spot_img
Saturday, July 27, 2024
spot_imgspot_img
spot_img
spot_img

ಭಾರತದ ಗೆಂಡೆಮೀನು ಮತ್ತು ಹೈಪೋಫೈಸೇಶನ್

ಡಾ. ಪ್ರವೀಣ್ ಜೋಷಿ ಎಚ್. ಎಸ್.,

ಮೀನು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಮೀನಿನ ಶರೀರ ಮತ್ತು ಪರಿಸರ ಶಾಸ್ತ್ರದ ಅಂಶಗಳು ಮುಖ್ಯ ಪಾತ್ರವಹಿಸುತ್ತವೆ. ಭಾರದದ ಗೆಂಡೆ ಮೀನುಗಳಾದ ಕಾಟ್ಲಾ, ರೋಹು, ಮೃಗಾಲ್ ಇವುಗಳು ಕೊಳಗಳಲ್ಲಿಯೇ ಲೈಂಗಿಕ ಪ್ರೌಢತೆಯನ್ನು ಪಡೆದರೂ, ಸಹ ಸ್ವಾಭಾವಿಕವಾಗಿ ಸಂತಾನೋತ್ಪತ್ತಿ ಮಾಡದಂತಹ ಮೀನುಗಳು.

ಈ ದೃಷ್ಟಿಯಲ್ಲಿ ಕೊಳಗಳಲ್ಲಿ ಸಂತಾನೋತ್ಪತ್ತಿ ಮಾಡುವಂತಹ ಮೀನುಗಳನ್ನು ಪ್ರಚೋದಿಸಿ ಮೊಟ್ಟೆಗಳನ್ನಿಡುವಂತೆ ಮಾಡುವ ಅಗತ್ಯವಿದೆ. ಈ ರೀತಿಯ ಸಂತಾನೋತ್ಪತ್ತಿಯ ವಿಧಾನಕ್ಕೆಪ್ರಚೋದಿತ ಸಂತಾನೋತ್ಪತ್ತಿ ಎಂದು ಕರೆಯಲಾಗುತ್ತದೆ. ಈ ವಿಧಾನಕ್ಕೆ ಅನೇಕ ಪ್ರಚೋದಕ ಸ್ರಾವಗಳನ್ನು ಉಪಯೋಗಿಸಲಾಗುತ್ತದೆ. ಪಿಟ್ಯುಟರಿ ಗ್ರಂಥಿಯ ಪ್ರಚೋದಕ ಸ್ರಾವಗಳಿಂದ ಪ್ರಚೋದಿಸುವ ಸಂತಾನೋತ್ಪತ್ತಿ ವಿಧಾನಕ್ಕೆ ಹೈಪೋಫೈಸೇಶನ್ ಎಂದು ಕರೆಯಲಾಗುತ್ತದೆ.

ಗೆಂಡೆ ಮೀನುಗಳು ಮುಂಗಾರುಮಳೆಯ ಸಮಯದಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಕಾಟ್ಲಾ, ರೋಹು, ಮೃಗಾಲ್ ಮೀನುಗಳು ನಿಂತ ನೀರಿನ ಕೊಳಗಳಲ್ಲಿ ಲೈಂಗಿಕ ಪ್ರೌಡತೆಯನ್ನು ಹೊಂದಿದರು ಮೊಟ್ಟೆಗಳನ್ನಿಡುವುದಿಲ್ಲ. ಹಿಂದೆ ಪ್ರಾದಾನ ಗೆಂಡೆ ಮೀನುಮರಿಗಳನ್ನು ನದಿಗಳಲ್ಲಿ ಹಿಡಿದು ಒಳನಾಡು ಸಾಕಾಣಿಕೆಗೆ ಪುರೈಸಲಾಗುತ್ತಿತ್ತು. ನಮ್ಮ ದೇಶದಲ್ಲಿ ಗೆಂಡೆ ಮೀನುಮರಿಗಳ ಬೇಡಿಕೆ ಬಹಳಷ್ಟಿದ್ದ ಕಾರಣ ಈ ಬೇಡಿಕೆಯನ್ನು ಪೂರೈಸಲು ಹೆಚ್ಚು ಮೀನುಮರಿ ಉತ್ಪಾದಿಸುವ ಅಗತ್ಯವಿದೆ. ಈ ಕಾರಣ ಹೈಪೋಫೈಸೇಶನ್ ಹೆಸರಿನ ಪ್ರಚೋದಿತ ಸಂತಾನೋತ್ಪತ್ತಿ ಬಹಳ ಉಪಯುಕ್ತ. ಈ ಕ್ರಿಯೆಯಿಂದ ಗೆಂಡೆ ಮೀನುಮರಿಗಳ ಉತ್ಪಾದಿಸುವ ಮತ್ತು ಭಾರತದದಲ್ಲಿ ಗೆಂಡೆ ಮೀನುಗಳನ್ನು ಈ ವಿಧಾನಕ್ಕೆ ಅಳವಡಿಸಿ ಮರಿ ಉತ್ಪಾದಿಸುವುದು
50ರ ದಶಕದಲ್ಲಿ ಶುರುವಾಗಿದೆ. ಗೆಂಡೆ ಮೀನುಗಳ ಹೈಪೋಫೈಸೇಶನ್ ಗೆ ಬೇಕಾಗುವ ವ್ಯವಸ್ತೆಗಳು ಮತ್ತು ಸಲಕರಣೆಗಳು.

