಾರ್/ಬಿಂಝೂರ್‌ಪುರಿ
ಈ ತಳಿಗಳೂ ಓಡಿಶಾ ಮೂಲದವು. ಹಾಲು, ಕೃಷಿ, ಉಳುಮೆ ಸರಕು ಸಾಗಾಟಕ್ಕೆ ಉಪಯುಕ್ತ.
ರಾಟಿ
ರಾಜಸ್ತಾನದ ಮೂಲದ್ದು. ದೇಶೀಯ ಮಿಶ್ರ ತಳಿ. ಹೈನುಗಾರಿಕೆಗೆ ಉತ್ತಮ ತಳಿಯಿದು. ೧೦೬೨ ರಿಂದ ೨೮೧೦ಕೆಜಿ ಹಾಲನ್ನು ನೀಡುವ ಸಾಮರ್ಥ್ಯವಿದೆ. ಸರಾಸರಿ ೧೫೬೦ ಕೆಜಿ ಹಾಲು ನೀಡಿದರೆ ಆಯ್ದ ಕೆಲವೊಂದು ೪೮೦೦ಕೆಜಿ ಹಾಲು ನೀಡಬಲ್ಲ ಸಾಮರ್ಥ್ಯ ಹೊಂದಿವೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group