) ಸಂತಾನ ವೃದ್ದಿಗಾಗಿ ಫಲಿತ ಹೆಣ್ಣು ಮತ್ತು ಗಂಡು ಮೀನುಗಳು:

) ಪಿಟ್ಯುಟರಿ ಗ್ರಂಥಿಗಳು ಅಥವಾ ಇತರೆ ಚೋದಕ ಸ್ರಾವಗಳು:

ಇ) ಬ್ರೀಡಿಂಗ್ ಟ್ಯಾಂಕ್ ಮತ್ತು ಹ್ಯಾಚಿಂಗ್ ಹಾಪಾಗಳು:

ಈ) ಹೈಪೋಫೈಸೇಶನ್ ಬೇಕಾಗುವ ಸಲಕರಣೆಗಳಾದ – ಸೂಜಿಮದ್ದು, ಕೇಂದ್ರಾಪಗಮನ ಮಾಪಕ, ಹೋಮೋಜಿನೈಸರ್, ಇತ್ಯಾದಿ:

ಎ) ಮರಿಗಳ ಪಾಲನೆಗೆ ಬೇಕಾಗುವ ತೊಟ್ಟಿಗಳು ಅಥವಾ ಕೊಳಗಳು:

ಗೆಂಡೆ ಮೀನುಗಳು ತಮ್ಮ ಜೀವನದ ಎರಡನೆ ವರ್ಷದ ಅಂತ್ಯದಲ್ಲಿ ಲೈಂಗಿಕ ಪ್ರೌಢತೆಯನ್ನು ಹೊಂದುತ್ತದೆ. ಈ ರೀತಿ ಪ್ರಾಯಕ್ಕೆ ಬಂದ ಗಂಡು ಮೀನುಗಳನ್ನಾಗಿ ಗುರುತಿಸುವುದು ಸುಲಭ. ಪ್ರಾಯಕ್ಕೆ ಬಂದ ಗಂಡು ಮೀನಿನ ಈಜು ರೆಕ್ಕೆಗಳು ಒರಟಾಗಿರುತ್ತವೆ ಮತ್ತು ಹೊಟ್ಟೆಯ ಭಾಗವನ್ನು ಮೃದುವಾಗಿ ಅದುಮಿದರೆ ಬಿಳಿಶುಕ್ಲವು ಹೊರಬರುವುದು.

ಹೆಣ್ಣು ಮೀನಿನ ಈಜು ರೆಕ್ಕೆಗಳು ಮೃದುವಾಗಿ ಇರುತ್ತವೆ ,ಮತ್ತು ಅದರ ಹೊಟ್ಟೆ ಭಾಗವನ್ನು ಮೃದುವಾಗಿ ಅದುಮಿದರೆ ಮೊಟ್ಟೆಗಳು ಹೊರಬರುತ್ತವೆ.

ಆರೋಗ್ಯವಾದ ಗಂಡು ಮತ್ತು ಹೆಣ್ಣು ಮೀನುಗಳನ್ನು ಆರಿಸಿ ಅವುಗಳನ್ನು ಬೇರೆಬೇರೆ ಕೊಳಗಳಲ್ಲಿ ವಿಶೇಷ ಗಮನದಿಂದ ಸಾಕಬೇಕು. ಈ ಮೀನುಗಳಿಗೆ ತಮ್ಮ ಒಟ್ಟು ತೂಕದ 1-2 ರಷ್ಟು ಪ್ರಮಾಣದಲ್ಲಿ ಆಹಾರವನ್ನು ಕೊಡಬೇಕು. ಈ ಮೀನುಗಳನ್ನು ಮುಂಗಾರುಮಳೆಯ ಸಮಯದಲ್ಲಿ ಸಂತಾನೋತ್ಪತ್ತಿಗಾಗಿ ಬಳಸಬೇಕು. ಪರಿಪೂರ್ಣ ಲೈಂಗಿಕ ಪ್ರೌಢತೆ ಹೊಂದಿದ ಮೀನುಗಳನ್ನು ಉಪಯೋಗಿಸಿದರೆ ಹೆಚ್ಚಿನ ಮರಿ ಉತ್ಪನ್ನವನ್ನು ಕಾಣಬಹುದು.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group